• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹುಣ್ಣಿಮೆ ಚಂದಿರನಿಗೆ ಈ ಬಾರಿ ಶತಮಾನದ ಸುದೀರ್ಘ ಗ್ರಹಣ!

By Nayana
|
   ಈ ಶತಮಾನದ ಸುಧೀರ್ಘ ಚಂದ್ರಗ್ರಹಣ ಜುಲೈ 27 ರಂದು | Oneindia Kannada

   ಬೆಂಗಳೂರು, ಜು.12: ಈ ಶತಮಾನದ ಅತ್ಯಂದ ದೀರ್ಘ ಅವಧಿಯ ಚಂದ್ರಗ್ರಹಣಕ್ಕೆ ವಿಶ್ವವು ಸಾಕ್ಷಿಯಾಗಲಿದ್ದು ಜು.27ರಂದು ಗ್ರಹಣವಾಗಲಿದೆ, ಭಾರತದಲ್ಲೂ ಇದರ ವೀಕ್ಷಣೆ ಸಾಧ್ಯವಾಗಲಿದೆ.

   ಚಂದ್ರಗ್ರಹಣದ ವೇಳೆ ಚಂದ್ರನು ಕೆಂಪುಬಣ್ಣ ಪಡೆಯುವುದರಿಂದ ಈ ವಿದ್ಯಾಮಾನವನ್ನು ರಕ್ತಚಂದ್ರ( ಬ್ಲಡ್‌ ಮೂನ್‌) ಎಂದೂ ಕರೆಯಲಾಗುತ್ತದೆ. ಜು.27 ಮತ್ತು 28ರ ನಡುವೆ 1 ಗಂಟೆ 43 ನಿಮಿಷಗಳ ಕಾಲ ಸಂಪೂರ್ಣ ಚಂದ್ರ ಗ್ರಹಣ ಸಂಭವಿಸಲಿದೆ.

   ಜು.13 ಸೂರ್ಯಗ್ರಹಣ: ತಿಳಿಯಬೇಕಾದ 7 ಸಂಗತಿ

   ಬಳಿಕ 1 ಗಂಟೆ ಕಾಲ ಪಾರ್ಶ್ವ ಚಂದ್ರಗ್ರಹಣ ಸಂಭವಿಸಲಿದೆ. ಅದೃಷ್ಟವಶಾತ್‌ ಈ ಎರಡೂ ದೃಶ್ಯಗಳನ್ನು ಭಾರತದಲ್ಲಿ ವೀಕ್ಷಿಸಬಹುದು ಎಂದು ಎಂಪಿ ಬಿರ್ಲಾ ತಾರಾಲಯದ ಸಂಶೋಧನಾ ವಿಭಾಗದ ನಿರ್ದೇಶಕ ದೇವಿಪ್ರಸಾದ್‌ ದುರೈ ಹೇಳಿದ್ದಾರೆ.

   ದಕ್ಷಿಣ ಅಮೆರಿಕ, ಆಫ್ರಿಕಾದ ಬಹುತೇಕ ಭಾಗ, ಮಧ್ಯ ಪ್ರಾಚ್ಯ ಮತ್ತು ಕೇಂದ್ರ ಏಷ್ಯಾದಲ್ಲಿ ವೀಕ್ಷಣೆ ಸಾಧ್ಯವಿದೆ. 31ಕ್ಕೆ ಮಂಗಳ ದರ್ಶನ: ಜು.31ಕ್ಕೆ ಮಂಗಳಗ್ರಹವು ಭೂಮಿಗೆ ಅತ್ಯಂತ ಸಮೀಪದಲ್ಲಿ (56.6 ದಶಲಕ್ಷ ಕಿ.ಮೀ) ಹಾದು ಹೋಗಲಿದ್ದು, ದೊಡ್ಡ ಗಾತ್ರದಲ್ಲಿ ಮತ್ತು ಪ್ರಕಾಶಮಾನವಾಗಿ ಕಾಣಿಸಿಕೊಳ್ಳಲಿದ್ದಾನೆ. 2೦೦3ರ ಬಳಿಕ ಇದೇ ಮೊದಲ ಬಾರಿಗೆ ಕುಜ ಭೂಮಿಗೆ ಇಷ್ಟು ಸಮೀಪದಲ್ಲಿ ಸಾಗಿಹೋಗಲಿದ್ದಾನೆ. ಮತ್ತೊಮ್ಮೆ ಮಂಗಳನನ್ನು ಇಷ್ಟು ಹತ್ತಿರದಿಂದ ವೀಕ್ಷಿಸಲು 2035ರವರೆಗೂ ಕಾಯಬೇಕು.

   2018ರ ಜನವರಿ 31ರಂದು ಸೂಪರ್‌ ಬ್ಲಡ್‌ ಮೂನ್‌ ವಿದ್ಯಾಮಾನ ಸಂಭವಿಸಿತ್ತು, ಸೂಪರ್‌ ಮೂನ್‌, ಬ್ಲ್ಯೂ ಮೂನ್‌ ಮತ್ತು ಬ್ಲಡ್‌ ಮೂನ್‌ ಮೂರರ ಸಂಯೋಜನೆ ಅದಾಗಿತ್ತು.

   ಜು.27 ರಾತ್ರಿ 11.54ಕ್ಕೆ ಪಾರ್ಶ್ವ ಚಂದ್ರಗ್ರಹಣ ಆರಂಭ, ಜು.28 ರಾತ್ರಿ 1 ಕ್ಕೆ ಸಂಪೂರ್ಣ ಚಂದ್ರಗ್ರಹಣ ಆರಂಭ, ಜು.28 ರಾತ್ರಿ 1.52-2.43 ಅವಧಿಯಲ್ಲಿ ಚಂದ್ರ ಕಡುಕಪ್ಪು, ಕೆಂಪು ಮತ್ತು ಕಿತ್ತಳೆ ಬಣ್ಣದಲ್ಲಿ ಕಾಣಿಸಿಕೊಳ್ಳುತ್ತದೆ.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Longest total lunar eclipse of the 21st centenary is set to go down on July 27. In fact, it's probably the longest such event between now and 2003, according to NASA.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more