ಭಾರತಕ್ಕೆ ಸಿಕ್ತು ರಾಫೆಲ್ ಯುದ್ಧ ವಿಮಾನದ ಬಲ!

Posted By:
Subscribe to Oneindia Kannada

ನವದೆಹಲಿ, ಸೆ. 23: ಭಾರತ ಮತ್ತು ಫ್ರಾನ್ಸ್ ದೇಶಗಳ ನಡುವೆ 36 ರಾಫೆಲ್ ಯುದ್ಧ ವಿಮಾನ ವ್ಯವಹಾರ ಒಪ್ಪಂದಕ್ಕೆ ಶುಕ್ರವಾರ ಸಹಿ ಹಾಕಿವೆ. ಸುಮಾರು 7.8 ಬಿಲಿಯನ್ ಯುರೋ (ಸುಮಾರು 780 ಕೋಟಿ) ವ್ಯವಹಾರಿಕ ಮೊತ್ತ ಇದಾಗಿದೆ.

ಕೇಂದ್ರ ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಮತ್ತು ಫ್ರಾನ್ಸ್ ರಕ್ಷಣಾ ಸಚಿವ ಜಿಯಾನ್ ವೈವೆಸ್ ಲೆಡ್ರಿಯನ್ ಅವರು ದೆಹಲಿಯಲ್ಲಿ ಈ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದರು. ಫ್ರಾನ್ಸಿಗೆ ಶೆಲ್ಪ್ ಡಸ್ಸಾಲ್ಟ್ ರಾಫೆಲ್ ಅವಳಿ ಇಂಜಿನ್ ಯುದ್ಧ ವಿಮಾನಗಳಿಗಾಗಿ ಅಂದಾಜು 58,000 ರೂಪಾಯಿಗಳನ್ನು ಪಾವತಿ ಮಾಡಲಿದೆ. ಶೇಕಡಾ 15ರಷ್ಟು ಹಣವನ್ನು ಮುಂಗಡವಾಗಿ ಪಾವತಿ ಮಾಡಲಿದೆ.

 India, France ink deal for 36 Rafale fighter jets

ಒಪ್ಪಂದ ಪ್ರಕಾರ ಫ್ರಾನ್ಸಿನಿಂದ ಮೆಟೆಯೊರ್(Meteor) ಕ್ಷಿಪಣಿ, ಸ್ಕಾಲ್ಪ್ ಸೇರಿದಂತೆ ಬಿಡಿಭಾಗಗಳು ಹಾಗೂ ಶಸ್ತ್ರಾಸ್ತ್ರಗಳನ್ನು ಭಾರತ ಪಡೆಯಲಿದೆ. ಈ ಅತ್ಯಾಧುನಿಕ ಕ್ಷಿಪಣಿಗಳು 150ಕಿ.ಮೀಗೂ ದೂರದ ವ್ಯಾಪ್ತಿ Beyond Visual Range (BVR) ಯಿಂದಿದೆ.

ಈ ಮೂಲಕ ಪಾಕಿಸ್ತಾನ ಎಲ್ಲಾ ಭಾಗಗಳು, ಉತ್ತರ ಹಾಗೂ ಈಶಾನ್ಯ ಗಡಿಭಾಗದ ಎಲ್ಲಾ ಭಾಗಗಳನ್ನು ಕ್ರಮಿಸಬಲ್ಲ ಕ್ಷಿಪಣಿಗಳನ್ನು ಹೊಂದಿದ್ದಂತಾಗುತ್ತದೆ.

ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಭಾರತವು 50 ಕಿ.ಮೀ ವ್ಯಾಪ್ತಿಯ ಕ್ಷಿಪಣಿಗಳನ್ನು ಬಳಸಿತ್ತು.ಈಗ 150 ಕಿ.ಮೀ ವ್ಯಾಪ್ತಿಯ ತನಕ ಟಾರ್ಗೆಟ್ ಇಡಬಹುದಾಗಿದೆ.(ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
India and France today signed the Euro 7.87-billion deal for Rafale fighter jets, equipped with latest missiles and weapon system besides multiple India- specific modifications that will give the IAF cutting edge capability over arch rival Pakistan.
Please Wait while comments are loading...