ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೈಲ ದರ ಇಳಿಸಿ ಜನರಿಗೆ ಸಿಹಿ ಹಂಚಿದ ತೈಲ ಕಂಪನಿಗಳು

|
Google Oneindia Kannada News

ನವದೆಹಲಿ, ಆಗಸ್ಟ್. 15: ಸ್ವಾತಂತ್ರ್ಯ ದಿನಕ್ಕೆ ತೈಲ ಕಂಪನಿಗಳು ದೇಶದ ನಾಗರಿಕರಿಗೆ ಇಂಧನ ಬೆಲೆ ಇಳಿಕೆ ಮಾಡಿ ಸಿಹಿ ಹಂಚಿವೆ. ಲೀಟರ್ ಪೆಟ್ರೋಲ್ 1.27 ಮತ್ತು ಡೀಸೆಲ್ 1.17 ರುಪಾಯಿ ಕಡಿಮೆಯಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಗಣನೀಯವಾಗಿ ಇಳಿಕೆ ಆಗಿರುವುದರಿಂದ ಆಗಸ್ಟ್‌ ತಿಂಗಳಲ್ಲಿ ಎರಡನೇ ಬಾರಿಗೆ ಪೆಟ್ರೋಲ್‌, ಡೀಸೆಲ್‌ ದರ ಕಡಿಮೆಯಾಗಿದೆ.[ಹಿಂದಿನ ದರ ಇಳಿಕೆ ನೋಡಿ]

petrol

ಗ್ರಾಹಕರಿಗೆ ತೈಲ ಕಂಪನಿಗಳು ಆಗಸ್ಟ್ ಆರಂಭದಲ್ಲೂ ಭರ್ಜರಿ ಗಿಫ್ಟ್ ನೀಡಿದ್ದವು. ಪೆಟ್ರೋಲ್ ದರವನ್ನು ಲೀಟರ್​ಗೆ 2.43 ರೂ.ನಷ್ಟು ಕಡಿಮೆ ಮಾಡಲಾಗಿದ್ದು, ಡೀಸೆಲ್ ದರ ಲೀಟರ್​ಗೆ 3.60 ರೂ.ನಷ್ಟು ಇಳಿಕೆ ಮಾಡಲಾಗಿತ್ತು.[ತೈಲ ಬೆಲೆ ನಿರಂತರ ಇಳಿಕೆಗೆ ನಿಜವಾದ ಕಾರಣವೇನು?]

ಬೆಂಗಳೂರಿಗರು ಎಷ್ಟು ನೀಡಬೇಕು? ಬೆಂಗಳೂರಿಗರು ಪೆಟ್ರೋಲ್ ಗೆ 67 ರು. ನೀಡಿದರೆ ಸಾಕು. ಡೀಸೆಲ್ ಗೆ 47.82ರು. ನೀಡಿದರೆ ಸಾಕು. 70 ರ ಗಡಿಯಿಂದ ಕೆಳಕ್ಕೆ ಬಂದಿದ್ದ ಪೆಟ್ರೋಲ್ ಮತ್ತೂ ಕಡಿಮೆಯಾಗಿದ್ದು ಗ್ರಾಹಕರ ಮುಖದಲ್ಲಿ ಮಂದಹಾಸ ಮೂಡಿಸಿದೆ.

English summary
The Central government has announced that petrol price will be lowered by Rs. 1.27 a litre and diesel by Rs. 1.17 from Friday midnight. Hindustan Petroleum Corporation and Bharat Petroleum Corporation revise the prices of petrol and diesel on a fortnightly basis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X