ಭಾರತೀಯ ಯೋಧನ ರುಂಡ ಕತ್ತರಿಸಿ ಬಿಸಾಕಿದ ಪಾಕ್ ಉಗ್ರರು

Posted By:
Subscribe to Oneindia Kannada

ಜಮ್ಮು ಮತ್ತು ಕಾಶ್ಮೀರ, ನವೆಂಬರ್ 22 : ಭಾರತ ಮತ್ತು ಪಾಕ್ ಗಡಿ ನಿಯಂತ್ರಣಾ ರೇಖೆಯ ಬಳಿ ಮೂವರು ಭಾರತೀಯ ಸೈನಿಕರನ್ನು ಪಾಕಿಸ್ತಾನದ ಉಗ್ರರು ಹತ್ಯೆ ಮಾಡಿದ್ದು, ಓರ್ವನ ರುಂಡವನ್ನು ಕತ್ತರಿಸಿ ಬಿಸಾಕಿದ್ದಾರೆ.

ಈ ಘಟನೆ ಮಂಗಳವಾರ ಜಮ್ಮು ಮತ್ತು ಕಾಶ್ಮೀರದ ಮಛಲ್ ಎಂಬಲ್ಲಿ ಜರುಗಿದ್ದು, ಭಾರತೀಯ ಸೇನೆಯನ್ನು ಕೆಂಡಾಮಂಡಲವಾಗಿಸಿವೆ. ಇಂಥ ಹೇಡಿತನದ ಕೃತ್ಯಕ್ಕೆ ತಕ್ಕ ಪ್ರತ್ಯುತ್ತರ ನೀಡುತ್ತೇವೆ ಎಂದು ಭಾರತೀಯ ಸೇನೆ ಪಾಕಿಸ್ತಾನಕ್ಕೆ ಕಟ್ಟೆಚ್ಚರಿಕೆ ನೀಡಿದೆ.

Body of Indian soldier mutilated near Line of Control

ಭಾರತೀಯ ಸೈನಿಕರ ದೇಹವನ್ನು ಛಿದ್ರಛಿದ್ರ ಮಾಡಿದ್ದು ಒಂದು ತಿಂಗಳಲ್ಲಿ ಇದು ಎರಡನೇ ಬಾರಿ. ಅಕ್ಟೋಬರ್ 29ರಂದು ಇದೇ ಮಛಿಲ್ ಸೆಕ್ಟರ್ ನ ಕುಪ್ವಾರಾದಲ್ಲಿ ಓರ್ವ ಜವಾನನ ದೇಹವನ್ನು ಕತ್ತರಿಸಿ ಪಾಕ್ ಹೇಡಿಗಳು ಪರಾರಿಯಾಗಿದ್ದರು.


ಈ ಕೃತ್ಯ ಎಸಗಿದವರು ಪಾಕ್ ಸೇನೆಯ ಬಾರ್ಡರ್ ಆ್ಯಕ್ಷನ್ ಟೀಮ್ ಸದಸ್ಯರು ಇರಬಹುದೆಂದು ಅಂದಾಜಿಸಲಾಗಿದ್ದು, ಮನದೀಪ್ ಸಿಂಗ್ ಎಂಬ 27 ವರ್ಷದ ಯೋಧನ ದೇಹ ತುಂಡು ಮಾಡಿ ಪರಾರಿಯಾಗಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Breaking News : Body of Indian soldier was mutilated after 3 were killed near line of control on Tuesday in Machhal in Jammu And Kashmir.
Please Wait while comments are loading...