ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮೀಕ್ಷೆ: ತೆಲಂಗಾಣದಲ್ಲಿ ಮತ್ತೆ ಟಿಆರ್ ಎಸ್ ಅಧಿಕಾರಕ್ಕೆ

By ವಿಕಾಸ್ ನಂಜಪ್ಪ
|
Google Oneindia Kannada News

ಹೈದರಾಬಾದ್, ಸೆಪ್ಟೆಂಬರ್ 18: ಅವಧಿಗೆ ಮುನ್ನ ವಿಧಾನಸಭೆ ವಿಸರ್ಜಿಸಿ, ಚುನಾವಣೆ ಎದುರಿಸಲು ಮುಂದಾಗಿರುವ ಕೆ ಚಂದ್ರಶೇಖರ ರಾವ್ ಅವರಿಗೆ ಮತ್ತೊಮ್ಮೆ ಶುಭ ಸುದ್ದಿ ಸಿಕ್ಕಿದೆ.

ಮತ್ತೊಂದು ಚುನಾವಣಾ ಪೂರ್ವ ಸಮೀಕ್ಷೆ ಫಲಿತಾಂಶ ಹೊರ ಬಂದಿದ್ದು, ತೆಲಂಗಾಣ ರಾಷ್ಟ್ರೀಯ ಸಮಿತಿ(ಟಿಆರ್ ಎಸ್)ಗೆ ಗೆಲುವು ಸಿಗಲಿದೆ ಎಂಬ ವರದಿ ಬಂದಿದೆ.

ಇಂಡಿಯಾ ಟುಡೇ ಸಮೀಕ್ಷೆ : ತೆಲಂಗಾಣದಲ್ಲಿ ಕೆಸಿಆರ್ ಗೆ ಸ್ಪರ್ಧಿಯೇ ಇಲ್ಲಇಂಡಿಯಾ ಟುಡೇ ಸಮೀಕ್ಷೆ : ತೆಲಂಗಾಣದಲ್ಲಿ ಕೆಸಿಆರ್ ಗೆ ಸ್ಪರ್ಧಿಯೇ ಇಲ್ಲ

ಕಾಂಗ್ರೆಸ್ಸಿನ ಸಂಸದ ಲಗಡಪತಿ ರಾಜಗೋಪಾಲ್ ಅವರ ಫ್ಲಾಶ್ ತಂಡ ಹಾಗೂ ಟಿವಿ ಮಾಧ್ಯಮ ನಡೆಸಿದ ಸಮೀಕ್ಷೆಯಲ್ಲಿ ತೆಲಂಗಾಣದ 119 ಸ್ಥಾನಗಳ ಪೈಕಿ ಚಂದ್ರಶೇಖರ್ ರಾವ್ ಅವರ ಟಿಆರ್ ಎಸ್ ಗೆ 85 ರಿಂದ 95 ಸ್ಥಾನಗಳು ಲಭಿಸಲಿದೆ.

Telangana elections : TRS will win 95 out 119 says this survey

ಸಮೀಕ್ಷೆ ಪ್ರಕಾರ ಕಾಂಗ್ರೆಸ್ಸಿಗೆ 10 ರಿಂದ 20 ಸ್ಥಾನಗಳು ಮಾತ್ರ ಸಿಗಲಿದೆ. ಎಂಐಎಂಗೆ 6 ರಿಂದ 8 ಸ್ಥಾನಗಳು ಹಾಗೂ ಬಿಜೆಪಿಗೆ 2 ಸೀಟು ಸಿಗಬಹುದು. ಇತರೆ ಅಭ್ಯರ್ಥಿಗಳಿಗೆ 1 ರಿಂದ 3 ಸ್ಥಾನಗಳು ಹೋಗಬಹುದು.

ತೆಲಂಗಾಣ ವಿಧಾನಸಭೆ ವಿಸರ್ಜನೆ? ಕಾರಣವೇನು? ಪರಿಣಾಮವೇನು?ತೆಲಂಗಾಣ ವಿಧಾನಸಭೆ ವಿಸರ್ಜನೆ? ಕಾರಣವೇನು? ಪರಿಣಾಮವೇನು?

ಆಗಸ್ಟ್ 27 ರಿಂದ ಸೆಪ್ಟೆಂಬರ್ 12 ತನಕ ನಡೆದ ಈ ಸಮೀಕ್ಷೆಯ ಅಂಕಿ ಅಂಶ ಬದಲಾಗುವ ಸಾಧ್ಯತೆ ಹೆಚ್ಚಿದೆ. ಟಿಆರ್ ಎಸ್ ಮಣಿಸಲು ಕಾಂಗ್ರೆಸ್ ಹಾಗೂ ಟಿಡಿಪಿ ಈಗ ಕೈಜೋಡಿಸಿದ್ದು, ಟಿಆರ್ ಎಸ್ ಗೆ ಭಾರಿ ಹೊಡೆತ ನೀಡುವ ಮುನ್ಸೂಚನೆ ಸಿಕ್ಕಿದೆ.

ಶೇಕಡಾವಾರು ಮತಗಳಲ್ಲಿ
ಟಿಆರ್ ಎಸ್ : ಶೇ 44 ರಿಂದ 48
ಕಾಂಗ್ರೆಸ್ : ಶೇ 30 ರಿಂದ 34
ಬಿಜೆಪಿ : ಶೇ 7 ರಿಂದ 9
ಟಿಡಿಪಿ : ಶೇ 2

ಯಾರು ಸರ್ಕಾರ ರಚಿಸಬಹುದು?
ಟಿಆರ್ ಎಸ್ : ಶೇ 52.58
ಕಾಂಗ್ರೆಸ್ : ಶೇ 32.46
ಬಿಜೆಪಿ ಹಾಗೂ ಟಿಡಿಪಿ: ಶೇ 4 ರಿಂದ 2

ಕೆ ಚಂದ್ರಶೇಖರ್ ರಾವ್ ಆಡಳಿತದ ಬಗ್ಗೆ
ಉತ್ತಮ : ಶೇ 67.26
ಕಳಪೆ : ಶೇ 32.74

English summary
The surveys are smiling on K Chandrashekhar Rao and his Telangana Rashtra Samithi. Another survey has shown that the TRS would sweep the Telangana assembly elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X