Cadbury Chocolates: ಕ್ಯಾಡ್ಬರಿ ಚಾಕೊಲೇಟ್ ತಿನ್ನುವ ಮುನ್ನ ಈ ಸ್ಟೋರಿ ಓದಿ
ಚಾಕೊಲೇಟ್ ಉದ್ಯಮದಲ್ಲಿ ಭಾರಿ ಹೆಸರು ಮಾಡಿರುವ ಕ್ಯಾಡ್ಬರಿ ಡೈರಿ ಮಿಲ್ಕ್ ಚಾಕೊಲೇಟ್‌ನಲ್ಲಿ ಹುಳು ಪತ್ತೆಯಾಗಿದ್ದು ಚಾಕೊಲೇಟ್ ಪ್ರಿಯರನ್ನು ಆಘಾತಕ್ಕೀಡುಮಾಡಿದೆ. ತೆಲಂಗಾಣದಲ್ಲಿ ವ್ಯಕ್ತಿಯೊಬ್ಬರು ಎರಡು ಡೈರಿ ಮಿಲ್ಕ್ ಚಾಕೊಲೇಟ್‌ಗಳಲ್ಲಿ ಬಿಳಿ ಹುಳುಗಳನ್ನು ಕಂಡುಕೊಂಡಿದ್ದು, ಅದನ್ನು ಆಹಾರಾ ಪ್ರಯೋಗಾಲಯ ಕೂಡ ದೃಢಪಡಿಸಿದೆ.
ತೆಲಂಗಾಣ ರಾಜ್ಯ ಆಹಾರ ಪ್ರಯೋಗಾಲಯವು ಈ ಚಾಕೊಲೇಟ್‌ಗಳನ್ನು ಪರೀಕ್ಷೆ ಮಾಡಿದ್ದು, ಚಾಕೊಲೇಟ್‌ಗಳು ಸೇವನೆಗೆ "ಅಸುರಕ್ಷಿತ" ಎಂದು ಹೇಳಿದೆ. ಈ ಸುದ್ದಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

ಕಾರ್ಯಕರ್ತ ರಾಬಿನ್ ಜಾಕಿಯಸ್ ಅವರು ಫೆಬ್ರವರಿ 9 ರಂದು ಹೈದರಾಬಾದ್‌ನ ಅಮೀರ್‌ಪೇಟ್‌ನ ಸೂಪರ್‌ಮಾರ್ಕೆಟ್‌ನಿಂದ ಖರೀದಿಸಿದ ಚಾಕೊಲೇಟ್‌ಗಳಲ್ಲಿ ಹುಳುಗಳು ಕಂಡುಬಂದ ನಂತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಬುಧವಾರ, ಜಾಕಿಯಸ್ ಎಕ್ಸ್ ಖಾತೆಯಲ್ಲಿ ತೆಲಂಗಾಣ ರಾಜ್ಯ ಆಹಾರ ಪ್ರಯೋಗಾಲಯದ ವರದಿಯನ್ನು ಹಂಚಿಕೊಂಡಿದ್ದಾರೆ. ಕ್ಯಾಡ್ಬರಿಸ್ ಡೈರಿ ಮಿಲ್ಕ್ (ಹುರಿದ ಬಾದಾಮಿ) ಮತ್ತು ಕ್ಯಾಡ್ಬರಿಸ್ ಡೈರಿ ಮಿಲ್ಕ್ (ಫ್ರೂಟ್ಸ್ & ನಟ್ಸ್) ಮಾದರಿಯ ಎರಡು ಚಾಕೊಲೇಟ್‌ಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು.
#Update The Telangana State Food laboratory has confirmed the Cadbury Chocolate (Roasted Almond) was
— Robin Zaccheus (@RobinZaccheus) February 28, 2024
“UNSAFE TO CONSUME” they found WHITE WORMS & WEB!
Here’s the report of the 2 Cadbury chocolates purchased at Ratnadeep Retail.
It is perhaps high time that FMCG companies are… https://t.co/zPvNtKT3NJ pic.twitter.com/8JwBpNZdDg
ವರದಿಯಲ್ಲಿ ಏನಿದೆ?
ಪರೀಕ್ಷೆ ಮಾಡಿರುವ ಚಾಕೊಲೇಟ್‌ಗಳಲ್ಲಿ ಬಿಳಿ ಹುಳುಗಳು ಮತ್ತು ಬೂಸ್ಟ್ ರೀತಿಯ ಗೂಡುಗಳನ್ನು ಹೊಂದಿದೆ ಮತ್ತು ಆದ್ದರಿಂದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ, 2006 ರ ಸೆಕ್ಷನ್ 3 (zz) (iii) (ix) ಅಡಿಯಲ್ಲಿ ಅಸುರಕ್ಷಿತವೆಂದು ಪರಿಗಣಿಸಲಾಗಿದೆ ಎಂದು ಪ್ರಯೋಗಾಲಯದ ವರದಿ ಹೇಳಿದೆ.
ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರನ್ನು ಟ್ಯಾಗ್ ಮಾಡಿರುವ ಝಾಕಿಯಸ್, ಮಕ್ಕಳು ಹೆಚ್ಚಾಗಿ ಸೇವಿಸುವ ಅಸುರಕ್ಷಿತ ಆಹಾರವನ್ನು ಪೂರೈಸುವ ಎಫ್‌ಎಂಸಿಜಿ ಕಂಪನಿಗಳನ್ನು ಹೊಣೆಗಾರರನ್ನಾಗಿ ಮಾಡಲು ಮತ್ತು ದಂಡ ವಿಧಿಸಲು ಇದು ಸೂಕ್ತ ಸಮಯ ಎಂದು ಹೇಳಿದ್ದಾರೆ.
"ವ್ಯವಸ್ಥೆಯ ಅಪಹಾಸ್ಯ" ಮಾಡಲು ಕಂಪನಿಗಳಿಗೆ ಅವಕಾಶ ನೀಡಬಾರದು ಎಂದು ಅವರು ಹೇಳಿದರು. ಅವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಮತ್ತು ಪರವಾನಗಿಯನ್ನು ರದ್ದುಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.
ಚಾಕೊಲೇಟ್ ಕಂಪನಿ ಹೇಳಿದ್ದೇನು?
ಜಾಕಿಯಸ್ ಪೋಸ್ಟ್‌ಗೆ ಪ್ರತಿಕ್ರಿಯೆಯಾಗಿ, ಕ್ಯಾಡ್ಬರಿ ಬ್ರಾಂಡ್ ಅನ್ನು ಹೊಂದಿರುವ ಮೊಂಡೆಲೆಜ್, ಉತ್ಪಾದನಾ ಪ್ರಕ್ರಿಯೆಯಲ್ಲಿ ಉತ್ಪನ್ನವು ಪರಿಣಾಮ ಬೀರುವುದಿಲ್ಲ ಎಂದು ಉತ್ತರ ನೀಡಿದೆ.
"ಮೊಂಡೆಲೆಜ್ ಅಂತರರಾಷ್ಟ್ರೀಯವಾಗಿ ಅಂಗೀಕರಿಸಲ್ಪಟ್ಟ HACCP (ಹಜಾರ್ಡ್ ಅನಾಲಿಸಿಸ್ ಮತ್ತು ಕ್ರಿಟಿಕಲ್ ಕಂಟ್ರೋಲ್ ಪಾಯಿಂಟ್ಸ್) ಮಾನದಂಡಗಳನ್ನು ಅನುಸರಿಸುತ್ತದೆ, ಇದು ವಿಶ್ವದ ಅತ್ಯಂತ ಸಮಗ್ರ ಆಹಾರ ಸುರಕ್ಷತಾ ವ್ಯವಸ್ಥೆಯಾಗಿದೆ, ನಮ್ಮ ಉತ್ಪನ್ನಗಳು ಯಾವುದೇ ಭೌತಿಕ, ರಾಸಾಯನಿಕ ಮತ್ತು ಸೂಕ್ಷ್ಮ ಜೀವವಿಜ್ಞಾನದ ಸಮಸ್ಯೆಗಳಿಂದ ಮುಕ್ತವಾಗಿವೆ" ಎಂದು ಟ್ವೀಟ್ ಮಾಡಿದ್ದಾರೆ.
"ಇತರ ಆಹಾರ ಉತ್ಪನ್ನಗಳಂತೆ ಚಾಕೊಲೇಟ್‌ಗೆ ವಿತರಣಾ ಸರಪಳಿ, ಚಿಲ್ಲರೆ ಪರಿಸರ ಮತ್ತು ಸಂಗ್ರಹಣೆಯಲ್ಲಿ ನಿರ್ದಿಷ್ಟ ಕಾಳಜಿ ಮತ್ತು ಗಮನದ ಅಗತ್ಯವಿದೆ. ನಾವು ಅದೇ ಬ್ಯಾಚ್‌ನ ಮಾದರಿಗಳನ್ನು ಮತ್ತು ಅದೇ ಸಮಯದಲ್ಲಿ ತಯಾರಿಸಲಾದ ಇತರ ಬ್ಯಾಚ್‌ಗಳನ್ನು ಪರೀಕ್ಷಿಸಿದ್ದೇವೆ ಮತ್ತು ಯಾವುದೇ ಸಮಸ್ಯೆ ಕಂಡುಬಂದಿಲ್ಲ ," ಅದು ಸ್ಪಷ್ಟನೆ ನೀಡಿದೆ.
-
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ












Click it and Unblock the Notifications