Snake in Temple: ಶಿವಲಿಂಗದ ಮೇಲೆ ಹೆಡೆ ಎತ್ತಿ ಕುಳಿತ ಬುಸ್ ಬುಸ್ ನಾಗಪ್ಪ! ಸಾಕ್ಷಾತ್ ಪರಶಿವನೇ ಬಂದನೆಂದ ಭಕ್ತರು...
ಹುಜೂರಾಬಾದ್ ಜನವರಿ 30: ಶಿವನ ಕೊರಳ ಸುತ್ತ ನಾಗರಹಾವು ಇರುವ ಚಿತ್ರಗಳನ್ನು ನೀವು ನೋಡಿರುತ್ತೀರಿ. ಶಿವನ ದೇವಸ್ಥಾನಗಳಲ್ಲಿ ಈ ದೃಶ್ಯ ನಿಮಗೆ ಸಾಮಾನ್ಯವಾಗಿ ಕಂಡು ಬರುತ್ತದೆ. ಆದರೆ ಈ ದೃಶ್ಯ ನಿಜವಾಗಿ ಕಂಡು ಬಂದರೆ ನಿಮಗೆ ಹೇಗಾಗುತ್ತದೆ? ಸಾಕ್ಷಾತ್ ಶಿವನೇ ಧರಗೆ ಇಳಿದಂತ ಅನುಭವ ಆಗಲ್ವಾ..? ಇಂಥಹ ಅನುಭವ ತೆಲಂಗಾಣದ ಹುಜೂರಾಬಾದ್ (Huzurabad) ಪಟ್ಟಣ ನಿವಾಸಿಗಳಿಗಾಗಿದೆ.
ಹೌದು.. ತೆಲಂಗಾಣದ ಹುಜೂರಾಬಾದ್ ಪಟ್ಟಣದ ರಾಮಾಲಯಂ ದೇವಸ್ಥಾನದಲ್ಲಿ (Ramalayam temple) ಶನಿವಾರ ನಾಗರಹಾವು ಕಾಣಿಸಿಕೊಂಡ ಘಟನೆ ನಡೆದಿದೆ. ದೇವಸ್ಥಾನದಲ್ಲಿರುವ ಶಿವಲಿಂಗದ ಸುತ್ತ ಹಾವು ಸುತ್ತಿಕೊಂಡಿರುವುದು ಕಂಡು ಬಂದಿದೆ. ನಾಗರ ಹಾವು ಹೆಡೆ ಎತ್ತಿ ಶಿವ ಲಿಂಗದ ಸುತ್ತ ಕುಳಿತಿರುವುದುನ್ನು ಕಂಡು ಭಕ್ತರು ಅಚ್ಚರಿಗೊಂಡಿದ್ದಾರೆ.

ರಾಮಮಂದಿರದಲ್ಲಿರುವ ಶಿವಲಿಂಗದ ಸುತ್ತ ಹಾವು ಸುತ್ತಿಕೊಂಡ ಸುದ್ದಿ ತಿಳಿದ ಭಕ್ತರು ಹಾಗೂ ಸ್ಥಳೀಯರು ದೇವಸ್ಥಾನಕ್ಕೆ ಸಾಗರೋಪಾದಿಯಲ್ಲಿ ಬಂದು ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ್ದಾರೆ.
ಅಕ್ಕಪಕ್ಕದ ಗ್ರಾಮಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಹಾಗೂ ಸ್ಥಳೀಯರು ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸಿದ್ದಾರೆ. ಕೆಲವರು ನಾಗರ ಹಾವನ್ನು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ.
ಕಳೆದ ನಾಲ್ಕು ದಿನಗಳಿಂದ ದೇವಸ್ಥಾನದ ಆವರಣದಲ್ಲಿ ನಾಗರ ಹಾವು ತಿರುಗಾಡುತ್ತಿದೆ ಎಂದು ಭಕ್ತರು ತಿಳಿಸಿದ್ದಾರೆ. ಶನಿವಾರ ದೇವಾಲಯ ಪ್ರವೇಶಿಸಿ ಶಿವಲಿಂಗಕ್ಕೆ ಪ್ರದಕ್ಷಿಣೆ ಹಾಕಿದೆ ಎನ್ನಲಾಗಿದೆ.
ಕಲಬುರಗಿ ದೇವಸ್ಥಾನದಲ್ಲಿ ಹಾವು
ಕಲಬುರಗಿಯ ಅಫಜಲಪುರ ತಾಲೂಕಿನ ವಡ್ಡಳ್ಳಿ ಗ್ರಾಮದ ಪರಮಾನಂದ ದೇವಸ್ಥಾನದಲ್ಲಿ ಕಳೆದ ವರ್ಷ ಆಗಸ್ಟ್ ನಲ್ಲಿ ನಾಗರಪಂಚಮಿ ನಿಮಿತ್ತ ನಡೆಯುತ್ತಿದ್ದ ವಿಶೇಷ ಪೂಜೆ ಸಮಯದಲ್ಲಿ ಶಿವ ಲಿಂಗದ ಮೇಲೆ ನಾಗರಹಾವು ಪ್ರತ್ಯಕ್ಷವಾಗುವ ಮೂಲಕ ಅಚ್ಚರಿ ಮೂಡಿಸಿತ್ತು.
ಪರಮಾನಂದ ದೇವಸ್ಥಾನದಲ್ಲಿ ಪ್ರತಿಷ್ಠಾಪನಾ ಲಿಂಗ ನೀರಿನಿಂದ ತೊಳೆದು ವಿಭೂತಿ, ಕುಂಕುಮ, ಪತ್ರೆ ಹಾಕಿ ಪೂಜೆ ಮಾಡುವ ವೇಳೆ ಈ ಹಾವು ಕಾಣಿಸಿಕೊಂಡಿದೆ. ಪೂಜೆ ಮಂತ್ರದ ನಡುವೆ ಹಾವು ಆಗಮಿಸಿ ಶಿವ ಲಿಂಗದ ಮೇಲೆ ಹಾದು ಹೋಗಿದೆ. ಈ ದೃಶ್ಯ ನಾಗರಪಂಚಮಿ ಹಬ್ಬಕ್ಕೆ ಮತ್ತಷ್ಟು ಮೆರಗು ತಂದಿದೆ.












Click it and Unblock the Notifications