Get Updates
Get notified of breaking news, exclusive insights, and must-see stories!

Telangana Opinion Poll Survey: ಕಾಂಗ್ರೆಸ್ ಅಧೀನ ರಾಜ್ಯದಲ್ಲಿ ಬಿಜೆಪಿಗೆ 5 ಸ್ಥಾನ: ಆಡಳಿತ ಪಕ್ಷ- ಬಿಆರ್‌ಎಸ್‌ಗೆ ಎಷ್ಟು ಸೀಟು

ಬೆಂಗಳೂರು, ಮಾರ್ಚ್ 05: ತೆಲಂಗಾಣ ಲೋಕಸಭಾ ಚುನಾವಣೆ 2024 ಕುರಿತು ಇಂಡಿಯಾ ಟಿವಿ-ಸಿಎನ್‌ಎಕ್ಸ್ ಒಪಿನಿಯನ್ ಪೋಲ್ ಪ್ರಕಟವಾಗಿದೆ. ಇದರಲ್ಲಿ ಕಾಂಗ್ರೆಸ್ ಅಧಿಪತ್ಯವಿರುವ ಈ ರಾಜ್ಯದಲ್ಲಿ ಬಿಜೆಪಿ 5 ಸ್ಥಾನ ಗೆಲ್ಲುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತೆಲಂಗಾಣದಲ್ಲಿ ಕಾಂಗ್ರೆಸ್ 9 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮುವ ಸಾಧ್ಯತೆ ಇದೆ ಎಂದು ಇಂಡಿಯಾ ಟಿವಿ-ಸಿಎನ್‌ಎಕ್ಸ್ ಅಭಿಪ್ರಾಯ ಸಂಗ್ರಹ ವರದಿ ತಿಳಿಸಿದೆ.

Telangana Lok Sabha Election 2024 India TV CNX Survey 5 Seat for BJP Congress-BRS Seats details

ಸಮೀಕ್ಷೆಯು ಬಿಜೆಪಿ 5 ಸ್ಥಾನಗಳನ್ನು ಗೆಲ್ಲಬಹುದು ಎಂದು ಅಂದಾಜಿಸಲಾಗಿದೆ, ಕೆಸಿ ಚಂದ್ರಶೇಖರ್ ರಾವ್ ಅವರ ನೇತೃತ್ವದ ಭಾರತ್ ರಾಷ್ಟ್ರ ಸಮಿತಿ (BRS) 2 ಸ್ಥಾನ ಮತ್ತು ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಒಂದು ಸ್ಥಾನವನ್ನು ಗೆಲ್ಲುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.

ಬಿಜೆಪಿ ಗೆಲ್ಲುವ ಕ್ಷೇತ್ರಗಳು ಇವು

ತೆಲಂಗಾಣದಲ್ಲಿ ಬಿಜೆಪಿಯು ಕರೀಂನಗರ, ಮಹಬೂಬ್‌ನಗರ, ನಿಜಾಮಾಬಾದ್ ಮತ್ತು ಸಿಕಂದ್ರಾಬಾದ್ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸುವ ನಿರೀಕ್ಷೆಗಳು ಇವೆ. ಆದರೆ ಅಂತಿಮವಾಗಿ ಇಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಲಿದೆ. ಓವೈಸಿ ಗೆಲ್ಲುವ ಸಾಧ್ಯತೆ ಹಿನ್ನೆಲೆಯಲ್ಲಿ ಎಐಎಂಐಎಂ ತನ್ನ ಸಾಂಪ್ರದಾಯಿಕ ಕ್ಷೇತ್ರವನ್ನು ಹೈದರಾಬಾದ್‌ ಬದಲಾಯಿಸದೇ ಉಳಿಸಿಕೊಳ್ಳಲಿದೆ.

ಈ ಹಿಂದಿನ 2019 ರ ಲೋಕಸಭಾ ಚುನಾವಣೆಯಲ್ಲಿ ಅಂದು ತೆಲಂಗಾಣ ರಾಷ್ಟ್ರ ಸಮಿತಿ (TRS) ಆಗಿದ್ದ ಇಂದಿನ ಬಿಆರ್ಎಸ್ ಪಕ್ಷವು 9 ಸ್ಥಾನಗಳ ಗೆದ್ದಿತ್ತು. ಆಗ ಬಿಜೆಪಿ 4 ಸ್ಥಾನ ಮತ್ತು ಕಾಂಗ್ರೆಸ್ 3 ಸೀಟು ಗೆದ್ದಿದೆ. ಎಐಎಂಐಎಂ ಪಕ್ಷವು ಕೇವಲ ಒಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

Telangana Lok Sabha Election 2024 India TV CNX Survey 5 Seat for BJP Congress-BRS Seats details

2019 ಲೋಕಸಭಾ ಚುನಾವಣಾ ಫಲಿತಾಂಶ ಮಾಹಿತಿ

2019ರಲ್ಲಿ ತೆಲಂಗಾಣ ಲೋಕಸಭೆ ಚುನಾವಣೆಯಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ (TRS, ಈಗ BRS) ಪೆದ್ದಪಲ್ಲೆ, ಜಹೀರಾಬಾದ್, ಮೇದಕ್, ಚೆವೆಲ್ಲಾ, ಮಹೆಬೂಬ್‌ನಗರ, ನಾಗರಕರ್ನೂಲ್, ವಾರಂಗಲ್, ಮಹಬೂಬಾಬಾದ್ ಮತ್ತು ಖಮ್ಮಂ ಕ್ಷೇತ್ರಗಳನ್ನು ಗೆದ್ದಿತ್ತು.

ನಲ್ಗೊಂಡ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕ ನಲಮಾಡ ಉತ್ತಮ್ ಕುಮಾರ್ ರೆಡ್ಡಿ ಅವರು 2019 ರಲ್ಲಿ ಟಿಆರ್ಎಸ್ ಅಭ್ಯರ್ಥಿ ವೇಮಿರೆಡ್ಡಿ ನರಸಿಂಹ ರೆಡ್ಡಿಯನ್ನು 25,682 ಮತಗಳ ಅಂತರದಿಂದ ಸೋಲಿಸಿದ್ದರು.

ಕೋಮಟಿ ರೆಡ್ಡಿ ವೆಂಕಟ್ ರೆಡ್ಡಿ ಗೆಲುವು

2019 ರಲ್ಲಿ ಭೋಂಗಿರ್ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕ ಕೋಮಟಿ ರೆಡ್ಡಿ ವೆಂಕಟ್ ರೆಡ್ಡಿ ಅವರು ಟಿಆರ್‌ಎಸ್ ಅಭ್ಯರ್ಥಿ ಡಾ.ಬೂರ ನರಸಯ್ಯ ಗೌಡ್ ಅವರನ್ನು 5,219 ಮತಗಳ ಅಂತರದಿಂದ ಹಿಮ್ಮೆಟ್ಟಿಸಿ ಗೆಲುವ ಸಾಧಿಸಿದ್ದರು.

ಬಿಜೆಪಿ ನಾಯಕ ಜಿ ಕಿಶನ್ ರೆಡ್ಡಿ 2019 ರ ಲೋಕಸಭಾ ಚುನಾವಣೆಯಲ್ಲಿ ಸಿಕಂದ್ರಾಬಾದ್ ಕ್ಷೇತ್ರದಲ್ಲಿ ಟಿಆರ್‌ಎಸ್ ಅಭ್ಯರ್ಥಿ ತಲಸಾನಿ ಸಾಯಿ ಕಿರಣ್ ಯಾದವ್ ಅವರನ್ನು 62,114 ಮತಗಳ ಅಂತರದಿಂದ ಸೋಲಿಸಿ ವಿಜಯ ಸಾಧಿಸಿದ್ದರು.

2019ರಲ್ಲಿ ಬಿಜೆಪಿ ಅಭ್ಯರ್ಥಿ ಅರವಿಂದ್ ಧರ್ಮಪುರಿ ನಿಜಾಮಾಬಾದ್ ಕ್ಷೇತ್ರದಲ್ಲಿ ಟಿಆರ್‌ಎಸ್ ಅಭ್ಯರ್ಥಿ ಮತ್ತು ಕೆಸಿಆರ್ ಅವರ ಪುತ್ರಿ ಕಲ್ವಕುಂಟ್ಲ ಕವಿತಾ ಅವರಿಂದ 70,875 ಮತಗಳ ಅಂತರದಲ್ಲಿ ಗೆದ್ದು ಬಂದರು.

ಅಸಾದುದ್ದೀನ್ ಓವೈಸಿಗೆ ವಿಜಯ

ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ 2019 ರಲ್ಲಿ ಹೈದರಾಬಾದ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಭಗವಂತ ರಾವ್ ಅವರನ್ನು 2,82,186 ಮತಗಳ ಅಂತರದಿಂದ ಸೋಲಿಸಿದರು. ಇನ್ನೂ ಮೇದಕ್ ಕ್ಷೇತ್ರದಲ್ಲಿ ಟಿಆರ್‌ಎಸ್ ನಾಯಕ ಕೋತಾ ಪ್ರಭಾಕರ ರೆಡ್ಡಿ ಕಾಂಗ್ರೆಸ್ ಅಭ್ಯರ್ಥಿ ಅನಿಲ್ ಕುಮಾರ್ ಗಾಲಿ ಅವರನ್ನು 3,16,427 ಮತಗಳ ಅಂತರದಿಂದ ಹಿಮ್ಮೆಟ್ಟಿಸಿದ್ದರು. ಭರ್ಜರಿ ಗೆಲುವು ಪಡೆದಿದ್ದರು.

ಮಲ್ಕಾಜ್‌ಗಿರಿ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕ ಅನುಮುಲ ರೇವಂತ್ ರೆಡ್ಡಿ ಅವರು ಟಿಆರ್‌ಎಸ್ ಅಭ್ಯರ್ಥಿ ರಾಜಶೇಖರ್ ರೆಡ್ಡಿ ಮರಿ ಅವರನ್ನು 10,919 ಮತಗಳಿಂದ ಸೋಲಿಸಿದ್ದರು. ನಾಗರ್‌ಕರ್ನೂಲ್ ಕ್ಷೇತ್ರದಲ್ಲಿ ಟಿಆರ್‌ಎಸ್ ಅಭ್ಯರ್ಥಿ ಪೋತುಗಂಟಿ ರಾಮುಲು ಅವರು ಕಾಂಗ್ರೆಸ್ ಅಭ್ಯರ್ಥಿ ಡಾ ಮಲ್ಲು ರವಿ ಅವರಿಂದ 1,89,748 ಮತಗಳ ಅಂತರದಲ್ಲಿ ಗೆದ್ದು ಲೋಕಸಭೆ ಆಯ್ಕೆಯಾದರು.

ಹೀಗೆ ರಾಜ್ಯದ ಬಹುತೇಕ ಲೋಕಸಭಾ ಕ್ಷೇತ್ರಗಳಲ್ಲಿ ಬಿಆರ್‌ಎಸ್ ಮೇಲುಗೈ ಸಾಧಿಸಿತ್ತು. ಈ ಬಾರಿ ತೀವ್ರ ಹಿನ್ನಡೆ ಅನುಭವಿಸುವ ಸಾಧ್ಯತೆ ಇದೆ. ಈ ಬಾರಿ ಕಾಂಗ್ರೆಸ್ ಅಬ್ಬರ ರಾಜ್ಯದಲ್ಲಿ ಜೋರಾಗಿದೆ. ಇದರೊಂದಿಗೆ ಬಿಜೆಪಿಯು ಕಳೆದ ಬಾರಿಗಿಂತಲೂ ಈ ಸಾರಿ ಒಂದು ಸ್ಥಾನ ಹೆಚ್ಚು ಪಡೆಯಬಹುದು ಎಂದು ಇಂಡಿಯಾ ಟಿವಿ-ಸಿಎನ್‌ಎಕ್ಸ್ ಒಪಿನಿಯನ್ ಪೋಲ್ ಮಾಹಿತಿ ನೀಡಿದೆ.

2014ರಲ್ಲಿ ತೆಲಂಗಾಣ ಲೋಕಸಭೆ ಚುನಾವಣೆ ವಿವರ

ಟಿಆರ್ಎಸ್- 11 ಸೀಟು ಗೆದ್ದಿತ್ತು.

ಕಾಂಗ್ರೆಸ್ - 02 ಸ್ಥಾನ

ಬಿಜೆಪಿ, AIMIM, ಟಿಡಿಪಿ, YSRCP ಪಕ್ಷಗಳೂ ತಲಾ ಒಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಂಡವು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+