Zomato Delivery Boy Horse Riding: ಬೈಕ್ ಬಿಟ್ಟು ಕುದುರೆ ಏರಿದ ಡೆಲಿವರಿ ಬಾಯ್: ವಿಡಿಯೋ ವೈರಲ್
ಹೈದರಾಬಾದ್, ಜನವರಿ 03: ಕೇಂದ್ರ ಸರ್ಕಾರವು ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಹೊಸ ಹಿಟ್ ಮತ್ತು ರನ್ ಕಾನೂನನ್ನು ಜಾರಿಗೆ ತಂದಿದೆ. ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದರ ವಿರುದ್ಧ ಟ್ರಕ್, ಆಟೋ ಚಾಲಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಪೆಟ್ರೋಲ್ ಬಂಕ್‌ಗಳು ತುಂಬಿ ತುಳುಕಿದ್ದವು. ಈ ಮಧ್ಯೆ ಬೈಕ್‌ನಲ್ಲಿ ಓಡಾಡುತ್ತಿದ್ದ ಝೊಮ್ಯಾಟೊ ಡೆಲಿವರಿ ಬಾಯ್ ಇದೀಗ ಕುದುರೆ ಏರಿ ಹೊರಟ ವಿಡಿಯೋ ಭಾರೀ ವೈರಲ್ ಆಗಿದೆ. ಇದಕ್ಕೆ ನೆಟ್ಟಿಗರು ಶಬ್ಬಾಶ್ ಗಿರಿ ನೀಡಿದ್ದಾರೆ. ಇದರಲ್ಲೇನಿದೆ ವಿಶೇಷತೆ? ತಿಳಿಯಿರಿ.
ತೆಲಂಗಾಣದ ರಾಜ್ಯದ ಹೈದರಾಬಾದ್‌ನಲ್ಲಿ ಚಂಚಲ್‌ಗುಡ ಪ್ರದೇಶದಲ್ಲಿ ಮಂಗಳವಾರ ರಾತ್ರಿ ಝೊಮಾಟೊ ಡೆಲಿವರಿ ಏಜೆಂಟ್ ಕುದುರೆ (Zomato Delivery Boy Horse Riding) ಸವಾರಿ ಮಾಡುತ್ತಿರುವುದು ಕಂಡುಬಂದಿದ್ದು. ಪ್ರತಿಭಟನೆ ಕಾರಣದಿಂದಾಗಿ ನಗರದಲ್ಲಿ ಟ್ರಾಫಿಕ್ ಅಸ್ತವ್ಯಸ್ತವಾಗಿದೆ. ಇದೇ ವೇಳೆ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಹಾಕಿಸಿಕೊಳ್ಳಲು ಜನ ತುಂಬಿತ್ತು.

ನೆಟ್ಟಿಗರಿಂದ ಸಿಕ್ತು ಭರಪೂರ ಮೆಚ್ಚುಗೆ
ಕಠಿಣ ಸಂದರ್ಭದಲ್ಲೂ ಸಹಿತ ಝೋಮ್ಯಾಟೋ ಡೆಲಿವರಿ ಬಾಯ್ ಕಾರ್ಯನಿಷ್ಠೆ ಮೆರೆದಿದ್ದಾನೆ. ತ್ವರಿತ ಗತಿಯಲ್ಲಿ ಮಾಡಿದ ಆರ್ಡರ್ ಅನ್ನು ತಲುಪಿಸುವಲ್ಲಿ ಯಶಸ್ವಿಯಾಗಿದ್ದಾನೆ. ಇದಕ್ಕೆ ನೆಟ್ಟಿಗರು ಭರಪೂರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತೆಲಂಗಾಣದಲ್ಲಿ ಟ್ರಕ್ ಚಾಲಕರು ಮತ್ತು ದೇಶದ ಸಾಗಣೆ ವಾಹನಗಳ ಚಾಲಕ-ಮಾಲೀಕರು ಪ್ರತಿಭಟನೆ ಹಿಂಪಡೆದ ಬಳಿಕವೂ ಸಂಚಾರಕ್ಕೆ ಭಾರೀ ಅಡಚಣೆ ಉಂಟಾಗಿತ್ತು. ಇದೇ ವೇಳೆ ಎಂದಿನಂತೆ ಝೋಮ್ಯಾಟೋ ಆರ್ಡರ್ ಅನ್ನು ಬೈಕ್‌ನಲ್ಲಿ ತೆರಳಿ ತಲುಪಿಸುತ್ತಿದ್ದ ಡೆಲಿವರಿ ಬಾರಿಗೂ ಸಂಕಷ್ಟ ಎದುರಾಗಿತ್ತು.
#Zomato Delivery Agent Drops Order In #Hyderabad On A Horse. Reason: Fuel Shortage pic.twitter.com/R6sCs81P7J
— sourabh Gupta (@sourabh2610) January 3, 2024
ಕುದುರೆ ಏರಿ ಸೂಕ್ತ ಸಮಯಕ್ಕೆ ಡೆಲಿವರಿ: ವಿಡಿಯೋ
ಈ ವೇಳೆ ಡೆಲಿವರಿ ಬಾಯ್ ಯಾವುದೇ ಇಂಧನ ಅಗತ್ಯತೆಯೇ ಇಲ್ಲದ ಕದುರೆ ಸವಾರಿ ಮಾಡಿದ್ದಾನೆ. ಬೈಕ್ ಬಿಟ್ಟು ಕುದುರೆ ಏರಿ ಆರ್ಡರ್‌ಗಳನ್ನು ಗ್ರಾಹಕರಿಗೆ ನಿಗದಿತ ಸಮಯದಲ್ಲಿ ತಲುಪಿಸಿದ್ದಾನೆ. ಕೆಂಪು ಝೋಮ್ಯಾಟೋ ಬ್ಯಾಗ್ ಹಾಕಿ ಕುದುರೆ ಮೇಲೆ ಹೊರಟ ಡೆಲಿವರಿ ಬಾಯ್ ವಿಡಿಯೋ ಅನ್ನು ಸೌರಭ್ ಗುಪ್ತ ಎಂಬುವವರು ಹಂಚಿಕೊಂಡಿದ್ದಾರೆ. 'ಹೈದರಾಬಾದ್ ನಲ್ಲಿ ಇಂಧನ ಕೊರತೆ ಕಾರಣ Zomato ಡೆಲಿವರಿ ಏಜೆಂಟ್ ಆರ್ಡರ್‌ಗಳನ್ನು ಕದುರೆ ಏರಿ ತಲುಪಿಸುತ್ತಿದ್ದಾನೆ' ಎಂದು ಅವರು ಬರೆದುಕೊಂಡಿದ್ದಾರೆ.

ಲೈಕ್ಸ್, ಕಾಮೆಂಟ್‌ಗಳ ಸುರಿಮಳೆ
ಈ ವಿಡಿಯೋ ನೋಡಿದ ಕೆಲವೇ ಗಂಟೆಗಳಲ್ಲಿ ಸಾಕಷ್ಟು ಲೈಕ್ಸ್‌ಗಳುಲು, ಕಾಮೆಂಟುಗಳು ಬಂದಿವೆ. ಇಂತಹ ಪರಿಸ್ಥಿತಿಯಲ್ಲೂ ತ್ವರಿತ ಕಾರ್ಯ ಪ್ರವೃತ್ತ ಆಗಿರುವ ಡೆಲಿವರಿ ಬಾಯ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲವರು ಇಂಧನ ಧರ ಏರಿಕೆ ಮಧ್ಯೆ ಕುದುವೆ ಸವಾರಿ ಉತ್ತಮ ಮಾರ್ಗ ಎಂದು ಹೊಗಳಿದ್ದಾರೆ.
ನೆಟ್ಟಿಗರಲ್ಲಿ ಹಲವರು ಸರ್ಕಾರ ಹಿಟ್-ಅಂಡ್-ರನ್ ಕಾನೂನಿನ ಪರವಾಗಿ ಕಾಮೆಂಟ್ ಮಾಡಿದ್ದಾರೆ. ಕುದುರೆ ಸವಾರಿ ವಿಡಿಯೋ ಲೆಕ್ಕವಿಲ್ಲದಷ್ಟು ಬಾರಿ ವೀಕ್ಷಣೆ ಕಂಡಿದೆ. ಪೆಟ್ರೋಲ್ ದರ ಏರಿಕೆ, ಕೊರತೆಯ ಕಾರಣದಿಂದ ಆಹಾರ ವಿತರಣಾ ಹುಡುಗ ತನ್ನ ಬೈಕ್ ಅನ್ನು ಬಿಟ್ಟು ಕುದುರೆಯ ಮೇಲೆ ಆರ್ಡರ್ ವಿತರಿಸಲು ಹೊರಟಿದ್ದನ್ನು ನೋಡಿದ್ದೀರಾ ಎಂದು ಬರೆದುಕೊಂಡು ವಿಡಿಯೋ ಹಂಚಿಕೊಂಡಿದ್ದಾರೆ.
ಸರ್ಕಾರದ ಹೊಸ ಕ್ರಮದಲ್ಲಿ ಏನಿದೆ?
ಭಾರತೀಯ ದಂಡ ಸಂಹಿತೆಯನ್ನು ಬದಲಾವಣೆ ಮಾಡಿರುವ ಸರ್ಕಾರ ಹೊಸ ಭಾರತೀಯ ನ್ಯಾಯ ಸಂಹಿತೆಯ ಅಡಿಯಲ್ಲಿ, ಅಜಾಗರೂಕ ಚಾಲನೆಯಿಂದ ಮಾರಣಾಂತಿಕ ಅಪಘಾತಗಗಳು ನಡೆದಲ್ಲಿ ಪೊಲೀಸ್ ಅಧಿಕಾರಿಗಳಿಗೆ ತಿಳಿಸದೆ ಅಪಘಾತದ ಸ್ಥಳದಿಂದ ಪಲಾಯನ ಮಾಡಬಾರದು. ಮಾಡಿದಲ್ಲಿ ಚಾಲಕರು 10 ವರ್ಷಗಳವರೆಗೆ ಜೈಲು ಅಥವಾ ರೂ 7 ಲಕ್ಷ ದಂಡ ತೆರಬೇಕಾಗುತ್ತದೆ ಎಂಬುದನ್ನು ಜಾರಿ ಮಾಡಲಾಗಿದೆ.
ಹಳೆ ಕಾಯ್ದೆಗೆ ಹೋಲಿಸಿದರೆ ಹೊಸ ಕಾನೂನಿನಲ್ಲಿ ಶಿಕ್ಷೆಯನ್ನು ಹೆಚ್ಚಿಸುವ ಅವಕಾಶ ಇದೆ. ಇದನ್ನು ಹಿಂಪಡೆಯುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದರು.












Click it and Unblock the Notifications