ಈ ಜಿಲ್ಲೆಯಲ್ಲಿ ಸುಮಾರು 65 ಮಿಲಿಯನ್ ವರ್ಷಗಳ ಹಿಂದಿನ ಹಳೆಯ ಪಳೆಯುಳಿಕೆಗಳು ಪತ್ತೆ-ಸಂಶೋಧಕರು ಹೇಳೋದೇನು ಗೊತ್ತಾ?
ಇದೀಗ ಬಿಸಿಲಿನ ಪ್ರಮಾನ ಹೆಚ್ಚಾಗುತ್ತಿದ್ದು ನದಿಗಳು, ಜಲಾಶಯಗಳು, ಕೆರೆಗಳು ಸೇರಿದಂತೆ ಇನ್ನಿತರ ಜಲಾಶಯಗಳಲ್ಲಿ ನೀರು ಬತ್ತಿಹೋಗುತ್ತಿವೆ. ಹೀಗೆ ನೀರು ಖಾಲಿಯಾಗುತ್ತಿದ್ದಂತೆ ಅವಶೇಷಗಳು ಕಾಣತೊಡಗಿವೆ. ಹಾಗೆಯೇ ಸಾಮಾನ್ಯವಾಗಿ ನಾವು ಹಳೆಯ ಕಾಲದ ಅಂದರೆ ಸುಮಾರು ವರ್ಷಗಳ ಹಿಂದಿನ ಪಳೆಯುಳಿಕೆ ಪತ್ತೆಯಾಗಿರುವುದನ್ನು ನೋಡಿದ್ದೇವೆ. ಅದೇ ರೀತಿ ಇದೀಗ ಈ ಜಿಲ್ಲೆಯಲ್ಲಿ ಸುಮಾರು 65 ಮಿಲಿಯನ್ ವರ್ಷಗಳ ಹಿಂದಿನ ಹಳೆಯ ಪಳೆಯುಳಿಕೆಗಳು ಪತ್ತೆಯಾಗಿದ್ದು, ಇದು ನೋಡುಗರನ್ನು ಆಶ್ಚರ್ಯಕ್ಕೊಳಗಾಗುವಂತೆ ಮಾಡಿದೆ. ಮಾಹಿತಿ ಇಲ್ಲಿದೆ ತಿಳಿಯಿರಿ.
ಸುಮಾರು 65 ಮಿಲಿಯನ್ ವರ್ಷಗಳ ಹಿಂದೆ ಅಳಿದುಳಿದ ಪಜಿಯೋಫಿಲಮ್, ಪಿಲೋಫಿಲಮ್ ಮತ್ತು ಟೇನಿಯೋಪ್ಟೆರಿಸ್ ಸಸ್ಯಗಳ ಪಳೆಯುಳಿಕೆಗಳು ತೆಲಂಗಾಣದ ಆಸಿಫಾಬಾದ್ ಜಿಲ್ಲೆಯ ಸಿರ್ಪುರ್ ಖಗಜ್ ನಗರ ಮಂಡಲದ ರಾಂಪುರ ಗ್ರಾಮದಲ್ಲಿ ಕಂಡುಬಂದಿವೆ. ಈ ಪಳೆಯುಳಿಕೆಗಳು ಸ್ಥಳೀಯರು ಮಕುಂಗ್ ಸೆರಾಮಿಕ್ ಪೈಪ್‌ಗಳಿಗಾಗಿ ಬಳಸುತ್ತಿದ್ದ ಮಣ್ಣಿನ ಕೊಳದಲ್ಲಿ ಕಂಡುಬಂದಿವೆ ಎಂದು ಪ್ರಾಗ್ಜೀವಶಾಸ್ತ್ರದ ಸಮುದ್ರಲಾ ಸುನಿಲ್ ಹೇಳಿದ್ದಾರೆ.

ಈ ಭಾಗದಲ್ಲಿ ಈ ಸಸ್ಯದ ಪಳೆಯುಳಿಕೆಗಳಲ್ಲದೆ ಇತರ ರೀತಿಯ ಪ್ರಾಣಿಗಳ ಪಳೆಯುಳಿಕೆಗಳೂ ಪತ್ತೆಯಾಗಿದ್ದು, ಇವುಗಳ ಕುರಿತು ಹೆಚ್ಚಿನ ಸಂಶೋಧನೆ ನಡೆಸಲಾಗುತ್ತಿದೆ ಎಂದರು. ಇನ್ನು ಮಹಾರಾಷ್ಟ್ರದ ಗೊಂಡ್ವಾನಾ ವಿಶ್ವವಿದ್ಯಾನಿಲಯದ ಪಿಎಚ್‌ಡಿ ಸ್ಕಾಲರ್ ನುಸ್ರತ್ ಬಾಬರ್ ಅವರು, ಈ ಪಜಿಯೋಫಿಲಮ್ ಸಸ್ಯಗಳು ಜುರಾಸಿಕ್ ಅವಧಿಯ ಅಂತ್ಯದಿಂದ ಕ್ರಿಟೇಶಿಯಸ್ ಅವಧಿಯ ಅಂತ್ಯದವರೆಗೆ ಇತ್ತು ಎಂದು ಹೇಳಿದ್ದಾರೆ.












Click it and Unblock the Notifications