ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಳಿ ಕಟ್ಟುವ ಶುಭ ವೇಳೆ ಸ್ವಾಮಿ ಏನಿದು ನಿನ್ನ ಲೀಲೆ!

By Mahesh
|
Google Oneindia Kannada News

ಚೆನ್ನೈ, ಮೇ.20: ಬಿಜೆಪಿ ಮುಖಂಡ ಸುಬ್ರಮಣ್ಯ ಸ್ವಾಮಿಗೇನಾಗಿದೆ..ಕೈಗೆ ತಾಳಿ ಕೊಟ್ಟು ಆಶೀರ್ವಾದ ಮಾಡಿಕೊಡಿ 'ಸ್ವಾಮಿ' ಎಂದು ಹೇಳಿದ್ರೆ.. ವಧುಗೆ ತಾಳಿ ಕಟ್ಟೋಕೆ ಹೋದ್ರಾ!..ಅಥವಾ ಸುಮ್ನೆ ತಮಾಷೆ ಮಾಡಿದ್ರಾ? ನೆರೆದಿದ್ದವರಿಗೆ ತಿರುನಲ್ವೇಲಿ ಹಲ್ವಾ ತಿನ್ನಿಸಿದ್ರಾ ಹೇಗೆ? ಇಂಥದ್ದೊಂದು ತಮಾಷೆ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ಸಂಚರಿಸುತ್ತಿದೆ.

ತಿರುನಲ್ವೇಲಿಯಲ್ಲಿ ಮದುವೆ ಸಮಾರಂಭಕ್ಕೆ ಹೋಗಿದ್ದ ಸುಬ್ರಮಣ್ಯ ಸ್ವಾಮಿಗಳು ಈ ರೀತಿ ಮಾಡಿದ್ದೇಕೆ? ಎಂಬುದು ಗೊತ್ತಿಲ್ಲ. ಆದರೆ, ಒಂದು ಕ್ಷಣ ವರ ಮಹಾಶಯನಂತೂ ಗಾಬರಿ ಬಿದ್ದಿದ್ದು ನಿಜ. ವಿಡಿಯೋ ನೋಡಿದವರಂತೂ ನಕ್ಕು ನಲಿದಿದ್ದಂತೂ ನಿಜ.

ಈ ಅಪರೂಪದ ವಿಡಿಯೋ ನ್ಯೂಸ್ 7 ಸೆರೆ ಹಿಡಿದು ಅಂತರ್ಜಾಲದಲ್ಲಿ ಬಿಟ್ಟಿದೆ. ಮದುವೆ ಮುಂತಾದ ಶುಭ ಸಮಾರಂಭಕ್ಕೆ ದೊಡ್ಡವರಿಗೆ ಆಹ್ವಾನ ನೀಡುವ ಮುನ್ನ ಮತ್ತೊಮ್ಮೆ ಯೋಚಿಸುವಂತೆ ಮಾಡಿದೆ.

Subramanian Swamy almost just got married again

ನಡೆದಿದ್ದಾರೂ ಏನು?: ತಿರುನಲ್ವೇಲಿಯ ದೇಗುಲವೊಂದರದ ಸಮಾರಂಭಕ್ಕೆ ಅಧಿಕಾರಿಗಳ ಜೊತೆಗೆ ಸುಬ್ರಮಣ್ಯ ಸ್ವಾಮಿ ಹೋಗಿದ್ದರು. ವಧು ವರರನ್ನು ಆಶೀರ್ವದಿಸಲು ಬಂದಿದ್ದ ಸ್ವಾಮಿ ಅವರ ಕೈಗೆ ತಾಳಿಯನ್ನು ನೀಡಿ ಆಶೀರ್ವದಿಸಿ ವರನಿಗೆ ನೀಡುವಂತೆ ಸೂಚಿಸಲಾಗಿದೆ. [ಇಬ್ಬರು ಸ್ವಾಮಿಗಳ ಕೈಯಲ್ಲಿ ಅಮ್ಮನ ರಾಜಕೀಯ ಭವಿಷ್ಯ!]

ದೇವರ ಎದುರು ನಿಂತಿದ್ದ ವಧು ವರರ ಮುಂಭಾಗಕ್ಕೆ ತಡವರಿಸುತ್ತಾ ಬಂದ ಸ್ವಾಮಿಗಳು ತಾಳಿಯನ್ನು ಕಣ್ಣಿಗೆ ಒತ್ತಿಕೊಂಡಿದ್ದಾರೆ. ನಂತರ ಅದನ್ನು ವರನ ಕೈಗೆ ನೀಡುವ ಬದಲು ತಾವೇ ವಧುವಿನ ಕೊರಳಿಗೆ ಕಟ್ಟಲು ಮುಂದಾಗಿದ್ದಾರೆ.

ಈ ಸಮಯದಲ್ಲಿ ಐಎಎಸ್ ಅಧಿಕಾರಿ ವಿಎಸ್ ಚಂದ್ರಲೇಖ ಅವರು ತಡೆ ಹಿಡಿದು ಎಚ್ಚರಿಸಿದಾಗ ಸ್ವಾಮಿ ನಕ್ಕು , ವರನ ಕೈಗೆ ತಾಳಿ ನೀಡಿದ್ದಾರೆ. ಈ ವಿಡಿಯೋ ನ್ಯೂಸ್ 7 ಫೇಸ್ ಬುಕ್ ಪುಟದಲ್ಲೇ 10 ಸಾವಿರಕ್ಕೂ ಅಧಿಕ ಬಾರಿ ಹಂಚಿಕೆಯಾಗಿದೆ.

Subramanian Swamy almost just got married again

ನಿಮ್ಮ ಗಮನಕ್ಕೆ: ಮೈಲಾಪುರದಲ್ಲಿ ಹುಟ್ಟಿ ಬೆಳೆದ ತಮಿಳು ಬ್ರಾಹ್ಮಣ ಕುಟುಂಬದ ಸ್ವಾಮಿ ಅವರ ಮೂಲ ಊರು ಮದುರೈ. ದೇಶ, ವಿದೇಶಗಳಲ್ಲಿ ಪ್ರೊಫೆಸರ್ ಆಗಿ, ಆರ್ಥಿಕ ತಜ್ಞರಾಗಿದ್ದ ಸ್ವಾಮಿ ಅವರು ಜನತಾಪಾರ್ಟಿ ನಂತರ ಬಿಜೆಪಿಯ ಮುಖಂಡರಾಗಿ ಭ್ರಷ್ಟಾಚಾರ ವಿರೋಧಿ ನಾಯಕರಾಗಿ ಜನಪ್ರಿಯಗೊಂಡಿದ್ದಾರೆ.

ಹಾರ್ವಡ್ ನಲ್ಲಿ ಭೇಟಿಯಾದ ರೊಕ್ಸ್ನಾ (ಸದ್ಯ ಸುಪ್ರೀಂಕೋರ್ಟ್ ಅಡ್ವೋಕೇಟ್) ಅವರನ್ನು ವರಿಸಿದ ಸ್ವಾಮಿ ಅವರಿಗೆ ಗೀತಾಂಜಲಿ ಹಾಗೂ ಸುಹಾಸಿನಿ ಹೈದರ್(ಪತ್ರಕರ್ತೆ) ಎಂಬ ಪುತ್ರಿಯರಿದ್ದಾರೆ. ವಿಡಿಯೋ ನೋಡಿದವರು ಕೂಡಾ ಮತ್ತೊಮ್ಮೆ ನೋಡಿ ಆನಂದಿಸಿ...

English summary
Tirunelveli : BJP leader Subramanian Swamy shocked people at a wedding. Find out what he did with the mangalsutra, which he was meant to bless and hand it over to the groom.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X