ಪ್ರಧಾನಿ, ವಿತ್ತ ಸಚಿವರಿಗೆ ಅರ್ಥಶಾಸ್ತ್ರದ ತಿಳಿವಳಿಕೆ ಇಲ್ಲ: ಸುಬ್ರಮಣಿಯನ್ ಸ್ವಾಮಿ

ನವದೆಹಲಿ, ಡಿಸೆಂಬರ್ 14: ಪ್ರಧಾನಿ ಹಾಗೂ ವಿತ್ತ ಸಚಿವರಿಗೆ ಅರ್ಥಶಾಸ್ತ್ರದ ಅರಿವಿಲ್ಲ ಎಂದು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ತಮ್ಮದೇ ಪಕ್ಷದ ಸರ್ಕಾರವನ್ನು ಟೀಕಿಸಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿನ ಬೆಲೆ ಏರಿಕೆಗೆ ಕೇಂದ್ರ ಹಣಕಾಸು ಸಚಿವರೇ ಹೊಣೆಯಾಗಿದ್ದಾರೆ. ''ಸರ್ಕಾರಕ್ಕೆ ಅರ್ಥಶಾಸ್ತ್ರವು ಅರ್ಥವಾಗುತ್ತಿಲ್ಲ. ಈ ಬಗ್ಗೆ ಪ್ರಧಾನಿ ಅಥವಾ ಹಣಕಾಸು ಸಚಿವರಿಗೆ ತಿಳಿದಿಲ್ಲ.

ಈ ವಿಚಾರವಾಗಿ ಅವರು ಯಾರ ಬಳಿಯಲ್ಲೂ ಸಮಾಲೋಚನೆ ನಡೆಸುವುದಿಲ್ಲ. ಬೆಳವಣಿಗೆ ದರ ಕುಸಿದಾಗ ಏನು ಮಾಡಬೇಕೆಂದು ಕೂಡ ಅವರಿಗೆ ತಿಳಿದಿಲ್ಲ'' ಎಂದು ವ್ಯಂಗ್ಯವಾಡಿದ್ದಾರೆ.

Subramanian Swamy Says Neither PM Nor Finance Minister Know Economics

ಕೆಲವು ಹಿಂದೂ ಸಂಘಟನೆಗಳ ಪ್ರಕಾರ ಈಗ ಮಸೀದಿಗಳು ಇರುವ ಸ್ಥಳಗಳಲ್ಲಿ ಹಿಂದೂ ದೇವಾಲಯಗಳು ಇದ್ದವು, 'ಆರಾಧನಾ ಸ್ಥಳಗಳ (ವಿಶೇಷ ನಿಬಂಧನೆ) ಕಾಯ್ದೆ, 1991 ಅನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿರುವ ಮೊಕದ್ದಮೆಗೆ ಕೇಂದ್ರ ಸರ್ಕಾರ ಇನ್ನೂ ಪ್ರತಿಕ್ರಿಯೆ ನೀಡಿಲ್ಲ' ಎಂದು ಹೇಳಿದರು.

ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಸೋಮವಾರ ಕೇಂದ್ರದ ತಮ್ಮ ಪಕ್ಷದ ಸರ್ಕಾರವನ್ನು ಟೀಕಿಸಿದ್ದು, ಪ್ರಧಾನಿ ಮತ್ತು ಹಣಕಾಸು ಸಚಿವರಿಗೆ ಅರ್ಥಶಾಸ್ತ್ರ ತಿಳಿದಿಲ್ಲ ಎಂದು ಹೇಳಿದ್ದಾರೆ.

ದೇಶದ ಬೆಲೆ ಏರಿಕೆಗೆ ಕೇಂದ್ರ ಹಣಕಾಸು ಸಚಿವರೇ ಹೊಣೆ. ಸರ್ಕಾರಕ್ಕೆ ಅರ್ಥಶಾಸ್ತ್ರ ಅರ್ಥವಾಗುತ್ತಿಲ್ಲ, ಪ್ರಧಾನಿ ಅಥವಾ ಹಣಕಾಸು ಸಚಿವರಿಗೆ ಅದರ ಬಗ್ಗೆ ತಿಳಿದಿಲ್ಲ. ಬೆಳವಣಿಗೆ ದರ ಕುಸಿದಿದ್ದರೂ ಏನು ಮಾಡಬೇಕೆಂದು ತಿಳಿಯುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ಕೆಲವು ಹಿಂದೂ ಸಂಘಟನೆಗಳ ಪ್ರಕಾರ ಈಗ ಮಸೀದಿಗಳು ಇರುವ ಸ್ಥಳಗಳಲ್ಲಿ ಹಿಂದೂ ದೇವಾಲಯಗಳು ಇದ್ದವು, 'ಆರಾಧನಾ ಸ್ಥಳಗಳ (ವಿಶೇಷ ನಿಬಂಧನೆ) ಕಾಯ್ದೆ, 1991 ಅನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿರುವ ಮೊಕದ್ದಮೆಗೆ ಕೇಂದ್ರ ಸರ್ಕಾರ ಇನ್ನೂ ಪ್ರತಿಕ್ರಿಯೆ ನೀಡಿಲ್ಲ' ಎಂದು ಹೇಳಿದರು.

1991ರ ಕಾಯ್ದೆಯ ಪ್ರಕಾರ ಧಾರ್ಮಿಕ ಸ್ಥಳಗಳನ್ನು ಹಿಂಪಡೆಯಲು ಅಥವಾ ಸ್ವರೂಪದಲ್ಲಿ ಬದಲಾವಣೆ ಮಾಡಲು ಮೊಕದ್ದಮೆಯನ್ನು ಸಲ್ಲಿಸುವುದಕ್ಕೆ ಅವಕಾಶವಿಲ್ಲ.

ಆಗಸ್ಟ್ 15, 1947 ರಿಂದ ಚಾಲ್ತಿಯಲ್ಲಿದ್ದ ಸ್ವರೂಪದಲ್ಲೇ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಕಾಯ್ದೆ ಹೇಳುತ್ತದೆ. ಆರಾಧನೆಯ ಸ್ಥಳವನ್ನು ಹಿಂಪಡೆಯಲು ಅಥವಾ ಅದರ ಸ್ವರೂಪದಲ್ಲಿ ಬದಲಾವಣೆಯನ್ನು ಪಡೆಯಲು ಮೊಕದ್ದಮೆಯನ್ನು ದಾಖಲಿಸುವುದನ್ನು ಕಾಯಿದೆಯು ನಿಷೇಧಿಸುತ್ತದೆ. ಕೆಲವು ಹಿಂದುತ್ವ ಗುಂಪುಗಳು ಕಾಶಿ-ಮಥುರಾದ ಧಾರ್ಮಿಕ ಸ್ಥಳಗಳನ್ನು ಹಿಂದೂಗಳಿಗೆ ನೀಡಬೇಕು ಎಂದು ಒತ್ತಾಯಿಸಿವೆ.

ಗಡಿ ವಿಚಾರದಲ್ಲಿ ಚೀನಾದೊಂದಿಗೆ ಸರ್ಕಾರ ವ್ಯವಹರಿಸಿದ ರೀತಿ ತನಗೆ ತೃಪ್ತಿ ತಂದಿಲ್ಲ ಎಂದು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

ಕೆಲವು ದಿನಗಳ ಹಿಂದೆ ಉಡುಪಿಯಲ್ಲಿ ಮಾತನಾಡಿದ್ದ ಅವರು, ಆರ್ಯ, ದ್ರಾವಿಡರ ನೆಲೆಯಲ್ಲಿ ಬ್ರಿಟಿಷರ ಒಡೆದು ಆಳುವ ನೀತಿಯನ್ನು ಭಾರತೀಯರೇ ಇಂದು ಜಾತಿ, ಧರ್ಮಗಳ ಹೆಸರಲ್ಲಿ ಮುಂದುವರಿಸುತ್ತಿದ್ದಾರೆ ಎಂದು ಹೇಳಿದ್ದರು.

ಪರ್ಯಾಯ ಅದಮಾರು ಮಠ, ಶ್ರೀಕೃಷ್ಣ ಮಠದ ವತಿಯಿಂದ ಡಿ.26ರ ತನಕ ರಾಜಾಂಗಣದ ಶ್ರೀನರಹರಿತೀರ್ಥ ವೇದಿಕೆಯಲ್ಲಿ ಆಯೋಜಿಸಿದ ಎರಡು ವರ್ಷಗಳ ಪರ್ಯಾಯ ಸಮಾರೋಪದ ವಿಶ್ವಾರ್ಪಣಂ ಕಾರ್ಯಕ್ರಮದಲ್ಲಿ ಬುಧವಾರ ಪ್ರಾಚೀನ ಮತ್ತು ಜೀವಂತವಿರುವ ಹಿಂದೂ ನಾಗರಿಕತೆಯ ಭಾಗವಾಗಿರಲು ಹೆಮ್ಮೆ ವಿಷಯವಾಗಿ ಉಪನ್ಯಾಸ ನೀಡಿದರು.

ಯುನೆಸ್ಕೋ ಪ್ರಕಾರ ಹಿಂದೂ ಸಂಸ್ಕೃತಿ ನಿರಂತರ ಬೆಳವಣಿಗೆ ಹೊಂದುತ್ತಿರುವ ಜಗತ್ತಿನ ಏಕೈಕ ಜೀವಂತ ನಾಗರಿಕತೆ, ಸಂಸ್ಕೃತಿಯಾಗಿದೆ. ಸನಾತನ ಧರ್ಮವು ಭಗವಂತ, ಮೋಕ್ಷದ ಹಾದಿಯನ್ನು ತೋರುತ್ತಿದ್ದು, ದೇವರು ನೀಡಿದ ಶ್ರುತಿ(ಉಪನಿಷತ್ತು, ಅರಣ್ಯಕ), ಋುಷಿ ಮುನಿಗಳಿಂದ ಬಂದ ಸ್ಮೃತಿಗಳ ಮೂಲಕ ಸಂಶೋಧನೆಗಳಾಗಬೇಕು ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+