Get Updates
Get notified of breaking news, exclusive insights, and must-see stories!

ದೋವಲ್‌ರನ್ನು ವಜಾಗೊಳಿಸದಿದ್ದರೆ ಮೋದಿಯೇ ರಾಜೀನಾಮೆ ನೀಡಬೇಕಾಗಬಹುದು: ಸುಬ್ರಮಣಿಯನ್ ಸ್ವಾಮಿ ಮಹತ್ವದ ಹೇಳಿಕೆ ಹಿಂದಿರುವ ಕಾರಣವೇನು

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ವಜಾಗೊಳಿಸದಿದ್ದರೆ ಪ್ರಧಾನಿ ಮೋದಿ ರಾಜೀನಾಮೆ ನೀಡಬೇಕಾಗಬಹುದು ಎಂದು ಸಂಸದ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ. ಇದರ ಹಿಂದಿನ ಕಾರಣ ತಿಳಿಯಿರಿ

ನವದೆಹಲಿ, ಫೆಬ್ರವರಿ 15: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ವಜಾಗೊಳಿಸದಿದ್ದರೆ ಪ್ರಧಾನಿ ನರೇಂದ್ರ ಮೋದಿ ಅವರು ರಾಜೀನಾಮೆ ನೀಡಬೇಕಾಗಬಹುದು ಎಂದು ಬಿಜೆಪಿಯ ಹಿರಿಯ ನಾಯಕ ಮತ್ತು ಸಂಸದ ಸುಬ್ರಮಣಿಯನ್ ಸ್ವಾಮಿ ಮಂಗಳವಾರ ಹೇಳಿದ್ದಾರೆ. ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ, ಆರು ಅವಧಿಯ ಸಂಸದರು ಆಗಿರುವ ಸುಬ್ರಮಣಿಯನ್ ಸ್ವಾಮಿ ಅಜಿತ್ ದೋವಲ್ ಪೆಗಾಸಸ್ ಟೆಲಿಫೋನ್ ಟ್ಯಾಪಿಂಗ್ ಹಗರಣ ಸೇರಿದಂತೆ ಹಲವು ಹಗರಣಗಳನ್ನು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಅಮೆರಿಕದ ವಾಷಿಂಗ್ಟನ್ ಡಿಸಿಯಿಂದ ಮತ್ತೊಂದು ಭಯಾನಕ ಸುದ್ದಿ ಭಾರತಕ್ಕೆ ಬರಲಿದೆ ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ. ಆದರೆ, ಈ ಸುದ್ದಿಯ ಬಗ್ಗೆ ಯಾವುದೇ ಸುಳಿವನ್ನು ನೀಡಿಲ್ಲ.

'ಮೋದಿ ಅವರು ತಮ್ಮ ಎನ್‌ಎಸ್‌ಎ ಹುದ್ದೆಯಿಂದ ದೋವಲ್ ಅವರನ್ನು ವಜಾಗೊಳಿಸಬೇಕು. ಅವರು ಪೆಗಾಸಸ್ ಟೆಲಿಫೋನ್ ಟ್ಯಾಪಿಂಗ್ ಮತ್ತು ವಾಷಿಂಗ್ಟನ್ DC ಯಿಂದ ಬರಲಿರುವ ಇನ್ನೊಂದು ಭಯಾನಕ ಸುದ್ದಿಯನ್ನು ಒಳಗೊಂಡಂತೆ ಹಲವಾರು ಬಾರಿ ಮೂರ್ಖತನ ಮೆರೆದಿದ್ದಾರೆ. ಒಂದು ವೇಳೆ, ಪ್ರಧಾನಿ ಮೋದಿ ಅವರನ್ನು ವಜಾಮಾಡದೇ ಹೋದರೆ, 2023ರ ಮಧ್ಯದ ವೇಳೆಗೆ ಮೋದಿ ಕೂಡ ರಾಜೀನಾಮೆ ನೀಡಬೇಕಾಗಬಹುದು' ಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

Modi might have to quit if he does not sack Ajit Doval Says Subramanian Swamy

ಕಳೆದ ಕೆಲವು ವರ್ಷಗಳಿಂದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ವೈಫಲ್ಯಗಳು ಮತ್ತು ಲೋಪಗಳ ಬಗ್ಗೆ ಸ್ವಾಮಿ ಧ್ವನಿಯೆತ್ತಿದ್ದಾರೆ. ಪ್ರಧಾನಿ ಮೋದಿಯನ್ನು ಬಹಿರಂಗವಾಗಿ ಟೀಕಿಸುತ್ತಿದ್ದಾರೆ.

ಅಜಿತ್ ದೋವಲ್ ಅವರು ಪ್ರಧಾನಿ ನರೇಂದ್ರ ಮೋದಿಯವರ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರರು (NSA). ಅವರು RAW ಗೂಢಚಾರಿ, ಇಂಟೆಲಿಜೆನ್ಸ್ ಬ್ಯೂರೋ (IB) ಮುಖ್ಯಸ್ಥ ಮತ್ತು ಭಾರತೀಯ ಪೊಲೀಸ್ ಸೇವೆಯಲ್ಲಿ (IPS) ಅಧಿಕಾರಿಯಾಗಿದ್ದರು.

Modi might have to quit if he does not sack Ajit Doval Says Subramanian Swamy

ಅವರು ಈ ಹಿಂದೆ 2004-05ರಲ್ಲಿ IBಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಅದರ ಕಾರ್ಯಾಚರಣೆ ವಿಭಾಗದ ಮುಖ್ಯಸ್ಥರಾಗಿ ಒಂದು ದಶಕದ ಕಾಲ ಕೆಲಸ ಮಾಡಿದ್ದಾರೆ. ಪಾಕಿಸ್ತಾನದಲ್ಲಿ ಒಂದು ವರ್ಷ RAW ನ ರಹಸ್ಯ ಗೂಢಚಾರರಾಗಿ ಕಾರ್ಯನಿರ್ವಹಿಸಿದ್ದಾರ. ಅಲ್ಲಿ ಅವರು ವಿವಿಧ ಭಯೋತ್ಪಾದಕ ಸಂಘಟನೆಗಳ ಮಾಹಿತಿಯನ್ನು ಸಂಗ್ರಹಿಸಿದ್ದರು. ನಂತರ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್‌ನಲ್ಲಿ ಅಧಿಕಾರಿಯಾಗಿ 6 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ.

Modi might have to quit if he does not sack Ajit Doval Says Subramanian Swamy

RAW ಗೂಢಚಾರರಾಗಿ ಮತ್ತು IB ಯಲ್ಲಿನ ಸೇವೆಯಲ್ಲಿ ಅವರು ಅಪಾರ ಸಾಧನೆಗಳನ್ನು ಮಾಡಿದ್ದಾರೆ. ಅವರನ್ನು 'ಭಾರತದ ಜೇಮ್ಸ್ ಬಾಂಡ್' ಎಂದು ಕರೆಯಲಾಗುತ್ತದೆ. ಅವರು ತಮ್ಮ ವೃತ್ತಿಜೀವನದ ಹೆಚ್ಚಿನ ಭಾಗವನ್ನು IB ಯ ಗೂಢಚಾರರಾಗಿ ಕಳೆದಿದ್ದಾರೆ. ಪತ್ತೇದಾರಿ ಮತ್ತು ಗುಪ್ತಚರ ಮುಖ್ಯಸ್ಥರಾಗಿ ಅವರು ಯಶಸ್ವಿ ಕಾರ್ಯಾಚರಣೆಗಳನ್ನು ಮಾಡಿದ್ದಾರೆ. ಆಪರೇಷನ್ ಬ್ಲ್ಯಾಕ್ ಥಂಡರ್ 1988, ಇರಾಕ್‌ನಲ್ಲಿ 46 ಭಾರತೀಯರ ರಕ್ಷಣೆ, 2015 ರ ಕಾರ್ಯಾಚರಣೆ, 2016 ರ ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್, ಭಯೋತ್ಪಾದಕ ಸಂಘಟನೆ PFI ವಿರುದ್ಧದ ಕಾರ್ಯಾಚರಣೆಗಳಲ್ಲಿ ಅವರು ಯಶಸ್ಸನ್ನು ಕಂಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+