• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಮಸೇತು: ಜುಲೈ 26ಕ್ಕೆ ಮುಂದೂಡಿದ ಸುಪ್ರೀಂ ಕೋರ್ಟ್‌

|
Google Oneindia Kannada News

ನವದೆಹಲಿ,ಜು.13: ರಾಮಸೇತುವನ್ನು ರಾಷ್ಟ್ರೀಯ ಪಾರಂಪರಿಕ ಸ್ಮಾರಕವನ್ನಾಗಿ ಘೋಷಿಸುವಂತೆ ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಕೋರಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಸಲ್ಲಿಸಿರುವ ಮನವಿಯನ್ನು ಸುಪ್ರೀಂ ಕೋರ್ಟ್ ಬುಧವಾರ ಜುಲೈ 26 ರಂದು ವಿಚಾರಣೆಗೆ ಮುಂದೂಡಿದೆ.

ಸುಬ್ರಮಣಿಯನ್ ಸ್ವಾಮಿ ಅವರು ಪ್ರಕರಣದ ಶೀಘ್ರ ವಿಚಾರಣೆಯನ್ನು ಕೋರಿದ ನಂತರ ಜುಲೈ 26 ರಂದು ಅರ್ಜಿಯನ್ನು ಆಲಿಸುವುದಾಗಿ ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ನೇತೃತ್ವದ ಪೀಠ ತಿಳಿಸಿದೆ. ಈ ಸಮಸ್ಯೆಯು ದೀರ್ಘಕಾಲದವರೆಗೆ ಬಾಕಿ ಉಳಿದಿದೆ ಮತ್ತು ತುರ್ತು ವಿಚಾರಣೆಯ ಅಗತ್ಯವಿದೆ ಎಂದು ಸ್ವಾಮಿ ಸಲ್ಲಿಸಿದ ನಂತರ, ಪೀಠವು ಜುಲೈ 26 ರಂದು ವಿಚಾರಣೆಗೆ ವಿಷಯವನ್ನು ಪಟ್ಟಿ ಮಾಡಿದೆ.

ರಾಮ ಸೇತು ಕುರಿತ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್ ಒಪ್ಪಿಗೆರಾಮ ಸೇತು ಕುರಿತ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್ ಒಪ್ಪಿಗೆ

ಈ ವಿಷಯದ ಬಗ್ಗೆ ಭಾರತ ಸರ್ಕಾರದ ನಿಲುವಿನ ಬಗ್ಗೆಯೂ ಪೀಠವು ಕೇಳಿದೆ. ಈ ಕುರಿತು ಸರ್ಕಾರ ಅಫಿಡವಿಟ್ ಸಲ್ಲಿಸಿದೆ ಎಂದು ಸ್ವಾಮಿ ಹೇಳಿದರು. ರಾಮಸೇತುವನ್ನು ರಾಷ್ಟ್ರೀಯ ಪ್ರಾಮುಖ್ಯತೆಯ ಪುರಾತನ ಸ್ಮಾರಕವೆಂದು ಘೋಷಿಸಲು ರಾಷ್ಟ್ರೀಯ ಸ್ಮಾರಕಗಳ ಪ್ರಾಧಿಕಾರ (ಎನ್‌ಎಂಎ) ಜೊತೆಗೆ ಭಾರತ ಒಕ್ಕೂಟಕ್ಕೆ ಆದೇಶ ಮತ್ತು ನಿರ್ದೇಶನ ನೀಡುವಂತೆ ಸುಪ್ರೀಂ ಕೋರ್ಟ್‌ಗೆ ತಮ್ಮ ಮನವಿಯಲ್ಲಿ ಸ್ವಾಮಿ ಒತ್ತಾಯಿಸಿದ್ದಾರೆ.

 ರಾಷ್ಟ್ರೀಯ ಪ್ರಾಮುಖ್ಯತೆಯ ಪುರಾತನ ಸ್ಮಾರಕ

ರಾಷ್ಟ್ರೀಯ ಪ್ರಾಮುಖ್ಯತೆಯ ಪುರಾತನ ಸ್ಮಾರಕ

ರಾಷ್ಟ್ರೀಯ ಪ್ರಾಮುಖ್ಯತೆಯ ಪುರಾತನ ಸ್ಮಾರಕವಾಗಿರುವ ರಾಮಸೇತುಗೆ ಸಂಬಂಧಿಸಿದಂತೆ ವಿವರವಾದ ಸಮೀಕ್ಷೆಯನ್ನು ನಡೆಸಲು ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣೆಯನ್ನು ತೊಡಗಿಸಿಕೊಳ್ಳಲು ಭಾರತ ಒಕ್ಕೂಟಕ್ಕೆ ಆದೇಶ ಮತ್ತು ನಿರ್ದೇಶನ ನೀಡುವಂತೆ ಅವರು ಉನ್ನತ ನ್ಯಾಯಾಲಯವನ್ನು ಒತ್ತಾಯಿಸಿದ್ದಾರೆ.

'ರಾಮ ಸೇತುವನ್ನು ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಬೇಕು': ಕೇಂದ್ರ ಸಚಿವ ಪ್ರಹ್ಲಾದ್ ಪಟೇಲ್'ರಾಮ ಸೇತುವನ್ನು ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಬೇಕು': ಕೇಂದ್ರ ಸಚಿವ ಪ್ರಹ್ಲಾದ್ ಪಟೇಲ್

 2017ರಲ್ಲಿ ಸಭೆ ನಡೆದಿತ್ತು

2017ರಲ್ಲಿ ಸಭೆ ನಡೆದಿತ್ತು

ರಾಮಸೇತು ಅಸ್ತಿತ್ವವನ್ನು ಕೇಂದ್ರವು ಒಪ್ಪಿಕೊಂಡಿರುವ ಮೊದಲ ಸುತ್ತಿನ ಮೊಕದ್ದಮೆಯಲ್ಲಿ ನಾನು ಈಗಾಗಲೇ ಗೆದ್ದಿದ್ದೇನೆ ಎಂದು ಹೇಳಿದ ಸ್ವಾಮಿ, ಸೇತುವನ್ನು ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸುವ ತನ್ನ ಬೇಡಿಕೆಯನ್ನು ಪರಿಗಣಿಸಲು ಸಂಬಂಧಪಟ್ಟ ಕೇಂದ್ರ ಸಚಿವರು 2017ರಲ್ಲಿ ಸಭೆಯನ್ನು ಕರೆಯಲಾಗಿತ್ತು. ಆದರೆ ಪರಂಪರೆಯ ಸ್ಮಾರಕ ನಂತರ ಏನೂ ಆಗಲಿಲ್ಲ ಎಂದು ಹೇಳಿದ್ದಾರೆ.

 ಸುಣ್ಣದ ಕಲ್ಲುಗಳ ಸರಪಳಿ

ಸುಣ್ಣದ ಕಲ್ಲುಗಳ ಸರಪಳಿ

ರಾಮಸೇತು ತಮಿಳುನಾಡಿನ ಆಗ್ನೇಯ ಕರಾವಳಿಯಲ್ಲಿರುವ ರಾಮೇಶ್ವರಂ ದ್ವೀಪ ಎಂದೂ ಕರೆಯಲ್ಪಡುವ ಪಂಬನ್ ದ್ವೀಪ ಮತ್ತು ಶ್ರೀಲಂಕಾದ ವಾಯುವ್ಯ ಕರಾವಳಿಯಲ್ಲಿರುವ ಮನ್ನಾರ್ ದ್ವೀಪದ ನಡುವಿನ ಸುಣ್ಣದ ಕಲ್ಲುಗಳ ಸರಪಳಿಯಾಗಿದೆ. ರಾಮಸೇತುವನ್ನು ಆಡಮ್ ಸೇತುವೆ ಎಂದೂ ಕರೆಯುತ್ತಾರೆ. ರಾಮಸೇತುವಿನ ಮೇಲೆ ಹಾದು ಹೋಗುವ ವಿವಾದಿತ ಸೇತುಸಮುದ್ರಂ ಹಡಗು ಕಾಲುವೆ ಯೋಜನೆಯ ವಿರುದ್ಧ ಅರ್ಜಿ ಸಲ್ಲಿಸಲಾಗಿದೆ. ಈ ಯೋಜನೆಯು ಕೆಲವು ರಾಜಕೀಯ ಪಕ್ಷಗಳು, ಪರಿಸರವಾದಿಗಳು ಮತ್ತು ಕೆಲವು ಹಿಂದೂ ಧಾರ್ಮಿಕ ಗುಂಪುಗಳಿಂದ ಪ್ರತಿಭಟನೆಯನ್ನು ಎದುರಿಸಿತ್ತು.

 ಪಾಕ್ ಜಲಸಂಧಿಯೊಂದಿಗೆ ಸಂಪರ್ಕ

ಪಾಕ್ ಜಲಸಂಧಿಯೊಂದಿಗೆ ಸಂಪರ್ಕ

ಯೋಜನೆಯಡಿಯಲ್ಲಿ 83 ಕಿಲೋಮೀಟರ್ ಉದ್ದದ ಆಳವಾದ ನೀರಿನ ಚಾನಲ್ ಅನ್ನು ರಚಿಸಲಾಯಿತು. ಇದು ಮನ್ನಾರ್ ಅನ್ನು ಪಾಕ್ ಜಲಸಂಧಿಯೊಂದಿಗೆ ಸಂಪರ್ಕಿಸುತ್ತದೆ. ವ್ಯಾಪಕವಾದ ಹೂಳೆತ್ತುವಿಕೆ ಮತ್ತು ಸುಣ್ಣದ ಕಲ್ಲುಗಳನ್ನು ತೆಗೆದುಹಾಕುವುದು ಇಲ್ಲಿ ಸೇರಿದೆ. ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್ (ಎನ್‌ಡಿಎ) ಸರ್ಕಾರವು ಸೆಪ್ಟೆಂಬರ್ 2019 ರಲ್ಲಿ ಸಲ್ಲಿಸಿದ ಅಫಿಡವಿಟ್‌ನಲ್ಲಿ ಅಂದಿನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠಕ್ಕೆ ರಾಮಸೇತುವಿಗೆ ಹಾನಿಯಾಗದಂತೆ ಶಿಪ್ಪಿಂಗ್ ಚಾನಲ್ ಯೋಜನೆಯ ಸಾಮಾಜಿಕ ಆರ್ಥಿಕ ಅನಾನುಕೂಲಗಳನ್ನು ಪರಿಗಣಿಸುವುದಾಗಿ ಮತ್ತು ಪರ್ಯಾಯ ಮಾರ್ಗವನ್ನು ಅನ್ವೇಷಿಸಲು ಸಿದ್ಧವಾಗಿದೆ ಎಂದು ತಿಳಿಸಿತ್ತು.

ರಾಮಾಯಣ ಮಹಾಕಾವ್ಯದಲ್ಲಿ ವಿವರಿಸಲಾದ ರಾಕ್ಷಸ ರಾಜ ರಾವಣನಿಂದ ತನ್ನ ಪತ್ನಿ ಸೀತೆಯನ್ನು ರಕ್ಷಿಸಲು ರಾಮಸೇತುವನ್ನು ರಾಮನು ವಾನರ ಸೈನ್ಯದ ಸಹಾಯದಿಂದ ನಿರ್ಮಿಸಿದನು ಎಂಬುದು ಲಕ್ಷಾಂತರ ಹಿಂದೂಗಳ ನಂಬಿಕೆಯಾಗಿದೆ.

Recommended Video

   Rohit Sharma ಹಾಗು Shikhar Dhawan ಒಬ್ಬರ ಬಗ್ಗೆ ಇನ್ನೊಬ್ಬರು ಹೇಳಿದ್ದೇನು | *Cricket | OneIndia Kannada
   English summary
   The Supreme Court on Wednesday, July 26, adjourned a plea filed by Bharatiya Janata Party (BJP) leader Subramanian Swamy seeking a direction to the Center to declare Ram Sethu as a national heritage monument.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X