• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗ್ರಾಹಕರೇ ಗಮನಿಸಿ: ಅಪರಂಜಿ ಖರೀದಿಗೆ ಹಾಲ್‌ಮಾರ್ಕ್‌ ಕಡ್ಡಾಯ

|
Google Oneindia Kannada News

ನವದೆಹಲಿ, ಜೂನ್ 16: ಅಪರಂಜಿ(24 ಕ್ಯಾರೆಟ್) ಚಿನ್ನ ಖರೀದಿಗೆ ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್ (ಬಿಐಎಸ್) ಹಾಲ್‌ಮಾರ್ಕ್‌ ಕಡ್ಡಾಯವಾಗಿದೆ. ಜೂನ್ 16ರಿಂದ ಈ ಯೋಜನೆ ಹಂತಹಂತವಾಗಿ ದೇಶದೆಲ್ಲೆಡೆ ಜಾರಿಗೆ ಬಂದಿದೆ.

ಗ್ರಾಹಕರ ಹಿತ ರಕ್ಷಿಸಲು ಚಿನ್ನಾಭರಣಗಳ ಮೇಲೆ ಹಾಲ್‌ಮಾರ್ಕ್ ಕಡ್ಡಾಯಗೊಳಿಸಬೇಕು ಎಂದು ಭಾರತದ ಮಹಾಲೇಖಪಾಲಕರು(CAG) ಕೇಂದ್ರ ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದ ಪ್ರಸ್ತಾವನೆಗೆ ಒಪ್ಪಿಗೆ ಸಿಕ್ಕಿ, ಹಾಲ್ ಮಾರ್ಕ್ ಕಡ್ಡಾಯಗೊಳಿಸಿ ಹತ್ತು ವರ್ಷ ಕಳೆದರೂ ಇನ್ನೂ ಪೂರ್ಣಪ್ರಮಾಣದಲ್ಲಿ ಪರಿಶುದ್ಧ ಚಿನ್ನ ಪಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಈ ಬಾರಿ ಮೋದಿ ಸರ್ಕಾರ ಕಟ್ಟುನಿಟ್ಟಾಗಿ ಹಾಲ್‌ಮಾರ್ಕ್‌ ಕಡ್ಡಾಯಗೊಳಿಸಲು ಮುಂದಾಗಿದೆ.

ಗ್ರಾಹಕರ ಜೇಬಿಗೆ ಕತ್ತರಿ: ಜೂನ್ 1 ರಿಂದ ಏನೇನು ಬದಲಾವಣೆಗ್ರಾಹಕರ ಜೇಬಿಗೆ ಕತ್ತರಿ: ಜೂನ್ 1 ರಿಂದ ಏನೇನು ಬದಲಾವಣೆ

''ಗ್ರಾಹಕ ವ್ಯವಹಾರಗಳ ಸಚಿವಾಲಯದ ವ್ಯಾಪ್ತಿಯಲ್ಲಿರುವ ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್ (ಬಿಐಎಸ್) ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡಿದ್ದು, 256 ಜಿಲ್ಲಾ ಕೇಂದ್ರಗಳಲ್ಲಿ ಪ್ರಾಥಮಿಕ ಹಂತದಲ್ಲಿ ಜಾರಿಗೆ ಬರಲಿದೆ,'' ಎಂದು ಗ್ರಾಹಕ ವ್ಯವಹಾರ ಖಾತೆ ಕೇಂದ್ರ ಸಚಿವ ಪಿಯೂಷ್ ಗೋಯೆಲ್ ಹೇಳಿದ್ದಾರೆ.

ಚಿನ್ನಾಭರಣಗಳ ಮೇಲೆ ಹಾಲ್‌ಮಾರ್ಕ್ ಕಡ್ಡಾಯಗೊಳಿಸದಿರುವುದರಿಂದ ಆಭರಣ ತಯಾರಕರು ಸಮರ್ಪಕವಾಗಿ ಭಾರತೀಯ ಆಭರಣಗಳನ್ನು ನೀಡದಿರುವುದರಿಂದ ಗ್ರಾಹಕರು ಪರಿಶುದ್ಧವಲ್ಲದ ಆಭರಣಗಳನ್ನು ಖರೀದಿಸುತ್ತಿದ್ದಾರೆ ಎಂದು ಸಿಎಜಿ ತನ್ನ ವರದಿಯಲ್ಲಿ ತಿಳಿಸಿತ್ತು.

ಚಿನ್ನಾಭರಣವನ್ನು ಎಲ್ಲಿ ತಯಾರು ಮಾಡಲಾಗಿದೆ? ಯಾವ ವರ್ಷ ತಯಾರಿಸಲಾಗಿದೆ ಎಂಬುದನ್ನು ತಿಳಿಸುತ್ತದೆ. ಇದಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಲಾಗ್ ಇನ್(http://www.bis.org.in) ಆಗುವುದರ ಮುಖೇನ ಪಡೆದುಕೊಳ್ಳಬಹುದು

''ಬಿಐಎಸ್‌ನಲ್ಲಿ ಇಲ್ಲಿ ತನಕ 34,647 ಆಭರಣ ಸಂಸ್ಥೆಗಳು ನೋಂದಣಿ ಮಾಡಿಕೊಂಡಿವೆ. ಶೇ 40ರಷ್ಟು ಮಾತ್ರ ಹಾಲ್ ಮಾರ್ಕ್ ಪಡೆಯಲು ಸಾಧ್ಯವಾಗಿವೆ.ಇನ್ಮುಂದೆ ಬಿಐಎಸ್ ನೋಂದಣಿ, ಹಾಲ್ ಮಾರ್ಕ್ ಇಲ್ಲದ ಆಭರಣಗಳಿಗೆ ಮಾನ್ಯತೆ ಇರುವುದಿಲ್ಲ,ಜೂನ್ 16 ರಿಂದ ಆಭರಣಗಾರರು 14, 18 ಹಾಗೂ 22 ಕ್ಯಾರೆಟ್ ಚಿನ್ನಾಭರಣಗಳನ್ನು ಮಾತ್ರ ಮಾರಾಟ ಮಾಡಬಹುದಾಗಿದೆ. ಅಪರಂಜಿ ಚಿನ್ನ ಮಾರಾಟಕ್ಕೆ ನೋಂದಣಿ, ಪರಿಶುದ್ಧತೆಯ ಮುದ್ರೆ ಅಗತ್ಯ,'' ಎಂದು ಗ್ರಾಹಕ ವ್ಯವಹಾರ ಇಲಾಖೆ ಕಾರ್ಯದರ್ಶಿ ಲೀನಾ ನಂದನ್ ಪಿಟಿಐಗೆ ತಿಳಿಸಿದ್ದಾರೆ.

English summary
Mandatory gold hallmarking comes into force from June 16: What you should know in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X