ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಳ್ಳತನ ತಡೆಗೆ ಎಲ್‌ಪಿಜಿ ಸಿಲಿಂಡರ್‌ಗಳಿಗೆ ಕ್ಯೂಆರ್ ಕೋಡ್: ಗ್ರಾಹಕರಿಗೆ ಲಾಭವೇನು?

|
Google Oneindia Kannada News

ನವದೆಹಲಿ, ನವೆಂಬರ್ 17: ಇದೀಗ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಗ್ರಾಹಕರಿಗೆ ಹೆಚ್ಚಿನ ಅನುಕೂಲವಾಗಲು ಸರ್ಕಾರ ಭರ್ಜರಿ ಗಿಫ್ಟ್ ನೀಡಲು ಹೊರಟಿದೆ. ಸರ್ಕಾರದ ಈ ಕ್ರಮವು ಗ್ಯಾಸ್ ಸಿಲಿಂಡರ್ ಗ್ರಾಹಕರಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ. ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಮತ್ತು ಇಂಡಿಯನ್ ಆಯಿಲ್ ಕಾರ್ಪೊರೇಶನ್‌ನಿಂದ ಗ್ಯಾಸ್ ಸಿಲಿಂಡರ್ ಕ್ಯೂಆರ್ ಕೋಡ್ ಬಳಕೆಯಾಗಲಿದೆ ಎಂದು ಹೇಳಿದ್ದಾರೆ.

ದೇಶಾದ್ಯಂತ ಸುಮಾರು 30 ಕೋಟಿ ಎಲ್‌ಪಿಜಿ ಗ್ರಾಹಕರಿದ್ದಾರೆ. ಆದರೆ ಅಚ್ಚರಿಯ ಸಂಗತಿ ಎಂದರೆ ಗ್ಯಾಸ್ ಸಿಲಿಂಡರ್ ಸಂಖ್ಯೆ 70 ಕೋಟಿ ಬಳಕೆದಾರರು ಇದ್ದಾರೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಹೀಗಿದ್ದರೂ, ಗ್ಯಾಸ್ ಸಿಲಿಂಡರ್‌ಗಳಿಂದ ಗ್ಯಾಸ್ ಕಳ್ಳತನ ಆಗುತ್ತಿರುವ ಘಟನೆಗಳು ಕಡಿಮೆಯಾಗುತ್ತಿಲ್ಲ. ಆದರೆ, ಈಗ ನಿಮಗೆ ಒಳ್ಳೆಯ ಸುದ್ದಿ ಎಂದರೆ, ಈಗ ಪೂರ್ಣ ಮೊತ್ತವನ್ನು ಪಾವತಿಸಿದ ನಂತರ ನಿಮಗೆ ಗ್ಯಾಸ್ ಸಿಗುತ್ತದೆ. ಮತ್ತು ನಿಮ್ಮ ಗ್ಯಾಸ್ ಸಿಲಿಂಡರ್‌ನಿಂದ ಯಾರಾದರೂ ಗ್ಯಾಸ್ ಕದಿಯುವುದು ಕಂಡುಬಂದರೆ, ಅಂತಹ ಜನ ಸಿಕ್ಕಿಬೀಳುತ್ತಾರೆ. ಹೌದು, ಇಂಡಿಯನ್ ಆಯಿಲ್ ಕಂಪನಿ ತನ್ನ ಗ್ರಾಹಕರಿಗೆ ಹೊಸ ಸೌಲಭ್ಯವನ್ನು ಒದಗಿಸುತ್ತಿದೆ.

ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್‌ ಬೆಲೆ ₹115 ರಷ್ಟು ಇಳಿಕೆವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್‌ ಬೆಲೆ ₹115 ರಷ್ಟು ಇಳಿಕೆ

ಕ್ಯೂಆರ್ ಕೋಡ್ ಹೇಗೆ ಕೆಲಸ ಮಾಡುತ್ತದೆ?

ಕ್ಯೂಆರ್ ಕೋಡ್ ಹೇಗೆ ಕೆಲಸ ಮಾಡುತ್ತದೆ?

ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಈ ಕುರಿತು ಮಾತನಾಡಿ, ಸರ್ಕಾರವು ಎಲ್ಲಾ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳನ್ನೂ ಕ್ಯೂಆರ್ ಕೋಡ್ನೊಂದಿಗೆ ಸಜ್ಜುಗೊಳಿಸಲಿದೆ ಎಂದು ಹೇಳಿದರು. ಕ್ಯೂಆರ್ ಕೋಡ್‌ನೊಂದಿಗೆ ಗ್ಯಾಸ್ ಸಿಲಿಂಡರ್‌ನ ಟ್ರ್ಯಾಕಿಂಗ್ ಸುಲಭವಾಗಿರುತ್ತದೆ. ಮತ್ತು ಗ್ಯಾಸ್ ಕದಿಯುವವರನ್ನು ಹಿಡಿಯಲಾಗುತ್ತದೆ. ಅಂದರೆ ಕ್ಯೂಆರ್ ಕೋಡ್ ಆಧಾರ್ ಕಾರ್ಡ್‌ನಂತೆಯೇ ಕಾರ್ಯನಿರ್ವಹಿಸುತ್ತದೆ. ಅಂದರೆ ಆ ಗ್ಯಾಸ್ ಸಿಲಿಂಡರ್ ಗುರುತಿಸಲು ಕ್ಯೂಆರ್ ಕೋಡ್‌ಗಳನ್ನು ಬಳಸಲಾಗುತ್ತದೆ.

QR ಕೋಡ್‌ ಸಿಲಿಂಡರ್ ವಿತರಣೆ

QR ಕೋಡ್‌ ಸಿಲಿಂಡರ್ ವಿತರಣೆ

ಮುಂದಿನ ಮೂರು ತಿಂಗಳಲ್ಲಿ ಎಲ್ಲಾ ಗ್ಯಾಸ್ ಸಿಲಿಂಡರ್‌ಗಳಲ್ಲಿ ಕ್ಯೂಆರ್ ಕೋಡ್ ಅಳವಡಿಸಲಾಗುವುದು ಎಂದು ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ. ಫೆಬ್ರವರಿ 2023 ರಿಂದ, QR ಕೋಡ್ ಹೊಂದಿರುವ ಸಿಲಿಂಡರ್ ಮನೆಗೆ ಬರಲಿದೆ. ಅದೂ ಸಂಪೂರ್ಣವಾಗಿ ತುಂಬಿದೆ. ಯಾವುದೇ ದೂರು ನೀಡಿದಾಗ, ಸಿಲಿಂಡರ್‌ನಲ್ಲಿರುವ ಕ್ಯೂಆರ್ ಕೋಡ್‌ನ ಡೇಟಾದಿಂದ ಡೆಲಿವರಿ ಬಾಯ್ ಅನ್ನು ಸುಲಭವಾಗಿ ತಲುಪಬಹುದು.

QR ಕೋಡ್‌ಗೆ ಮೊಬೈಲ್‌ಗೆ ಲಿಂಕ್

QR ಕೋಡ್‌ಗೆ ಮೊಬೈಲ್‌ಗೆ ಲಿಂಕ್

ಗ್ಯಾಸ್ ಸಿಲಿಂಡರ್‌ನಲ್ಲಿರುವ ಕ್ಯೂಆರ್ ಕೋಡ್ ಮೊಬೈಲ್‌ಗೆ ಲಿಂಕ್ ಮಾಡಲಾಗುತ್ತದೆ. ಮೊಬೈಲ್‌ನಿಂದ ಕ್ಯೂಆರ್ ಕೋಡ್‌ನ್ನು ಸ್ಕ್ಯಾನ್ ಮಾಡಿದ ನಂತರ ಗ್ರಾಹಕರು ತೂಕದ ಮಾಹಿತಿಯನ್ನು ಸುಲಭವಾಗಿ ಪಡೆಯಲು ಸಾಧ್ಯವಾಗುತ್ತದೆ. ಈ ಕ್ಯೂಆರ್ ಕೋಡ್‌ನಿಂದ ಸಿಲಿಂಡರ್‌ನಲ್ಲಿ ಎಷ್ಟು ಬಾರಿ ಗ್ಯಾಸ್ ತುಂಬಿದೆ ಎಂಬುದೂ ಕೂಡ ಗೊತ್ತಾಗಲಿದೆ. ಕ್ಯೂಆರ್ ಕೋಡ್ ಹಾನಿಯಾಗದ ಲೋಹದ್ದಾಗಿರುತ್ತದೆ.

ಈ ಸೌಲಭ್ಯದ ನಂತರ ನೀವು ಯಾವಾಗಲೂ ಗ್ಯಾಸ್ ಸಿಲಿಂಡರ್ ಪೂರ್ಣವಾಗಿ ಪಡೆದಿಕೊಳ್ಳಬಹುದು. ಈ ಕಳ್ಳತನವನ್ನು ತಡೆಯಲು, ಇಂಡಿಯನ್ ಆಯಿಲ್ ಕಂಪನಿಯು ಈಗ ಎಲ್‌ಪಿಜಿ ಸಿಲಿಂಡರ್‌ಗೆ ಕ್ಯೂಆರ್ ಕೋಡ್ ಹಾಕಲು ಹೊರಟಿದೆ. ಮೊದಲ ಹಂತದಲ್ಲಿ ಸುಮಾರು 20,000 ಎಲ್‌ಪಿಜಿ ಸಿಲಿಂಡರ್‌ಗಳಲ್ಲಿ ಕ್ಯೂಆರ್ ಕೋಡ್‌ಗಳನ್ನು ಅಳವಡಿಸಲಾಗುವುದು ಎಂದು ಇಂಡಿಯನ್ ಆಯಿಲ್ ಕಂಪನಿ ಹೇಳಿದೆ.

ದೆಹಲಿಯಲ್ಲಿ ಸ್ಥಾವರ ಸ್ಥಾಪನೆ

ದೆಹಲಿಯಲ್ಲಿ ಸ್ಥಾವರ ಸ್ಥಾಪನೆ

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಅಧ್ಯಕ್ಷ ಎಸ್.ಎಂ.ವೈದ್ಯ ಮಾತನಾಡಿ, ಕ್ಯೂಆರ್ ಕೋಡ್‌ಗಾಗಿ ದೆಹಲಿಯಲ್ಲಿ ಸ್ಥಾವರವನ್ನು ಸ್ಥಾಪಿಸಲಾಗುತ್ತಿದೆ. ಕ್ಯೂಆರ್ ಕೋಡ್ ಇರುವ ಎಲ್ ಪಿಜಿ ಸಿಲಿಂಡರ್‌ಗಳ ಪೂರೈಕೆ ಎರಡ್ಮೂರು ತಿಂಗಳಲ್ಲಿ ಆರಂಭವಾಗುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದರು. ಇನ್ನು ಮುಂದಿನ ಮೂರು ತಿಂಗಳ ಅವಧಿಯಲ್ಲಿ ಎಲ್ಲ ಗ್ಯಾಸ್‌ ಸಿಲಿಂಡರ್‌ಗಳಿಗೆ ಲೋಹದ ಕ್ಯೂಆರ್ ಕೋಡ್‌ ಅಳವಡಿಸಲಾಗುವುದು ಎಂದು ಅವರು ಹೇಳಿದರು.

English summary
The project is now being worked on by the government and the goal is to finish this project in three months. As the first tranche, 20,000 LPG cylinders embedded with QR code have been released.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X