ಎರಡನೇ ಸ್ಫೋಟಕ್ಕೆ ಕಾರಣ ಇನ್ನೂ ನಿಗೂಢ?

ಮೂರು ಅಂತಸ್ತಿನ ಕಲ್ಯಾಣ ಮಂಟಪಕ್ಕೆ ಹೊಂದಿಕೊಂಡತೆ ಕೆಳ ಅಂತಸ್ತಿನಲ್ಲಿ ಕೆಮಿಕಲ್ ಫ್ಯಾಕ್ಟರಿ ಇತ್ತು. ಎರಡನೇ ಸ್ಫೋಟ ಅಲ್ಲಿಯೇ ಸಂಭವಿಸಿರುವ ಸಾಧ್ಯತೆಯಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಕಲ್ಯಾಣ ಮಂಟಪದ ವಿಸ್ತೃತ ಭಾಗದ ಗೋಡೆ ಕುಸಿದು ಅಕ್ಕ ಪಕ್ಕದ ಮನೆ ಮೇಲೆ ಬಿದ್ದಿರುವುದರಿಂದ ಮನೆಗಳು ಜಖಂಗೊಂಡಿದೆ. ಅಗ್ನಿಶಾಮಕದಳದ ಸಿಬ್ಬಂದಿ ಸತತ ಮೂರು ಗಂಟೆಗಳಿಂದ ಪರಿಹಾರ ಕಾರ್ಯದಲ್ಲಿ ನಿರತರಾಗಿದ್ದಾರೆ.
ಸುಮನಹಳ್ಳಿಯ ಬೆಗ್ಗರ್ಸ್ ಕಾಲೋನಿ ಸಮೀಪದ ನಡೆದ ಘಟನೆಯಿಂದ ಮಾಗಡಿ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ. ಮನೆ ಗೋಡೆ ಕುಸಿದಿರುವ ಪರಿಣಾಮ ಕವಿತಾ ಎಂಬ ಯುವತಿ ಅವಶೇಷದಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಇನ್ನೊಂದು ಗಂಟೆಯಲ್ಲಿ ಶೋಧ ಕಾರ್ಯ ಪೂರೈಸುತ್ತೇವೆ ಎಂದು ಅಗ್ನಿಶಾಮಕದಳದವರು ಹೇಳಿದ್ದಾರೆ.
ಲಕ್ಷ್ಮಿ ಕನ್ವೇನ್ಷನ್ ಹಾಲ್ ಮಾಲೀಕರ ಮೇಲೆ ನಿರ್ಲಕ್ಷ್ಯದ ಆರೋಪ ಹೊರೆಸಿ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.












Click it and Unblock the Notifications