Get Updates
Get notified of breaking news, exclusive insights, and must-see stories!

ಸ್ಫೋಟಕ್ಕೆ ಅಮಾಯಕ ಯುವತಿ ಕವಿತಾ ಸಾವು

Young girl killed in Sumanahalli building collapse
ಬೆಂಗಳೂರು, ಸೆ.21: ಸುಮನಹಳ್ಳಿ ಕಲ್ಯಾಣ ಮಂಟಪದ ಸ್ಫೋಟಕ್ಕೆ ಕವಿತಾ ಎಂಬ ಯುವತಿ ಬಲಿಯಾಗಿದ್ದಾಳೆ. ಈ ಘಟನೆಯಲ್ಲಿ ಗಾಯಗೊಂಡವರನ್ನು ಲಕ್ಷ್ಮಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಕಾಂತರಾಜು ಎಂಬುವರ ಪರಿಸ್ಥಿತಿ ಹದಗೆಟ್ಟಿದ್ದು, ಐಸಿಯುನಲ್ಲಿ ಜೀವನ್ಮರಣದ ಹೋರಾಟ ನಡೆಸಿದ್ದಾರೆ.

ಕವಿತಾ ಸಾವಿನ ನಂತರ ಕಾರ್ಮಿಕ ಜೆಸ್ವಂತ್(40) ಎಂಬುವರು ಗುರುವಾರ ಮೃತಪಟ್ಟಿದ್ದಾರೆ.

ಉಳಿದ ಎಂಟು ಮಂದಿ ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿಗಳು ಸೇರಿದ್ದಾರೆ. ಈ ಘಟನೆಯಲ್ಲಿ ಗಾಯಗೊಂಡ 4 ವರ್ಷ ಮಗು ಚಿನ್ಮಯಿ ಚೇತರಿಸಿಕೊಂಡಿದೆ.

ಕವಿತಾ ಅಕಾಲಿಕ ಸಾವು: ಲಕ್ಷ್ಮಿ ಕನ್ವೆನ್ಷನ್ ಹಾಲ್ ನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ ಸಂಭವಿಸಿದ ಪರಿಣಾಮ ಕಟ್ಟಡದ ಒಂದು ಭಾಗದ ಗೋಡೆ ಪಕ್ಕದ ಮನೆಯ ಮೇಲೆ ಕುಸಿದಿದೆ. ಮನೆಯಲ್ಲಿದ್ದ ಕವಿತಾ ಎಂಬ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಅವಶೇಷದಡಿಯಲ್ಲಿ ಸಿಲುಕಿಕೊಂಡಿದ್ದಳು.

ಕವಿತಾಳ ಇರುವಿಕೆ ತಿಳಿದ ಮೇಲೆ ತೀವ್ರವಾಗಿ ರಕ್ಷಣಾ ಕಾರ್ಯಕ್ಕೆ ಮುಂದಾದ ಅಗ್ನಿಶಾಮಕದಳದ ಸಿಬ್ಬಂದಿಗಳಿಗೆ ಕವಿತಾಳನ್ನು ಜೀವಂತವಾಗಿ ಉಳಿಸಲು ಸಾಧ್ಯವಾಗಲಿಲ್ಲ. ಅವಶೇಷಗಳ ಅಡಿಯಿಂದ ಕವಿತಾಳ ಶವವನ್ನು ಹೊರತೆಗೆಯಲಾಗಿದೆ.

ಕಟ್ಟಡ ಕುಸಿಯುವ ವೇಳೆ ಜೀವ ಉಳಿಸಿಕೊಳ್ಳಲು ಓಡಿ ಹೋದೆವು. ಆದರೆ, ಕವಿತಾ ಪ್ರಜ್ಞೆ ತಪ್ಪಿ ಬಿದ್ದ ಪರಿಣಾಮ ಆಕೆಯನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಎಂದು ಆಕೆ ತಮ್ಮ ಗೋಳಾಡುತ್ತಿದ್ದಾನೆ. ಒಕ್ಕಲಿಗರ ಸಂಘದ ಕಾಲೇಜಿನಲ್ಲಿ 2ನೇ ಪಿಯುಸಿ ಓದುತ್ತಿದ್ದ ಕವಿತಾ, ಕಾಲೇಜು ಮುಗಿಸಿಕೊಂಡು ಮನೆಗೆ ಹಿಂತಿರುಗಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಳು ಎಂದು ತಿಳಿದುಬಂದಿದೆ.

ರಾತ್ರಿ ವೇಳೆ ಕೂಡಾ ಪರಿಹಾರ ಕಾರ್ಯ ಮುಂದುವರೆಯಲಿದೆ ಎಂದು ಅಗ್ನಿಶಾಮಕದಳದವರು ಹೇಳಿದ್ದಾರೆ. ಘಟನಾ ಸ್ಥಳಕ್ಕೆ ನಗರ ಜಿಲ್ಲಾಧಿಕಾರಿ ಅಯ್ಯಪ್ಪ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. [ಸಿಲಿಂಡರ್ ಸುರಕ್ಷತೆಗೆ ಸಲಹೆ]

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+