ಬೆಂಗಳೂರಿಗರಿಗೆ ಸಿಹಿ ಸುದ್ದಿ: ಇನ್ನೂ ಎರಡು ತಿಂಗಳು ಹೋಟೆಲ್ ತಿಂಡಿ-ಊಟದ ದರ ಏರಿಕೆ ಇಲ್ಲ: ಪಿಸಿ ರಾವ್
ಬೆಂಗಳೂರು, ಏಪ್ರಿಲ್ 03: ಅಗತ್ಯ ವಸ್ತುಗಳ ಬೆಲೆ ಏರಿಕೆ ಜೊತೆಗೆ ನಿರಂತರವಾಗಿ ಅಡುಗೆ ಮತ್ತು ವಾಣಿಜ್ಯ ಅನಿಲ ದರ ಏರಿಕೆ ಆಗಿದೆ. ಹೀಗಿದ್ದರೂ ಹೋಟೆಲ್ ಮಾಲೀಕರು ಬೆಂಗಳೂರಿನ ಜನತೆಗೆ/ಗ್ರಾಹಕರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ.
ಉದ್ದೇಶದಂತೆ ಬೃಹತ್ ಬೆಂಗಳೂರು ಹೊಟೇಲುಗಳ ಸಂಘದಿಂದ ಸೋಮವಾರ ಬೆಂಗಳೂರಿನಲ್ಲಿ ವಿಶೇಷ ಸಭೆ ನಡೆಸಲಾಯಿತು. ದಿನಬಳಕೆಯ ವಾಣಿಜ್ಯ ಅಡುಗೆ ಅನಿಲ್ ದರ ಏರಿಕೆ ಆಗಿದ್ದರಿಂದ ಹೋಟೆಲ್ ತಿಂಡಿ- ತಿನಿಸುಗಳ ದರ ಏರಿಕೆ ಮಾಡಬೇಕೋ ಬೇಡವೋ ಎಂಬುದರ ಬಗ್ಗೆ ಚರ್ಚಿಸಿ ನೀರ್ಣಯ ಕೈಗೊಳ್ಳಲಾಗಿದೆ.

ಹೋಟೆಲ್‌ಗಳ ಗ್ರಾಹಕರು/ಸಾರ್ವಜನಿಕರ ಹಿತದೃಷ್ಟಿಯಿಂದ ತಕ್ಷಣಕ್ಕೆ ತಿಂಡಿ-ತಿನಿಸುಗಳ ಬೆಲೆ ಏರಿಕೆ ಮಾಡುವುದಿಲ್ಲ. ಮುಂದಿನ ಎರಡು ತಿಂಗಳುಗಳಲ್ಲಿ ಖಚ್ಚಾ ವಸ್ತುಗಳ ಬೆಲೆಗಳ ವಿದ್ಯಾಮಾನ ನೋಡಿ ನಂತರ ತಿಂಡಿ-ತಿನಿಸುಗಳ ದರ ಏರಿಕೆ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಇಂದಿನ ಸಭೆಯಲ್ಲಿ ಹೋಟೆಲ್ ಮಾಲೀಕರ ಸಂಘದ ಸದಸ್ಯರು ತೀರ್ಮಾನಿಸಿದ್ದಾರೆ.
ಈ ನೀರ್ಣಯದಿಂದ ಗ್ರಾಹಕರಿಗೆ ಗುಡ್ ನ್ಯೂಸ್ ವೊಂದು ಸಿಕ್ಕಿದೆ. ಮುಂದಿನ ಎರಡು ತಿಂಗಳವರೆಗೂ ತಿಂಡಿ ತಿನಿಗಳು ಬೆಲೆ ಏರಿಕೆ ಬಗ್ಗೆ ಯಾವುದೇ ಚಿಂತೆ ಬೇಡ ಎಂದು ಬೃಹತ್ ಬೆಂಗಳೂರು ಹೋಟೆಲುಗಳ ಸಂಘ ಖಚಿತಪಡಿಸಿದೆ.
ಗ್ರಾಹಕರ ಹಿತವೇ ಮುಖ್ಯ
ವಿಶೇಷ ಸಭೆ ಬಳಿಕ ಪತ್ರಿಕಾ ಹೇಳಿಕೆ ನೀಡಿದ ಬೃಹತ್ ಬೆಂಗಳೂರು ಹೋಟೆಲುಗಳ ಸಂಘದ ಅಧ್ಯಕ್ಷರಾದ ಪಿ.ಸಿ.ರಾವ್ ಅವರು, ಮನೆ ಅಡುಗೆ ಮತ್ತು ಹೋಟೆಲ್ ಇನ್ನಿತರ ಉದ್ಯಮದವರು ಬಳಸುವ ವಾಣಿಜ್ಯ ಬಳಕೆಯ ಅನಿಲ ದರ ಹೆಚ್ಚಾಗಿದೆ. ಹೀಗಾಗಿ ವಿವಿಧ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುತ್ತಿದೆ ಎಂದು ಹೇಳಲಾಗಿತ್ತು.

ಅದರ ಮುಂದುವರಿದ ಭಾಗವಾಗಿ ಬೆಂಗಳೂರಿನಲ್ಲಿನ ಹೋಟೆಲ್ ಗಳಲ್ಲಿ ಎಲ್ಲ ವಿಧದ ತಿಂಡಿ-ತಿನಿಸು, ಟಿ ಮತ್ತು ಕಾಫಿ ದರ ಏರಿಕೆ ಆಗಲಿದೆ ಎಂಬ ಆತಂಕ ಉಂಟಾಗಿತ್ತು. ಈ ಸಂಬಂಧ ಆದಷ್ಟು ಶೀಘ್ರವೇ ಸಭೆ ನಡೆಸಿ ತೀರ್ಮಾನಿಸುವುದಾಗಿ ನಮ್ಮ ಹೋಟೆಲುಗಳ ಸಂಘದಿಂದ ಹೇಳಲಾಗಿತ್ತ. ಅದರಂತೆ ಇಂದು ಸಭೆ ನಡೆಸಿ ಬೆಲೆ ಏರಿಕೆಯ ಸಾಧಕ ಬಾಧಕ ಚರ್ಚಿಸಿದ್ದೇವೆ. ಕೋರೊನಾ ಬಳಿಕ ಚೇತರಿಕೆಯ ಹಾದಿಯಲ್ಲಿರುವ ಹೋಟಲ್ ಗಳ ತಿಂಡಿ ತಿನಿಸು ಬೆಲೆ ಏರಿಕೆ ಮಾಡಿದರೆ ಇನ್ನಷ್ಟು ತೊಂದರೆ ಯಾಗಬಹುದು ಎಂದರು.
ಈ ಎಲ್ಲ ಕಾರಣಕ್ಕೆ ಎರಡು ತಿಂಗಳ ವರೆಗೆ ಹೋಟೆಲ್ ತಿಂಡಿ ತಿನಿಸು ದರಗಳಲ್ಲಿ ಏರಿಕೆ ಮಾಡುವುದಿಲ್ಲ. ಎರಡು ತಿಂಗಳ ನಂತರ ಅಗತ್ಯ ವಸ್ತುಗಳ ಬೆಲೆಯಲ್ಲಿನ ಏರಿಕೆ ನೋಡಿಕೊಂಡು ಮತ್ತೊಮ್ಮೆ ಚರ್ಚಿಸಿ ನಿರ್ಧರಿಸುತ್ತೇವೆ. ಬೆಲೆ ಇಳಿಕೆ ಕುರಿತು ನಮ್ಮ ನಿಯೋಗ ಸರ್ಕಾರಕ್ಕೆ ತೆರಳಿ ಮನವಿ ಮಾಡಿದ್ದೇವೆ ಎಂದು ಅವರು ತಿಳಿಸಿದರು.
ಅನಿಲ ದರ ಎಷ್ಟಿದೆ?
ಬೆಂಗಳೂರಿನಲ್ಲಿ 14.2 ಕೆಜಿ ತೂಕದ ಮನೆ ಬಳಕೆಯ ಅಡುಗೆ ಅನಿಲ್ (LPG) ಸಿಲಿಂಡರ್ ಬೆಲೆ 1055.50 ರೂಪಾಯಿಯಿಂದ 1105.50 ರೂ.ಗೆ ಹೆಚ್ಚಳ ಮಾಡಲಾಗಿದೆ. ಅದೇ ರೀತಿ ವಾಣಿಜ್ಯ ಬಳಕೆಯ 19 ಕಿಲೋಗ್ರಾಂ ತೂಕದ ಎಲ್‌ಪಿಜಿ ಸಿಲಿಂಡರ್ ಸಿಲಿಂಡರ್ ಬೆಲೆ ಮೊದಲು ರೂಪಾಯಿ 1839.520 ಇತ್ತು. ಅದು ಈಗ 2,190 ರೂಪಾಯಿಗೆ ಹೆಚ್ಚಳ ಆಗಿದೆ. ಕರ್ನಾಟಕದ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಚುನಾವಣೆಗೆ ಮುನ್ನವೇ ಅಗತ್ಯ ವಸ್ತುಗಳ/ಸಿಲಿಂಡರ್ ಬೆಲೆ ಏರಿಕೆ ಆಗಿದೆ.












Click it and Unblock the Notifications