ನಿಲ್ಲದ ಬೆಲೆ ಏರಿಕೆ ಪರ್ವ ಗ್ಯಾಸ್ ಸಿಲಿಂಡರ್ 2 ರೂಪಾಯಿ ಏರಿಕೆ

ನವ ದೆಹಲಿ, ಜೂನ್ 01: ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ದಾಖಲೆ ಏರಿಕೆ ಬಳಿಕ ಈಗ ಗ್ಯಾಸ್ ಸಿಲಿಂಡರ್ ಬೆಲೆಯಲ್ಲೂ ಏರಿಕೆ ಆಗಿದೆ.

ಸಬ್ಸಿಡಿ ಹೊಂದಿದ ಸಿಲಿಂಡರ್ ಬೆಲೆ 2 ರೂಪಾಯಿ ಏರಿಕೆಯಾಗಿ ರೂ.491.21 (ದೆಹಲಿಯ ಬೆಲೆ) ಆಗಿದ್ದರೆ. ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ ಏರಿಕೆಯಾಗಿ ರೂ.747 ಆಗಿದೆ.

subsidized LPG prices hiked by Rs 2 per cylinder

ಏವಿಯೇಷನ್ ಟರ್ಬೈನ್ ಇಂಧನದ ಬೆಲೆಯಲ್ಲಿ ಭಾರಿ ಏರಿಕೆ ಆಗಿರುವ ಕಾರಣ ಸಿಲಿಂಡರ್ ಬೆಲೆಯಲ್ಲಿ ಏರಿಕೆ ಆಗಿದೆ. ಏವಿಯೇಷನ್ ಟರ್ಬೈನ್ ಇಂಧನ (ATF) ಒಂದೇ ಬಾರಿಗೆ 7.17 % ಏರಿಕೆಯಾಗಿ ಒಂದು ಕಿಲೋಲೀಟರ್‌ಗೆ ರೂ.70,028 (ದೆಹಲಿಯ ಬೆಲೆ) ಆಗಿದೆ.

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಈಗಾಗಲೇ ಕಂಗಾಲಾಗಿರುವ ದೇಶದ ಜನ ಈಗ ದಿನ ನಿತ್ಯದ ಖಡ್ಡಾಯ ಅವಶ್ಯಕತೆ ಗ್ಯಾಸ್ ಸಿಲೆಂಡರ್‌ ಬೆಲೆ ಏರಿಕೆ ಆಗಿರುವುದನ್ನು ಹೇಗೆ ಸ್ವೀಕರಿಸುತ್ತಾರೊ ನೋಡಬೇಕಿದೆ.

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಆಗುತ್ತಿರುವ ಬಗ್ಗೆ ವಿರೋಧ ಪಕ್ಷಗಳು ಈಗಾಗಲೇ ಆಡಳಿತಾರೂಢ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಆಗಿರುವುದು ಕೇಂದ್ರ ಸರ್ಕಾರವನ್ನು ಟೀಕಿಸಲು ಮತ್ತಷ್ಟು ಅವಕಾಶ ದೊರಕಿಸಿಕೊಡಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+