ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಸ್ನಿಯಿಂದಲೂ ಈಗ ಉದ್ಯೋಗಿಗಳ ವಜಾ ಆರಂಭ

|
Google Oneindia Kannada News

ನವದೆಹಲಿ, ನವೆಂಬರ್‌ 13: ಪ್ರೋಡಕ್ಷನ್‌ ಮತ್ತು ಸ್ಟ್ರೀಮಿಂಗ್ ಕಾರ್ಪೊರೇಶನ್ ವಾಲ್ಟ್ ಡಿಸ್ನಿ ಕಂ. ಕಂಪೆನಿ ತನ್ನ ಇತ್ತೀಚಿನ ಆರ್ಥಿಕ ನಷ್ಟದ ಪರಿಣಾಮ ಕೆಲವು ಉದ್ಯೋಗಿಗಳನ್ನು ವಜಾ ಮಾಡಲು ಮುಂದಾಗಿದ್ದಾರೆ.

ಕಂಪೆನಿಯ ಆಂತರಿಕ ಜ್ಞಾಪಕ ಪತ್ರದ ಪ್ರಕಾರ, ಡಿಸ್ನಿ ಸಿಇಒ ಬಾಬ್ ಚಾಪೆಕ್ ಅವರು ತ್ರೈಮಾಸಿಕ ಕಾರ್ಯಕ್ಷಮತೆ ಕಡಿಮೆ ಇರುವ ಹಿನ್ನೆಲೆಯಲ್ಲಿ ನೇಮಕಾತಿಯನ್ನು ನಿಲ್ಲಿಸಲು ಮತ್ತು ಕೆಲವು ಉದ್ಯೋಗಿಗಳನ್ನು ತೆಗೆದುಹಾಕಲು ಉದ್ದೇಶಿಸಿದ್ದಾರೆ ಎನ್ನಲಾಗಿದೆ. ಸದ್ಯ ಈಗ ಡಿಸ್ನಿಯಲ್ಲಿ ಸುಮಾರು 190,000 ಜನರು ಕೆಲಸ ಮಾಡುತ್ತಿದ್ದಾರೆ.

ದೊಡ್ಡ ಪ್ರಮಾಣದಲ್ಲಿ ಸಿಬ್ಬಂದಿ ವಜಾಗೊಳಿಸಲಿರುವ ಫೇಸ್‌ಬುಕ್ ಕಂಪನಿದೊಡ್ಡ ಪ್ರಮಾಣದಲ್ಲಿ ಸಿಬ್ಬಂದಿ ವಜಾಗೊಳಿಸಲಿರುವ ಫೇಸ್‌ಬುಕ್ ಕಂಪನಿ

ನಾವು ಉದ್ದೇಶಿತ ನೇಮಕಾತಿಯನ್ನು ತಡೆಯುವ ಮೂಲಕ ಉದ್ಯೋಗಿಗಳ ಸೇರ್ಪಡೆಯನ್ನು ಮಿತಿಗೊಳಿಸುತ್ತಿದ್ದೇವೆ ಎಂದು ಸಿಇಒ ಬಾಬ್ ಚಾಪೆಕ್ ಜ್ಞಾಪಕದಲ್ಲಿ ತಿಳಿಸಿದ್ದಾರೆ. ವ್ಯಾಪಾರದ ಉತ್ತೇಜನಕ್ಕಾಗಿ ಸಣ್ಣ ಉಪವಿಭಾಗಕ್ಕೆ ನೇಮಕಾತಿ ಮುಂದುವರಿಯುತ್ತದೆ. ಆದರೆ ಎಲ್ಲಾ ಇತರ ಉದ್ಯೋಗ ನೇಮಕಾತಿಗಳನ್ನು ತಡೆಹಿಡಿಯಲಾಗಿದೆ. ಇದು ನಿಮ್ಮ ತಂಡಗಳಿಗೆ ಹೇಗೆ ಅನ್ವಯಿಸುತ್ತದೆ ಎಂಬುದರ ಕುರಿತು ನಿಮ್ಮ ವಿಭಾಗದ ನಾಯಕರು ಮತ್ತು ಎಚ್‌ಆರ್‌ ತಂಡಗಳು ಹೆಚ್ಚು ನಿರ್ದಿಷ್ಟವಾದ ವಿವರಗಳನ್ನು ನೀಡುತ್ತವೆ ಎಂದು ತಿಳಿಸಿದ್ದಾರೆ.

After Meta and Twitter now Disney has started laying off employees

ನಾವು ಈಗ ಕಂಪೆನಿಯ ವ್ಯಾಪಾರ ಉತ್ತೇಜನಕ್ಕೆ ಕೆಲಸ ಮಾಡುತ್ತಿದ್ದೇವೆ. ಉಳಿತಾಯವನ್ನು ಕಂಡುಹಿಡಿಯಲು ನಾವು ಕಾರ್ಯಾಚರಣೆಗಳು ಮತ್ತು ಕಾರ್ಮಿಕರ ಪ್ರತಿಯೊಂದು ಮಾರ್ಗವನ್ನು ನೋಡುತ್ತೇವೆ. ಉತ್ತೇಜನದ ಭಾಗವಾಗಿ ನಾವು ಕೆಲವು ಸಿಬ್ಬಂದಿ ಕಡಿತಗಳನ್ನು ನಿರೀಕ್ಷಿಸುತ್ತೇವೆ ಎಂದು ಮೆಮೊದಲ್ಲಿ ತಿಳಿಸಲಾಗಿದೆ.

ವಾಲ್ಟ್ ಡಿಸ್ನಿಯು ತ್ರೈಮಾಸಿಕದಲ್ಲಿ ಕಡಿಮೆ ಆರ್ಥಿಕ ಫಲಿತಾಂಶಗಳನ್ನು ಪಡೆದವು ಮತ್ತು ಇತ್ತೀಚಿನ ತಿಂಗಳುಗಳಲ್ಲಿ ಕಂಪನಿಯ ಷೇರುಗಳು ತೀವ್ರವಾಗಿ ಕುಸಿದವು. ಬುಧವಾರದಂದು 52 ವಾರಗಳ ಕನಿಷ್ಠ ಮಟ್ಟಕ್ಕೆ ಷೇರುಗಳು ತಲುಪಿತು. ತನ್ನ ಸ್ಟ್ರೀಮಿಂಗ್ ವ್ಯವಹಾರದಲ್ಲಿ ಬರೋಬ್ಬರಿ 1.5 ಶತಕೋಟಿ ಡಾಲರ್‌ ತ್ರೈಮಾಸಿಕ ನಷ್ಟವನ್ನು ಅನುಭವಿಸಿದ ನಂತರ, ಸೇವೆಯನ್ನು ಲಾಭದಾಯಕವಾಗಿಸುವ ಪ್ರಯತ್ನದಲ್ಲಿ ಸಂಸ್ಥೆಯು ಈ ಕ್ರಮಕ್ಕೆ ಮುಂದಾಗಿದೆ. ಬುಧವಾರ ಕಂಪನಿಯ ಷೇರುಗಳು 13% ಕ್ಕಿಂತ ಹೆಚ್ಚು ಕುಸಿದವು.

ವಾಲ್ ಸ್ಟ್ರೀಟ್ ವಿಶ್ಲೇಷಕರು ಡಿಸ್ನಿಯ ಏರುತ್ತಿರುವ ಸ್ಟ್ರೀಮಿಂಗ್ ಶುಲ್ಕದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ವಿಶ್ಲೇಷಕ ಮೈಕೆಲ್ ನಾಥನ್ಸನ್ ಈ ವಾರದ ಟಿಪ್ಪಣಿಯಲ್ಲಿ ಡಿಟಿಸಿಗೆ ತಮ್ಮ ಪಿವೋಟ್ ಪ್ರಸ್ತುತ ಹೂಡಿಕೆಯ ಬೆಲೆಗೆ ಯೋಗ್ಯವಾಗಿರುತ್ತದೆ ಎಂದು ಕಂಪನಿಯು ಸಾಬೀತುಪಡಿಸಬೇಕು ಎಂದು ಹೇಳಿದ್ದಾರೆ. ವಿಶ್ವಾದ್ಯಂತ ಅನೇಕ ವ್ಯವಹಾರಗಳು ಆರ್ಥಿಕ ಕುಸಿತದಿಂದ ಉದ್ಯೋಗ ವಜಾಗಳನ್ನು ಮಾಡುತ್ತಿವೆ. ಈ ವಾರ ಮೆಟಾ ಕಂಪೆನಿ 11,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾ ಮಾಡುವ ಮೂಲಕ ವೆಚ್ಚವನ್ನು 13% ರಷ್ಟು ಕಡಿಮೆ ಮಾಡುವುದಾಗಿ ಹೇಳಿದೆ.

After Meta and Twitter now Disney has started laying off employees

ಟೆಸ್ಲಾದ ಸಿಇಒ ಆಗಿ ಎಲಾನ್ ಮಸ್ಕ್ ನೇಮಕಗೊಂಡ ನಂತರ ಟ್ವಿಟ್ಟರ್‌ ಸುಮಾರು 50% ಉದ್ಯೋಗಿಗಳನ್ನು ವಜಾವನ್ನು ಘೋಷಿಸಿತು. ಪ್ರಪಂಚದಾದ್ಯಂತ, ಟ್ವಿಟರ್ ತನ್ನ ಉದ್ಯೋಗವನ್ನು 50% ರಷ್ಟು ಕಡಿಮೆಗೊಳಿಸಿದೆ. ಇದರಲ್ಲಿ ಭಾರತದಲ್ಲಿನ 90% ಕ್ಕಿಂತ ಹೆಚ್ಚು ಉದ್ಯೋಗಿಗಳು ಸೇರಿದ್ದಾರೆ.

English summary
Production and streaming corporation Walt Disney Co. The company plans to lay off some employees as a result of its recent financial losses.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X