Ericsson Layoffs: ಬೃಹತ್ ಉದ್ಯೋಗ ಕಡಿತ ಘೋಷಿಸಿದ 'ಎರಿಕ್ಸನ್', ವಿವರ
ನವದೆಹಲಿ, ಮಾರ್ಚ್ 26: ದೇಶದಲ್ಲಿ ಕೊರೊನಾ ನಂತರ ಕಾಲದಲ್ಲೂ ಉದ್ಯೋಗಿಗಳ ವಜಾ ಮುಂದುವರಿದಿದೆ. 2024 ಟೆಕ್ ಉದ್ಯಮದಲ್ಲಿ ಉದ್ಯೋಗ ಕಡಿತ ಪ್ರಕ್ರಿಯೆಗಳು ನಡೆಯುತ್ತಲೇ ಇದೆ. ಈ ಸಾಲಿಗೆ ಇದೀಗ ಸ್ವೀಡಿಷ್ ಬಹುರಾಷ್ಟ್ರೀಯ ದೂರಸಂಪರ್ಕ ಕಂಪನಿ 'ಎರಿಕ್ಸನ್' (Ericsson) ಸೇರ್ಪಡೆಯಾಗಿದೆ.
ಈ 'ಎರಿಕ್ಸನ್' ಕಂಪನಿಯು ಉದ್ಯೋಗಿಗಳಲ್ಲಿ ಒಟ್ಟು ಸುಮಾರು 1,200 ಮಂದಿಯನ್ನು ಕೆಲಸದಿಂದ ತೆಗೆದು ಹಾಕಲು (ವಜಾ) ನಿರ್ಧರಿಸಿದೆ. ಈ ಮೂಲಕ ಸಂಸ್ಥೆ ಕಾರ್ಯಾಚರಣೆ ಮತ್ತಷ್ಟು ಸುಗಮಗೊಳಿಸಲು ಪ್ರಯತ್ನಿಸುತ್ತಿದೆ. ಅದರ ಭಾಗವಾಗಿ ಈ ವಜಾ ಪ್ರಕ್ರಿಯೆಗೆ ನಿರ್ಧರಿಸಲಾಗಿದೆ.

ಪ್ರಸಕ್ತ ವರ್ಷ 2024 ರಲ್ಲಿ ಸಾಲಿನಲ್ಲಿ ಕಡಿಮೆ ಸಂಪುಟಗಳ ನಿರ್ವಹಣೆಗೆ ಅನುಗುಣವಾಗಿ, ಎರಿಕ್ಸನ್ ಇಂದು ಸ್ವೀಡನ್‌ನಲ್ಲಿ ಪ್ರಸ್ತಾವಿತ ಸಿಬ್ಬಂದಿ ಕಡಿತವನ್ನು ಪ್ರಕಟಿಸಿದೆ. ಮುಖ್ಯವಾಗಿ ಈ ಉದ್ಯೋಗ ಕಡಿತ ಸ್ವೀಡನ್ ಗೆ ಸಿಮೀತವಾಗಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಎರಿಕ್ಸನ್ ಕಂಪನಿಯು ತಂತ್ರಜ್ಞಾನದ ನಾಯಕತ್ವಕ್ಕೆ ನಿರ್ಣಾಯಕ ಹೂಡಿಕೆಗಳನ್ನು ನಿರ್ವಹಿಸುತ್ತದೆ. ಇದರ ಉದ್ಯೋಗ ಕಡಿತವು ಹೆಡ್‌ಕೌಂಟ್ ಕಡಿತ ಸೇರಿದಂತೆ ವೆಚ್ಚದ ಸ್ಥಿತಿಯನ್ನು ಸುಧಾರಿಸುವ ಜಾಗತಿಕ ಉಪಕ್ರಮಗಳ ಒಂದು ಭಾಗವಾಗಿದೆ. ಕಾರ್ಯಾಚರಣೆಯ ದಕ್ಷತೆಯು ಈ ವರ್ಷ ಹೆಚ್ಚಾಗಲಿದೆ ಎಂದು ಕಂಪನಿ ಹೇಳಿಕೊಂಡಿದೆ.
ವೆಚ್ಚ ಉಳಿತಾಯ ಕ್ರಮಗಳು
ಹೆಡ್‌ಕೌಂಟ್ ಕಡಿತದ ಜೊತೆಗೆ, ವೆಚ್ಚ ಉಳಿತಾಯದ ಉಪಕ್ರಮಗಳು ಸಲಹೆಗಾರರ ಕಡಿತ, ಪ್ರಕ್ರಿಯೆಗಳ ಸುಗಮಗೊಳಿಸುವಿಕೆ ಮತ್ತು ಕಡಿಮೆ ಸೌಲಭ್ಯಗಳಂತಹ ವಿವಿಧ ಕ್ಷೇತ್ರಗಳಲ್ಲಿ ಸುಧಾರಣೆ ಆಗಲಿದೆ. ಎರಿಕ್ಸನ್ ತನ್ನ ಬೆಳವಣಿಗೆ ದಾರಿಯಲ್ಲಿ ಪ್ರಗತಿ ಸಾಧಿಸಲು ಮತ್ತು ದೀರ್ಘಾವಧಿ ಸಾಧನೆಯ ಕಾರ್ಯತಂತ್ರದ ಭಾಗವಾಗಿ ಕೆಲವು ನೀರ್ಣಯ ಕೈಗೊಳ್ಳುತ್ತಲೇ ಇರುತ್ತದೆ. ಇದರಿಂದ ಹೊರೆಯಾಗುವ ವೆಚ್ಚವನ್ನು ಉಳಿಸಲಿವೆ.

ನಿಖರ ಮಾಹಿತಿ ಬಹಿರಂಗವಾಬೇಕಿದೆ
ಉದ್ಯೋಗ ಕಡಿತದ ನಿಖರ ಟೈಮ್‌ಲೈನ್ ಮತ್ತು ಯಾವ ಇಲಾಖೆಗಳು ಮತ್ತು ಪ್ರದೇಶಗಳು ಪರಿಣಾಮ ಬೀರುತ್ತವೆ ಎಂಬುದರ ಕುರಿತು ನಿರ್ದಿಷ್ಟ ಮಾಹಿತಿಯನ್ನು ಕಂಪನಿ ನೀಡಿಲ್ಲ. ಎರಿಕ್ಸನ್‌ನಿಂದ ಉದ್ಯೋಗ ಕಡಿತದ ಘೋಷಣೆಯು ದೂರಸಂಪರ್ಕ ಉದ್ಯಮದಲ್ಲಿ ಕಂಪನಿಗಳು ಎದುರಿಸುತ್ತಿರುವ ಸವಾಲುಗಳನ್ನು ಬಿಂಬಿಸುತ್ತದೆ.
2023 ರಷ್ಟು 2024ರಲ್ಲಿ ಉದ್ಯೋಗ ಕಡಿತ ತೀವ್ರವಾಗಿಲ್ಲ. ಗೂಗಲ್, ಮೈಕ್ರೋಸಾಫ್ಟ್ ಮತ್ತು ಅಮೆಜಾನ್‌ನಂತಹ, ಇನ್ಫೋಸಿಸ್, ಟಿಸಿಎಸ್ ನಂತಹ ದಿಗ್ಗಜ ಕಂಪನಿಗಳಲ್ಲಿ ಹತ್ತಾರು ಸಾವಿರ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ.












Click it and Unblock the Notifications