AC ಕೋಚ್‌ಗಳಲ್ಲಿ ಲಿನನ್ ಕಳ್ಳತನಕ್ಕೆ ಬ್ರೇಕ್: CCTV, QR ಕೋಡ್‌, Coach Mitra ಆ್ಯಪ್ ಸೇರಿ ರೈಲ್ವೆ ಮಾಸ್ಟರ್ ಪ್ಲ್ಯಾನ್

ಭಾರತೀಯ ರೈಲ್ವೆ ಇಲಾಖೆಯ ಎಸಿ (AC) ಕೋಚ್‌ಗಳಲ್ಲಿ ಪ್ರಯಾಣಿಕರಿಗೆ ನೀಡುವ ಬೆಡ್‌ಶೀಟ್, ಕಂಬಳಿ, ಟವೆಲ್, ದಿಂಬು ಹಾಗೂ ದಿಂಬಿನ ಕವರ್ ಕಳ್ಳತನವನ್ನು ತಡೆಯಲು ರೈಲ್ವೆ ಇಲಾಖೆ ಹೊಸ ಕ್ರಮಗಳನ್ನು ಜಾರಿಗೆ ತರಲು ಮುಂದಾಗಿವೆ. QR ಕೋಡ್, CCTV ಕ್ಯಾಮೆರಾ, ಕೋಚ್ ಮಿತ್ರಾ ಮೊಬೈಲ್ ಆ್ಯಪ್‌ ಕಟ್ಟುನಿಟ್ಟಿನ ಲೆಕ್ಕಪತ್ರ ವ್ಯವಸ್ಥೆ ಹಾಗೂ ಸಿಬ್ಬಂದಿಯ ಮೇಲ್ವಿಚಾರಣೆ ಸೇರಿದಂತೆ ಇನ್ನು ಹಲವಾರು ಕ್ರಮಗಳನ್ನು ದೇಶಾದ್ಯಂತ ಜಾರಿಗೊಳಿಸುವ ಯೋಜನೆಯನ್ನು ರೂಪಿಸಲಾಗಿದೆ.

ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಹಿರಿಯ ಅಧಿಕಾರಿಗಳಿಗೆ ಈ ಸುಧಾರಣೆಗಳನ್ನು ಅತಿ ಶೀಘ್ರದಲ್ಲಿ ಜಾರಿಗೆ ತರಲು ಕಾರ್ಯಯೋಜನೆ ಸಿದ್ದಪಡಿಸುವಂತೆ ಸೂಚನೆ ನೀಡಿದ್ದಾರೆ.

Indian Railways

4 ವರ್ಷಗಳಲ್ಲಿ 1.27 ಕೋಟಿ ಲಿನನ್ ವಸ್ತುಗಳ ಕಳ್ಳತನ

ಆರ್್ಟಿಆಯ್ (RTI) ಮೂಲಕ ಲಭ್ಯವಾದ ಮಾಹಿತಿಯ ಪ್ರಕಾರ, 2022ರ ಜನವರಿಯಿಂದ 2026ರ ಮೇ ತಿಂಗಳವರೆಗೆ ದೇಶದ ವಿವಿಧ ರೈಲ್ವೆ ವಲಯಗಳಲ್ಲಿ ಸುಮಾರು 1.27 ಕೋಟಿ ಲಿನನ್ ವಸ್ತುಗಳು ಕಳ್ಳತನವಾಗಿದೆ. ಬೆಡ್್ಶೀಟ್, ಕಂಬಳಿ, ಟವೆಲ್, ದಿಂಬು ಹಾಗೂ ದಿಂಬಿನ ಕವರ್‌ಗಳ ಕಳ್ಳತನ ಆಗಿರುವುದರಿಂದ ರೈಲ್ವೆ ಇಲಾಖೆಗೆ ಸುಮಾರು ₹104.51 ಕೋಟಿ ರೂ ನಷ್ಟ ಉಂಟಾಗಿದೆ.

4 ವರ್ಷದಲ್ಲಿ ರೈಲ್ವೆ ಎಸಿ ಕೋಚ್‌ಗಳಿಂದ 1.27 ಕೋಟಿ ಬೆಡ್‌ರೋಲ್ ವಸ್ತುಗಳ ಕಳ್ಳತನ: 100 ಕೋಟಿಗೂ ಹೆಚ್ಚು ನಷ್ಟ
4 ವರ್ಷದಲ್ಲಿ ರೈಲ್ವೆ ಎಸಿ ಕೋಚ್‌ಗಳಿಂದ 1.27 ಕೋಟಿ ಬೆಡ್‌ರೋಲ್ ವಸ್ತುಗಳ ಕಳ್ಳತನ: 100 ಕೋಟಿಗೂ ಹೆಚ್ಚು ನಷ್ಟ

ಕೋಚ್ ಮಿತ್ರಾ ಆ್ಯಪ್ ಮೂಲಕ ನಿಗಾ

ಉತ್ತರ ಪಶ್ಚಿಮ ರೈಲ್ವೆಯ ಬಿಕಾನೇರ್ ವಿಭಾಗದಲ್ಲಿ ಈಗಾಗಲೆ ಕೋಚ್ ಮಿತ್ರ ಆ್ಯಪ್ ಬಳಕೆಯನ್ನು ಮಾಡುತ್ತಿದ್ದಾರೆ.

ಈ ಆ್ಯಪ್ ಮೂಲಕ ಮಾಹಿತಿ

ಪ್ರಯಾಣಿಕರಿಗೆ ಯಾವ ಲಿನನ್ ನೀಡಲಾಗಿದೆ ಎಂಬ ಮಾಹಿತಿ ದಾಖಲಾಗುತ್ತದೆ.
ಪ್ರಯಾಣ ಮುಗಿದ ಬಳಿಕ ಅದನ್ನು ಮರಳಿ ಪಡೆದಿರುವ ಮಾಹಿತಿಯನ್ನು ದಾಖಲಿಸಬೇಕು.
ಯಾವ ಕೋಚ್್ನಲ್ಲಿ ಯಾವ ವಸ್ತು ಕಾಣೆಯಾಗಿದೆ ಎಂಬುದನ್ನು ಸುಲಭವಾಗಿ ಪತ್ತೆಹಚ್ಚಬಹುದು.
ಪ್ರಯಾಣಿಕರ ಹತ್ತುವ ಮತ್ತು ಇಳಿಯುವ ಮಾಹಿತಿಯೂ ಇದರಲ್ಲಿ ದಾಖಲಾಗುತ್ತದೆ.

ಪ್ರತಿ ಲಿನನ್ ವಸ್ತುವಿಗೆ QR ಕೋಡ್

ರೈಲ್ವೆ ಇಲಾಖೆ ಮತ್ತೊಂದು ಮಹತ್ವದ ಕ್ರಮವಾಗಿ ಪ್ರತಿ ಬೆಡ್‌ಶೀಟ್, ಕಂಬಳಿ ಸೇರಿದಂತೆ ಎಲ್ಲಾ ಲಿನನ್ ಸೇರಿದಂತೆ ಎಲ್ಲಾ ಲಿನನ್ ವಸ್ತುಗಳಿಗೆ QR ಕೋಡ್ ಅಳವಡಿಸುವ ಯೋಜನೆ ರೂಪಿಸಿದೆ. ಇದರಿಂದ ಲಾಂಡ್ರಿಯಿಂದ ಕೋಚ್ ಮುಟ್ಟುವವರೆಗೆ ಹಾಗೂ ಪ್ರಯಾಣಿಕರಿಂದ ಮರಳಿ ಸಂಗ್ರಹಿಸುವವರೆಗೆ ವಸ್ತುವಿನ ಮಾಹಿತಿ ಟ್ರ್ಯಾಕ್ ಮಾಡಲು ಸಾಧ್ಯವಾಗುತ್ತದೆ.

ರಾಜಧಾನಿ ಎಕ್ಸ್‌ಪ್ರೆಸ್‌ ಕಳ್ಳತನ ಪ್ರಕರಣ: ದಂಪತಿಗೆ ₹80 ಸಾವಿರ ಪರಿಹಾರ ನೀಡಲು ಆದೇಶ
ರಾಜಧಾನಿ ಎಕ್ಸ್‌ಪ್ರೆಸ್‌ ಕಳ್ಳತನ ಪ್ರಕರಣ: ದಂಪತಿಗೆ ₹80 ಸಾವಿರ ಪರಿಹಾರ ನೀಡಲು ಆದೇಶ

ಎಸಿ ಕೋಚ್‌ಗಳಲ್ಲಿ CCTV ಕ್ಯಾಮೆರಾ

ಕೆಲವು ರೈಲ್ವೆ ವಿಭಾಗಗಳಲ್ಲಿ ಈಗಾಗಲೇ CCTV ಕ್ಯಾಮೆರಾಗಳನ್ನು ಎಸಿ ಕೋಚ್‌ಗಳಲ್ಲಿ ಅಳವಡಿಸಲಾಗುತ್ತದೆ. ಇದರ ಉದ್ದೇಶ ಇಷ್ಟೆ ಕಳ್ಳತನ ಆಗುವುದನ್ನು ತಡೆಯುವುದು. ಕಳ್ಳತನ ಆದರೂ ಸುಲಭವಾಗಿ ತನಿಖೆಯನ್ನು ನಡೆಸಿ ಪತ್ತೆ ಹಚ್ಚಬಹುದು. ಲಿನನ್ ಸಂಗ್ರಹ ಮಾಡಿ ಸುರಕ್ಷಿತ ಸ್ಥಳವನ್ನು ಉಪಯೋಗಿಸುವುದು.

ಪ್ರಯಾಣ ಮೊದಲು ಮತ್ತು ನಂತರ ಲೆಕ್ಕಪತ್ರ

ಜೋಧ್್ಪುರ ಸೇರಿದಂತೆ ಇನ್ನಿತರ ರೈಲ್ವೆ ವಿಭಾಗಗಳಲ್ಲಿ ರೈಲು ಹೊರಡುವ ಮೊದಲು ಹಾಗೂ ಗಮ್ಯಸ್ಥಾನ ತಲುಪಿದ ನಂತರ ಲಿನನ್ ವಸ್ತುಗಳ ಸಂಪೂರ್ಣ ಪರಿಶೀಲನೆ ನಡೆಸಲಾಗುತ್ತದೆ. ರೈಲ್ವೆ ಲೋಡಿಂಗ್ ಮತ್ತು ಅನ್‌ಲೋಡಿಂಗ್ ವೇಳೆ ಹೆಚ್ಚುವರಿ ಮೇಲ್ವಿಚಾರಣೆ. ಡಿಪೋಗಳಲ್ಲಿ ನಿಯಮಿತವಾಗಿ ಪರಿಶೀಲನೆ ಮಾಡುವುದು. ಎಲ್ಲಿಯಾದರೂ ನಿರ್ಲಕ್ಷ್ಯ ಕಂಡುಬಂದರೆ ಅದರ ಬಗ್ಗೆ ಶಿಸ್ತು ಕ್ರಮ ಕೈಗೊಳ್ಳಬಹುದು. ಸಿಬ್ಬಂದಿ ಮತ್ತು ಪ್ರಯಾಣಿಕರಿಗೆ ಜಾಗೃತಿ

ಬೆಡ್‌ರೋಲ್ ಸಿಬ್ಬಂದಿಗೆ:

ಲಿನನ್ ವಸ್ತುಗಳ ಬಗ್ಗೆ ಹೆಚ್ಚು ಎಚ್ಚರಿಕೆಯಿಂದ ಇರುವಂತೆ ಮೇಲಾಧಿಕಾರಿಗಳ ಸೂಚನೆ. ಬಳಸಿದ ಬೆಡ್‌ರೋಲ್‌ಗಳನ್ನು ಸಮಯಕ್ಕೆ ಸರಿಯಾಗಿ ಸಂಗ್ರಹಿಸುವಂತೆ ತರಬೇತಿ ನಿಡಲಾಗುತ್ತದೆ.

ಪ್ರಯಾಣಿಕರಿಗೆ ಮತ್ತು ಪ್ರತಿ AC ಕೋಚ್‌ಗೆ ಒಬ್ಬ ಸಿಬ್ಬಂದಿ

ಪ್ರಯಾಣಿಕರು ಗಮ್ಯಸ್ಥಾನ ತಲುಪುವ 30 ನಿಮಿಷಗಳ ಮೊದಲೆ ಲಿನನ್ ವಸ್ತುಗಳನ್ನು ರೈಲ್ವೆ ಸಿಬ್ಬಂದಿಗೆ ಹಿಂತಿರುಗಿಸುವಂತೆ ನೆನಪಿನ ಸಂದೇಶ ಕಳುಹಿಸಲಾಗುತ್ತಿದೆ. ಕೆಲವು ವಿಭಾಗಗಳಲ್ಲಿ ಈ ಸೂಚನೆಯನ್ನು ಲಿನನ್ ಪ್ಯಾಕೆಟ್ ಮೇಲೆಯೇ ಮುದ್ರಿಸಲಾಗಿದೆ. ಭೋಪಾಲ್ ಹಾಗೂ ದಕ್ಷಿಣ ಪಶ್ಚಿಮ ರೈಲ್ವೆ ವಿಭಾಗಗಳಲ್ಲಿ ಪ್ರತಿ AC ಕೋಚ್‌ಗೆ ಒಬ್ಬ ವಿಶೇಷ ಅಟೆಂಡೆಂಟ್ ನೇಮಕ ಮಾಡಲಾಗಿದೆ. ಇದರಿಂದ ಕಳ್ಳತನ ಆಗುವ ಸಾಧ್ಯತೆಯು ಕಡಿಮೆ ಎಂದು ಹೇಳಿದ್ದಾರೆ.

ರೈಲ್ವೆ ಗುತ್ತಿಗೆದಾರರ ಮೇಲೂ ಕಟ್ಟುನಿಟ್ಟಾಗಿ ನಿಗಾವಹಿಸಲಾಗಿದೆ. RPFನಿಂದ ಕಟ್ಟುನಿಟ್ಟಿನ ಕ್ರಮ ರೈಲ್ವೆ ಆಸ್ತಿ ಕಳ್ಳತನ ರೈಲ್ವೆ ಪ್ರಾಪರ್ಟಿ (ಅನಧಿಕೃತ ಸ್ವಾಧೀನ) ಕಾಯ್ದೆಯಡಿ ಜಾಮೀನು ಸಿಗದಂತಹ ಅಪರಾಧವಾಗಿದೆ.

ಕಳೆದ ನಾಲ್ಕು ವರ್ಷಗಳಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಲಿನನ್ ವಸ್ತುಗಳು ಕಳ್ಳತನವಾಗಿರುವ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ಡಿಜಿಟಲ್ ತಂತ್ರಜ್ಞಾನ CCTV ಮೂಲಕ, ಸಿಬ್ಬಂದಿಯ ಜವಾಬ್ದಾರಿ ಮತ್ತು ಪ್ರಯಾಣಿಕರ ಸಹಕಾರದ ಮೂಲಕ ಶಾಶ್ವತ ಪರಿಹಾರ ಕಂಡುಕೊಳ್ಳಲು ಮುಂದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+