Google Layoffs: ಕೃತಕ ಬುದ್ಧಿಮತ್ತೆ ಬಳಕೆ ಹೆಚ್ಚಳ, ಗೂಗಲ್‌ನಿಂದ 30,000 ಉದ್ಯೋಗಿಗಳ ವಜಾ ಸಾಧ್ಯತೆ
ಕ್ಯಾಲಿಪೋರ್ನಿಯಾ, ಡಿಸೆಂಬರ್ 29: ಕೃತಕ ಬುದ್ಧಿಮತ್ತೆ ಆವಿಷ್ಕಾರದ ಪರಿಣಾಮ ಮಾನವ ಸಂಪನ್ಮೂಲದ ಬೇಡಿಕೆ ಕುಸಿಯುತ್ತಿದೆ. ಈ ನಿಟ್ಟಿನಲ್ಲಿ ಸರ್ಚ್ ಎಂಜಿನ್ ಕಂಪೆನಿಗೆ ಗೂಗಲ್ ತನ್ನ ಜಾಹೀರಾತು ಮಾರಾಟ ವಿಭಾಗದ ಮರುಸಂಘಟನೆ ಹೆಸರಿನಲ್ಲಿ ತನ್ನ 30,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲು ಮುಂದಾಗಿದೆ ಎಂದು ವರದಿಗಳು ತಿಳಿಸಿವೆ.
ಗೂಗಲ್ ಈ ವರ್ಷದ ಆರಂಭದಲ್ಲಿ ಸುಮಾರು 12,000 ಉದ್ಯೋಗಿಗಳನ್ನು ವಜಾಗೊಳಿಸಿದೆ. ಇದು ಕಂಪನಿಯ ಇತಿಹಾಸದಲ್ಲಿ ಅತಿದೊಡ್ಡ ಉದ್ಯೋಗ ಕಡಿತವಾಗಿದೆ. ದಿ ಇನ್ಫರ್ಮೇಷನ್‌ನ ವರದಿಯ ಪ್ರಕಾರ, ಜಾಹೀರಾತು ಮಾರಾಟ ವಿಭಾಗದಲ್ಲಿನ ಹಲವು ಉದ್ಯೋಗಗಳನ್ನು ಕೈಬಿಡಲಾಗುತ್ತಿದೆ. ಏಕೆಂದರೆ ಗೂಗಲ್ ಹೊಸ ಎಐ ಆಧಾರಿತ ಟೂಲ್‌ಗಳನ್ನು ಪರಿಚಯಿಸಿದೆ. ಅದು ಗ್ರಾಹಕರಿಗೆ ಉತ್ತಮವಾಗಿ ಕಾರ್ಯನಿರ್ವಹಿಸುವ ಮತ್ತು ಉದ್ಯೋಗಿಗಳ ಅಗತ್ಯವನ್ನು ಕಡಿಮೆ ಮಾಡಿ ಹೊಸ ಜಾಹೀರಾತುಗಳನ್ನು ಸ್ವಯಂಚಾಲಿತವಾಗಿ ಸೂಚಿಸಬಹುದು ಮತ್ತು ರಚಿಸಬಹುದು ಎಂದು ತಿಳಿಸಿದೆ.

ದಿ ಇನ್ಫಾರ್ಮೇಶನ್‌ನ ಇತ್ತೀಚಿನ ವರದಿಯ ಪ್ರಕಾರ, ಗೂಗಲ್ ತನ್ನ ವ್ಯವಹಾರ ಪ್ರಕ್ರಿಯೆಗಳ ವಿವಿಧ ಭಾಗಗಳಲ್ಲಿ ಎಐ ಅನ್ನು ಸಂಯೋಜಿಸುವ ಕಾರ್ಯತಂತ್ರವನ್ನು ಅಳವಡಿಸಿಕೊಳ್ಳುತ್ತಿದೆ. ಈ ಭಾಗವಾಗಿ 30,000 ಉದ್ಯೋಗಿಗಳವರೆಗೆ ಗಣನೀಯ ಪ್ರಮಾಣದ ಉದ್ಯೋಗಿಗಳ ಕಡಿತ ಮಾಡಲು ಚಿಂತನೆ ನಡೆಸಿದೆ.
ಕಂಪೆನಿ ಪುನರ್‌ರಚನೆಯು ಭಾಗವಾಗಿ ಗೂಗಲ್ ಜಾಹೀರಾತು ಮಾರಾಟ ವಿಭಾಗದ ಮೇಲೆ ಪರಿಣಾಮ ಬೀರುತ್ತದೆ ಎಂದು ನಿರೀಕ್ಷಿಸಲಾಗಿದೆ, ಅಲ್ಲಿ ಕಂಪನಿಯು ಕಾರ್ಯಾಚರಣೆಯ ದಕ್ಷತೆಗಾಗಿ ಎಐ ಅನ್ನು ಬಳಕೆಯನ್ನು ಮಾಡಲಾಗುತ್ತದೆ. ಇದರಿಂದ ಮಾನವ ಸಂಪನ್ಮೂಲ ಬೇಡಿಕೆ ಕಡಿಮೆಯಾಗುತ್ತದೆ ಎನ್ನಲಾಗಿದೆ.
ಈ ಡೊಮೇನ್‌ನಲ್ಲಿ ಎಐ ಅಳವಡಿಕೆಯಿಂದ ಗೂಗಲ್‌ನಲ್ಲಿ ಗಣನೀಯವಾದ ಉದ್ಯೋಗ ಕಡಿತಕ್ಕೆ ಕಾರಣವಾಗಬಹುದು. ಏಕೆಂದರೆ ವರದಿಯು ಡಿಜಿಟಲ್ ಜಾಹೀರಾತಿಗೆ ಸಂಬಂಧಿಸಿದ ಆದಾಯದ ಸ್ಟ್ರೀಮ್‌ಗಳ ಮೇಲೆ ಎಐಯ ರೂಪಾಂತರದ ಪರಿಣಾಮವನ್ನು ತೋರಿಸಿದೆ. ಈ ಕಾರ್ಯಗಳಲ್ಲಿ ಮಾನವ ಹಸ್ತಕ್ಷೇಪದ ಅಗತ್ಯವನ್ನು ಕಡಿಮೆ ಮಾಡುತ್ತದೆ.
ಗೂಗಲ್‌ನಲ್ಲಿ ಎಐ ಪ್ರಯೋಗವು ಜಾಹೀರಾತು ಮಾರಾಟವನ್ನು ಮೀರಿ ವಿಸ್ತರಿಸುತ್ತಿದೆ. ಕಸ್ಟಮರ್ ಸಪೋರ್ಟ್‌ನಲ್ಲಿ ಎಐ ಬಳಕೆಯಿಂದ ಕಂಪನಿಯ ಕಾರ್ಯಾಚರಣೆಗಳ ಮಾನವ ಕೇಂದ್ರಿತ ಅಂಶಗಳ ಮೇಲೆ ನೇರವಾಗಿ ಪ್ರಭಾವ ಬೀರುವ ನಿರೀಕ್ಷೆಯಿದೆ. ಈ ಕಾರ್ಯತಂತ್ರದ ಬದಲಾವಣೆಯು ಗೂಗಲ್‌ನ ಹಿಂದಿನ ವರ್ಷದ ಹಿಂದೆ ಉದ್ಯೋಗಿಗಳ ಕಡಿತದಂತೆ ಆಗುತ್ತದೆ.
ಈ ಬೆಳವಣಿಗೆಗಳ ಬಗ್ಗೆ ಉದ್ಯೋಗಿಯೊಬ್ಬರು ಸುಂದರ್ ಪಿಚೈ ಅವರನ್ನು, "ನಮ್ಮ ಉದ್ಯೋಗಿಗಳನ್ನು ಕಡಿಮೆ ಮಾಡಲು ನಾವು ಕಠಿಣ ನಿರ್ಧಾರವನ್ನು ತೆಗೆದುಕೊಂಡು ಸುಮಾರು 1 ವರ್ಷವಾಗಿದೆ. ಈ ನಿರ್ಧಾರವು ನಮ್ಮ ಬೆಳವಣಿಗೆ, ಪಿ&ಎಲ್ ಮತ್ತು ನೈತಿಕತೆಯ ಮೇಲೆ ಯಾವ ಪರಿಣಾಮ ಬೀರಿತು?" ಎಂದು ಪ್ರಶ್ನಿಸಿದರು.
ಇದಕ್ಕೆ ಗೂಗಲ್ ಸಿಇಒ ಪ್ರತಿಕ್ರಿಯಿಸಿ, ಉದ್ಯೋಗಿಗಳ ನೈತಿಕತೆಯ ಮೇಲೆ ದೊಡ್ಡ ಪರಿಣಾಮ ಬೀರಿದೆ. ಇದು ಕಂಪನಿಗೆ ಅತ್ಯಂತ ಕಷ್ಟಕರವಾದ ನಿರ್ಧಾರಗಳಲ್ಲಿ ಒಂದಾಗಿದೆ. ಗೂಗಲ್‌ನಲ್ಲಿ ನಾವು 25 ವರ್ಷಗಳಲ್ಲಿ ಈ ನಿರ್ಧಾರ ಮಾಡಿರಲಿಲ್ಲ. ಇದು ಕಷ್ಟ, ಆದರೆ ಅಗತ್ಯ. ಕಳೆದ ವರ್ಷ ಕಂಪನಿಯು ಆ ಉದ್ಯೋಗಗಳನ್ನು ಕಡಿತಗೊಳಿಸದಿದ್ದರೆ ಬೇರೆ ದಾರಿ ಇಲ್ಲ ಎಂದರು.












Click it and Unblock the Notifications