ಐಟಿ ನೌಕರರ ವಜಾ ಮುಂದುವರಿಕೆ, ದಿನಕ್ಕೆ 555 ಟೆಕ್ಕಿಗಳ ಉದ್ಯೋಗಕ್ಕೆ ಬೀಳುತ್ತಿದೆ ಕತ್ತರಿ!
ನವದೆಹಲಿ, ಅಕ್ಟೋಬರ್ 14: ಕಳೆದ ಎರಡು ವರ್ಷಗಳಲ್ಲಿ ಜಗತ್ತಿನಾದ್ಯಂತ ಸ್ಟಾರ್ಟ್‌ಅಪ್‌ಗಳು ಸೇರಿದಂತೆ ಟೆಕ್ ಕಂಪನಿಗಳು 4,00,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿವೆ. ಅದೇ ಸಮಯದಲ್ಲಿ 110 ಕ್ಕೂ ಹೆಚ್ಚು ಭಾರತೀಯ ಸ್ಟಾರ್ಟ್‌ಅಪ್‌ಗಳು ಭಾರತದಲ್ಲಿ 30,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿವೆ ಎಂದು ವರದಿಯಾಗಿದೆ.
ಜಾಗತಿಕ ಅನಿಶ್ಚಿತ ಆರ್ಥಿಕ ಪರಿಸ್ಥಿತಿಗಳನ್ನು ಉಲ್ಲೇಖಿಸಿ, ಬಿಗ್ ಟೆಕ್ ಸಂಸ್ಥೆಗಳು ಮತ್ತು ಸ್ಟಾರ್ಟ್‌ಅಪ್‌ಗಳು ಉದ್ಯೋಗಿಗಳನ್ನು ವಜಾಗೊಳಿಸಿವೆ. ಅಲ್ಲದೆ ಈ ವಜಾಗೊಳಿಸುವಿಕೆಗಳು ನಡೆಯುತ್ತಲೇ ಇರುತ್ತದೆ ಎಂದು ತಿಳಿಸಿದೆ. ಲೇಆಪ್.ಫೈ ಟೆಕ್ ವಲಯದ ಉದ್ಯೋಗ ಕಡಿತಗಳನ್ನು ಟ್ರ್ಯಾಕ್ ಮಾಡುವ ವೆಬ್‌ಸೈಟ್ ಇತ್ತೀಚಿನ ಮಾಹಿತಿಯ ಪ್ರಕಾರ, 2,120 ಟೆಕ್ ಕಂಪನಿಗಳು ಜಾಗತಿಕವಾಗಿ ಇಲ್ಲಿಯವರೆಗೆ 4,04,962 ಉದ್ಯೋಗಿಗಳನ್ನು ವಜಾಗೊಳಿಸಿವೆ ಎಂದು ತಿಳಿಸಿದೆ.

2022 ರಲ್ಲಿ 1,061 ಟೆಕ್ ಕಂಪನಿಗಳು 1,64,769 ಉದ್ಯೋಗಿಗಳನ್ನು ವಜಾಗೊಳಿಸಿದ್ದರೆ. 1,059 ಕಂಪನಿಗಳು 2023 ರಲ್ಲಿ 2,40,193 ನೌಕರರನ್ನು ವಜಾಗೊಳಿಸಿವೆ ಎಂದು ವರದಿ ತಿಳಿಸಿದೆ. ಸರಾಸರಿಯಾಗಿ ಕಳೆದ ಎರಡು ವರ್ಷಗಳಲ್ಲಿ ಪ್ರತಿದಿನ ಸುಮಾರು 555 ಉದ್ಯೋಗಿಗಳು ತಮ್ಮ ಕೆಲಸವನ್ನು ಕಳೆದುಕೊಂಡಿದ್ದಾರೆ. ಅಂದರೆ ಪ್ರತಿ ಗಂಟೆಗೆ 23 ನೌಕರರು ವಜಾಗೊಳ್ಳುತ್ತಿದ್ದಾರೆ. ಜನವರಿಯಲ್ಲಿಯೇ 89,554 ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ. ಅಂಕಿಅಂಶಗಳ ಪ್ರಕಾರ ಕಳೆದ ತಿಂಗಳು 4,632 ಉದ್ಯೋಗಿಗಳನ್ನು ಕೈಬಿಡಲಾಗಿದೆ.
ಐಟಿ ವಲಯಕ್ಕೆ ಸಂಬಂಧಿಸಿದಂತೆ ರಿಟೇಲ್ ತಂತ್ರಜ್ಞಾನ ಮತ್ತು ಗ್ರಾಹಕ ತಂತ್ರಜ್ಞಾನವು ಈ ವರ್ಷದಲ್ಲಿ ಹೆಚ್ಚಿನ ಉದ್ಯೋಗಿಗಳನ್ನು ವಜಾಗೊಳಿಸಿದೆ. ಸುಮಾರು 29,161 ಮತ್ತು 28,873 ಉದ್ಯೋಗಿಗಳನ್ನು ಕ್ರಮವಾಗಿ ರಿಟೇಲ್ ಮತ್ತು ಗ್ರಾಹಕ ತಂತ್ರಜ್ಞಾನ ಉದ್ಯಮಗಳಿಂದ ಕೈಬಿಡಲಾಗಿದೆ ಎಂದು ಅಂಕಿಅಂಶಗಳು ತಿಳಿಸಿವೆ. 2023 ಇನ್ನೂ ಮುಗಿದಿಲ್ಲವಾದ್ದರಿಂದ ಉಳಿದ ಅವಧಿಯಲ್ಲಿ ಹೆಚ್ಚಿನ ನೌಕರರ ವಜಾಗಳು ನಡೆಯಲಿವೆ.
ಚಿಪ್-ತಯಾರಕ ಕಂಪೆನಿ ಕ್ವಾಲ್‌ಕಾಮ್ ಯುಎಸ್‌ನ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿರುವ ತನ್ನ ಎರಡು ಕಚೇರಿಗಳಲ್ಲಿ ಸುಮಾರು 1,258 ಉದ್ಯೋಗಿಗಳನ್ನು ತೆಗೆದುಹಾಕುವಿದಾಗಿ ಹೇಳಿದೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ. ಚೈನಾಲಿಸಿಸ್, ಪ್ಲೆಕ್ಸ್, ಸಿಸ್ಕೊ, ಪೈ ಇನ್ಶೂರೆನ್ಸ್ ಮತ್ತು ಇನ್ನೂ ಅನೇಕ US-ಆಧಾರಿತ ತಂತ್ರಜ್ಞಾನ ಸಂಸ್ಥೆಗಳು ಇತ್ತೀಚಿನ ತಿಂಗಳುಗಳಲ್ಲಿ ನೂರಾರು ಉದ್ಯೋಗಿಗಳನ್ನು ವಜಾಗೊಳಿಸಿವೆ. ಕಳೆದ ತಿಂಗಳು, ಫೋರ್ಟ್‌ನೈಟ್ ಗೇಮ್ ಡೆವಲಪರ್ ಎಪಿಕ್ ಗೇಮ್ಸ್ ತನ್ನ ಶೇಕಡಾ 16 ರಷ್ಟು ಉದ್ಯೋಗಿಗಳನ್ನು ವಜಾಗೊಳಿಸುವ ಯೋಜನೆಯನ್ನು ಪ್ರಕಟಿಸಿತು, ಇದು ಸುಮಾರು 870 ಜನರ ಮೇಲೆ ಪರಿಣಾಮ ಬೀರಿತು.
ಕಳೆದೆರಡು ತಿಂಗಳುಗಳಲ್ಲಿ ಅಸೆಂಡೆಂಟ್ ಸ್ಟುಡಿಯೋಸ್, ಬೀಮ್‌ಡಾಗ್, ಕ್ರಿಸ್ಟಲ್ ಡೈನಾಮಿಕ್ಸ್, ರೋಬ್ಲಾಕ್ಸ್, ಬ್ಲಿಝಾರ್ಡ್, ಟೀಮ್17, ನಾಟಿ ಡಾಗ್, ನಿಯಾಂಟಿಕ್ ಮತ್ತು ಕೀವರ್ಡ್‌ಗಳು ಸೇರಿದಂತೆ ಗೇಮಿಂಗ್ ಕಂಪನಿಗಳು ವಿವಿಧ ಸಂಖ್ಯೆಯ ಸಿಬ್ಬಂದಿಯನ್ನು ವಜಾಗೊಳಿಸಿವೆ.
ಭಾರತದಲ್ಲಿ ಬೈಜುಸ್ 4,000-5,000 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿದೆ. ಈ ಸ್ಟಾರ್ಟಪ್ ಕಳೆದ ಎರಡು ವರ್ಷಗಳಲ್ಲಿ 10,000 ಕ್ಕೂ ಹೆಚ್ಚು ಜನರನ್ನು ತೆಗೆದುಹಾಕಿದೆ. ಡಂಜೊ ಸೆಪ್ಟೆಂಬರ್‌ನಲ್ಲಿ ತೀವ್ರ ನಗದು ಕೊರತೆಯ ನಡುವೆ 150-200 ಹೆಚ್ಚಿನ ಉದ್ಯೋಗಿಗಳನ್ನು ವಜಾಗೊಳಿಸಿದ್ದಾರೆ. ಸ್ಟಾರ್ಟಪ್ ಈಗಾಗಲೇ ಈ ವರ್ಷ ಸುಮಾರು 400 ಉದ್ಯೋಗಿಗಳನ್ನು ಎರಡು ಬಾರಿ ಉದ್ಯೋಗ ಕಡಿತದ ಸುತ್ತುಗಳಲ್ಲಿ ವಜಾಗೊಳಿಸಿದೆ.
-
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ












Click it and Unblock the Notifications