ಗೂಗಲ್ ಮೀಟ್ ಮೂಲಕ ಕೇವಲ ಎರಡೇ ನಿಮಿಷದಲ್ಲಿ ಎಲ್ಲ ನೌಕರರನ್ನು ವಜಾ ಮಾಡಿದ ಕಂಪೆನಿ
ಬೆಂಗಳೂರು, ಜನವರಿ 05: ಐಟಿ ಸೇರಿದಂತೆ ವಿವಿಧ ವಲಯಗಳಲ್ಲಿ ನೌಕರರ ವಜಾ ಪ್ರಕ್ರಿಯೆ 2024ರಲ್ಲೂ ಮುಂದುವರೆದಿದೆ. ಕಂಪೆನಿಯೊಂದು ತನ್ನ ನೌಕರರನ್ನು ವಜಾಗೊಳಿಸಿರುವ ಪ್ರಕ್ರಿಯೆಯಿಂದ ಸುದ್ದಿಯಲ್ಲಿದೆ.
ಟೆಕ್ ಸ್ಟಾರ್ಟ್‌ಅಪ್ ಆಗಿರುವ ಫ್ರಂಟ್‌ಡೆಸ್ಕ್ ಎಂಬ ಕಂಪೆನಿ ಕೇವಲ ಎರಡು ನಿಮಿಷಗಳ ಗೂಗಲ್ ಮೀಟ್ ಕಾಲ್‌ನಲ್ಲಿ ಅದರ ಸಂಪೂರ್ಣ 200 ಉದ್ಯೋಗಿಗಳನ್ನು ವಜಾಗೊಳಿಸಿದೆ. ಈ ಮೂಲಕ 2024 ರಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಿದ ಮೊದಲ ಟೆಕ್ ಸ್ಟಾರ್ಟ್ಅಪ್ ಎಂಬ ಕುಖ್ಯಾತಿಗೆ ಗುರಿಯಾಗಿದೆ.

ಟೆಕ್ಕ್ರಂಚ್ ವರದಿಯ ಪ್ರಕಾರ, ಪೂರ್ಣ ಸಮಯದ, ಅರೆಕಾಲಿಕ ಕೆಲಸಗಾರರು ಮತ್ತು ಗುತ್ತಿಗೆದಾರರನ್ನು ಒಳಗೊಂಡ ಎಲ್ಲ ನೌಕರರನ್ನು ವಜಾ ಮಾಡಲಾಗಿದೆ ಎಂದು ತಿಳಿಸಿದೆ. ಫ್ರಂಟ್‌ಡೆಸ್ಕ್ ಸಿಇಒ ಜೆಸ್ಸಿ ಡೆಪಿಂಟೊ ಕಂಪನಿಯ ನಿರ್ಧಾರದ ಬಗ್ಗೆ ಉದ್ಯೋಗಿಗಳಿಗೆ ಮಾಹಿತಿ ನೀಡಿದರು. ಕಂಪೆನಿಯು ದಿವಾಳಿಯಾಗಿದ್ದು, ಇದಕ್ಕೆ ಪರ್ಯಾಯವಾಗಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಬಗ್ಗೆ ತಿಳಿಸಿದರು. 2017 ರಲ್ಲಿ ಸ್ಥಾಪನೆಯಾದ ಈ ಸ್ಟಾರ್ಟಪ್, ಅಮೆರಿಕದಾದ್ಯಂತ 1,000 ಸುಸಜ್ಜಿತ ಅಪಾರ್ಟ್ಮೆಂಟ್ಗಳನ್ನು ನಿರ್ವಹಿಸುತ್ತಿದೆ.
ಜೆಟ್‌ಬ್ಲೂ ವೆಂಚರ್ಸ್, ವೆರಿಟಾಸ್ ಇನ್ವೆಸ್ಟ್‌ಮೆಂಟ್ಸ್ ಮತ್ತು ಸ್ಯಾಂಡ್ ಹಿಲ್ ಏಂಜಲ್ಸ್‌ನಂತಹ ಹೂಡಿಕೆದಾರರಿಂದ $26 ಮಿಲಿಯನ್ ಸಂಗ್ರಹಿಸಿದ್ದರೂ, ಹೆಚ್ಚುವರಿ ಬಂಡವಾಳವನ್ನು ಪಡೆದುಕೊಳ್ಳಲು ಫ್ರಂಟ್‌ಡೆಸ್ಕ್‌ನ ಪ್ರಯತ್ನ ವಿಫಲವಾಯಿತು. ಕೇವಲ ಎರಡು ತಿಂಗಳ ಹಿಂದೆ ಲಿಂಕ್ಡ್‌ಇನ್‌ನಲ್ಲಿ ಮುಖ್ಯ ಸಿಬ್ಬಂದಿ ಪಾತ್ರವನ್ನು ಒಳಗೊಂಡಂತೆ ಉದ್ಯೋಗಾವಕಾಶಗಳನ್ನು ಪೋಸ್ಟ್ ಮಾಡಿತ್ತು.
ಕಂಪೆನಿಯ ಈ ನಿರ್ಧಾರವು ಕಳೆದ ಎರಡು ವರ್ಷಗಳಲ್ಲಿ 4,25,000 ಉದ್ಯೋಗಿಗಳನ್ನು ವಜಾಗೊಳಿಸಿದ ಸ್ಟಾರ್ಟ್‌ಅಪ್‌ಗಳು ಸೇರಿದಂತೆ ವಿಶ್ವದಾದ್ಯಂತ ಟೆಕ್ ಕಂಪನಿಗಳ ಪ್ರವೃತ್ತಿಯನ್ನು ಮುಂದುವರೆಸಿದೆ. ಬ್ಯುಸಿನೆಸ್ ಇನ್‌ಸೈಡರ್ ಪ್ರಕಾರ, ಭಾರತವೊಂದರಲ್ಲೇ ಇದೇ ಅವಧಿಯಲ್ಲಿ 36,000 ಉದ್ಯೋಗ ಕಡಿತವಾಗಿದೆ.
2023 ರಲ್ಲಿ ಜಾಗತಿಕ ತಂತ್ರಜ್ಞಾನ ಮತ್ತು ಆರಂಭಿಕ ವಲಯದಲ್ಲಿ ಸುಮಾರು 2.6 ಲಕ್ಷ ಉದ್ಯೋಗಿಗಳನ್ನು ವಜಾಗೊಳಿಸಲಾಯಿತು. ಇದು ಜಾಗತಿಕ ಸ್ಥೂಲ ಆರ್ಥಿಕ ಪರಿಸ್ಥಿತಿಗಳ ಪರಿಣಾಮವಾಗಿದೆ. ವಜಾಗೊಳಿಸುವಿಕೆಯ ಅಲೆಯು ಮುಂದುವರಿಯುತ್ತದೆ ಎನ್ನಲಾಗುತ್ತಿದ್ದು, ವಿವಿಧ ಡೊಮೇನ್‌ಗಳಾದ್ಯಂತ ದೊಡ್ಡ ಟೆಕ್ ಸಂಸ್ಥೆಗಳು ಮತ್ತು ಸ್ಟಾರ್ಟ್‌ಅಪ್‌ಗಳ ಮೇಲೆ ಪರಿಣಾಮ ಬೀರುತ್ತದೆ.












Click it and Unblock the Notifications