Amazon Layoffs: ಜಗತ್ತಿನ ಅತಿದೊಡ್ಡ ಕಂಪನಿಯಿಂದ ಉದ್ಯೋಗ ಕಡಿತ!

ಜಗತ್ತಿನಾದ್ಯಂತ ಆರ್ಥಿಕ ಹಿಂಜರಿತ ಭಯ ಹುಟ್ಟಿಸಿದೆ. ಅದರಲ್ಲೂ ಪಾಶ್ಚಿಮಾತ್ಯ ದೇಶಗಳ ಸ್ಥಿತಿ ಭಯಾನಕ ಭವಿಷ್ಯಕ್ಕೆ ಮುನ್ನುಡಿ ಬರೆಯುತ್ತಿದೆ. ಇದು ಸಾಲದು ಎನ್ನುವಂತೆ ಇದೀಗ ಜಗತ್ತಲ್ಲಿ 2 ಭೀಕರ ಯುದ್ಧಗಳು ಬೇರೆ ಆರಂಭವಾಗಿವೆ. ಈ ಬೆನ್ನಲ್ಲೇ ಜಗತ್ತಿನ ಅತಿದೊಡ್ಡ ಕಂಪನಿ ಮತ್ತೆ ಮತ್ತೆ ಉದ್ಯೋಗಿಗಳನ್ನು ಮನೆಗೆ ಕಳುಹಿಸುತ್ತಿದ್ದು, ಮತ್ತೊಮ್ಮೆ ನೌಕರರಿಗೆ ಬಿಗ್ ಶಾಕ್ ಕೊಟ್ಟಿದೆ.

ಮುಂಬರುವ ದಿನಗಳಲ್ಲಿ ಜಗತ್ತಿನಲ್ಲಿ ಅತಿದೊಡ್ಡ ಆರ್ಥಿಕ ಹಿಂಜರಿತ ಉಂಟಾಗಲಿದೆ ಎಂಬ ಮಾತುಗಳು ಆರ್ಥಿಕ ತಜ್ಞರಿಂದ ಕೇಳಿಬರುತ್ತಿದೆ. ಇದರ ಬೆನ್ನಲ್ಲೇ ಸಾಲು ಸಾಲಾಗಿ ದೊಡ್ಡ, ದೊಡ್ಡ ಕಂಪನಿಗಳಿಂದ ಉದ್ಯೋಗ ಕಡಿತ ಶುರುವಾಗಿದೆ. ಐಟಿ-ಬಿಟಿ ಕ್ಷೇತ್ರ ಸೇರಿ, ವಿವಿಧ ವಲಯದಲ್ಲಿ ಉದ್ಯೋಗಿಗಳ ಭವಿಷ್ಯದ ಮೇಲೆ ತೂಗುಗತ್ತಿ ನೇತಾಡುತ್ತಿದೆ ಹೀಗಿದ್ದಾಗ ಮತ್ತೆ ಉದ್ಯೋಗ ಕಡಿತಕ್ಕೆ ಮುಂದಾಗಿದೆ 'ಅಮೆಜಾನ್' ಸಂಸ್ಥೆ. ಹಾಗಾದ್ರೆ ಎಷ್ಟು ಉದ್ಯೋಗಿಗಳ ಕೆಲಸಕ್ಕೆ ಕುತ್ತು ಬಂದಿದೆ? ಇದರಿಂದ ಆಗುವ ಪರಿಣಾಮ ಏನು? ಮುಂದೆ ಓದಿ.

Amazon Set to Lay Off Several Hundred Employees from Alexa Division

ನೂರಾರು ನೌಕರರು ಮನೆ ಕಡೆ!

ಹೌದು 'ಇ-ಕಾಮರ್ಸ್‌' ದಿ‌ಗ್ಗಜ ಅಂತ ಕರೆಸಿಕೊಳ್ಳುವ ಅಮೆಜಾನ್‌ ಕಂಪನಿ ಈಗ 'ಅಲೆಕ್ಸಾ' ವಾಯ್ಸ್ ಅಸಿಸ್ಟೆಂಟ್ ಘಟಕದಲ್ಲಿ ಉದ್ಯೋಗ ಕಡಿತಕ್ಕೆ ಮುಂದಾಗಿದೆ. ಈ ಬಗ್ಗೆ ಅಧಿಕೃತವಾಗಿ ಮಾಹಿತಿ ಕೂಡ ಸಿಕ್ಕಿದೆ. ಅಲ್ಲದೆ ನೂರಾರು ನೌಕರರನ್ನ ಮನೆಗೆ ಕಳುಹಿಸುವುದು ಗ್ಯಾರಂಟಿ ಆಗಿದ್ದರೂ, ನಿರ್ಧಿಷ್ಟವಾಗಿ ಎಷ್ಟು ಉದ್ಯೋಗಗಳ ಉದ್ಯೋಗಕ್ಕೆ ಕುತ್ತು ಬರಲಿದೆ ಎನ್ನುವ ಕುರಿತು ಮಾಹಿತಿ ನೀಡಲು ಸಂಸ್ಥೆ ವಕ್ತಾರರು ನಿರಾಕರಿಸಿದ್ದಾರೆ ಎನ್ನಲಾಗಿದೆ. ಈ ಮೂಲಕ ಮತ್ತೊಂದು ಸುತ್ತಿನಲ್ಲಿ ನೂರಾರು ಜನ ಕೆಲಸ ಕಳೆದುಕೊಳ್ಳುವುದು ಪಕ್ಕಾ ಆಗುತ್ತಿದೆ.

ಯಾರಿಗೆಲ್ಲಾ ಸಮಸ್ಯೆ ಆಗುತ್ತೆ?

ಇ-ಕಾಮರ್ಸ್‌ ದಿ‌ಗ್ಗಜ ಅಮೆಜಾನ್‌ ಜಗತ್ತಿನಾದ್ಯಂತ ದೊಡ್ಡ ಮಾರುಕಟ್ಟೆಯನ್ನು ಹೊಂದಿದೆ. ಅದರಲ್ಲೂ ಭಾರತ ಕೂಡ ಅಮೆಜಾನ್‌ ಕಂಪನಿಗೆ ಅತಿ ದೊಡ್ಡದಾಗಿ ಮಾರುಕಟ್ಟೆ ಸಿಕ್ಕಿದೆ. ವಾರ್ಷಿಕ ಭಾರಿ ಮೊತ್ತದ ವ್ಯವಹಾರ ನಡೆಯುತ್ತದೆ. ಈಗ 'ಅಲೆಕ್ಸಾ' ಘಟಕದಲ್ಲಿ ಮಾತ್ರ ಉದ್ಯೋಗ ಕಡಿತದ ನಿರ್ಧಾರ ಕೈಗೊಳ್ಳಲಾಗಿದೆ. ಇನ್ನು 'ಎಐ' ಅಂದ್ರೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಕೆ ಹಿನ್ನಲೆ ಮಹತ್ವದ ಬದಲಾವಣೆಗೆ ಅಮೆಜಾನ್ ಮುಂದಾಗಿದೆ. ಹೀಗಾಗಿ, ಹೊಸ ಬದಲಾವಣೆಗೆ ಈ ಕ್ರಮ ಅನಿವಾರ್ಯ ಎಂದಿದೆ ಅಮೆಜಾನ್.

ಒಟ್ನಲ್ಲಿ ದೊಡ್ಡ ದೊಡ್ಡ ಸಂಸ್ಥೆಗಳೇ ಉದ್ಯೋಗ ಕಡಿತಕ್ಕೆ ಮುಂದಾಗುತ್ತಿರುವ ಪರಿಣಾಮ, ದೊಡ್ಡ ಚರ್ಚೆ ಕೂಡ ಶುರುವಾಗಿದೆ. ಹಾಗೇ ಮುಂಬರುವ ದಿನಗಳಲ್ಲಿ ಇದರ ತೀವ್ರತೆಯು ಇನ್ನಷ್ಟು ಜೋರಾಗಬಹುದು ಎನ್ನಲಾಗಿದೆ. ಮತ್ತೊಂದು ಕಡೆ ಯುದ್ಧ ಕೂಡ ಜೋರಾಗಿ, ಪಾಶ್ಚಿಮಾತ್ಯ ದೇಶಗಳಲ್ಲಿ ಆರ್ಥಿಕ ಕುಸಿತ ಉಂಟಾಗುತ್ತಿರುವ ಆರೋಪವೂ ಇದೆ. ಇದೆಲ್ಲವು ಉದ್ಯೋಗಿಗಳ ಕೆಲಸಕ್ಕೆ ಕುತ್ತು ತರುತ್ತಿರುವುದು ವಿಪರ್ಯಾಸ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+