Tech Layoff: 2022, 2023ರಲ್ಲಿ ಟೆಕ್ ವಲಯದಲ್ಲಿ ಉದ್ಯೋಗ ಕಡಿತ, ಈ ಹುದ್ದೆಗಳಲ್ಲಿದ್ದವರೇ ವಜಾ!
ಜಾಗತಿಕವಾಗಿ ಆರ್ಥಿಕ ಹಿಂಜರಿತದ ಆತಂಕ, ಹಣದುಬ್ಬರದ ನಡುವೆ ಹಲವಾರು ಸಂಸ್ಥೆಗಳು ಉದ್ಯೋಗ ಕಡಿತವನ್ನು ಮಾಡಿದೆ. ಉದ್ಯೋಗ ಕಡಿತ ಮಾಡಿದ ಸಂಸ್ಥೆಗಳು ಪ್ರಮುಖವಾಗಿ ನೀಡಿರುವ ಕಾರಣ ವೆಚ್ಚ ಕಡಿತಗೊಳಿಸುವುದು ಮತ್ತು ಸಂಸ್ಥೆಯ ಬೆಳವಣಿಗೆಗಾಗಿ ರಚನಾತ್ಮಕ ಬದಲಾವಣೆಯಾಗಿದೆ. ಅದರಲ್ಲೂ ಮುಖ್ಯವಾಗಿ 2022ರಿಂದ ಈವರೆಗೆ ಟೆಕ್ ವಲಯದಲ್ಲಿ ಅಧಿಕ ಉದ್ಯೋಗ ಕಡಿತ ನಡೆದಿದೆ.
ಹೌದು, ನಾವು ಯಾವೆಲ್ಲ ಕ್ಷೇತ್ರದಲ್ಲಿ ಅಧಿಕ ಉದ್ಯೋಗ ಕಡಿತ ಮಾಡಲಾಗಿದೆ ಎಂದು ನೋಡಿದಾಗ ಅದರಲ್ಲಿ ಮೊದಲ ಸ್ಥಾನದಲ್ಲಿ ಬರುವುದು ಮಾಹಿತಿ ತಂತ್ರಜ್ಞಾನ (ಐಟಿ ಅಥವಾ ಟೆಕ್) ವಲಯವಾಗಿದೆ. ಅದಾದ ಬಳಿಕದ ಸ್ಥಾನಗಳಲ್ಲಿ ಹಣಕಾಸು ಸೇವೆ, ಟೆಲಿಕಾಂ, ಲಾಜಿಸ್ಟಿಕ್ಸ್, ಸಾರಿಗೆ, ಉತ್ಪಾದನಾ ಕ್ಷೇತ್ರಗಳು ಬರುತ್ತದೆ. ನಾವು ಎಲ್ಲ ಲೆಕ್ಕಾಚಾರದಲ್ಲಿ ನೋಡಿದಾಗ ಕಳೆದ 2022 ಮತ್ತು ಈ ವರ್ಷದ (2023) ಈವರೆಗೆ ಅಧಿಕವಾಗಿ ಐಟಿ ವಲಯದಲ್ಲಿ ಉದ್ಯೋಗ ಕಡಿತ ಮಾಡಲಾಗಿದೆ.

ಟೆಕ್ ವಲಯದಲ್ಲಿ ಭಾರೀ ಉದ್ಯೋಗ ಕಡಿತ
ಆರ್ಥಿಕ ಹಿಂಜರಿತದ ಆತಂಕದ ನಡುವೆ ಪ್ರಮುಖವಾಗಿ ಟೆಕ್ ವಲಯದಲ್ಲಿ ಭಾರೀ ಪ್ರಮಾಣದಲ್ಲಿ ಉದ್ಯೋಗ ಕಡಿತವನ್ನು ಮಾಡಲಾಗಿದೆ. ಒಂದೇ ಬಾರಿಗೆ ಸಾವಿರಾರು ಜನರನ್ನು ಸಂಸ್ಥೆಯಿಂದ ತೆಗೆದುಹಾಕಲಾಗಿದೆ. 365 ಡೇಟಾಸೈನ್ಸ್ ಸ್ಟಡಿ ಪ್ರಕಾರ ಕೋವಿಡ್ ಸಾಂಕ್ರಾಮಿಕದಲ್ಲಿ ಟೆಕ್ ವಲಯದಲ್ಲಿ ನಡೆದ ಉದ್ಯೋಗ ಕಡಿತಕ್ಕಿಂತ ಅಧಿಕವಾಗಿ 2022ರಲ್ಲಿ 150000 ಮಂದಿಯನ್ನು ವಜಾಗೊಳಿಸಲಾಗಿದೆ, ಈ ಟ್ರೆಂಡ್ ಮುಂದುವರಿದಿದ್ದು 2023ರ ಜನವರಿ ತಿಂಗಳಲ್ಲೇ 68,500 ಹೊಸ ಉದ್ಯೋಗ ಕಡಿತ ಮಾಡಲಾಗಿದೆ.
365 ಡೇಟಾಸೈನ್ಸ್ ಆಧಾರದಲ್ಲಿ ನಾವು ನೋಡಿದಾಗ ಜನವರಿ 2023ರಲ್ಲಿ ಅಧಿಕವಾಗಿ ಟ್ವಿಟ್ಟರ್‌ನಲ್ಲಿ ಉದ್ಯೋಗ ಕಡಿತ ಮಾಡಲಾಗಿದ್ದು ಸಂಸ್ಥೆಯಲ್ಲಿ ಶೇಕಡ 58ರಷ್ಟು ಉದ್ಯೋಗಿಗಳಿಗೆ ಇದರ ಪ್ರಭಾವ ಬೀರಿದೆ. ಇನ್ನು ಬೇರೆ ಬೇರೆ ಟೆಕ್ ಸಂಸ್ಥೆಗಳಲ್ಲೂ ಕೂಡಾ ಉದ್ಯೋಗ ಕಡಿತ ನಡೆದಿದೆ. ಆದರೆ ಇನ್ನಷ್ಟು ಉದ್ಯೋಗ ಕಡಿತ ಈ ವರ್ಷದಲ್ಲೇ ಅಂದರೆ 2023ರಲ್ಲೇ ನಡೆಯುವ ಸಾಧ್ಯತೆಯಿದೆ.
ಇನ್ನು ಟೆಕ್ ವಲಯ ಬಿಟ್ಟು ಬೇರೆ ವಲಯದಲ್ಲಿಯೂ ಉದ್ಯೋಗ ಕಡಿತವನ್ನು ಮಾಡಲಾಗಿದೆ. ಎಚ್‌ಆರ್‌ಗಳ ಉದ್ಯೋಗ ಕಡಿತ ಶೇಕಡ 27.8ರಷ್ಟು ನಡೆದಿದ್ದರೆ, ಸಾಫ್ಟ್‌ವೇರ್ ಇಂಜಿನಿಯರ್ ವಲಯದಲ್ಲಿ ಶೇಕಡ 22.1ರಷ್ಟು ಉದ್ಯೋಗ ಕಡಿತ ನಡೆದಿದೆ. ಉದ್ಯೋಗ ಕಳೆದುಕೊಂಡವರ ಪೈಕಿ ಶೇಕಡ 23.7ರಷ್ಟು ಟ್ವಿಟ್ಟರ್ ಉದ್ಯೋಗಿಗಳು ಆಗಿದ್ದಾರೆ. ಒಟ್ಟು ಉದ್ಯೋಗ ಕಡಿತದಲ್ಲಿ ಶೇಕಡ 28.8ರಷ್ಟು ಅಮೆಜಾನ್, ಶೇಕಡ 35.5ರಷ್ಟು ಗೂಗಲ್ ಉದ್ಯೋಗಿಗಳಾಗಿದ್ದಾರೆ. ಟೆಕ್ ವಲಯದಲ್ಲಿ ಈ ಸಂಸ್ಥೆಗಳಲ್ಲಿ ಅಧಿಕ ಉದ್ಯೋಗ ಕಡಿತ ನಡೆದಿದೆ.
ಶೇಕಡ 90ರಷ್ಟು ಉದ್ಯೋಗ ಕಡಿತವು ಯುಎಸ್‌ನಲ್ಲಿ ನಡೆದಿದೆ. ಪ್ರಮುಖ ಸಂಸ್ಥೆಗಳು ತಮ್ಮ ಮುಖ್ಯ ಕಚೇರಿಯನ್ನೇ ಮುಚ್ಚಿದೆ. ಇನ್ನು ಭಾರತದ ಶೇಕಡ 0.9ರಷ್ಟು ಉದ್ಯೋಗಿಗಳು ಕೆಲಸವನ್ನು ಕಳೆದುಕೊಂಡಿದ್ದಾರೆ. ಆನ್‌ಲೈನ್ ಟ್ರ್ಯಾಕರ್ ಪ್ರಕಾರ ಒಟ್ಟಾಗಿ 658 ಟೆಕ್ ಸಂಸ್ಥೆಗಳು ಈ ವರ್ಷದ 5 ತಿಂಗಳ ಅವಧಿಯಲ್ಲಿ 191,416 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ. ಕಳೆದ ವರ್ಷ 164,411ರಷ್ಟು ಉದ್ಯೋಗ ಕಡಿತ ಮಾಡಲಾಗಿತ್ತು.












Click it and Unblock the Notifications