• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಾಕೋಳಿನಲ್ಲಿ ಶ್ರೀಪಾದರಾಜರ ಆರಾಧನಾ ಮಹೋತ್ಸವ

By Mahesh
|

ದೊಡ್ಡಬಳ್ಳಾಪುರ, ಜೂನ್ 26: ಪಾಂಚಜನ್ಯ ಪ್ರತಿಷ್ಠಾನದ ಸಹಯೋಗದಿಂದ ಕಾಕೋಳಿನಲ್ಲಿ ಶ್ರೀಪಾದರಾಜ ಆರಾಧನಾ ಮಹೋತ್ಸವವು ಜೂನ್ 27ರಂದು ನಿಗದಿಯಾಗಿದೆ.

ಬೆಂಗಳೂರು-ದೊಡ್ಡಬಳ್ಳಾಪುರ ರಸ್ತೆಯ ರಾಜಾನುಕುಂಟೆ ಸಮೀಪದ ಚಾರಿತ್ರಿಕ ಪ್ರೇಕ್ಷಣೀಯ ತಾಣ ಕಾಕೋಳಿನಲ್ಲಿ ಶ್ರೀಪಾದರಾಜರಿಂದ ಪ್ರತಿಷ್ಠಾಪಿತ ಬೃಂದಾವನದಲ್ಲಿರುವ ಚತುರ್ಭುಜ ವೇಣುಗೋಪಾಲಕೃಷ್ಣನ ಜಾಗೃತ ಸನ್ನಿಧಾನದ ಪಾಂಚಜನ್ಯ ಸಭಾಂಗಣದ ಹರಿತಸ ವೇದಿಕೆಯಲ್ಲಿ ಕಾರ್ಯಕ್ರಮಗಳು ಜರುಗಲಿವೆ.

ಕಾಣ ಬನ್ನಿ ಕಣ್ಮನ ತಣಿಸುವ ಕಾಕೋಳು ಕ್ಷೇತ್ರವ

ಮಹಿಮಾನ್ವಿತ ಮಾಧ್ವ ತಪಸ್ವಿ, ವ್ಯಾಸ-ದಾಸ ಸಾಹಿತ್ಯಗಳ ಸವ್ಯಸಾಚಿ, ಸಾಧನದ ಸತ್ಪಥ ತೋರುವ ಭಕ್ತಾನುಕಂಪಿ ಯತಿಪುಂಗವ , ಪರಮ ಭಾಗವತ ಶಿರೋಮಣಿ ಧೃವಾಂಶ ಸಂಭೂತರಾದ ಶ್ರೀಪಾದರಾಜರ-ಆರಾಧನಾ ಮಹೋತ್ಸವವನ್ನು ಪಾಂಚಜನ್ಯ ಪ್ರತಿಷ್ಠಾನದ ಸಹಯೋಗದೊಂದಿಗೆ ವಿಶೇಷವಾಗಿ ಗಾನ - ಜ್ಞಾನ ಯಜ್ಞವನ್ನಾಗಿ ಆಚರಿಸಲಾಗುವುದು.

Kakolu Sripadaraja Aradhana Mahotsava on June 27

ಕೀರ್ತಿಶೇಷ ಶ್ರೀ ಹೊಳವನಹಳ್ಳಿ ನಾಗರಾಜಮೂರ್ತಿ ಸ್ಮರಣಾರ್ಥ ಅವರ ಕುಟುಂಬವರ್ಗದವರು ಪ್ರಧಾನ ಸೇವಾಕರ್ತರಾಗಿ ಆಯೋಜಿಸಿರುವ ಗುರುಭಕ್ತಿ ಉತ್ಸವದಲ್ಲಿ ಜೂನ್ 27 ರಂದು ಬೆಳಿಗ್ಗೆ 9.00ಕ್ಕೆ ಕ್ಯಾ. ಕೆ.ವಿ ಮಣಿ (ನಿ) ನೇತೃತ್ವದಲ್ಲಿ ಗ್ಲೋಬಲ್ ವಿಷ್ಣುಸಹಸ್ರನಾಮ ಸತ್ಸಂಗ ಫೆಡರೇಷನ್ ನವರಿಂದ ವಿಷ್ಣುಸಹಸ್ರನಾಮ ಪಾರಾಯಣ ನಡೆಯಲಿದೆ.

ನಂತರ ಶ್ರೀಪಾದರಾಜರ ಮಹಿಮಾ ಕುರಿತು ವಿದ್ವಾನ್ ಕಲ್ಲಾಪುರ ಪವಮಾನಾಚಾರ್ಯರು ಮತ್ತು ವಿದ್ವಾನ್ ಆಯನೂರು ಮಧುಸೂಧನಾರ್ಯರು ಪ್ರವಚನ ನೆರವೇರಿಸಕೊಡಲಿದ್ದಾರೆ.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅಂತರಾಷ್ಟ್ರೀಯ ಖ್ಯಾತಿಯ ಹರಿದಾಸ ವಿದ್ವಾಂಸ ಭಕ್ತಿ ಪೀಠಪ್ರಶಸ್ತಿ ಪುರಸ್ಕøತ ಡಾ ಅರಳುಮಲ್ಲಿಗೆ ಪಾರ್ಥಸಾರಥಿ ಭಾಗವಹಿಸಿ ಉಪನ್ಯಾಸ ನೀಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ .

ಬೆಂಗಳೂರಿನಿಂದ 30 ಕಿ.ಮೀ. ದೂರದ ಯಲಹಂಕ-ದೊಡ್ಡಬಳ್ಳಾಪುರ ರಸ್ತೆಯ ರಾಜಾನುಕುಂಟೆ ಸಮೀಪದ ಧಾರ್ಮಿಕ ಸೊಗಡಿನ ಐತಿಹಾಸಿಕ ನೆಲೆಯ ಕಾಕೋಳಿನಲ್ಲಿ ಮೈದಳೆದಿರುವ ಅಪರೂಪದ ಶ್ರೀ ವೇಣುಗೋಪಾಲ ಕೃಷ್ಣ ದೇವಾಲಯ ನಮ್ಮನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಇದೊಂದು ಪೌರಾಣಿಕ ಹಿನ್ನೆಲೆಯಿರುವ ಜಾಗೃತ ಸನ್ನಿಧಾನ. ಆಧುನಿಕತೆಯಲ್ಲೇ ಮಿಂಚಿದ್ದರೂ, ಗ್ರಾಮೀಣ ಸಂಸ್ಕೃತಿಯಿಂದ ಬೇರ್ಪಟ್ಟಿಲ್ಲ.

ಕಾಕೋಳು ಕ್ಷೇತ್ರಕ್ಕೆ ತಲುಪುವುದು ಹೇಗೆ? ಬೆಂಗಳೂರು ಸಿಟಿ ಮಾರ್ಕೆಟ್ (ಮಸೀದಿ ಮುಂಭಾಗದಿಂದ) ಬಿಎಂಟಿಸಿ 285ಇ, 251ಎ, 266ಸಿ. ಶಿವಾಜಿನಗರದಿಂದ : 285ಕ್ಯೂ, ಎಲ್/ವಿ. ಮೆಜೆಸ್ಟಿಕ್‌ನಿಂದ : 406 (ನೆಲಮಂಗಲ ಮಾರ್ಗ), ಬಾಪೂಜಿನಗರದಿಂದ : 248ಕ್ಯೂ (ಪೀಣ್ಯ-ಜಾಲಹಳ್ಳಿ ಕ್ರಾಸ್ ಮಾರ್ಗ) ಬಸ್ಸುಗಳು ನೇರವಾಗಿ ಕಾಕೋಳು ತಲುಪುತ್ತದೆ.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Sripadaraja Aradhana Mahotsava will be held at Kakolu on June 27. Kakolu is famous for Sri Venugopal Krishna Temple and located at a distance of 30 KM from Bengaluru on Doddaballapur highway.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more