ಗೋವಾದಲ್ಲಿ ಕೋಟೆಗದ್ದೆ ರವಿ ಅವರ 'ತಂತ್ರ' ಚಿತ್ರಕಲಾ ಪ್ರದರ್ಶನ

Posted By: Nayana
Subscribe to Oneindia Kannada

ಬೆಂಗಳೂರು ಏಪ್ರಿಲ್ 12: ಬೆಂಗಳೂರಿನ ಫಿಡೆಲಿಶಸ್ ಗ್ಯಾಲರಿ ಸಂಸ್ಥೆಯು ಕಲಾವಿದ ಕೋಟೆಗದ್ದೆ ರವಿ ಅವರ ಕಲಾಕೃತಿಗಳ ಅನಾವರಣಗೊಳಿಸುವ 'ತಂತ್ರ' ಪ್ರದರ್ಶನವನ್ನು ಗೋವಾದ ವಾಗಾಟರ್ ಬೀಚ್‌ನ ಆರ್ಟ್ ಸ್ಟ್ರೀಟ್ ನಲ್ಲಿ ಏಪ್ರಿಲ್ 18ರಿಂದ 22ರವರೆಗೆ ಏರ್ಪಡಿಸಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಇಲಾಖೆ ಸಹಯೋಗದಲ್ಲಿ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಏಪ್ರಿಲ್ 18ರಂದು ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.

ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಶೀಘ್ರವೇ ಸಂಜೆ ಕಾಲೇಜು!

ಪ್ರತಿದಿನ ಬೆಳಗ್ಗೆ 10.30ರಿಂದ ರಾತ್ರಿ 7ರವರೆಗೆ ಪ್ರದರ್ಶನ ನಡೆಯಲಿದೆ. ಪ್ರದರ್ಶನಕ್ಕೆ ಏಪ್ರಿಲ್ 18ರಂದು ಬೆಳಗ್ಗೆ 11ಕ್ಕೆ ಪಣಜಿಯ ಇನ್‌ಸ್ಟಿಟ್ಯೂಟ್ ಮರಿಜಸ್ ಬ್ರಿಗಾಂಜ್ ನ ಚೇರಮನ್ ಸಂಜಯ್ ಹರ್ಮಾಲ್ಕರ್ ಚಾಲನೆ ನೀಡುವರು. ಗೋವಾದ ಡಿಜೋನ್ ಗ್ರುಪ್‌ನ ಉಪಾಧ್ಯಕ್ಷ ಗಜಾನನ ಕರ್ಕರೆ ಹಾಗೂ ಬೆಂಗಳೂರಿನ ಫಿಡೆಲಿಶಸ್ ಗ್ಯಾಲರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಚ್ಯುತ್ ಗೌಡ ಅತಿಥಿಗಳಾಗಿರುವರು ಎಂದು ಪ್ರಕಟಣೆ ತಿಳಿಸಿದೆ.

Art exhibition of Kotegadde Ravi in Goa

ಕಲಾವಿದರ ಪರಿಚಯ: ಕೋಟೆಗದ್ದೆ ರವಿ ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಚಿಕ್ಕ ಗ್ರಾಮ ಕೋಟೆಗದ್ದೆಯವರು. ತಮ್ಮೂರಲ್ಲೇ ಶಿಕ್ಷಣ ಮುಗಿಸಿ ನಂತರ ಮೈಸೂರಿನ ಡಿಎಂಎಸ್ ಲಲಿತ ಕಲಾ ಮಹಾ ಸಂಸ್ಥಾನದಿಂದ ಲಲಿತಕಲೆಯಲ್ಲಿ ಪದವಿ ಪಡೆದರು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ

ಅಕ್ರೈಲಿಕ್ ಶೈಲಿಯಲ್ಲಿ ಕ್ಯಾನ್ವಾಸ್‌ನ ಮೇಲೆ ಸೃಜನಾತ್ಮಕ ಕಲಾಕೃತಿಗಳ ಮೂಲಕವೇ ಹೆಸರು ಮಾಡಿರುವ ರವಿ, ಪ್ರಯೋಗಶೀಲ ಕಲಾವಿದ ಕೂಡ. ಭಾರತೀಯ ಕಲಾಪ್ರಕಾರದಲ್ಲಿ ಸಾಕಷ್ಟು ಹೆಸರು ಮಾಡಿರುವ ರವಿ ದೇಶದ ಮೂಲೆಮೂಲೆಗಳಲ್ಲಿ ಚಿತ್ರಕಲೆಯಲ್ಲಿ ಹೆಸರು ಮಾಡಿದ್ದಾರೆ. ಕುಂಚದ ಜತೆಗೆ ಬ್ಲೇಡ್ ಮತ್ತಿತರ ವಸ್ತುಗಳಿಂದ ಚಿತ್ರ ಬಿಡಿಸುವುದು ಇವರ ಹೆಗ್ಗಳಿಕೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Department of Kannada and culture and fidelitus Gallery have jointly organising art exhibition 'TANTRA' by creative artist Kotegadde Ravi from April 18 to 22 in Goa

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ