ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಶೀಘ್ರವೇ ಸಂಜೆ ಕಾಲೇಜು!

Posted By: Nayana
Subscribe to Oneindia Kannada

ಬೆಂಗಳೂರು, ಜನವರಿ 04 : ಕಲೆಯ ವಿವಿಧ ಪ್ರಕಾರಗಳಲ್ಲಿ ತರಬೇತಿ ನೀಡುವ ಮೂಲಕ ಯುವ ಕಲಾವಿದರನ್ನು ಕಲಾ ಪ್ರಪಂಚಕ್ಕೆ ಪರಿಚಯಿಸುತ್ತಿರುವ ಕರ್ನಾಟಕ ಚಿತ್ರ ಕಲಾ ಪರಿಷತ್ತಿನಲ್ಲಿ ಶೀಘ್ರದಲ್ಲಿ ದೇಶದ ಮೊದಲ ದೃಶ್ಯಕಲೆ ಸಂಜೆ ಕಾಲೇಜು ಆರಂಭವಾಗಲಿದೆ.

ಪರಿಷತ್ ಆವರಣದಲ್ಲಿರುವ ಫೈನ್ ಆರ್ಟ್ಸ್ ಕಾಲೇಜಿನಲ್ಲಿ ರಾಜ್ಯ, ದೇಶ, ವಿದೇಶಗಳ ಅಭ್ಯರ್ಥಿಗಳೂ ನಿಯಮಿತವಾಗಿ ಚಿತ್ರಕಲೆ, ಶಿಲ್ಪಕಲೆ, ಗ್ರಾಫಿಕ್ಸ್ , ಅನಿಮೇಶನ್ ಸೇರಿ ವಿವಿಧ ವಿಷಯದಲ್ಲಿ ಕ್ರಮಬದ್ಧವಾಗಿ ಪದವಿ, ಸ್ನಾತಕೋತ್ತರ ಪದವಿ ಹಾಗೂ ಡಿಪ್ಲೊಮಾ ವಿಭಾಗದಲ್ಲಿ ಓದುತ್ತಿದ್ದಾರೆ.

ಹೊಸ ಸಂದೇಶಗಳ ಹೊತ್ತು ಮತ್ತೆ ಬರಲಿದೆ ಚಿತ್ರಸಂತೆ!

ಆದರೆ, ಆರ್ಥಿಕ ಸಮಸ್ತೆ ಹಾಗೂ ವಿವಿಧ ಕ್ಷೇತ್ರದಲ್ಲಿ ಉದ್ಯೋಗ ಮಾಡುತ್ತಿರುವವರಿಗೆ ಕಲಾ ಕಾಲೇಜಿನಲ್ಲಿ ಅಭ್ಯಸಿಸಲು ಸಾದ್ಯವಾಗುತ್ತಿರಲಿಲ್ಲ. ಇದರಿಂದಾಗಿ ಮುಂದಿನ ಶೈಕ್ಷಣಿಕ ವರ್ಷದಿಂದ ಸಂಜೆ ಕಾಲೇಜು ಆರಂಭಿಸಲು ಚಿತ್ರಕಲಾ ಪರಿಷತ್ತು ಇದ್ಧತೆ ನಡೆಸುತ್ತಿದೆ.

Chitrakala Parishat will start Visual Art evening college

ಸಂಜೆ ಕಾಲೇಜು ಆರಂಭಕ್ಕೆ ಬೆಂಗಳೂರು ವಿಶ್ವವಿದ್ಯಾಲಯ ಹಾಗೂ ರಾಜ್ಯ ಸರ್ಕಾರ ಸಹಕಾರ ನೀಡಿವೆ ಎಂದು ಪರಿಷತ್ತು ಅಧ್ಯಕ್ಷ ಡಾ. ಬಿ.ಎಲ್. ಶಂಕರ್ ತಿಳಿಸಿದ್ದಾರೆ.

ಕನ್ನಡದ ಹೆಮ್ಮೆಯ ವ್ಯಂಗ್ಯಚಿತ್ರಕಾರರ ಮನಸೆಳೆವ ಕಾರ್ಟೂನ್

ಐದು ವಿಷಯ ಬೋಧನೆ: ಪದವಿ ಮತ್ತು ಸ್ನಾತಕೋತ್ತರ ಪದವಿ ತರಗತಿಗಳು ಸಂಜೆ 4 ರಿಂದ ರಾತ್ರಿ9 ರವರೆಗೆ ನಡೆಯಲಿವೆ. ಚಿತ್ರಕಲೆ , ದೃಶ್ಯಕಲೆ, ಗ್ರಾಫಿಕ್ಸ್, ಆರ್ಟಿಸ್ಟ್ರಿ, ಅನಿಮೇಶನ್, ಅಪ್ಲೈಡ್ ಮತ್ತು ಸೆರಾಮಿಕ್ಸ್ ವಿಷಯದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆಯಬಹುದು. ಪ್ರತಿ ಬ್ಯಾಚ್ ಗೆ ತಲಾ30 ಅಭ್ಯರ್ಥಿಗಳಿಗೆ ಮಾತ್ರ ಪ್ರವೇಶವಿರುತ್ತದೆ.

ಆರ್.ಆರ್. ನಗರಕ್ಕೆ ಸ್ಥಳಾಂತರ: ಪಸ್ತುತ ಚಿತ್ರಕಲಾ ಪರಿಷತ್ತಿನಲ್ಲಿರುವ ಫೈನ್ ಆರ್ಟ್ಸ್ ಕಾಲೇಜು ರಾಜರಾಜೇಶ್ವರಿ ನಗರಕ್ಕೆ ವರ್ಗಾವಣೆಯಾಗಲಿದೆ. ಈಗಾಗಲೇ ಕಟ್ಟಡ ಕಾಮಗಾರಿ ನಡೆಯುತ್ತಿದೆ. ಒಟ್ಟು 17 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣವಾಗುತ್ತಿದೆ. ಇದರಿಂದಾಗಿ ಚಿತ್ರಕಲಾ ಪರಿಷತ್ತು ಆವರಣದಲ್ಲಿರುವ ಫೈನ್ ಆರ್ಟ್ಸ್ ಕಾಲೇಜಿನ ಕಟ್ಟಡವನ್ನು ಸಂಜೆ ಕಾಲೇಜಿಗಾಗಿ ಮಾರ್ಪಡಿಸಲಾಗುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Chitrakala parishat will start evening college with courses like visual art and this is the first in country in its kind.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ