• search
 • Live TV
ಅಮೃತಸರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪಾಕಿಸ್ತಾನದ 'ಬಂಡವಾಳ' ಬಟಾಬಯಲು; ಹೇಳುವುದು ಒಂದು ಮಾಡುವುದು ಇನ್ನೊಂದು!

|

ಅಮೃತಸರ್, ನವೆಂಬರ್.08: ಹೇಳುವುದು ಒಂದು ಮಾಡುವುದು ಇನ್ನೊಂದು ಎನ್ನುವ ಮಾತು ಪಾಕಿಸ್ತಾನಕ್ಕೆ ಹೇಳಿ ಮಾಡಿಸಿದಂತಿದೆ. ನೆರೆ ರಾಷ್ಟ್ರದ ನಸುಗುನ್ನಿ ಕೊಟ್ಟ ಮಾತನ್ನು ತಪ್ಪುವುದೇ ಚಾಳಿ ಮಾಡಿಕೊಂಡಿದೆ. ಭಾರತ-ಪಾಕಿಸ್ತಾನದ ಸಿಖ್ ಸಮುದಾಯದ ಯಾತ್ರಾರ್ಥಿಗಳು ಪವಿತ್ರ ಕ್ಷೇತ್ರದ ದರ್ಶನ ಪಡೆಯಲು ಹವಣಿಸುತ್ತಿದ್ದಾರೆ. ಪಾಕಿಸ್ತಾನ ಮಾತ್ರ ಇದನ್ನೇ ದಾಳವಾಗಿ ಬಳಸಿಕೊಳ್ಳಲು ತಂತ್ರಗಾರಿಕೆ ಹೆಣೆದಿದೆ.

   ನರೇಂದ್ರ ಮೋದಿಯವರ ಅಪ್ರತಿಮ ಬುದ್ದಿವಂತಿಕೆ ಎದುರು ಕಾಂಗ್ರೆಸ್ ದಡ್ಡತನ ಪ್ರದರ್ಶನ | Oneinida Kannada

   ಸಿಖ್ ಯಾತ್ರಿರ್ಥಿಗಳನ್ನು ಆಹ್ವಾನಿಸುವ ನೆಪದಲ್ಲಿ ಪಾಕಿಸ್ತಾನ ತನ್ನ ವ್ಯಾವಹಾರಿಕ ಬುದ್ಧಿಯನ್ನು ಪ್ರದರ್ಶಿಸಿದೆ. ಕರ್ತಾಪುರ್ ಕಾರಿಡಾರ್ ಯೋಜನೆ ಚಾಲನೆಗೆ ಭಾರತದ ಭಾಗದಲ್ಲಿ ಅಂದರೆ ಪಂಜಾಬ್ ನ ಗುರುದಾಸ್ ಪುರ್ ಜಿಲ್ಲೆ ಡೇರಾ ಬಾಬಾದಲ್ಲಿ ಸಕಲ ಸಿದ್ಧತೆಗಳೂ ನಡೆದಿವೆ. ಅತ್ತ ಪಾಕಿಸ್ತಾನದಲ್ಲಿರುವ ಗುರು ನಾನಕ್ ಜನ್ಮಸ್ಥಳ ದರ್ಬಾರ್ ಸಾಹೀಬ್ ನಲ್ಲೂ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ನಿನ್ನೆಯವರೆಗೂ ಈ ಉದ್ಘಾಟನಾ ಕಾರ್ಯಕ್ರಮದ ದಿನ ಯಾವುದೇ ಶುಲ್ಕ ಇರುವುದಿಲ್ಲ ಎನ್ನುತ್ತಿದ್ದ ಪಾಕಿಸ್ತಾನ ಇದೀಗ ರಾಗ ಬದಲಿಸಿದೆ.

   ಪಾಕಿಸ್ತಾನಕ್ಕೆ ಹೋಗೋದಿಲ್ಲ ಎಂದ ರವಿಶಂಕರ್ ಗುರೂಜಿ

   ಮೊದಲ ದಿನವೇ ಯಾತ್ರಿಕರ ಜೇಬಿಗೆ ಕತ್ತರಿ:

   ಕರ್ತಾಪುರ್ ಕಾರಿಡಾರ್ ಯೋಜನೆ ಅಡಿ ಸಿಖ್ ರಿಗೆ ಅನುಕೂಲವಾಗಲಿದೆ ಎಂದು ಭಾವಿಸಲಾಗಿತ್ತು. ಅದಕ್ಕಾಗಿ ಭಾರತ-ಪಾಕಿಸ್ತಾನ ದೇಶಗಳೆರೆಡೂ ಒಪ್ಪಂದಕ್ಕೂ ಸಹಿ ಹಾಕಿದ್ದವು. ಆದರೆ, ಕರ್ತಾಪುರ್ ಕಾರಿಡಾರ್ ಯೋಜನೆ ಆರಂಭಕ್ಕೆ ಇನ್ನೇನು ಒಂದು ದಿನವಷ್ಟೇ ಬಾಕಿ ಉಳಿದಿದೆ. ನಾಳೆಯೇ ಉಭಯ ದೇಶಗಳಲ್ಲಿ ಯೋಜನೆಗೆ ಚಾಲನೆಯೂ ಸಿಗಲಿದೆ. ಪಾಕಿಸ್ತಾನ ಈ ಸಂದರ್ಭವನ್ನು ಲಾಭಕ್ಕಾಗಿ ಬಳಸಿಕೊಳ್ಳಲು ನೋಡುತ್ತಿದೆ. ಮೊದಲ ದಿನ ಪಾಕಿಸ್ತಾನಕ್ಕೆ ತೆರಳುವ ಯಾತ್ರಾರ್ಥಿಗಳಿಗೆ ತಲಾ 1,500 ರೂಪಾಯಿ ಚಾರ್ಜ್ ಮಾಡಲು ಪಾಕಿಸ್ತಾನ ಪ್ಲ್ಯಾನ್ ಮಾಡಿದೆಯಂತೆ. ನಿನ್ನೆಯವರೆಗೂ ಯಾತ್ರಾರ್ಥಿಗಳಿಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ ಎನ್ನುತ್ತಿದ್ದ ಪಾಕಿಸ್ತಾನ, ಈಗ ಧಾರ್ಮಿಕ ವಿಚಾರವನ್ನು ತನ್ನ ಬಂಡವಾಳವನ್ನಾಗಿ ಮಾಡಿಕೊಳ್ಳಲು ಮುಂದಾಗಿದೆ.

   ಸಿಖ್ ರ ಪವಿತ್ರ ಕ್ಷೇತ್ರವಾಗಿರುವ ಪಂಜಾಬ್ ನ ಗುರುದಾಸ್ ಪುರ್ ಜಿಲ್ಲೆಯ ಡೇರಾ ಬಾಬಾ ನಾನಕ್ ದೇವಸ್ಥಾನದಿಂದ ಪಾಕಿಸ್ತಾನದ ಕರ್ತಾಪುರ್ ನಲ್ಲಿರುವ ಗುರು ನಾನಕ್ ರ ಜನ್ಮಸ್ಥಳ ದರ್ಬಾರ್ ಸಾಹೀಬ್ ಗೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಕರ್ತಾಪುರ್ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಈ ಯೋಜನೆಯಿಂದ ವೀಸಾ ಇಲ್ಲದೇ ಭಾರತೀಯ ಯಾತ್ರಿಕರು ಪ್ರಯಾಣ ಬೆಳೆಸಲು ಅವಕಾಶ ಮಾಡಿಕೊಟ್ಟಂತೆ ಆಗುತ್ತದೆ. ಆದರೆ, ಅಗತ್ಯ ಪಾಸ್ ಪೋರ್ಟ್ ದಾಖಲೆಗಳನ್ನು ಯಾತ್ರಿಕರು ಹೊಂದಬೇಕಿದೆ.

   ಎರಡು ದೇಶಗಳ ನಡುವೆ ನಿರ್ಮಿಸಿರುವ ಕರ್ತಾಪುರ್ ಯೋಜನೆಗೆ ನವೆಂಬರ್.09ರಂದು ಚಾಲನೆ ಸಿಗಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ, ಭಾರತದ ಭಾಗದಲ್ಲಿ ಕರ್ತಾಪುರ್ ಯೋಜನೆಯನ್ನು ನಾಳೆ ಉದ್ಘಾಟನೆ ಮಾಡಲಿದ್ದಾರೆ. ಈ ವೇಳೆ ಕೇಂದ್ರ ಸಚಿವ ಹರ್ ದೀಪ್ ಪುರಿ, ಹರ್ಸಿಮ್ರತ್ ಕೌರ್ ಬಾದಲ್, ಉಪಸ್ಥಿತಿ ವಹಿಸಲಿದ್ದಾರೆ.

   English summary
   Pakistan Try To Encash The situation. Pak Charge Every Pilgrim On Kartarpur Corridor Opening Day.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X