ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ಸಿಖ್ ಯಾತ್ರಾರ್ಥಿಗಳಿಗೆ 2,942 ವೀಸಾ ನೀಡಿದ ಪಾಕಿಸ್ತಾನ

|
Google Oneindia Kannada News

ಇಸ್ಲಾಮಾಬಾದ್, ನ. 04: ಹಬ್ಬದ ಸಮಯದಲ್ಲಿ ಆಚರಣೆಗಳು ನಡೆಯುವ ಹಲವು ಸ್ಥಳಗಳಿಗೆ ಭೇಟಿ ನೀಡುವ ಸುಮಾರು 3,000 ಭಾರತೀಯ ಯಾತ್ರಾರ್ಥಿಗಳಿಗೆ ಪಾಕಿಸ್ತಾನ ವೀಸಾ ನೀಡಿದೆ.

ನವೆಂಬರ್ 6 ರಿಂದ 15 ರವರೆಗೆ ನಡೆಯುವ ಗುರುನಾನಕ್ ಅವರ ಜನ್ಮ ವಾರ್ಷಿಕೋತ್ಸವದಂದು ಗಡಿ ರಾಷ್ಟ್ರದ ಹಲವಾರು ನಗರಗಳಲ್ಲಿ ಆಚರಣೆಗಳು ನಡೆಯಲಿವೆ. ಹೀಗಾಗಿ 1974 ರ ಧಾರ್ಮಿಕ ದೇವಾಲಯಗಳಿಗೆ ಭೇಟಿ ನೀಡುವ ಪಾಕಿಸ್ತಾನ-ಭಾರತ ಪ್ರೋಟೋಕಾಲ್ ಚೌಕಟ್ಟಿನ ಅಡಿಯಲ್ಲಿ ಪಾಕಿಸ್ತಾನವು ಭಾರತೀಯ ಯಾತ್ರಾರ್ಥಿಗಳಿಗೆ ವೀಸಾಗಳನ್ನು ನೀಡಿದೆ.

ನನ್ನ ಮೇಲೆ ನನ್ನ ಮೇಲೆ "4 ಬಾರಿ ಗುಂಡು ಹಾರಿಸಲಾಗಿದೆ" ಎಂದ ಇಮ್ರಾನ್ ಖಾನ್

ಪ್ರತಿ ವರ್ಷವೂ ಗಣನೀಯ ಸಂಖ್ಯೆಯ ಸಿಖ್ ಯಾತ್ರಿಗಳು ಅಥವಾ ಭಾರತದಿಂದ ಯಾತ್ರಿಕರು ಧಾರ್ಮಿಕ ಹಬ್ಬಗಳು ಮತ್ತು ವಿಶೇಷ ಸಂದರ್ಭಗಳಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡುತ್ತಾರೆ. ನವದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್ ಭಾರತೀಯರಿಗೆ ನೀಡಿರುವ 2,942 ವೀಸಾಗಳು ಇತರ ದೇಶಗಳ ಸಿಖ್ ಯಾತ್ರಾರ್ಥಿಗಳಿಗೆ ಹೊಲಿಸಿದರೆ ಹೆಚ್ಚುವರಿಯಾಗಿವೆ.

Pakistan Grants 2,942 Visas To Indian Sikh Pilgrims

"ಹೈಕಮಿಷನ್ ಮೂಲಕ ಧಾರ್ಮಿಕ ಯಾತ್ರಾರ್ಥಿಗಳಿಗೆ ತೀರ್ಥಯಾತ್ರೆ ವೀಸಾಗಳನ್ನು ನೀಡುವುದು ಎರಡು ದೇಶಗಳ ನಡುವಿನ ಧಾರ್ಮಿಕ ದೇಗುಲಗಳಿಗೆ ಭೇಟಿ ನೀಡುವ ದ್ವಿಪಕ್ಷೀಯ ಶಿಷ್ಟಾಚಾರಕ್ಕೆ ಅನುಗುಣವಾಗಿ ಪಾಕಿಸ್ತಾನದ ಸರ್ಕಾರದ ಬದ್ಧವಾಗಿದೆ" ಎಂದು ಪಾಕಿಸ್ತಾನದ ಹೈಕಮಿಷನ್ ಹೇಳಿಕೆಯಲ್ಲಿ ತಿಳಿಸಿದೆ.

ಪಾಕಿಸ್ತಾನಕ್ಕೆ ತೆರಳುತ್ತಿರುವ ಭಾರತೀಯ ಯಾತ್ರಾರ್ಥಿಗಳಿಗೆ ಪಾಕಿಸ್ತಾನದ ಉಸ್ತುವಾರಿ ಅಫ್ತಾಬ್ ಹಸನ್ ಖಾನ್ ಅಭಿನಂದನೆ ತಿಳಿಸಿದ್ದು, ಯಾತ್ರೆಯನ್ನು ಸುಗಮವಾಗಿ ಮುಗಿಸುವಂತೆ ಹಾರೈಸಿದ್ದಾರೆ. ಜೊತೆಗೆ "ಪಾಕಿಸ್ತಾನವು ಪವಿತ್ರ ಧಾರ್ಮಿಕ ಸ್ಥಳಗಳನ್ನು ಸಂರಕ್ಷಿಸಲು ಮತ್ತು ಭೇಟಿ ನೀಡುವ ಯಾತ್ರಾರ್ಥಿಗಳಿಗೆ ಅಗತ್ಯ ಸೌಕರ್ಯವನ್ನು ಒದಗಿಸುವಲ್ಲಿ ಹೆಮ್ಮೆ ಹೊಂದಿದೆ" ಎಂದು ಹೇಳಿದ್ದಾರೆ.

ಅವರ ಭೇಟಿಯ ಸಮಯದಲ್ಲಿ, ಭಾರತೀಯ ಯಾತ್ರಿಕರು ಡೇರಾ ಸಾಹಿಬ್, ಪಂಜಾ ಸಾಹಿಬ್, ನಂಕಾನಾ ಸಾಹಿಬ್ ಮತ್ತು ಕರ್ತಾರ್‌ಪುರ ಸಾಹಿಬ್‌ನಲ್ಲಿರುವ ಗುರುದ್ವಾರಗಳಿಗೆ ಪ್ರಯಾಣಿಸುತ್ತಾರೆ. ನವೆಂಬರ್ 6 ರಂದು ಪಾಕಿಸ್ತಾನಕ್ಕೆ ಪ್ರವೇಶಿಸಿ ನವೆಂಬರ್ 15 ರಂದು ಭಾರತಕ್ಕೆ ಮರಳಲಿದ್ದಾರೆ.

Pakistan Grants 2,942 Visas To Indian Sikh Pilgrims

ಗುರುನಾನಕ್ ಅವರು ತಮ್ಮ ಜೀವನದ ಕೊನೆಯ ವರ್ಷಗಳನ್ನು ಕಳೆದ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಕರ್ತಾರ್‌ಪುರದಲ್ಲಿ ನಿರ್ಮಿಸಲಾದ ಐತಿಹಾಸಿಕ ಗುರುದ್ವಾರಕ್ಕೆ ಭಾರತೀಯ ಯಾತ್ರಾರ್ಥಿಗಳು ಭಾರೀ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಹೀಗಾಗಿ ವೀಸಾ ಮುಕ್ತ ಪ್ರವೇಶಕ್ಕೆ ಅನುಮತಿ ನೀಡಲು ಎರಡು ಕಡೆಯವರು ಕರ್ತಾರ್‌ಪುರ ಕಾರಿಡಾರ್ ಅನ್ನು ತೆರೆದಿದ್ದಾರೆ.

English summary
Festive season: Pakistan grants 2,942 visas to Indian pilgrims to celebrate festival season including birth anniversary of Guru Nanak. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X