97, 93, 96.. ತಂದೆ ಮಾತು ಉಳಿಸಿಕೊಂಡ ವೈಭವ್ ಸೂರ್ಯವಂಶಿ; ಮೆಚ್ಚುಗೆಗಳ ಸುರಿಮಳೆ

Vaibhav Sooryavanshi: ಮುಲ್ಲನ್‌ಪುರ್‌ನಲ್ಲಿ ಶುಕ್ರವಾರ (ಮೇ 29) ನಡೆದ ಐಪಿಎಲ್‌ 2026ರ ಕ್ವಾಲಿಫೈಯರ್ 2 ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಭರ್ಜರಿ ಪ್ರದರ್ಶನ ನೀಡಿದೆ. ಮೊದಲು ಬ್ಯಾಟ್ ಬೀಸಿದ ಆರ್‌ಆರ್ ತಂಡವು ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 6 ವಿಕೆಟ್ ನಷ್ಟಕ್ಕೆ 214 ರನ್‌ಗಳ ಬೃಹತ್ ಮೊತ್ತ ಪೇರಿಸಿದೆ. ಮತ್ತೊಂದೆಡೆ ವೈಭವ್ ತಂದೆಯ ಮಾತನ್ನ ಉಳಿಸಿಕೊಂಡು ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇದು ಹೇಗೆ ಅಂತೀರಾ ಇಲ್ಲಿದೆ ನೋಡಿ ಮಾಹಿತಿ.

ಐಪಿಎಲ್ 2026ರ ಕ್ವಾಲಿಫೈಯರ್-2 ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡ ಆರಂಭಲ್ಲೆ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾಗ ವೈಭವ್ ಸೂರ್ಯವಂಶಿ ಅವರು ತೋರಿದ ಪ್ರಬುದ್ಧತೆ ಕ್ರಿಕೆಟ್ ಲೋಕವನ್ನೇ ಬೆರಗುಗೊಳಿಸಿದೆ. ಕೇವಲ ರನ್ ಗಳಿಸುವುದಷ್ಟೇ ಅಲ್ಲ, ಸಂದರ್ಭಕ್ಕೆ ತಕ್ಕಂತೆ ಆಟ ಆಡಿ ತಮ್ಮ ತಂದೆಯ 'ತಂಡಕ್ಕಾಗಿ ಆಡು,' ಎಂಬ ಪಾಠವನ್ನು ಅವರು ಪಾಲಿಸಿದ್ದಾರೆ.

Vaibhav Sooryavanshi Selfless Knock vs GT RR Star Misses Century Again in IPL 2026 Qualifier 2

ದಾಖಲೆಗಳ ಸರದಾರನಾದ ವೈಭವ್

ಈ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಕೇವಲ 47 ಎಸೆತಗಳಲ್ಲಿ 96 ರನ್ ಸಿಡಿಸುವ ಮೂಲಕ ಹಲವು ಐತಿಹಾಸಿಕ ದಾಖಲೆಗಳನ್ನು ನಿರ್ಮಿಸಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಅತಿ ಕಡಿಮೆ ಎಸೆತಗಳಲ್ಲಿ 1,000 ರನ್ ಪೂರೈಸಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ವೈಭವ್ ಪಾತ್ರರಾಗಿದ್ದಾರೆ. ಕೇವಲ 440 ಎಸೆತಗಳಲ್ಲಿ ಈ ಮೈಲಿಗಲ್ಲು ತಲುಪುವ ಮೂಲಕ ಆಂಡ್ರೆ ರಸೆಲ್ (545 ಎಸೆತ) ಅವರ ದಾಖಲೆಯನ್ನು ಅಳಿಸಿಹಾಕಿದ್ದಾರೆ.

ಐಪಿಎಲ್ ಸೀಸನ್ ಒಂದರ ಪವರ್‌ಪ್ಲೇ ಹಂತದಲ್ಲೇ 500 ರನ್ ಚಚ್ಚಿದ ಮೊದಲ ಬ್ಯಾಟರ್ ಎಂಬ ವಿಶೇಷ ದಾಖಲೆಯನ್ನು ಈ ಬಾಲಕ ತಮ್ಮದಾಗಿಸಿಕೊಂಡಿದ್ದಾರೆ. ಗುಜರಾತ್ ಟೈಟಾನ್ಸ್ ಪರ ಬೌಲಿಂಗ್‌ನಲ್ಲಿ ಜೇಸನ್ ಹೋಲ್ಡರ್ ಮತ್ತು ಕಗಿಸೊ ರಬಾಡ ತಲಾ ಎರಡು ವಿಕೆಟ್ ಪಡೆದರು. ಇದಕ್ಕೂ ಮುನ್ನ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದರು.

ಮಿಂಚಿದ ವೈಭವ್ ಸೂರ್ಯವಂಶಿ

ರಾಜಸ್ಥಾನ್ ರಾಯಲ್ಸ್ ಪರ ಬ್ಯಾಟ್‌ ಬೀಸಿದ ವೈಭವ್ ಸೂರ್ಯವಂಶಿ ಅವರು ಜವಾಬ್ದಾರಿಯುತ, ಸ್ಫೋಟಕ ಬ್ಯಾಟಿಂಗ್ ಆಡಿ ಕೇವಲ 47 ಎಸೆತಗಳಲ್ಲಿ 8 ಬೌಂಡರಿ, 7 ಸಿಕ್ಸರ್‌ಗಳೊಂದಿಗೆ 96 ಸಿಡಿಸಿದರು. ಈ ಮೂಲಕ ತಂಡ ಬೃಹತ್ ಮೊತ್ತ ಕಲೆಹಾಕಲು ಪ್ರಮುಖ ಪಾತ್ರವಹಿಸಿದರು. ಉಳಿದಂತೆ ರವೀಂದ್ರ ಜಡೇಜಾ 45(35), ಡೊನೊವನ್ ಫೆರೆರಾ ಅಜೇಯ 38(11) ರನ್‌ಗಳ ಕೊಡುಗೆ ನೀಡಿದರು. ಅದರಲ್ಲೂ ಈ ಪಂದ್ಯದಲ್ಲಿ ಗಮನ ಸೆಳೆದಿದ್ದು ಅಂದ್ರೆ ವೈಭವ್ ಅವರು ತನ್ನ ಅಪ್ಪನ ಮಾತಿನಂತೆ ತಂಡಕ್ಕಾಗಿ ಜವಾಬ್ದಾರಿಯುತ ಆಟ ಆಡಿದ್ದು.

ಸಂಕಷ್ಟದಲ್ಲಿ ತಂಡಕ್ಕೆ ಆಸರೆಯಾದ ವೈಭವ್

ಇಂದಿನ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತ್ತು. ಇಂತಹ ಸಮಯದಲ್ಲಿ ಕೇವಲ ಸ್ಫೋಟಕ ಆಟಕ್ಕೆ ಮೊರೆಹೋಗದೆ ತಂಡದ ಜವಾಬ್ದಾರಿಯನ್ನು ವೈಭವ್ ಹೆಗಲಿಗೇರಿಸಿಕೊಂಡರು. ವೈಯಕ್ತಿಕ ರನ್‌ಗಳಿಗಾಗಿ ಆಡದೆ ತಂಡದ ಮೊತ್ತ ಹೆಚ್ಚಿಸುವತ್ತಲೇ ಗಮನ ಹರಿಸಿದರು. ಆದರೆ ಅವರು ಬಿಗ್ ಶಾಟ್‌ ಹೊಡೆಯಲು ಹೋಗಿ ವಿಕೆಟ್‌ ಒಪ್ಪಿಸಿದರು.

ಈ ಸೀಸನ್‌ನಲ್ಲಿ ಈಗಾಗಲೇ 97 ಮತ್ತು 93 ರನ್ ಗಳಿಸಿ ಶತಕದ ಅವಕಾಶ ಕಳೆದುಕೊಂಡಿದ್ದ ವೈಭವ್ ಅವರು ಇಂದಿನ ಪಂದ್ಯದಲ್ಲಿ 96 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದ್ದಾರೆ. ಈ ಮೂಲಕ ಈ ಆವೃತ್ತಿಯಲ್ಲಿ ಮೂರನೇ ಬಾರಿಗೆ ಶತಕದ ಸನಿಹಕ್ಕೆ ಬಂದು ಔಟಾಗಿದ್ದಾರೆ. ಈ ಮೂಲಕ ಅವರು ಕೇವಲ ತಂಡದ ಯಶಸ್ಸಿಗಾಗಿ ಶ್ರಮಿಸುತ್ತಿದ್ದಾರೆ ಹೊರತು ಅವರು ಸ್ವಾರ್ಥಕ್ಕಾಗಿ ಆಟ ಆಡುತ್ತಿಲ್ಲ ಎಂಬುದನ್ನು ಮತ್ತೊಮ್ಮ ಸಾಬೀಪಡಿಸಿದ್ದಾರೆ.

ಈ ಸೀಸನ್‌ನಲ್ಲಿ 3 ಬಾರಿ ಶತಕದ ಹತ್ತಿರ ಬಂದು ಔಟ್‌

* ಎಲಿಮಿನೇಟರ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ: 97 ರನ್ (29 ಎಸೆತ)

* ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ - 93 ರನ್ (38 ಎಸೆತ)

* ಕ್ವಾಲಿಫಯರ್-2 ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ - 96 ರನ್ (47 ಎಸೆತ)

ತಂದೆಯ ಪಾಠವನ್ನೇ ಉಸಿರಾಗಿಸಿಕೊಂಡ ಬಾಲಕ

'ನೀನು ಎಷ್ಟು ರನ್ ಗಳಿಸಿದರೂ ಅದರಿಂದ ತಂಡಕ್ಕೆ ಜಯ ಸಿಗದಿದ್ದರೆ ಆ ರನ್‌ಗಳಿಗೆ ಯಾವುದೇ ಬೆಲೆ ಇರುವುದಿಲ್ಲ. ಆ ರನ್‌ಗಳು ಕೇವಲ ನಿನ್ನ ವೈಯಕ್ತಿಕ ದಾಖಲೆಗೆ ಸೀಮಿತವಾಗುತ್ತವೆ ಹೊರತು ತಂಡಕ್ಕೆ ಪ್ರಯೋಜನವಿಲ್ಲ,' ನಮ್ಮ ತಂದೆ ಹೇಳಿದ್ದರು ಅಂತಾ ಸ್ವತಃ ವೈಭವ್ ಅವರೇ ಸಂದರ್ಶನವೊಂದರಲ್ಲಿ ಹೇಳಿದ್ದರು. ಇಂದಿನ ಪಂದ್ಯದಲ್ಲಿ ವೈಭವ್ ಈ ಮಾತನ್ನು ನಿಜ ಮಾಡಿದ್ದಾರೆ. ವೈಯಕ್ತಿಕ ಶತಕಕ್ಕಾಗಿ ಆಟವಾಡದೆ ತಂಡದ ರನ್ ವೇಗವನ್ನು ಹೆಚ್ಚಿಸಲು ಬಿಗ್ ಶಾಟ್‌ ಹೊಡೆಯಲು ಕೈಹಾಕಿ ವಿಕೆಟ್ ಒಪ್ಪಿಸಿದರು. ಶತಕ ಮಿಸ್ ಆದರೂ,ತಂಡವನ್ನು ಸುರಕ್ಷಿತ ಸ್ಥಾನಕ್ಕೆ ತಲುಪಿಸಿದ ತೃಪ್ತಿ ಅವರ ಮುಖದಲ್ಲಿತ್ತು.

ದಾಖಲೆಗಳ ಸರದಾರನ ನಿಸ್ವಾರ್ಥ ಆಟ

ಐಪಿಎಲ್ ಇತಿಹಾಸದಲ್ಲಿ ಕೇವಲ 440 ಎಸೆತಗಳಲ್ಲಿ 1000 ರನ್ ಪೂರೈಸಿ ಆಂಡ್ರೆ ರಸೆಲ್ ದಾಖಲೆ ಮುರಿದಿದ್ದಾರೆ. ಒಂದೇ ಸೀಸನ್‌ನ ಪವರ್‌ಪ್ಲೇನಲ್ಲಿ 500 ರನ್ ಗಳಿಸಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ. ಕ್ರಿಸ್ ಗೇಲ್ ಅವರ ದಾಖಲೆ ಅಳಿಸಿಹಾಕಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರನಾಗಿದ್ದಾರೆ. ವೈಭವ್ ಕೇವಲ ಒಬ್ಬ ಪ್ರತಿಭಾವಂತ ಬ್ಯಾಟರ್ ಮಾತ್ರವಲ್ಲ. ಒಟ್ಟಿನಲ್ಲಿ ಈ ವಂಡರ್ ಕಿಡ್‌ ತಂಡದ ಯಶಸ್ಸನ್ನು ತನ್ನ ವೈಯಕ್ತಿಕ ಸಾಧನೆಗಿಂತ ಮೇಲೆಂದು ಭಾವಿಸುವ ಅದ್ಭುತ ಪ್ರತಿಭೆ. 'ಕೇವಲ ರನ್‌ಗಳಿಗಾಗಿ ಆಡಬೇಡ, ತಂಡಕ್ಕಾಗಿ ಆಡು,' ಎಂಬ ತಂದೆಯ ಮಾತು ಇಂದು ವೈಭವ್ ಅವರನ್ನು ಐಪಿಎಲ್ 2026ರ ಅತಿದೊಡ್ಡ ರಿಯಲ್ ಹೀರೋ ಆಗಿ ಮಾಡಿದೆ ಅಂದರೆ ತಪ್ಪಾಗಲರಾದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+