IAS Officers Transfer: ರಾಜ್ಯ ಸರ್ಕಾರದಿಂದ ಮೂವರು ಐಎಎಸ್‌ ಅಧಿಕಾರಿಗಳ ವರ್ಗಾವಣೆ

IAS Officers Transfer: ರಾಜ್ಯ ಸರ್ಕಾರ ಆಗಾಗ ಆಡಳಿತ ಯಂತ್ರ ಸರ್ಜರಿ ಮಾಡುತ್ತಲಿರುತ್ತದೆ. ಹಾಗೆಯೇ ಇದೀಗ ರಾಜ್ಯದಲ್ಲಿ ಮೂವರು ಪ್ರಮುಖ ಐಎಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಹಾಗಾದ್ರೆ ಯಾರನ್ನು ಎಲ್ಲಿಗೆ ವರ್ಗಾಹಿಸಲಾಗಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಸರ್ಕಾರ ತಕ್ಷಣವೇ ಜಾರಿಗೆ ಬರುವಂತೆ ಈ ಆದೇಶ ಹೊರಡಿಸಿದೆ. ಐಎಎಸ್‌ ಅಧಿಕಾರಿಗಳಾದ ಸುಬೋಧ್ ಯಾದವ್, ಖುಷ್ಬೂ ಜಿ. ಚೌಧರಿ, ಪ್ರೀತಿ ಗೆಹ್ಲೋಟ್ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

3 Senior IAS Officers Transfer by Karnataka Government on May 28 2026 Know Complete details

ಮೂವರು ಐಎಎಸ್‌ ಅಧಿಕಾರಿಗಳ ವರ್ಗಾವಣೆ

* ಸುಬೋಧ್ ಯಾದವ್: ಇವರು ಈ ಹಿಂದೆ ಬೆಂಗಳೂರು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಈಗ ಇವರನ್ನು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ಇದರ ಜೊತೆಗೆ ಡಿಪಿಎಆರ್‌ ಪ್ರಧಾನ ಕಾರ್ಯದರ್ಶಿ ಹುದ್ದೆಯ ಹೆಚ್ಚುವರಿ ಹೊಣೆಗಾರಿಕೆಯನ್ನೂ ನೀಡಲಾಗಿದೆ.

* ಖುಷ್ಬೂ ಜಿ. ಚೌಧರಿ: ಬೆಂಗಳೂರಿನ ಶಿಕ್ಷಣ ಇಲಾಖೆಯ ಕಾರ್ಯದರ್ಶಿಯಾಗಿದ್ದ ಇವರನ್ನು ಸರ್ಕಾರ ಈಗ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ನಿರ್ದೇಶಕರನ್ನಾಗಿ ಹಾಗೂ ಕೈಗಾರಿಕಾ ಅಭಿವೃದ್ಧಿ ಆಯುಕ್ತರನ್ನಾಗಿ ವರ್ಗಾವಣೆ ಮಾಡಲಾಗಿದೆ. ಇದರ ಜೊತೆಗೆ ಜೊತೆಗೆ ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಹಾಗೂ ಕೆಎಸ್‌ಐಐಡಿಸಿ ವ್ಯವಸ್ಥಾಪಕ ನಿರ್ದೇಶಕ ಹುದ್ದೆಯ ಹೆಚ್ಚುವರಿ ಹೊಣೆಗಾರಿಕೆಯನ್ನೂ ನೀಡಲಾಗಿದೆ.

* ಪ್ರೀತಿ ಗೆಹ್ಲೋಟ್: ಸ್ಥಳ ನಿಯುಕ್ತಿಯ ನಿರೀಕ್ಷೆಯಲ್ಲಿದ್ದ ಐಎಎಸ್ ಅಧಿಕಾರಿ ಪ್ರೀತಿ ಗೆಹ್ಲೋಟ್ ಅವರನ್ನು ಆರ್ಥಿಕ ನೀತಿ ಸಂಸ್ಥೆಯ ಹೆಚ್ಚುವರಿ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ.

ವರ್ಗಾವಣೆಯಾದ ಐಎಎಸ್‌ ಅಧಿಕಾರಿಗಳು

* ಸುಬೋಧ್ ಯಾದವ್
* ಖುಷ್ಬೂ ಜಿ. ಚೌಧರಿ
* ಪ್ರೀತಿ ಗೆಹ್ಲೋಟ್

ಅಷ್ಟೇ ಅಲ್ಲದೆ ಕಂದಾಯ ಇಲಾಖೆಯಲ್ಲಿ ಬೃಹತ್ ಬದಲಾವಣೆ ಮಾಡಲಾಗಿದೆ. ರಾಜ್ಯದ ವಿವಿಧ ತಾಲೂಕುಗಳ 27 ತಹಶೀಲ್ದಾರ್‌ಗಳಿಗೆ ಹೊಸ ಜವಾಬ್ದಾರಿ ನೀಡಲಾಗಿದೆ. ಈ ಆದೇಶದಿಂದ ಸ್ಥಳನಿಯುಕ್ತಿಗೆ ಕಾಯುತ್ತಿರುವ ಅಧಿಕಾರಿಗಳು ಮುಂದಿನ ಸ್ಥಳನಿಯುಕ್ತಿಗಾಗಿ ಕಂದಾಯ ಇಲಾಖೆ ಶಾಖೆಯಲ್ಲಿ ವರದಿ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ವರ್ಗಾವಣೆಗೊಂಡ ಅಧಿಕಾರಿಗಳು ತಕ್ಷಣವೇ ಹೊಸ ಹುದ್ದೆಯ ಅಧಿಕಾರ ವಹಿಸಿಕೊಂಡು ಸಿಟಿಸಿ ವರದಿಯನ್ನು ಕಡ್ಡಾಯವಾಗಿ ಸರ್ಕಾರಕ್ಕೆ ಇ-ಮೇಲ್ ಮೂಲಕ ಕಳುಹಿಸುವಂತೆ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ ಎಂದು ವಿಜಯ ಕರ್ನಾಟಕ ವರದಿ ಮಾಡಿದೆ.

ತಹಶೀಲ್ದಾರ್‌ಗಳ ವರ್ಗಾವಣೆ

* ಪೃಥ್ವಿ ಸಾನಿಕಂ: ಇವರನ್ನು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಿಂದ ಮುಲ್ಕಿ ತಾಲೂಕಿಗೆ ವರ್ಗಾವಣೆ ಮಾಡಲಾಗಿದೆ.

* ಹಣಮಂತ ಶಿರಹಟ್ಟಿ: ಬೈಲಹೊಂಗಲ ತಾಲೂಕಿನಿಂದ ಬೆಳಗಾವಿಗೆ ವರ್ಗಾವಣೆ ಮಾಡಲಾಗಿದೆ.

* ಸಚ್ಚಿದಾನಂದ ಸತ್ಯಪ್ಪ ಕುಚನೂರ: ಧಾರವಾಡ

* ಎಂ.ಆರ್. ಕುಲಕರ್ಣಿ: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನಿಂದ ಯಲ್ಲಾಪುರಕ್ಕೆ ವರ್ಗಾವಣೆ ಮಾಡಲಾಗಿದೆ.

* ಡಾ ರೋಹಿಣಿ ವಿಜಿ: ಬೆಂಗಳೂರು ಉತ್ತರ ತಾಲೂಕು ವಿಶೇಷ ತಹಶೀಲ್ದಾರ್ ಆಗಿ ನೇಮಕ.

* ಎಸ್.ಎ. ಪ್ರಸಾದ್: ಉಡುಪಿಯ ಹೆಬ್ರಿ ತಾಲೂಕಿನಿಂದ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿಗೆ ವರ್ಗಾಹಿಸಲಾಗಿದೆ.

* ಪ್ರಭಾಕರ ಖಜೂರೆ: ಕಡಬ ತಾಲೂಕಿನಿಂದ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿಗೆ ವರ್ಗಾಹಿಸಲಾಗಿದೆ.

* ಡಾ.ಪ್ರತಿಭಾ ಆರ್‌: ಬೆಂಗಳೂರು ಜಿಲ್ಲಾಧಿಕಾರಿಗಳ ಕಚೇರಿಯಿಂದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿಗೆ ವರ್ಗಾಹಿಸಲಾಗಿದೆ.

* ರವಿರಾಜ್ ದೀಕ್ಷಿತ್: ಪುರಸಭಾ ತಹಶೀಲ್ದಾರ್, ಜಿಲ್ಲಾ ನಗರಾಭಿವೃದ್ಧಿ ಕೋಶ, ಕಾರವಾರ.

* ಪ್ರಕಾಶ್ ಗಾಯಕವಾಡ: ಬಾಗಲಕೋಟೆಯಿಂದ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿಗೆ ವರ್ಗಾವಣೆ.

* ಸದಾಶಿವ ಸಂಭಾಜಿ ಮಕ್ಕೋಜಿ: ಬೆಳಗಾವಿಯಿಂದ ಬೈಲಹೊಂಗಲ ತಾಲೂಕಿಗೆ ವರ್ಗಾವಣೆ.

* ಸೈಯದ್ ಕಲಿಮುಲ್ಲಾ: ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನಿಂದ ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲೂಕಿಗೆ ವರ್ಗಾವಣೆ.

* ನಾಗೇಂದ್ರ ಕೋಳಶೆಟ್ಟಿ: ಭಟ್ಕಳ ತಾಲೂಕಿನಿಂದ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿಗೆ ವರ್ಗಾವಣೆ.

* ಜಗದೀಶ್ ಎಸ್.ಚೌರ್: ರಾಯಚೂರಿನಿಂದ ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿಗೆ ವರ್ಗಾವಣೆ.

* ರಾಜೇಶ್ ಕುಮಾರ್ ಸಿ: ಹೊನ್ನಾಳಿ ತಾಲೂಕಿನಿಂದ ದಾವಣಗೆರೆಗೆ ವರ್ಗಾವಣೆ.

* ಗುರುರಾಜ್ ಎಂ ಭಲವಾದಿ: ಹರಪನಹಳ್ಳಿಯಿಂದ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿಗೆ ವರ್ಗಾವಣೆ.

* ಶೀತಲ್ ಟಿ.ಎಸ್: ಬೆಂಗಳೂರು ಪ್ರಾದೇಶಿಕ ಆಯುಕ್ತರ ಕಚೇರಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿಗೆ ವರ್ಗಾವಣೆ.

* ಎಂ.ಆರ್.ನಾಗರಾಜು: ಬೆಂಗಳೂರು ಪ್ರಾದೇಶಿಕ ಆಯುಕ್ತರ ಕಚೇರಿಯಿಂದ ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ವಿರೋಧ ಪಕ್ಷದ ನಾಯಕರ ಆಪ್ತ ಶಾಖೆಗೆ ವರ್ಗಾವಣೆ.

* ವಿ. ಭಾಗ್ಯ: ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ಜಿಲ್ಲೆಗೆ ವರ್ಗಾವಣೆ.

* ಚಂದ್ರಶೇಖರ ಶಂಬಣ್ಣ ಗಾಳಿ: ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕು.

* ವೆಂಕಟೇಶ: ಬೆಂಗಳೂರಿನ ಕಿದ್ವಾಯಿ ಮೆಮೋರಿಯಲ್ ಇನ್ಸ್ಟಿಟ್ಯೂಟ್‌ ಆಡಳಿತಾಧಿಕಾರಿ ಹುದ್ದೆಯಿಂದ ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಚೇರಿ ಸಹಾಯಕರಾಗಿ ನೇಮಕ.

* ಎಚ್. ಶ್ರೀನಿವಾಸ: ಮಧುಗಿರಿಯಿಂದ ಕೋಲಾರಕ್ಕೆ ವರ್ಗಾವಣೆ.

* ಪ್ರದೀಪ್ ದೇವಗಿರಿ: ತಾಳಿಕೋಟೆ ತಾಲೂಕಿನಿಂದ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿಗೆ ವರ್ಗಾವಣೆ.

* ಕಲಾವತಿ ಎಂ: ಬೆಂಗಳೂರು ಗೇಲ್ ಇಂಡಿಯಾ ಲಿಮಿಟೆಡ್‌ನಿಂದ ಬೆಂಗಳೂರು ಉತ್ತರ ಉಪ ವಿಭಾಗದ ಉಪ ವಿಭಾಗಾಧಿಕಾರಿಗಳ ಕಚೇರಿಗೆ ವರ್ಗಾವಣೆ.

* ಕೃಷ್ಣಮೂರ್ತಿ ಎಸ್: ಹೊಸಕೋಟೆಯಿಂದ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ವಿಶೇಷ ತಹಶೀಲ್ದಾರ್ ಆಗಿ ವರ್ಗಾವಣೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+