Vaibhav Sooryavanshi: ತಂದೆಯ ಆ ಪಾಠ ನೆನೆದ ವೈಭವ್ ಸೂರ್ಯವಂಶಿ, ಭಾರಿ ವೈರಲ್

Vaibhav Sooryavanshi: ಐಪಿಎಲ್ 2026ರ ಆವೃತ್ತಿಯಲ್ಲಿ ಅದ್ಭುತ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆದಿರುವ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಕೇವಲ ರನ್ ಮಳೆಯಿಂದಷ್ಟೇ ಅಲ್ಲದೆ ತಮ್ಮ ಪ್ರೌಢಿಮೆಯ ಮಾತುಗಳಿಂದಲೂ ಸುದ್ದಿಯಾಗಿದ್ದಾರೆ. ಇದೀಗ ಅವರು ನೀಡಿರುವ ಹೇಳಿಕೆಯೊಂದು ಸಖತ್ ಸದ್ದು ಮಾಡುತ್ತಿದೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಈ ಬಾರಿಯ ಸೀಸನ್‌ನಲ್ಲಿ ವೈಭವ್ ಈಗಾಗಲೇ ಎರಡು ಬಾರಿ ಶತಕದ ಹತ್ತಿರ ಬಂದು (97 ಮತ್ತು 93 ರನ್) ಔಟ್ ಆಗಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕೇವಲ 29 ಎಸೆತಗಳಲ್ಲಿ 97 ರನ್ ಸಿಡಿಸಿದ್ದ ಅವರು, ಕ್ರಿಸ್ ಗೇಲ್ ಅವರ ಅತಿವೇಗದ ಶತಕದ ದಾಖಲೆ ಮುರಿಯುವ ಅವಕಾಶ ಹೊಂದಿದ್ದರು. ಆದರೆ ವೈಯಕ್ತಿಕ ದಾಖಲೆಗಾಗಿ ಆಡದೆ ತಂಡಕ್ಕಾಗಿ ದೊಡ್ಡ ಹೊಡೆತಕ್ಕೆ ಕೈಹಾಕಿ ವಿಕೆಟ್ ಒಪ್ಪಿಸಿದ್ದರು.

Vaibhav Sooryavanshi Reveals Father s Advice After Missing IPL 2026 Century Against SRH Know detail

ತಂದೆಯ ಪಾಠ ನೆನೆದ ವೈಭವ್ ಸೂರ್ಯವಂಶಿ

ಈ ಬಗ್ಗೆ ಮಾತನಾಡಿರುವ ವೈಭವ್ ಸೂರ್ಯವಂಶಿ ಅವರು, ತಮ್ಮ ತಂದೆ ಬಾಲ್ಯದಲ್ಲಿ ಹೇಳಿಕೊಟ್ಟ ಮೌಲ್ಯಯುತ ಪಾಠದ ಬಗ್ಗೆ ಮಹತ್ವದ ಮಾಹಿತಿ ಬಿಚ್ಚಿಟ್ಟಿದ್ದಾರೆ. 'ನಾನು ನೂರು, ಇನ್ನೂರು ಅಥವಾ ಮುನ್ನೂರು ರನ್ ಗಳಿಸಿದರೂ ಅದರಿಂದ ತಂಡಕ್ಕೆ ಜಯ ಸಿಗದಿದ್ದರೆ ಆ ರನ್‌ಗಳಿಗೆ ಯಾವುದೇ ಬೆಲೆ ಇಲ್ಲ ಎಂದು ನನ್ನ ತಂದೆ ಬಾಲ್ಯದಿಂದಲೂ ಹೇಳುತ್ತಿದ್ದರು. ಆ ರನ್‌ಗಳು ಕೇವಲ ನನ್ನ ವೈಯಕ್ತಿಕ ದಾಖಲೆಗೆ ಸೀಮಿತವಾಗುತ್ತವೆ ಹೊರತು ತಂಡಕ್ಕೆ ಅದರಿಂದ ಪ್ರಯೋಜನವಿಲ್ಲ, ಎಂದು ಹೇಳಿದರು.

ತಂಡದ ಯಶಸ್ಸಿನ ಬಗ್ಗೆ ವೈಭವ್ ಹೇಳಿದ್ದೇನು?

'ಕ್ರಿಕೆಟ್ ಎಂಬುದು ಅಂತಿಮವಾಗಿ ತಂಡದ ಆಟ. ನಾನು ಶತಕ ಬಾರಿಸದಿದ್ದರೂ 80 ರನ್ ಗಳಿಸಿದಾಗ ತಂಡ ಗೆದ್ದರೆ, ಆ 80 ರನ್ ನನಗೆ ಶತಕಕ್ಕಿಂತ ಹೆಚ್ಚು ಖುಷಿ ನೀಡುತ್ತದೆ,' ಎಂದು ವೈಭವ್ ಸೂರ್ಯವಂಶಿ ಅವರು ತಿಳಿಸಿದ್ದಾರೆ. ತಂಡವು ಟೂರ್ನಮೆಂಟ್‌ನಲ್ಲಿ ಮುಂದೆ ಹೋದಂತೆ ತನಗೆ ಶತಕ ಗಳಿಸಲು ಮತ್ತು ದಾಖಲೆಗಳನ್ನು ಮುರಿಯಲು ಮತ್ತಷ್ಟು ಅವಕಾಶಗಳು ಸಿಗುತ್ತವೆ ಎಂಬುದು ಈ ಬಾಲಕನ ನಂಬಿಕೆಯಾಗಿದೆ.

ವೈಭವ್ ನಡೆಗೆ ಮೆಚ್ಚುಗೆಗಳ ಸುರಿಮಳೆ

ವೈಭವ್ ಸೂರ್ಯವಂಶಿ ಪ್ರಸ್ತುತ 680 ರನ್‌ಗಳೊಂದಿಗೆ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. 15 ಪಂದ್ಯಗಳಲ್ಲಿ ಅವರು ನೀಡಿರುವ ಸ್ಫೋಟಕ ಪ್ರದರ್ಶನವು ಅವರನ್ನು ಐಪಿಎಲ್ 2026ರ ಅತಿದೊಡ್ಡ ಸೂಪರ್‌ ಸ್ಟಾರ್ ಆಗಿ ರೂಪಿಸಿದೆ. ವೈಯಕ್ತಿಕ ಮೈಲಿಗಲ್ಲುಗಳಿಗಿಂತ ತಂಡದ ಯಶಸ್ಸಿಗೆ ಆದ್ಯತೆ ನೀಡುವ ಇವರ ಈ ಗುಣಕ್ಕೆ ಈಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+