Vaibhav Sooryavanshi: ನನ್ನಂತವರಿಗೆ ಇದು ಹೆಮ್ಮೆಯ ವಿಚಾರ.. ಕ್ರಿಕೆಟ್‌ ದೇವರ ನಡೆಗೆ ವೈಭವ್ ಫಿದಾ

Vaibhav Sooryavanshi: ಐಪಿಎಲ್‌ 2026ರ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಯೂನಿವರ್ಸ್ ಬೇಬಿ ಬಾಯ್ ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟದಿಂದ ಎಸ್‌ಆರ್‌ಎಚ್ ವಿರುದ್ಧ ಭರ್ಜರಿ ಜಯ ದಾಖಲಿಸಿತು. ಈ ಸೋಲಿನೊಂದಿಗೆ ಆರ್‌ಆರ್ ಈ ಬಾರಿಯ ಟೂರ್ನಿಯಿಂದಲೇ ಹೊರಬಿದ್ದರೆ, ಆರ್‌ಆರ್ ಕ್ವಾಲಿಫೈಯರ್‌ಗೆ ಎಂಟ್ರಿ ಕೊಟ್ಟಿತು. ಇದರ ಬೆನ್ನಲ್ಲೇ ತಮಗೆ ಮೆಚ್ಚುಗೆ ಸೂಚಿಸಿದ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್‌ ಬಗ್ಗೆ ವೈಭವ್ ಮಹತ್ವದ ಹೇಳಿಕೆ ನೀಡಿ ಗಮನ ಸೆಳೆದಿದ್ದಾರೆ.

ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಅದ್ಭುತ ಬ್ಯಾಟಿಂಗ್ ಶೈಲಿಯ ಮೂಲಕ ಕ್ರಿಕೆಟ್ ಅಭಿಮಾನಿಗಳನ್ನು ಬೆರಗುಗೊಳಿಸುವುದನ್ನು ಮುಂದುವರಿಸಿದ್ದಾರೆ. ಕೇವಲ 15 ವರ್ಷದ ಈ ಎಡಗೈ ಬ್ಯಾಟರ್ ಅಂತಾರಾಷ್ಟ್ರೀಯ ಮಟ್ಟದ ಶ್ರೇಷ್ಠ ಬೌಲರ್‌ಗಳನ್ನು ಅತಿ ಸುಲಭವಾಗಿ ಎದುರಿಸಿ ರನ್ ಮಳೆ ಹರಿಸುತ್ತಿದ್ದಾರೆ.

Vaibhav Sooryavanshi Reacts To God of Cricket Sachin Tendulkar s Praise After IPL 2026 Heroics

ಘಟಾನುಘಟಿ ಬೌಲರ್‌ಗಳಿಗೆ ನಡುಕ ಹುಟ್ಟಿಸಿದ ವೈಭವ್

ಇತ್ತೀಚೆಗಷ್ಟೇ ನಡೆದ ಸನ್‌ರೈಸರ್ಸ್‌ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಎಲಿಮಿನೇಟರ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಅನುಭವಿ ವೇಗಿ ಪ್ಯಾಟ್ ಕಮಿನ್ಸ್ ಸೇರಿದಂತೆ ಎಸ್‌ಆರ್‌ಎಚ್‌ನ ಘಟಾನುಘಟಿ ಬೌಲರ್‌ಗಳು ಸೂರ್ಯವಂಶಿ ಆಟಕ್ಕೆ ತತ್ತರಿಸಿದರು. ಈ ಪಂದ್ಯದಲ್ಲಿ ಕೇವಲ 29 ಎಸೆತಗಳಲ್ಲಿ 5 ಬೌಂಡರಿ ಹಾಗೂ 12 ಸಿಕ್ಸರ್‌ಗಳೊಂದಿಗೆ 97 ರನ್ ಚಚ್ಚಿದ ಈ ಬಾಲಕ ಕ್ರಿಕೆಟ್ ದಿಗ್ಗಜರ ಗಮನ ಸೆಳೆದರು. ಅಷ್ಟೇ ಅಲ್ಲದೆ ಕ್ರಿಕೆಟ್ ಪ್ರೇಮಿಗಳಿಗೆ ಮನರಂಜನೆಯನ್ನು ನೀಡಿದರು.

ವೈಭವ್ ಆಟ ಮೆಚ್ಚಿದ ಕ್ರಿಕೆಟ್ ದೇವರು

ವೈಭವ್ ಅವರ ಈ ಅಮೋಘ ಆಟಕ್ಕೆ ಮನಸೋತ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಕೂಡ ಪ್ರಶಂಸಿದ್ದಾರೆ. 'ವೈಭವ್ ಸೂರ್ಯವಂಶಿ ಬ್ಯಾಟ್ ಬೀಸುವ ರೀತಿ ಅದ್ಭುತವಾಗಿದೆ. ಅದಕ್ಕಿಂತ ಹೆಚ್ಚಾಗಿ ಕಾಲುಗಳತ್ತ ಬರುವ ಎಸೆತಗಳಿಗೆ ಜಾಗ ಮಾಡಿಕೊಳ್ಳಲು ಅವರು ತಮ್ಮ ಮುಂಗಾಲನ್ನು ಅಷ್ಟು ಅಚ್ಚುಕಟ್ಟಾಗಿ ಬಳಸುವ ರೀತಿ ನಿಜಕ್ಕೂ ಅದ್ಭುತವಾಗಿದೆ. ಈ ಮುಕ್ತ ಬ್ಯಾಟಿಂಗ್ ಶೈಲಿಯೇ ಅವರು ಅಬ್ಬರದ ಆಟವಾಡಲು ನೆರವಾಗುತ್ತಿದೆ. ಅವರ ಆ ಇನ್ನಿಂಗ್ಸ್ ಅದ್ಭುತವಾಗಿತ್ತು,' ಎಂದು ಸಚಿನ್ ತೆಂಡೂಲ್ಕರ್ ತಮ್ಮ ಟ್ವಿಟರ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಕ್ರಿಕೆಟ್ ದೇವರ ಟ್ವೀಟ್‌ ಬಗ್ಗೆ ವಂಡರ್ ಕಿಡ್‌ ಹೇಳಿದ್ದೇನು?

ಪಂದ್ಯದ ನಂತರ ಸಚಿನ್ ಅವರ ಈ ಪ್ರತಿಕ್ರಿಯೆಯ ಬಗ್ಗೆ ವೈಭವ್ ಸೂರ್ಯವಂಶಿ ಅವರನ್ನು ಕೇಳಿದಾಗ, ಯುವ ಬ್ಯಾಟರ್ 'ಇದು ನಮಗೆ ಹೆಮ್ಮೆಯ ವಿಷಯ, ನಿಜಕ್ಕೂ ನನಗೆ ತುಂಬಾ ಸಂತೋಷವಾಗುತ್ತಿದೆ. ಹೆಚ್ಚಿನ ಸ್ಫೂರ್ತಿ ನೀಡುತ್ತದೆ. ಖಂಡಿತವಾಗಿಯೂ ಅವರು ಕ್ರಿಕೆಟ್ ಲೋಕದ ದೇವರು ಎಂಬುದು ಎಲ್ಲರಿಗೂ ಗೊತ್ತು. ಅವರಂತಹ ದಿಗ್ಗಜರು ನಮಗಾಗಿ ಇಂತಹ ಟ್ವೀಟ್ ಮಾಡಿದ್ದಾರೆ ಎಂದರೆ ಅದು ನಮಗೆ ದೊಡ್ಡ ವಿಷಯ. ಹಾಗಾಗಿ ಇದು ಹೆಮ್ಮೆಯ ಸಂಗತಿಯಾಗಿದೆ,' ಎಂದು ಹೇಳಿದ್ಧಾರೆ.

ಎಸ್‌ಆರ್‌ಎಚ್‌ ವಿರುದ್ಧ ಆರ್‌ಆರ್ ಭರ್ಜರಿ ಜಯ

ಬುಧವಾರ ಮುಲ್ಲನ್‌ಪುರದಲ್ಲಿ ನಡೆದ ಐಪಿಎಲ್ 2026ರ ಎಲಿಮಿನೇಟರ್ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ರಾಜಸ್ಥಾನ್ ರಾಯಲ್ಸ್ ತಂಡವು ಸನ್‌ರೈಸರ್ಸ್‌ ಹೈದರಾಬಾದ್ ವಿರುದ್ಧ 47 ರನ್‌ಗಳ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನ ಮೂಲಕ ಆರ್‌ಆರ್ ತಂಡವು ಕ್ವಾಲಿಫೈಯರ್ 2ಕ್ಕೆ ಲಗ್ಗೆ ಇಟ್ಟಿದ್ದು, ಅಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಗುಜರಾತ್ ಟೈಟಾನ್ಸ್ ತಂಡವು ಕ್ವಾಲಿಫೈಯರ್ 1ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 92 ರನ್‌ಗಳಿಂದ ಸೋಲನುಭವಿಸಿತ್ತು.

ಶುಕ್ರವಾರ ಕ್ವಾಲಿಫೈಯರ್ 2 ಪಂದ್ಯ ನಡೆಯುತ್ತಿದ್ದು, ಈ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್‌ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿವೆ. ಇದರಲ್ಲಿ ಗೆದ್ದ ತಂಡವು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮೇ 31ರಂದು ನಡೆಯುವ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಆಡಲಿದೆ. ಇನ್ನೂ ಇಂದಿನ ಪಂದ್ಯದಲ್ಲಿ ಎಲ್ಲರ ಕಣ್ಣು ಸಾಮಾನ್ಯವಾಗಿ 15 ವರ್ಷದ ವೈಭವ್ ಸೂರ್ಯವಂಶಿ ಅವರ ಮೇಲೆ ಇರುತ್ತಾದೆ. ಅವರ ಆಕ್ರಮಣಕಾರಿ ಆಟ ನೋಡಲಿಕ್ಕಾಗಿಯೇ ಕ್ರಿಕೆಟ್‌ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+