FIFA 2026: ಕೇಪ್ ವರ್ಡ್ ಗೋಲ್‌ಕೀಪರ್ ಕಣ್ಣೀರಿಗೆ ಕರಗಿದ ಅಮೆರಿಕ, ತಾಯಿಗೆ ಸಿಕ್ತು ಮಗನ ಆಟ ನೋಡುವ ಭಾಗ್ಯ

FIFA World Cup 2026: ಫಿಫಾ ವಿಶ್ವಕಪ್ 2026ರ ಟೂರ್ನಿಯಲ್ಲಿ ಬಲಿಷ್ಠ ಸ್ಪೇನ್ ತಂಡದ ವಿರುದ್ಧ ಅದ್ಭುತ ಪ್ರದರ್ಶನ ನೀಡಿ ಪಂದ್ಯವನ್ನು ಡ್ರಾ ಮಾಡಿದ್ದ ಕೇಪ್ ವರ್ಡ್ ತಂಡದ ಗೋಲ್‌ಕೀಪರ್ ವೊಜಿನ್ಹಾ ಅವರ ತಾಯಿಗೆ ಕೊನೆಗೂ ಅಮೆರಿಕ ತಲುಪಲು ವೀಸಾ ಮಂಜೂರಾಗಿದೆ. ಅಮೆರಿಕದ ಉನ್ನತ ರಾಜತಾಂತ್ರಿಕ ಅಧಿಕಾರಿಗಳು ಮತ್ತು ರಾಜಕಾರಣಿಗಳ ವಿಶೇಷ ಮನವಿ ನಂತರ, ಮಾನವೀಯತೆಯ ಆಧಾರದ ಮೇಲೆ ವೀಸಾ ಶುಲ್ಕವನ್ನು ಮನ್ನಾ ಮಾಡಿ ಈ ತಾಯಿ-ಮಗನ ಸೇರುವಿಕೆಯ ಆಸೆಯನ್ನು ನನಸು ಮಾಡಲಾಗಿದೆ.

ವಿಶ್ವಕಪ್ ಇತಿಹಾಸದಲ್ಲೇ ಅತ್ಯಂತ ಸಣ್ಣ ರಾಷ್ಟ್ರಗಳಲ್ಲಿ ಒಂದಾದ ಕೇಪ್ ವರ್ಡ್ ಮಾಜಿ ವಿಶ್ವ ಚಾಂಪಿಯನ್ ಸ್ಪೇನ್ ತಂಡವನ್ನು 0-0 ಗೋಲುಗಳಿಂದ ತಡೆದು ಇತಿಹಾಸ ನಿರ್ಮಿಸಿತ್ತು. ಈ ಪಂದ್ಯದಲ್ಲಿ 40 ವರ್ಷದ ಹಿರಿಯ ಗೋಲ್‌ಕೀಪರ್ ವೊಜಿನ್ಹಾ ಬರೋಬ್ಬರಿ 7 ಅದ್ಭುತ ಗೋಲ್ ಸೇವ್‌ಗಳನ್ನು ಮಾಡುವ ಮೂಲಕ ಇಡೀ ವಿಶ್ವದ ಗಮನ ಸೆಳೆದಿದ್ದರು. ಅಷ್ಟೇ ಅಲ್ಲದೆ 'ಪ್ಲೇಯರ್ ಆಫ್ ದಿ ಮ್ಯಾಚ್' ಪ್ರಶಸ್ತಿಗೂ ಭಾಜನರಾಗಿದ್ದರು.

FIFA World Cup 2026 Vozinha s Mother Gets US Visa After Emotional Appeal Viral on Social media

ಭಾವುಕರಾಗಿ ಕಣ್ಣೀರಿಟ್ಟಿದ್ದ ವೊಜಿನ್ಹಾ

ಆದರೆ ಪಂದ್ಯ ಮುಗಿದ ನಂತರ ವೊಜಿನ್ಹಾ ಸಂಭ್ರಮಿಸುವ ಬದಲು ಮೈದಾನದಲ್ಲೇ ಭಾವುಕರಾಗಿ ಕಣ್ಣೀರು ಹಾಕಿದ್ದರು. ಅದಕ್ಕೆ ಕಾರಣ ಅವರ ವೈಯಕ್ತಿಕ ನೋವಾಗಿತ್ತು. ತಮಗೆ ವೃತ್ತಿಜೀವನದಲ್ಲಿ ಸಿಕ್ಕ ಅತ್ಯಂತ ದೊಡ್ಡ ಯಶಸ್ಸನ್ನು ಕಣ್ಣಾರೆ ನೋಡಲು ತಮ್ಮ ತಾಯಿ ಮೈದಾನದಲ್ಲಿ ಇರಲಿಲ್ಲ ಎಂಬುದು ಅವರ ಬೇಸರಕ್ಕೆ ಕಾರಣವಾಗಿತ್ತು.

ಅಮೆರಿಕದ ಕಠಿಣ ವೀಸಾ ನಿಯಮಗಳು ಹಾಗೂ ಪ್ರಕ್ರಿಯೆಗೆ ಬೇಕಾಗಿದ್ದ ಭಾರಿ ಮೊತ್ತದ ಭದ್ರತಾ ಶುಲ್ಕದ ಸಮಸ್ಯೆಯಿಂದಾಗಿ ಅವರ ತಾಯಿಗೆ ಸರಿಯಾದ ಸಮಯಕ್ಕೆ ಅಮೆರಿಕಕ್ಕೆ ಪ್ರಯಾಣಿಸಲು ಸಾಧ್ಯವಾಗಿರಲಿಲ್ಲ. ವೊಜಿನ್ಹಾ ಪಂದ್ಯ ಮುಗಿದ ನಂತರ ಜಾಗತಿಕ ಮಾಧ್ಯಮಗಳ ಮುಂದೆ ತಮ್ಮ ಈ ಅಸಹಾಯಕತೆಯನ್ನು ಮತ್ತು ತಾಯಿಯ ಮೇಲಿನ ಪ್ರೀತಿಯನ್ನು ಹಂಚಿಕೊಂಡಿದ್ದರು.

ಕೇಪ್ ವರ್ಡ್ ಗೋಲ್‌ಕೀಪರ್ ಅವರ ಈ ಭಾವುಕ ಕಥೆ ದೊಡ್ಡ ಮಟ್ಟದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ಡೆಮಾಕ್ರಟಿಕ್ ಪಕ್ಷದ ನಾಯಕ ಹಕೀಮ್ ಜೆಫ್ರಿಸ್ ಅವರು ತಕ್ಷಣವೇ ಕಾರ್ಯಪ್ರವೃತ್ತರಾದರು.

ಮಹತ್ವದ ಮಾಹಿತಿ ಹಂಚಿಕೊಂಡ ಜೆಫ್ರಿಸ್

ಈ ಕುರಿತು ಅಧಿಕೃತ ಮಾಹಿತಿ ಹಂಚಿಕೊಂಡ ಜೆಫ್ರಿಸ್, 'ಯಾವೊಬ್ಬ ತಾಯಿಯೂ ತನ್ನ ಮಗ ಅಂರಾರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕಾಗಿ ಇತಿಹಾಸ ಸೃಷ್ಟಿಸುವುದನ್ನು ನೋಡುವ ಸುಂದರ ಅವಕಾಶದಿಂದ ವಂಚಿತಳಾಗಬಾರದು. ಈ ವಿಷಯ ನನ್ನ ಗಮನಕ್ಕೆ ಬರುತ್ತಿದ್ದಂತೆ ನಾನು ತಕ್ಷಣವೇ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ ಅವರೊಂದಿಗೆ ಮಾತುಕತೆ ನಡೆಸಿದೆ. ವೊಜಿನ್ಹಾ ಅವರ ತಾಯಿ ಮುಂದಿನ ಪಂದ್ಯದ ವೇಳೆಗೆ ಅಮೆರಿಕ ತಲುಪಲು ಅನುಕೂಲವಾಗುವಂತೆ ಎಲ್ಲ ಅಗತ್ಯ ಕ್ರಮಗಳನ್ನು ಜಾರಿಗೆ ತರಲು ವಿದೇಶಾಂಗ ಇಲಾಖೆಗೆ ವಿಶೇಷ ವಿನಂತಿ ಮಾಡಿಕೊಂಡೆ,' ಎಂದು ತಿಳಿಸಿದರು.

ವೀಸಾ ಶುಲ್ಕ ಮನ್ನಾ, ಭಾನುವಾರದ ಪಂದ್ಯಕ್ಕೆ ಹಾಜರಿ

ಅಮೆರಿಕ ಸರ್ಕಾರದ ನಿಯಮಾವಳಿಗಳ ಅಡಿಯಲ್ಲಿ ವೊಜಿನ್ಹಾ ಅವರ ತಾಯಿಯ ವೀಸಾ ಪ್ರಕ್ರಿಯೆಯಲ್ಲಿದ್ದ ಎಲ್ಲಾ ಕಠಿಣ ನಿಯಮಿತ ಶುಲ್ಕಗಳು ಮತ್ತು ಬಾಂಡ್ ಮೊತ್ತವನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗಿದೆ. ಪ್ರಸ್ತುತ ಅವರು ಅಮೆರಿಕಕ್ಕೆ ಪ್ರಯಾಣಿಸಲು ಎಲ್ಲಾ ಅಧಿಕೃತ ವ್ಯವಸ್ಥೆಗಳನ್ನು ಮಾಡಲಾಗುತ್ತಿದ್ದು, ಶೀಘ್ರದಲ್ಲೇ ಮಿಯಾಮಿಯಲ್ಲಿ ತಾಯಿ ಮತ್ತು ಮಗ ಬೇಟಿಯಾಗಲಿದ್ದಾರೆ.

ಭಾನುವಾರ ಮಿಯಾಮಿಯ ಹಾರ್ಡ್ ರಾಕ್ ಸ್ಟೇಡಿಯಂನಲ್ಲಿ ನಡೆಯಲಿರುವ ಉರುಗ್ವೆ ವಿರುದ್ಧದ ಕೇಪ್ ವರ್ಡ್ ತಂಡದ ಎರಡನೇ ಮಹತ್ವದ ವಿಶ್ವಕಪ್ ಪಂದ್ಯವನ್ನು ವೊಜಿನ್ಹಾ ಅವರ ತಾಯಿ ಕ್ರೀಡಾಂಗಣದ ವಿಐಪಿ ಗ್ಯಾಲರಿಯಲ್ಲಿ ಕುಳಿತು ವೀಕ್ಷಿಸಲಿದ್ದಾರೆ. ಈ ಸಕಾಲಿಕ ನೆರವಿಗಾಗಿ ಹಕೀಮ್ ಜೆಫ್ರಿಸ್ ಅವರು ಅಮೆರಿಕ ವಿದೇಶಾಂಗ ಇಲಾಖೆ, ಕೇಪ್ ವರ್ಡ್ ಸರ್ಕಾರ ಮತ್ತು ಅಂತಾರಾಷ್ಟ್ರೀಯ ಫುಟ್‌ಬಾಲ್ ಸಂಸ್ಥೆಯಾದ ಫಿಫಾಗೆ ಧನ್ಯವಾದಗಳನ್ನ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+