Lakshmi Nivasa Serial: ಜಯಂತ್ - ವೆಂಕಿ ಜನ್ಮ ರಹಸ್ಯ ಬಯಲಾಗುವ ಸಮಯ, ಜಾಹ್ನವಿಗೆ ಸಿಕ್ಕ ಫೋಟೋದಿಂದ ಹೊಸ ತಿರುವು!
Lakshmi Nivasa Serial: ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ಜಯಂತ್‌ನ ರಹಸ್ಯಗಳು ಬಯಲಾಗುವ ಸಮಯ ಬಂದಿದೆ. ಇತ್ತೀಚಿನ ದಿನಗಳಲ್ಲಿ ಲಕ್ಷ್ಮೀ ನಿವಾಸ ಸೀರಿಯಲ್ ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಇದೀಗ ಕಡೆಗೂ ವೆಂಕಿ ಮತ್ತು ಜಯಂತ್‌ನ ನಡುವಿನ ಬಾಲ್ಯದ ರಹಸ್ಯವೇನು, ವೆಂಕಿ ತಾಯಿ ಯಾರು ಹಾಗೂ ಜಯಂತ್ ಕೂಡಿ ಹಾಕಿದ್ದ ಮಹಿಳೆ ಯಾರು ಎನ್ನುವ ರಹಸ್ಯಗಳು ಬಯಲಾಗುವ ಸಮಯ ಬಂದಿದೆ. ಜಾಹ್ನವಿಯ ಮುಂದೆ ರಹಸ್ಯಗಳು ಬಯಲಾಗುವ ಸಂದರ್ಭ ಬಂದಿದೆ. ಜಾಹ್ನವಿಗೆ ಫೋಟೋವೊಂದು ಸಿಕ್ಕಿದ್ದು ಇದು ವೆಂಕಿ ಅಣ್ಣ ಅವರ ಅಮ್ಮನಾ ಇಲ್ಲ, ಜಯಂತ್ ಅವರ ಅಮ್ಮನಾ ಎನ್ನುವ ಗೊಂದಲ ಎದುರಾಗಿದೆ. ಇದೀಗ ಜಯಂತ್ ಅಥವಾ ವೆಂಕಿ ಇಬ್ಬರಲ್ಲಿ ಒಬ್ಬರ ಜನ್ಮ ರಹಸ್ಯ ಬಹಿರಂಗವಾಗುವ ಸಮಯ ಬಂದಿದೆ.
ಈಚೆಗೆ ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಜಾಹ್ನವಿಯ ಪ್ರಶ್ನೆಗೆ ಸಿಕ್ತು ಉತ್ತರ... ಲಕ್ಷ್ಮೀಯಿಂದ ಬಯಲಾಯ್ತು ವೆಂಕಿ ತಾಯಿಯ ರಹಸ್ಯ! ಎನ್ನುವಂತೆ ತೋರಿಸಲಾಗಿದೆ. ಕಳೆದ ಕೆಲವು ದಿನಗಳಿಂದಲೂ ಜಯಂತ್ ರೂಮ್‌ನಲ್ಲಿ ಕೂಡಿ ಹಾಕಿದ್ದು ಯಾರನ್ನು ಎಂದು ಪತ್ತೆ ಮಾಡುವುದರಲ್ಲಿಯೇ ಜಾಹ್ನವಿ ಮಗ್ನಳಾಗಿದ್ದಳು. ಕಡೆಗೂ ಕೆಲವೊಂದು ರಹಸ್ಯಗಳನ್ನು ಪತ್ತೆ ಮಾಡುವಲ್ಲಿ ಜಾಹ್ನವಿ ಯಶಸ್ವಿಯಾಗಿದ್ದಾಳೆ. ಮೊದಲಿನಿಂದಲೂ ವೆಂಕಿ ಹಾಗೂ ಜಯಂತ್‌ನ ನಡುವೆ ಯಾವುದೊ ಬಾಲ್ಯದ ರಹಸ್ಯ ಇರುವಂತೆಯೇ ತೋರಿಸಲಾಗಿತ್ತು. ಮುಂದುವರಿದು ವೆಂಕಿಯನ್ನು ನೋಡಿದ ಸಂದರ್ಭದಲ್ಲಿ ಜಯಂತ್ ಬೆಚ್ಚಿ ಬೀಳುತ್ತಿದ್ದ, ವೆಂಕಿಯಿಂದ ಜಯಂತ್ ಯಾವಾಗಲೂ ತಪ್ಪಿಸಿಕೊಳ್ಳುವುದರಲ್ಲೇ ಇದ್ದ. ವೆಂಕಿಗೆ ಮಾತು ಬರದಂತೆ ಆಗಲು ಅಥವಾ ವೆಂಕಿ ಮಾತು ಕಳೆದುಕೊಳ್ಳುವುದಕ್ಕೆ ಜಯಂತ್‌ನೇ ಕಾರಣ ಇರಬಹುದು ಎನ್ನುವ ಅನುಮಾನವು ವೀಕ್ಷಕರಲ್ಲಿ ಇದ್ದೇ ಇದೆ. ವೀಕ್ಷಕರ ಅನುಮಾನಗಳಿಗೆ ಜಯಂತ್‌ನ ಹಲವು ವರ್ತನೆಗಳು ಕಾರಣ ಇದೀಗ ಈ ಎಲ್ಲ ರಹಸ್ಯಗಳು ಕಳಚಿ ಬೀಳುವ ಸಮಯ ಕೊನೆಗೂ ಬಂದಿದೆ.

ಲಕ್ಷ್ಮೀ ನಿವಾಸದ ಹೊಸ ಪ್ರೋಮೋದಲ್ಲಿ ಏನಿದೆ
ಇನ್ನು ಲಕ್ಷ್ಮೀ ನಿವಾಸದ ಹೊಸ ಪ್ರೋಮೋದಲ್ಲಿ ಜಾಹ್ನವಿಯ ಕೈಗೆ ಸಿಕ್ಕ ಫೋಟೋ ಹೊಸ ತಿರುವಿಗೆ ಕಾರಣವಾಗಿದೆ. ಇದು ಜಯಂತ್ ಅವರ ಅಮ್ಮನಾ ಇಲ್ಲ, ವೆಂಕಿ ಅವರ ಅಮ್ಮನಾ ಎನ್ನುವ ಪ್ರಶ್ನೆ ಜಾಹ್ನವಿಗೆ ಎದುರಾಗಿದೆ. ಇವರಿಬ್ಬರ ಅಮ್ಮ ಒಬ್ಬರೇ ಆದರೆ ಇವರಿಬ್ಬರು ಅಣ್ಣ - ತಮ್ಮಂದಿರಿರಬೇಕು ಎನ್ನುವ ಪ್ರಶ್ನೆ ಎದುರಾಗಿದೆ. ಕೂಡಲೇ ಲಕ್ಷ್ಮೀ ಅವರ ಬಳಿ ಹೋಗಿರುವ ಜಾಹ್ನವಿ, ಅಮ್ಮ ಈ ಫೋಟೋದಲ್ಲಿ ಇರುವವರು ನಿಮಗೆ ಪರಿಚಯನಾ ಅಂತ ಕೇಳಿದ್ದಾಳೆ. ಇದಕ್ಕೆ ಲಕ್ಷ್ಮೀ ನೀಡಿರುವ ಉತ್ತರ ಪ್ರೇಕ್ಷಕರಲ್ಲಿ ಕುತೂಹಲ ಹಾಗೂ ಆಶ್ಚರ್ಯವನ್ನುಂಟು ಮಾಡಿದೆ. ಇವರು ನನ್ನ ಆತ್ಮೀಯ ಸ್ನೇಹಿತರು. ಮನೆ ಬಿಟ್ಟೋಗಿ ಮದುವೆ ಮಾಡಿಕೊಂಡಳು. ಈಕೆಗೆ ಒಂದು ಗಂಡು ಮಗು ಸಹ ಇದೆ. ಅವರ ಪತ್ನಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಸಂಕಷ್ಟದಲ್ಲಿದ್ದಾಗ ಆಕೆಯ ಮಗುವನ್ನು ದತ್ತು ತೆಗೆದುಕೊಳ್ಳುವಂತೆ ಮನವಿ ಮಾಡಿದ್ದರು ಎಂದು ಲಕ್ಷ್ಮೀ ಹೇಳಿರುವುದು ಪ್ರೋಮೋದಲ್ಲಿದೆ.












Click it and Unblock the Notifications