ಟ್ರೆಕ್ಕಿಂಗ್‌ ವೇಳೆ ಟೀಮ್ ಇಂಡಿಯಾ ಕ್ರಿಕೆಟ್‌ ಆಟಗಾರರನ್ನು ಗುರುತಿಸದೆ ಆಮೇಲೆ ಪಶ್ಚಾತ್ತಾಪ ಪಟ್ಟ ಹುಡುಗಿ!

ಇದೊಂದು ಇಂಟರೆಸ್ಟಿಂಗ್‌ ಘಟನೆ. ಈ ಹುಡುಗಿ ಒಬ್ಬ ವ್ಲಾಗರ್.‌ ಅಕೆ ಇತ್ತೀಚೆಗೆ ಧರ್ಮಶಾಲಾ ಟ್ರೆಕ್‌ ಮಾಡ್ತಿದ್ರು. ಅಲ್ಲಿಗೆ ಇಂಡಿಯನ್‌ ಕ್ರಿಕೆಟ್‌ ಟೀಮ್‌ ಆಟಗಾರರೂ ಬಂದಿದ್ದರು. ಆದರೆ ಇದು ಆಕೆಗೆ ಗೊತ್ತಾಗುವಾಗ ಹೊತ್ತಾಗಿತ್ತು. ಆಮೇಲೆ ಏನಾಯ್ತುಅನ್ನೋದು ಇಂಟರೆಸ್ಟಿಂಗ್.

ನಮ್ಮಲ್ಲಿ ಕ್ರಿಕೆಟ್ ಅಂದರೆ ಒಂದು ಬಗೆಯ ಅರಾಧನೆ, ಕ್ರಿಕೆಟರ್ಸ್ ಅಂದರೆ ದೇವ್ರು ಅಂತ ನೋಡುವವರೇ ಜಾಸ್ತಿ! ಅಂತದ್ದರಲ್ಲಿ ಈಕೆಗೆ ಕ್ರಿಕೆಟ್ ಲೋಕದ ಧ್ರುವತಾರೆಗಳೇ ಎದುರಾದರೂ ಈಕೆ ಅವರನ್ನು ಗುರುತಿಸಿಲ್ಲ. ಆಕೆ ತನ್ನ ಪಾಡಿಗೆ ತಾನು ವ್ಲಾಗ್ ಮಾಡುತ್ತಾ, ಎದುರಿಗೆ ಸಿಕ್ಕ ಈ ಅಸಾಮಾನ್ಯ ಕ್ರಿಕೆಟರ್‌ಗಳನ್ನು ʼಸಾಮಾನ್ಯʼ ಹೈಕರ್‌ಗಳಂತೆ ತನ್ನ ವ್ಲಾಗ್‌ನ ವಿಡಿಯೋದಲ್ಲಿ ತೋರಿಸಿದ್ದಾಳೆ. ಶ್ರೇಯಸ್ ಅಯ್ಯರ್ ಜೊತೆ ನಗುನಗುತ್ತಾ ಒಂದು ಪೋಸ್ ಕೊಟ್ಟು ಫೋಟೋ ಕೂಡ ಕ್ಲಿಕ್ಕಿಸಿಕೊಂಡಿದ್ದಾಳೆ. ಅವರೆಲ್ಲಾ ಧರ್ಮಶಾಲಾದ ಟೆಸ್ಟ್ ಪಂದ್ಯದ ಬಿಡುವಿನ ವೇಳೆಯಲ್ಲಿ ಸುಮ್ಮನೆ ಪ್ರಕೃತಿ ಸೌಂದರ್ಯ ಸವಿಯಲು ಬಂದಿದ್ದರು. ಪಾಪ, ಅವರು ಕೂಡ ತಮಗೆ ಯಾರೂ ಕಾಟ ಕೊಡುತ್ತಿಲ್ಲವಲ್ಲ ಎಂದು ನಿರಾಳವಾಗಿ ಟ್ರೆಕ್ಕಿಂಗ್ ಎಂಜಾಯ್ ಮಾಡಿದ್ದಾರೆ.

Vlogger Regrets

ಲಡ್ಡು ಬಾಯಿಗೇ ಬಂದು ಬಿದ್ರೂ ಗೊತ್ತಾಗಿಲ್ಲ

ಕಥೆಗೆ ಟ್ವಿಸ್ಟ್ ಸಿಕ್ಕಿದ್ದೇ ಇಲ್ಲಿ. ಈಕೆ ಮನೆಗೆ ಬಂದು ಅತ್ಯಂತ ಸಡಗರದಿಂದ ʼಮೈ ಬ್ಯೂಟಿಫುಲ್ ಟ್ರೆಕ್ಕಿಂಗ್ ಡೇʼ ಅಂತ ಕ್ಯಾಪ್ಶನ್‌ ಕೊಟ್ಟು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದಾಳೆ. ಅಷ್ಟೇ, ಕಮೆಂಟ್ ಸೆಕ್ಷನ್‌ನಲ್ಲಿ ನೆಟ್ಟಿಗರು ಮುಗಿಬಿದ್ದಿದ್ದಾರೆ!

ಅಮ್ಮ ತಾಯಿ... ನೀನು ಫೋಟೋ ತೆಗೆದುಕೊಂಡಿರೋದು ಯಾರ ಜೊತೆ ಗೊತ್ತಾ? ಅವರು ಕೇವಲ ಹೈಕರ್ಸ್ ಅಲ್ಲ, ಕೋಟಿ ಕೋಟಿ ಅಭಿಮಾನಿಗಳ ಹೃದಯ ಆಳುವ ಇಂಡಿಯನ್ ಕ್ರಿಕೆಟರ್ಸ್!ʼ ಎಂದು ನೆಟ್ಟಿಗರು ತಲೆ ಚಚ್ಚಿಕೊಂಡಿದ್ದಾರೆ.

ಆಗಲೇ ಈಕೆಗೆ ತಾನು ಮಾಡಿದ ದೊಡ್ಡ ಸಾಹಸ ಏನೆಂದು ಜ್ಞಾನೋದಯವಾಗಿದ್ದು! ʼಅಯ್ಯೋ ದೇವ್ರೇ, ನನಗೆ ಇವರು ಕ್ರಿಕೆಟರ್ಸ್ ಅಂತ ಗೊತ್ತೇ ಇರಲಿಲ್ಲ, ತಡವಾಗಿ ರಿಯಲೈಸ್ ಆಯ್ತುʼ ಎಂದು ಆಕೆ ತಲೆ ಮೇಲೆ ಕೈ ಹೊತ್ತುಕೊಂಡಿದ್ದಾಳೆ.‌

ಒಂದೇ ರೀಲ್‌ಗೆ 76 ಲಕ್ಷ ಗಳಿಕೆ! ಹಣಕೊಟ್ರೆ ಮದ್ವೆಗೂ ಬರ್ತಾರಂತೆ ಈ ಇನ್‌ಫ್ಲುಯೆನ್ಸರ್‌
ಒಂದೇ ರೀಲ್‌ಗೆ 76 ಲಕ್ಷ ಗಳಿಕೆ! ಹಣಕೊಟ್ರೆ ಮದ್ವೆಗೂ ಬರ್ತಾರಂತೆ ಈ ಇನ್‌ಫ್ಲುಯೆನ್ಸರ್‌

ಇಂಟರ್‌ನೆಟ್‌ ಸೆನ್ಸೇಶನ್

ಈ ಮಜಾವಾದ ವಿಡಿಯೋ ಈಗ ಇಂಟರ್ನೆಟ್‌ನಲ್ಲಿ ಸಖತ್ ವೈರಲ್ ಆಗ್ತಿದೆ. ಕ್ರಿಕೆಟ್ ಪ್ರೇಮಿಗಳಂತೂ ಹೊಟ್ಟೆ ಹುಣ್ಣಾಗುವಂತೆ ನಗುತ್ತಿದ್ದಾರೆ.

ಒಬ್ಬ ನೆಟ್ಟಿಗ, ʼನಮಗೆ ಅವರನ್ನ ಒಂದು ಸೆಕೆಂಡ್ ನೋಡೋಕೆ ಟಿಕೆಟ್ ಸಿಗಲ್ಲ, ಇವ್ರು ನೋಡಿದ್ರೆ ಇಡೀ ದಿನ ಫ್ರೀಯಾಗಿ ವಿಐಪಿ ಟ್ರೆಕ್ಕಿಂಗ್ ಮಾಡ್ಕೊಂಡು ಬಂದಿದ್ದಾರೆ!ʼ ಎಂದು ಕಮೆಂಟ್ ಮಾಡಿದ್ದಾರೆ.

ಇನ್ನೊಬ್ಬರು, ʼಶ್ರೇಯಸ್ ಅಯ್ಯರ್ ಮತ್ತು ಸುಂದರ್ ಕೂಡ ಅಂದುಕೊಂಡಿರ್ತಾರೆ... ಅಬ್ಬಾ! ಫೈನಲಿ ನಮ್ಮನ್ನ ಗುರುತಿಸದ ಒಬ್ಬರು ಸಿಕ್ಕಿದ್ರಲ್ಲ ಅಂತ!ʼ ಎಂದು ಕಾಲೆಳೆದಿದ್ದಾರೆ.

ಕ್ರಿಕೆಟ್‌ಸ್ಟಾರ್‌ಗಳೊಂದಿಗೆ ಹೈಕಿಂಗ್‌ ಭಾಗ್ಯ

ಒಟ್ಟಿನಲ್ಲಿ, ಯಾರೋ ಅಂದುಕೊಂಡು ಇಂಡಿಯನ್ ಕ್ರಿಕೆಟ್ ಸೂಪರ್‌ಸ್ಟಾರ್ಸ್‌ ಜೊತೆ ಹೈಕಿಂಗ್ ಮಾಡಿದ ಈ ಮಹಿಳೆಯ ಕಥೆ ಈಗ ಸೋಶಿಯಲ್ ಮೀಡಿಯಾದಲ್ಲಿ ಸೂಪರ್ ಹಿಟ್ ಆಗಿದೆ. ಅದಕ್ಕೇ ಹೇಳೋದು, ಕಣ್ಣಿಗೆ ಕಂಡವರೆಲ್ಲಾ ಸಾಮಾನ್ಯರಲ್ಲ, ಕೆಲವೊಮ್ಮೆ ಅವರೇ ನಮ್ಮ ಟೀಮ್ ಇಂಡಿಯಾದ ಹೀರೋಗಳೂ ಆಗಿರ್ತಾರೆ! ನಿಮ್ಮ ಲಕ್ ಚೆನ್ನಾಗಿದ್ದರೆ ನಿಮಗೂ ಇಂತದ್ದೊಂದು ಚಾನ್ಸ್ ಸಿಗಬಹುದು.

'ಮೊದಲ ಸಂಬಳ 32,000, ಅಪ್ಪ ಕೇಳಿದ್ದು 5,000': ಬೆಂಗಳೂರು ಟೆಕ್ಕಿಯ ಬದುಕನ್ನೇ ಬದಲಿಸಿದ ಆ ಒಂದು ಬೇಡಿಕೆ, ಕಾರಣವೇನು?
'ಮೊದಲ ಸಂಬಳ 32,000, ಅಪ್ಪ ಕೇಳಿದ್ದು 5,000': ಬೆಂಗಳೂರು ಟೆಕ್ಕಿಯ ಬದುಕನ್ನೇ ಬದಲಿಸಿದ ಆ ಒಂದು ಬೇಡಿಕೆ, ಕಾರಣವೇನು?

ಧರ್ಮಶಾಲಾ ಎಂಬ ಅದ್ಭುತ ಅನುಭವ

ಹಿಮಾಲಯದ ಮಡಿಲಲ್ಲಿರೋ ಧರ್ಮಶಾಲಾ ಅಂದ್ರೆ ಬರೀ ಪ್ರವಾಸಿ ತಾಣ ಮಾತ್ರವಲ್ಲ, ಅದೊಂದು ಅದ್ಭುತ ಅನುಭವ ನೀಡುವ ತಾಣ, ಪ್ರಕೃತಿ ಸೌಂದರ್ಯ, ಬೌದ್ಧ ಮೊನಾಸ್ಟ್ರಿಗಳ ಪ್ರಶಾಂತತೆ ಮತ್ತು ಕ್ರಿಕೆಟ್‌ನ ಕ್ರೇಜ್‌ ಎಲ್ಲವೂ ಒಟ್ಟಿಗೆ ಸಿಗುವ ಜಾಗವಿದು.

ಹಿಮಾಲಯದ ಮಡಿಲಲ್ಲಿ ಕ್ರಿಕೆಟ್ ಹಬ್ಬ

ನೀವು ಕ್ರಿಕೆಟ್ ಪ್ರೇಮಿಯಾಗಿದ್ದರೆ, ಧರ್ಮಶಾಲಾದ ಹೆಚ್.ಪಿ.ಸಿ.ಎ (HPCA) ಸ್ಟೇಡಿಯಂ ಜಗತ್ತಿನಲ್ಲೇ ಅತ್ಯಂತ ಸುಂದರವಾದ ಮೈದಾನ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಈ ಮೈದಾನದಲ್ಲಿ ನಿಂತು ನೋಡಿದರೆ, ಹಿಮದಿಂದ ಆವೃತವಾದ ದೌಲಂಧರ್ ಪರ್ವತ ಶ್ರೇಣಿಗಳು ಕಾಣುತ್ತವೆ. ಟಿವಿ ಪರದೆಯ ಮೇಲೆ ನೋಡುವುದಕ್ಕಿಂತ ನೇರವಾಗಿ ಇಲ್ಲಿ ಮ್ಯಾಚ್ ನೋಡುವುದೇ ಒಂದು ಅದ್ಭುತ ಕಿಕ್ ನೀಡುತ್ತದೆ.

ಇಲ್ಲಿನ ತಂಪಾದ ಹವಾಮಾನ ಮತ್ತು ವೇಗದ ಗಾಳಿ ಬೌಲರ್‌ಗಳಿಗೆ ಸಖತ್ ಹೆಲ್ಪ್ ಆಗುತ್ತೆ. ಇಲ್ಲಿ ಪಂದ್ಯ ನಡೆಯುತ್ತಿದ್ದರೆ ಇಡೀ ಧರ್ಮಶಾಲಾ ಹಬ್ಬದ ವಾತಾವರಣಕ್ಕೆ ತಿರುಗುತ್ತದೆ.

ಸ್ಥಳೀಯರಲ್ಲಿ ಕ್ರಿಕೆಟ್ ಪ್ರೀತಿ ಹೆಚ್ಚು. ಮ್ಯಾಚ್ ಇಲ್ಲದ ದಿನಗಳಲ್ಲೂ ಪ್ರವಾಸಿಗರು ಕೇವಲ ಈ ಸ್ಟೇಡಿಯಂನ ಸೌಂದರ್ಯವನ್ನು ಕಣ್ಣುಂಬಿಕೊಳ್ಳಲೆಂದೇ ಇಲ್ಲಿಗೆ ಬರುತ್ತಾರೆ.

ಚಾರಣಿಗರ ಸ್ವರ್ಗ, ಬೆಸ್ಟ್ ಹೈಕಿಂಗ್ ತಾಣಗಳು

ಧರ್ಮಶಾಲಾ ಮತ್ತು ಅದರ ಪಕ್ಕದಲ್ಲೇ ಇರುವ ಮೆಕ್ಲಿಯೋಡ್ ಗಂಜ್ ಚಾರಣಿಗರ ಸ್ವರ್ಗ. ನೀವು ಸಾಹಸ ಪ್ರಿಯರಾಗಿದ್ದರೆ ಇಲ್ಲಿನ ಹೈಕಿಂಗ್ ಮಿಸ್ ಮಾಡಲೇಬಾರದು.

ಟ್ರಿಉಂಡ್ ಟ್ರೆಕ್

ಇದು ಧರ್ಮಶಾಲಾದ ಅತ್ಯಂತ ಫೇಮಸ್ ಹೈಕಿಂಗ್ ತಾಣ. ಓಕ್ ಮತ್ತು ದೇವದಾರು ಕಾಡುಗಳ ನಡುವೆ ನಡೆಯುತ್ತಾ ಹೋದರೆ ಸಿಗುವ ದೌಲಧರ್ ಪರ್ವತಗಳ ವೀಕ್ಷಣೆ ದಣಿವೆಲ್ಲವನ್ನೂ ಮರೆಸುತ್ತದೆ. ರಾತ್ರಿ ಇಲ್ಲಿ ಕ್ಯಾಂಪಿಂಗ್ ಮಾಡಿ ನಕ್ಷತ್ರಗಳನ್ನು ನೋಡುತ್ತಾ ಮೈ ಮರೆಯಬಹುದು.

ಕಾರೇರಿ ಲೇಕ್ ಟ್ರೆಕ್

ಸ್ವಲ್ಪ ಕಠಿಣವಾದ ಹೈಕಿಂಗ್ ಇಷ್ಟಪಡುವವರಿಗೆ ಇದು ಬೆಸ್ಟ್. ಹಸಿರು ಹುಲ್ಲುಗಾವಲುಗಳು ಮತ್ತು ಕಲ್ಲಿನ ಹಾದಿಗಳನ್ನು ದಾಟಿ ಹೋದರೆ ಸಿಗುವ ಹಿಮನದಿ ನೀರ ಸರೋವರ ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಸಣ್ಣ ಹೈಕಿಂಗ್ ಇಷ್ಟಪಡುವವರು ಭಾಗ್ಸುನಾಗ್ ಜಲಪಾತಕ್ಕೆ ಹೋಗಬಹುದು. ಹಾಗೆಯೇ ಧರ್ಮಕೋಟ್ ಎಂಬ ಪುಟ್ಟ ಹಳ್ಳಿಯ ಸುತ್ತಮುತ್ತಲಿನ ಕಾಡಿನ ಹಾದಿಗಳಲ್ಲಿ ವಾಕಿಂಗ್ ಮಾಡುವುದು ಕೂಡ ಒಂದು ವಿಶಿಷ್ಟ ಅನುಭವ.

(ಬರಹ: ಭವಾನಿ ಭಟ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+