Get Updates
Get notified of breaking news, exclusive insights, and must-see stories!

ಅಮೃತ್‌ಪಾಲ್ ಬಂಧನಕ್ಕೂ ಮುನ್ನ ಪೊಲೀಸ್ ಅಧಿಕಾರಿಗಳಿಗೆ ಪಂಜಾಬ್ ಸಿಎಂ ಕೊಟ್ಟ ಆದೇಶವೇನು?

ಅಮೃತಸರ, ಏಪ್ರಿಲ್. 25: 36 ದಿನಗಳಿಂದ ಪೊಲೀಸರಿಂದ ತಪ್ಪಿಸಿಕೊಳ್ಳುತ್ತಿದ್ದ 'ವಾರಿಸ್‌ ಪಂಜಾಬ್‌ ದೇ' ಮುಖ್ಯಸ್ಥ ಅಮೃತಪಾಲ್‌ ಸಿಂಗ್‌ ಮೊಗಾದ ಹಳ್ಳಿಯಲ್ಲಿ ಪೊಲೀಸರಿಗೆ ಶರಣಾಗಿದ್ದಾರೆ ಎಂಬ ಮಾಹಿತಿ ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಮಾನ್‌ ಅವರಿಗೆ ಸಿಕ್ಕಿತು. ಆಗ ಅವರು ಮಾಡಿದ ಮೊದಲ ಕೆಲಸ ಪೊಲೀಸ್ ಅಧಿಕಾರಿಗಳಿಗೆ ಕರೆ ಮಾಡಿ ಪ್ರಮಖ ಸೂಚನೆ ನೀಡಿದ್ದು.

ಹೌದು, ವಿಷಯ ತಿಳಿಯುತ್ತಿದ್ದಂತೆ ಸಿಎಂ ಭಗವಂತ್ ಮಾನ್ ಅವರು, ಭಾನುವಾರದ ಮಧ್ಯಂತರ ರಾತ್ರಿ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಕರೆ ಮಾಡಿ, ಗುರುದ್ವಾರದ ಪಾವಿತ್ರ್ಯತೆಯನ್ನು ಕಾಪಾಡಲು ಮತ್ತು ಯಾವುದೇ ಗುಂಡುಗಳನ್ನು ಹಾರಿಸದಂತೆ ಖಚಿತಪಡಿಸಿಕೊಳ್ಳ ನಿರ್ದೇಶನ ನೀಡಿದ್ದರು ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

CM Bhagwant Manns midnight call during Amritpal Singh operation

"ಬರ್‌ಗರಿ (Bargari ) ಮತ್ತು ಬೆಹಬಲ್ ಕಲಾನ್ (Behbal Kalan) ‌ನಂತೆಯೇ ಈ ಸಮಸ್ಯೆ ಕೂಡ ವರ್ಷಗಟ್ಟಲೆ ರಾಜ್ಯವನ್ನು ಕಾಡಲು ಸಾಧ್ಯವಿಲ್ಲ. ಹೀಗಾಗಿಯೇ ಗುಂಡುಗಳನ್ನು ಹಾರಿಸಬಾರದು ಮತ್ತು ಪೊಲೀಸರು ಗುರುದ್ವಾರದ ಆವರಣಕ್ಕೆ ಪ್ರವೇಶಿಸಬಾರದು ಎಂದು ಅವರು ಆದೇಶವನ್ನು ನೀಡಿದರು" ಎಂದು ಸಿಎಂ ಭಗವಂತ್ ಮಾನ್ ಅವರ ಸಹಾಯಕರನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ.

ಇದರ ಜೊತೆಗೆ ಘಟನೆ ಸಂಬಂಧಿಸಿದಂತೆ ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್‌ಗೆ ಕರೆ ಮಾಡಿ ಅವರಿಂದ ಎಲ್ಲಾ ವಿಷಯಗಳನ್ನು ತೆಗೆದುಕೊಳ್ಳುತ್ತಿದ್ದರು ಎನ್ನಲಾಗಿದೆ.

"ಇಡೀ ಗ್ರಾಮವನ್ನು ಸುತ್ತುವರಿಯಲು ನಿರ್ಧರಿಸಿದಾಗ, ಭಾರೀ ಪೊಲೀಸ್ ಭದ್ರತೆ ಇರಬೇಕು ಎಂದು ಡಿಜಿಪಿಗೆ ಸೂಚನೆ ನೀಡಲಾಗಿತ್ತು. ಸಮವಸ್ತ್ರದಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಪೊಲೀಸರು ಸೇರಿದರೆ ಗಾಬರಿ ಅಥವಾ ಪ್ರತಿಭಟನೆಗೆ ಕಾರಣವಾಗಬಹುದು ಎಂಬ ಕಾರಣದಿಂದ ಸಿವಿಲ್ ಬಟ್ಟೆಯಲ್ಲಿ ಪೊಲೀಸರನ್ನು ಗ್ರಾಮದಲ್ಲಿ ನಿಯೋಜಿಸಲು ನಿರ್ಧರಿಸಲಾಗಿತ್ತು" ಎಂದು ಅವರು ಮಾಹಿತಿ ನೀಡಿದ್ದಾರೆ.

ಸದ್ಯ ಅಮೃತಪಾಲ್‌ ಅವರ ಎಲ್ಲಾ ಜಾಲವನ್ನು ಸಂಪೂರ್ಣವಾಗಿ ಕಿತ್ತುಹಾಕಲಾಗಿದೆ. ಅವರ ಪ್ರಮುಖ ಸಹಾಯಕರನ್ನು ಬಂಧಿಸಿ ಜೈಲಿನಲ್ಲಿಡಲಾಗಿದೆ. ಈ ಹಿಂದೆ ಆತನಿಗೆ ಆಶ್ರಯ ನೀಡಿದವರೂ ಬಂಧನಕ್ಕೆ ಒಳಗಾಗಿದ್ದು, ಆತನಿಗೆ ಆಸರೆಯೇ ಇಲ್ಲವಾಗಿತ್ತು. ಹೀಗಾಗಿ ಆತನಿಗೆ ಜನರು ತಮ್ಮ ಕಾರುಗಳಲ್ಲಿ ಲಿಫ್ಟ್ ನೀಡುವುದನ್ನು ನಿಲ್ಲಿಸಿದ್ದರು ಎಂದು ಸಿಎಂ ಭಗವಂತ್ ಮಾನ್‌ ಅವರಿಗೆ ತಿಳಿಸಲಾಗಿದೆ ಎಂದು ಸಹಾಯಕರು ಹೇಳಿದ್ದಾರೆ.

ಈ ಬಾರಿ, ಮಾರ್ಚ್ 18 ರಂದು ನಡೆದ ಪ್ರಯತ್ನಕ್ಕಿಂತ ಹೆಚ್ಚಿನ ರೀತಿಯಲ್ಲಿ ಪೊಲೀಸರು ಉತ್ತಮವಾಗಿ ಸಿದ್ಧರಾಗಿದ್ದರು. ಗುರುದ್ವಾರವನ್ನು ಸುತ್ತುವರಿಯುವ ಮೊದಲು ಗ್ರಾಮದಾದ್ಯಂತ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು. ಆರೋಪಿ ತಪ್ಪಿಸಿಕೊಳ್ಳುವ ಯಾವುದೇ ಪ್ರಯತ್ನವು ನಿಷ್ಪ್ರಯೋಜಕವಾಗಬೇಕು ಎಂದು ಪೊಲೀಸರು ಸಕಲ ಸಿದ್ಧತೆ ಮಾಡಿಕೊಂಡು ಬಳಿಕ ಅಮೃತ್‌ಪಾಲ್‌ಗೆ ಶರಣಾಗುವಂತೆ ಸೂಚಿಸಿದ್ದರು.

ಹೀಗಾಗಿ ಬೇರೆ ದಾರಿಯಿಲ್ಲದೆ ಅಮೃತಪಾಲ್ ಶರಣಾದರು. ತಕ್ಷಣ ಅವರನ್ನು ಬಂಧಿಸಲಾಯಿತು. ಶರಣಾಗುವ ಮುನ್ನ, ಹತ್ಯೆಗೀಡಾದ ಖಲಿಸ್ತಾನಿ ಹೋರಾಟಗಾರ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆ ಅವರ ಭಾವಚಿತ್ರದ ಮುಂದೆ ವಿಡಿಯೋ ರೆಕಾರ್ಡ್ ಮಾಡಿ, ಶರಣಾಗುವುದಾಗಿ ಘೋಷಿಸಿದ್ದರು.

ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆ ಅವರ ಸ್ಥಳೀಯ ಗ್ರಾಮವಾದ ರೋಡ್‌ನಲ್ಲಿರುವ ಗುರುದ್ವಾರ ಮತ್ತು ವಾರಿಸ್ ಪಂಜಾಬ್‌ ದೇನ ಮುಖ್ಯಸ್ಥರಾಗಿ ಕಳೆದ ವರ್ಷ ಅಧಿಕಾರ ವಹಿಸಿಕೊಂಡ ಗುರುದ್ವಾರದ ಸಾಂಪ್ರದಾಯಿಕ ಉಡುಪಿನಲ್ಲಿ ಹೊರ ಬಂದ ನಂತರ ಅವರನ್ನು ಬಂಧಿಸಲಾಯಿತು.

ಅಮೃತಪಾಲ್ ಅವರನ್ನು ಬಂಧಿಸುವಲ್ಲಿ ವಿಫಲವಾದ ಕಾರಣಕ್ಕಾಗಿ ಕಳೆದ ತಿಂಗಳಿನಿಂದ ಟೀಕೆಗೆ ಒಳಗಾಗುತ್ತಿದ್ದ ಮುಖ್ಯಮಂತ್ರಿ ಭಗವಂತ್ ಮಾನ್, ಕಾರ್ಯಾಚರಣೆಯ ಸಮಯದಲ್ಲಿ ಯಾವುದೇ ರಕ್ತಪಾತವನ್ನು ಬಯಸುವುದಿಲ್ಲ ಎಂದು ಒತ್ತಿ ಹೇಳಿದ್ದರು ಎನ್ನಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+