Breaking: ಬೀದರ್‌ನಲ್ಲಿ ತಲ್ವಾರ್ ಹಿಡಿದು ವಾಹನ ಚಾಲನೆ ಮಾಡಿದ ಸಿಖ್ ಯುವಕರಿಗೆ ಲಾಠಿ ಏಟು
ಬೀದರ್, ನವೆಂಬರ್ 9: ತಲವಾರ್ ಹಿಡಿದುಕೊಂಡು ರಸ್ತೆಯಲ್ಲಿ ಬೇಕಾಬಿಟ್ಟಿ ವಾಹನ ಚಲಾಯಿಸಿ, ಪ್ರಶ್ನಿಸಿದ ಪೊಲೀಸರೊಂದಿಗೆ ವಾಗ್ವಾದ ಮಾಡಿ ಪುಂಡಾಟ ಮೆರೆದ ಸಿಖ್ ಯುವಕರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ ಘಟನೆ ಬೀದರ್‌ನಲ್ಲಿ ನಡೆದಿದೆ.
ಮಂಗಳವಾರ ಗುರುನಾನಕ್ ಜಯಂತಿ ಪ್ರಯುಕ್ತ ಬೀದರ್‌ನ ಐತಿಹಾಸಿಕ ಗುರುದ್ವಾರಕ್ಕೆ ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದರು. ಬುಧವಾರ ಹೈದರಾಬಾದ್‌ಗೆ ಹಿಂತಿರುಗುವ ವೇಳೆ ತಲವಾರ್ ಹಿಡಿದು ಬೇಕಾಬಿಟ್ಟಿ ವಾಹನ ಚಲಾಯಿಸಿದ್ದಾರೆ.
ಬೀದರ್‌ನ ಅಂಬೇಡ್ಕರ್ ವೃತ್ತದ ಬಳಿ ಪೋಲಿಸರು ತಡೆದು ಪ್ರಶ್ನೆ ಮಾಡಿದ್ದಕ್ಕೆ ತಲವಾರ್ ಹೊರತೆಗೆದು ಪುಂಡಾಟ ಮೆರೆದಿದ್ದಲ್ಲದೆ, ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ತಕ್ಷಣ ಪೊಲೀಸರು ಯುವಕನೊಬ್ಬನಿಂದ ತಲವಾರ್ ಕಿತ್ತುಕೊಳ್ಳುವುದಕ್ಕೆ ಪ್ರಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ವ್ಯಕ್ತಿಯೊಬ್ಬರಿಗೆ ಗಾಯವಾಗಿದೆ. ನಂತರ ಪುಂಡಾಟ ತೋರಿಸಿದ ಯುವಕರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ. ತಲವಾರ್ ಹಿಡಿದು ದುರ್ವರ್ತನೆ ತೋರಿದ ಸಿಖ್ ಯುವಕರ ಮೇಲೆ ಮೋಟರ್ ವಾಹನ ಕಾಯಿದೆ ಅಡಿ ಪ್ರಕರಣ ದಾಖಲಾಗಿದೆ.

ಮಂಗಳವಾರ ಗುರುನಾನಕ್‌ರ 553ನೇ ಜಯಂತಿ ಪ್ರಯುಕ್ತ ದೇಶದ ವಿವಿದೆಡೆ ಬೀದರ್‌ಗೆ ಸಾವಿರಾರು ಭಕ್ತರು ಆಗಮಿಸಿದ್ದ ಅದ್ದೂರಿನ ಮೆರೆವಣಿಗೆಯಲ್ಲಿ ಪಾಲಗೊಂಡರು. ಗುರುದ್ವಾರದಲ್ಲಿ ಬೆಳಿಗ್ಗೆ ಕೀರ್ತನೆ ಹಾಗೂ ಪ್ರವಚನ ಕಾರ್ಯಕ್ರಮಗಳು ನಡೆದವು. ಗುರುನಾನಕ್ ದೇವ ಭಾವಚಿತ್ರದಕ್ಕೆ ವಿಶೇಷ ಪೂಜೆ ಸಲ್ಲಿಸಿದ ನಂತರ ಭಕ್ತರು ಸರತಿ ಸಾಲಿನಲ್ಲಿ ನಿಂತು ಗುರುಗ್ರಂಥ ಸಾಹೀಬ್ ದರ್ಶನ ಪಡೆದರು. ಅನೇಕ ದಾನಿಗಳು ಆವರಣದಲ್ಲಿ ಸಕಲ ಭಕ್ತರಿಗೆ ಉಪಹಾರ , ಪಾನೀಯ, ಹಾಗೂ ಪ್ರಸಾದ ವ್ಯವಸ್ಥೆ ಮಾಡಿದ್ದರು.
ಯುವಕರು ಕೈಯಲ್ಲಿ ಖಡ್ಗ ಹಿಡಿದು ಗುರುದ್ವಾರ ಆವರಣದಿಂದ ಉದಗಿರ ರಸ್ತೆಯ ಪ್ರವೇಶ ಮಂಟಪದವರೆಗೂ ಆವೇಶ ಭರಿತರಾಗಿ ಓಡಿದರು. ಕುದುರೆಯ ಮೇಲೆ ಕುಳಿತ ಸವಾರ ನಗಾರಿ ಬಾರಿಸುತ್ತ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವರಿಗೆ ಹುರಿದುಂಬಿಸಿದರು. ಯುವಕರು ಕತ್ತಿ ವರಸೆ, ಲಾಠಿ, ಬೆಂಕಿ ಚಕ್ರ ಪ್ರದರ್ಶನ ನೀಡಿದರು.












Click it and Unblock the Notifications