• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೃತಸರದಲ್ಲಿ ಶಿವಸೇನೆ ನಾಯಕ ಹತ್ಯೆ ಪ್ರಕರಣ: ಎಸ್‌ಎಫ್‌ಜೆಯಿಂದ ಆರೋಪಿ ರಕ್ಷಣೆ

|
Google Oneindia Kannada News

ಅಮೃತಸರ, ನವೆಂಬರ್ 6: ಅಮೃತಸರದಲ್ಲಿ ಶಿವಸೇನೆ ನಾಯಕನನ್ನು ಗುಂಡಿಕ್ಕಿ ಕೊಂದ ವ್ಯಕ್ತಿಯನ್ನು ರಕ್ಷಿಸಲು ಸಿಖ್ ಪ್ರತ್ಯೇಕತಾವಾದಿ ಗುಂಪು ಮುಂದಾಗಿದೆ. ಪಂಜಾಬ್‌ನ ಅಮೃತಸರದಲ್ಲಿ ಶಿವಸೇನಾ ನಾಯಕ ಸುಧೀರ್ ಸೂರಿ ಅವರನ್ನು ಗುಂಡಿಕ್ಕಿ ಕೊಂದ ವ್ಯಕ್ತಿಯನ್ನು ರಕ್ಷಿಸಲು ಪ್ರತ್ಯೇಕತಾವಾದಿ ಗುಂಪು ಸಿಖ್ಸ್ ಫಾರ್ ಜಸ್ಟೀಸ್ ಅಥವಾ ಎಸ್‌ಎಫ್‌ಜೆ 10 ಲಕ್ಷ ರೂಪಾಯಿಗಳ ಕಾನೂನು ನೆರವು ಘೋಷಿಸಿದೆ.

ಅಮೃತ್‌ಸರದ ದೇವಾಲಯದ ಹೊರಗಡೆ ಪ್ರತಿಭಟನೆಯಲ್ಲಿ ನಿರತರಾಗಿದ್ದ ಸಂದೀಪ್ ಸಿಂಗ್ (31) ಶಿವಸೇನೆ ನಾಯಕನನ್ನು ಶುಕ್ರವಾರ (ನವೆಂಬರ್ 4) ಗುಂಡಿಕ್ಕಿ ಕೊಲ್ಲಲಾಗಿತ್ತು. ಹಿಂದೂ ವಿಗ್ರಹಗಳು ಮತ್ತು ಚಿತ್ರಗಳನ್ನು ಕಸದ ತೊಟ್ಟಿಗೆ ಹಾಕಿದ ಆರೋಪದ ಮೇಲೆ ದೇವಸ್ಥಾನದ ಹೊರಗೆ ಧರಣಿ ಸುಧೀರ್ ಸೂರಿ ಅವರು ಪ್ರತಿಭಟನೆಗೆ ನಡೆಸಿದ್ದರು. ಈ ವೇಳೆ ಸುಧೀರ್ ಸೂರಿ ಮೇಲೆ ಗುಂಡು ಹಾರಿಸಲಾಗಿತ್ತು. SFJ (Sikhs for Justice) ಸೂರಿಯ ಗುಂಡಿನ ದಾಳಿಯನ್ನು "ಹತ್ಯೆ" ಎಂದು ಕರೆದಿದೆ. ಜೊತೆಗೆ ಇದು "ಭಯೋತ್ಪಾದನೆ" ಅಲ್ಲ ಎಂದಿದೆ.

 Breaking: ಅಮೃತಸರದಲ್ಲಿ ಶಿವಸೇನೆ ನಾಯಕನ ಮೇಲೆ ಗುಂಡಿನ ದಾಳಿ Breaking: ಅಮೃತಸರದಲ್ಲಿ ಶಿವಸೇನೆ ನಾಯಕನ ಮೇಲೆ ಗುಂಡಿನ ದಾಳಿ

ಸಿಖ್ ಪ್ರತ್ಯೇಕತಾವಾದಿ ಗುಂಪಿನಿಂದ ಆರೋಪಿ ರಕ್ಷಣೆ

ಸಿಖ್ ಪ್ರತ್ಯೇಕತಾವಾದಿ ಗುಂಪಿನಿಂದ ಆರೋಪಿ ರಕ್ಷಣೆ

ಶುಕ್ರವಾರ ಜನನಿಬಿಡ ಅಮೃತಸರ ಪ್ರದೇಶದಲ್ಲಿ ದೇವಸ್ಥಾನದ ಹೊರಗೆ ನಡೆದ ಪ್ರತಿಭಟನೆಯಲ್ಲಿ ಶಿವಸೇನಾ ನಾಯಕ ಸುಧೀರ್ ಸೂರಿ (58) ಮೇಲೆ ಐದು ಗುಂಡು ಹಾರಿಸಲಾಯಿತು. ಗುಂಡು ತಗುಲಿ ಕುಸಿದು ಬಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರು ತೀವ್ರವಾಗಿ ಗಾಯಗೊಂಡಿದ್ದರು.

ನಗರದ ಅತ್ಯಂತ ಜನನಿಬಿಡ ಸ್ಥಳಗಳಲ್ಲಿ ಒಂದಾದ ಮಜಿತಾ ರಸ್ತೆಯಲ್ಲಿರುವ ಗೋಪಾಲ್ ಮಂದಿರದ ನಿರ್ವಹಣೆಯ ವಿರುದ್ಧ ಸೂರಿ ಪ್ರತಿಭಟಿಸಿದ್ದು, ರಸ್ತೆಬದಿಯಲ್ಲಿ ಕೆಲವು ಒಡೆದ ಹಿಂದೂ ದೇವತೆಗಳ ವಿಗ್ರಹಗಳು ಪತ್ತೆಯಗಿದ್ದು ಅದನ್ನು ಅವರು ಅಪವಿತ್ರ ಕೃತ್ಯ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದರು.

ಪಾಯಿಂಟ್‌ 32 ಪಿಸ್ತೂಲ್ ವಶ

ಪಾಯಿಂಟ್‌ 32 ಪಿಸ್ತೂಲ್ ವಶ

ಆರೋಪಿ ಸಂದೀಪ್‌ ಸಿಂಗ್‌ನನ್ನು ಬಂಧಿಸಲಾಗಿದ್ದು, ದಾಳಿಗೆ ಬಳಸಿದ ಪರವಾನಗಿ ಹೊಂದಿರುವ ಪಾಯಿಂಟ್‌ 32 (.32) ಪಿಸ್ತೂಲ್‌ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಂದೀಪ್‌ ಸಿಂಗ್‌ ಬಟ್ಟೆ ಅಂಗಡಿ ಮಾಲೀಕನಾಗಿದ್ದು, ಆತನ ವಿಚಾರಣೆ ಮುಂದುವರಿದಿದೆ. ಹತ್ಯೆ ಆರೋಪಿಯು ಸುಧೀರ್ ಸೂರಿ ಅವರನ್ನು ಈ ಹಿಂದೆ ಯಾವತ್ತೂ ಭೇಟಿಯಾಗಿರಲಿಲ್ಲ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿರುವುದಾಗಿ ಡಿಜಿಪಿ ಗೌರವ್‌ ಯಾದವ್‌ ಹೇಳಿದ್ದಾರೆ. ಗೋಪಾಲ್‌ ಮಂದಿರದ ಆಡಳಿತದ ವಿರುದ್ಧ ಅತ್ಯಂತ ದಟ್ಟಣೆಯ ಮಜಿಟಾ ರಸ್ತೆಯಲ್ಲಿ ಸುಧೀರ್ ಸೂರಿ ಪ್ರತಿಭಟನೆ ನಡೆಸುತ್ತಿದ್ದರು. ಹಿಂದು ದೇವರುಗಳ ಭಗ್ನಗೊಂಡ ಮೂರ್ತಿಗಳು ರಸ್ತೆ ಬದಿಗಳಲ್ಲಿ ಪತ್ತೆಯಾಗಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟನೆ ಕೈಗೊಳ್ಳಲಾಗಿತ್ತು.

ಎಂಟು ಪೊಲೀಸ್ ಸಿಬ್ಬಂದಿ ಭದ್ರತೆ

ಎಂಟು ಪೊಲೀಸ್ ಸಿಬ್ಬಂದಿ ಭದ್ರತೆ

ಶಿವಸೇನಾ ಮುಖಂಡ ಸುಧಿರ್‌ ಸೂರಿ ಅವರ ಹೆಸರು ಹಲವು ಗ್ಯಾಂಗ್‌ಸ್ಟರ್‌ಗಳ ಹಿಟ್‌ಲಿಸ್ಟ್‌ ಪಟ್ಟಿಯಲ್ಲಿತ್ತು. ಅವರಿಗೆ ಪಂಜಾಬ್‌ ಸರಕಾರದಿಂದ ಎಂಟು ಪೊಲೀಸ್ ಸಿಬ್ಬಂದಿ ಒಳಗೊಂಡ ಭದ್ರತೆ ನೀಡಲಾಗಿತ್ತು. ಗುಂಡೇಟು ಬೀಳುವುದಕ್ಕೆ ಕೆಲ ಸಮಯದ ಮುಂಚೆ ಅವರು ಪ್ರತಿಭಟನೆಯ ಕಾರಣವನ್ನು ಪೊಲೀಸರಿಗೆ ವಿವರಿಸುತ್ತಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿರುವ ವಿಡಿಯೊ ತುಣುಕಿನಲ್ಲಿ ಕಾಣಬಹುದು.

ಗುಂಪುಗಳ ನಡುವೆ ದ್ವೇಷ

ಗುಂಪುಗಳ ನಡುವೆ ದ್ವೇಷ

ಸಿಖ್‌ ಮೂಲಭೂತವಾದಿಗಳ ವಿರುದ್ಧ ದನಿ ಎತ್ತುವ ಮೂಲಕ ಸುಧಿರ್‌ ಸೂರಿ ಈ ಹಿಂದೆ ವಿವಾದಗಳಿಗೆ ಸಿಲುಕಿದ್ದರು. ಮಹಿಳೆಯನ್ನು ನಿಂದಿಸಿರುವುದು ಮತ್ತು ಗುಂಪುಗಳ ನಡುವೆ ದ್ವೇಷ ಬಿತ್ತುವ ಕುರಿತು ವಿಡಿಯೊಗೆ ಸಂಬಂಧಿಸಿದಂತೆ ಎರಡು ವರ್ಷಗಳಿಗೂ ಹಿಂದೆ ಪಂಜಾಬ್‌ ಪೊಲೀಸರು ಅವರನ್ನು ಮಧ್ಯ ಪ್ರದೇಶದ ಇಂದೋರ್‌ನಿಂದ ಬಂಧಿಸಿದ್ದರು.

English summary
Separatist group Sikhs for Justice or SFJ has announced a legal aid of Rs 10 lakh to defend the man who shot dead Shiv Sena leader Sudhir Suri in Punjab's Amritsar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X