Bengaluru Rent: ಬೆಂಗಳೂರಲ್ಲಿ ನಾನ್‌ವೆಜ್ ಪ್ರಿಯರಿಗೆ ಶಾಕ್: ಮಾಂಸಾಹಾರಿಗಳಿಗೆ ಸಿಗ್ತಿಲ್ಲ ನಗರದಲ್ಲಿ ಬಾಡಿಗೆ ಮನೆ

Bengaluru Rent: ಬೆಂಗಳೂರಿನಲ್ಲಿ ಬಾಡಿಗೆ ಮನೆ ಪಡೆಯುವುದಕ್ಕೆ ಇಂದಿಗೂ ಸರ್ಕಸ್ ನಡೆಸಬೇಕಾಗಿದೆ. ಬೆಂಗಳೂರಿನ ವಿವಿಧ ಭಾಗದಲ್ಲಿ ದುಬಾರಿ ಬಾಡಿಗೆ, ಹೆಚ್ಚು ಜನರಿದ್ದರೆ ಮನೆ ಬಾಡಿಗೆ ನೀಡುವುದಿಲ್ಲ ಹಾಗೂ ಮನೆಗೆ ಹೆಚ್ಚು ಜನ ಬರಬಾರದು ಎನ್ನುವಂತೆ ಮನೆ ಮಾಲೀಕರು / ಆಸ್ತಿದಾರರು ಹಲವು ಷರತ್ತುಗಳನ್ನು ವಿಧಿಸುವುದು ಇದೆ. ಅದರಲ್ಲಿ ಮಾಂಸಾಹಾರ ಸೇವಿಸುವವರಿಗೆ ಮನೆ ಬಾಡಿಗೆಗೆ ಕೊಡುವುದಿಲ್ಲ ಎನ್ನುವುದು ಸಹ ಒಂದಾಗಿದೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರವಾಗಿ ಪರ - ವಿರೋಧ ಚರ್ಚೆ ಶುರುವಾಗಿದೆ.

ಸುಹಾಸ್ ದುಗಾ (Suhas Duga) ಎನ್ನುವವರು ಸೋಷಿಯಲ್ ಮೀಡಿಯಾದಲ್ಲಿ ಬೆಂಗಳೂರಿನಲ್ಲಿ ಮಾಂಸಾಹಾರ ಸೇವಿಸುವವರಿಗೆ ಮನೆ ನೀಡುವುದಿಲ್ಲ / ಶುದ್ಧ ಸಸ್ಯಹಾರಿಗಳಿಗೆ ಮಾತ್ರ ಮನೆಯನ್ನು ಬಾಡಿಗೆಗೆ ನೀಡಲಾಗುವುದು ಎನ್ನುವ ಬರಹವನ್ನು ಹಂಚಿಕೊಂಡಿದ್ದಾರೆ. ಭಾರತ ನ್ಯಾಯ ಸಂಹಿತೆ ಪ್ರಕಾರ ಬಾಡಿಗೆಗೆ ಮನೆ ನೀಡಿದ ಬಳಿಕ ಬಾಡಿಗೆದಾರನ ಅನುಮತಿ ಇಲ್ಲದೆ ಮಾಲೀಕ ಮನೆಯ ಒಳಗೆ ಹೋಗುವಂತಿಲ್ಲ. ಆ ರೀತಿ ಇರುವಾಗ ಬಾಡಿಗೆದಾರನ ಅಡುಗೆ ಮನೆಯಲ್ಲಿ ಏನು ಬೇಯುತ್ತಿದೆ ಅಂತ ಹೇಗೆ ಕಂಡು ಹಿಡಿಯುತ್ತಾರೆ. ಈ ರೀತಿಯ ಜನರಿಂದಲೇ ದೇಶದಲ್ಲಿ ಜಾತಿ ಪದ್ಧತಿ ಹುಟ್ಟಿದ್ದು, ಸತಿ ಪದ್ಧತಿ ಬೆಳೆದಿದ್ದು, ಸಾಮಾಜಿಕ ವ್ಯವಸ್ಥೆ ಕುಲಗೆಟ್ಟು ಹೋಗಿದ್ದು ಎಂದು ಆಕ್ರೋಶ ಹೊರ ಹಾಕಿದ್ದಾರೆ.

Bengaluru Rent

ಮನೋಜ್ ಗೌಡ ಎನ್ನುವವರು, ಕರ್ನಾಟಕಕ್ಕೆ ಬಂದವರು ನಮ್ಮ ನೆಲ, ಭಾಷೆಗೆ ಗೌರವಕೊಟ್ಟು ಇರಬೇಕು ಎನ್ನುವುದು ಸರಿ. ಆದರೆ ಇದು ಬಾಡಿಗೆಗೆ ನೀಡುವವರ ಭಾವನೆಗೆ, ನಂಬಿಕೆಗೆ ಗೌರವ ಕೊಡಬೇಕು. ಅವರಿಗಿಷ್ಟ ಬಂದಾಗೆ ಇರಬೇಕು ಎಂದರೆ ಅವರ ಊರಿಗೆ ಹೋಗಲಿ, ಇವರಿಗಿಷ್ಟ ಬಂದ ಹಾಗೆ ಇರಬೇಕು ಎಂದಾದರೆ ಸ್ವಂತ ಮನೆ ಮಾಡಿಕೊಳ್ಳಲಿ ಎಂದಿದ್ದಾರೆ. ಇದಕ್ಕೆ ಸುಹಾಸ್ ಎನ್ನುವವರು ಭಾವನೆಗೆ, ಗೌರವಕ್ಕೆ ಧಕ್ಕೆ ಬರುತ್ತೆ ಅಂತ ಅಸ್ಪೃಶ್ಯತೆ, ಸತಿ ಪದ್ಧತಿ, ಬಾಲ್ಯ ವಿವಾಹವನ್ನು ಹೇಗೆ ಸಹಿಸಲು ಸಾಧ್ಯವಿಲ್ಲವೋ ಇದನ್ನು ಹಾಗೆ ಸಹಿಸಲು ಸಾಧ್ಯವಿಲ್ಲ. ಆಹಾರ ತಿನ್ನುವ ಆಧಾರದಲ್ಲಿ ಭೇದಭಾವ ಮಾಡುವುದು ಜಾತಿ ಆಧಾರದಲ್ಲಿ ಭೇದಭಾವ ಮಾಡುವುದು ಎರಡು ಒಂದೇ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅರವಿಂದಶಾಸ್ತ್ರಿ ಎನ್ನುವವರು, ಭಾರತ ನ್ಯಾಯ ಸಂಹಿತೆಯ ಪ್ರಕಾರ ಯಾರಿಗೆ ಮನೆ ಬಾಡಿಗೆಗೆ ನೀಡಬೇಕು ಎಂದು ನಿರ್ಧರಿಸುವ ಅಧಿಕಾರ ಮನೆ ಮಾಲೀಕನಿಗೆ ಇದೆ ಖಂಡಿಸುವ ಹಕ್ಕು ಯಾರಿಗೂ ಇಲ್ಲ ಎಂದಿದ್ದಾರೆ. ಇನ್ನೂ ಕೆಲವರು ಅವರವರ ಆಹಾರ ಅವರವರ ಹಕ್ಕು ಎನ್ನುವುದಾದರೆ, ಬಾಡಿಗೆಗೆ ಮನೆ ನೀಡುವವರಿಗೂ ಅವರ ಮನೆಯನ್ನು ಯಾರಿಗೆ ಬಾಡಿಗೆಗೆ ನೀಡಬೇಕು ಎನ್ನುವ ಸ್ವಾತಂತ್ರ್ಯ ಇರುತ್ತದೆ ಅಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.

Bengaluru Rent ಆಸ್ತಿ ಮಾಲೀಕರಿಗೆ ಆಯ್ಕೆ ಇದೆ

ಇನ್ನು ಭಾರತ ಹಾಗೂ ಕರ್ನಾಟಕದಲ್ಲಿ ಮಾತ್ರವಲ್ಲ. ವಿವಿಧ ದೇಶಗಳಲ್ಲೂ ಮನೆ ಮಾಲೀಕರು, ಮನೆಯನ್ನು ಯಾರಿಗೆ ಬಾಡಿಗೆಗೆ ಕೊಡಬೇಕು ಎಂದು ನಿರ್ಧರಿಸುವ ಸ್ವಾತಂತ್ರ್ಯವನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ. ಅಮೆರಿಕದಲ್ಲಿ ಫೇರ್ ಹೌಸಿಂಗ್ ಆಕ್ಟ್‌ ಪ್ರಕಾರ ಜಾತಿ, ಧರ್ಮ, ಲಿಂಗದ ತಾರತಮ್ಯ ನಿಷೇಧವಾಗಿದೆ. ಆದರೆ ಆಹಾರ ಪದ್ಧತಿ ರಕ್ಷಿತ ವರ್ಗವಲ್ಲ. ಮಾಲೀಕರು ವೆಗನ್ ಓನ್ಲಿ ಎಂದು ಆಯ್ಕೆ ಮಾಡಬಹುದು. ಯುರೋಪ್‌ನಲ್ಲಿ ಇದೇ ಪರಿಸ್ಥಿತಿ. ಡಯಟ್ ತಾರತಮ್ಯ ಕಾನೂನು ಬದ್ಧವಾಗಿ ಅನುಮತಿಸಲಾಗಿದೆ. ಆಸ್ಟ್ರೇಲಿಯಾ, ಕೆನಡಾದಲ್ಲಿ ಸಹ ಮಾಲೀಕರಿಗೆ ಬಾಡಿಗೆದಾರರನ್ನು ಆಯ್ಕೆ ಮಾಡುವ ವಿಶಾಲ ಹಕ್ಕಿದೆ. ಭಾರತದಂತೆಯೇ ಸಾಂಸ್ಕೃತಿಕ ಸಂದರ್ಭವನ್ನು ಗೌರವಿಸುತ್ತಾರೆ. ಇದು ಜಗತ್ತಿನ ಸಾಮಾನ್ಯ ಪದ್ಧತಿ ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+