Get Updates
Get notified of breaking news, exclusive insights, and must-see stories!

Hospital Bill: ಮಾಡದ ಸರ್ಜರಿಗೂ 1 ಲಕ್ಷ ರೂಪಾಯಿ ಬಿಲ್; ರೋಗಿಯ ಒಂದೇ ಒಂದು ಪ್ರಶ್ನೆಗೆ ಉಳಿಯಿತು ಬರೋಬ್ಬರಿ ರೂ.44,000

Hospital Bill: ವೈದ್ಯಕೀಯ ಚಿಕಿತ್ಸೆಯ ನಂತರ ಪ್ರತಿಯೊಂದು ವಸ್ತುವಿನ ವಿವರವಾದ ಪಟ್ಟಿ ಇರುವ ಬಿಲ್ ಕೇಳುವ ಮೂಲಕ ರೋಗಿಯೊಬ್ಬರು ಬರೋಬ್ಬರಿ 44,000 ರೂಪಾಯಿಗಳನ್ನು ಉಳಿಸಿದ್ದಾರೆ. ಆಶ್ಚರ್ಯಕರ ವಿಷಯವೆಂದರೆ, ತಮಗೆ ನಡೆಯದ ಶಸ್ತ್ರಚಿಕಿತ್ಸೆಗೂ ಆಸ್ಪತ್ರೆಯವರು ಬಿಲ್ ಹಾಕುತ್ತಿರುವುದು ವಿವರವಾದ ಪಟ್ಟಿಯನ್ನು ಪರಿಶೀಲಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ.

ಸಾಮಾಜಿಕ ಜಾಲತಾಣದಲ್ಲಿ ಈ ಕಹಿ ಅನುಭವವನ್ನು ಹಂಚಿಕೊಂಡಿರುವ ರೋಗಿಯು, ಮೊದಲು ತಮಗೆ ನೀಡಲಾದ ಬಿಲ್‌ನಲ್ಲಿ 1,00,000 ರೂಪಾಯಿ ಹಾಕಲಾಗಿತ್ತು. ಬಳಿಕ ನಾವು ಯಾವಾಗ ಬಿಲ್‌ನಲ್ಲಿನ ತಪ್ಪುಗಳನ್ನು ಪ್ರಶ್ನಿಸಿದೆವೋ, ತಕ್ಷಣವೇ ಆ ಮೊತ್ತವು 57,000 ರೂಪಾಯಿಗಳಿಗೆ ಇಳಿಕೆಯಾಗಿದೆ. ಅಂದರೆ, ಕೇವಲ ಒಂದು ಪ್ರಶ್ನೆಯಿಂದ ಅವರಿಗೆ 44,000 ರೂಪಾಯಿ ಉಳಿತಾಯ ಆದಂತಾಗಿದೆ. ಈ ಮೂಲಕ ನಾವು ಎಲ್ಲಿವರೆಗೂ ತಪ್ಪುಗಳನ್ನ ಪ್ರಶ್ನಿಸುವುದಿಲ್ಲವೋ ಅಲ್ಲಿಯವರೆಗೂ ನಮ್ಮನ್ನ ಮೋಸ ಮಾಡುತ್ತಲಿರುತ್ತಾರೆ ಎಂದು ಈ ರೋಗಿ ತಿಳಿಸಿದ್ದಾರೆ.

Hospital Bill Shock Patient Saves 44 000 After Spotting Errors in Itemised Charges

ಇಲ್ಲದ ಚಿಕಿತ್ಸೆಗೆ 1 ಲಕ್ಷ ರೂಪಾಯಿ ಬಿಲ್

"ಕಳೆದ ಜನವರಿಯಲ್ಲಿ ಆಸ್ಪತ್ರೆಯೊಂದರಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದಿದ್ದೆ. ಇನ್ಶೂರೆನ್ಸ್‌ನ ಮೊತ್ತ ಕಳೆದ ನಂತರವೂ ನನಗೆ ಸುಮಾರು 1 ಲಕ್ಷ ರೂಪಾಯಿ ಬಿಲ್ ಬಂದಿತ್ತು. ನಾನು ಸುಮ್ಮನೆ ಹಣ ಪಾವತಿಸಲು ಮುಂದಾಗಿದ್ದೆ. ಆದರೆ, ನನ್ನ ಕಚೇರಿಯ ಸಹೋದ್ಯೋಗಿಯೊಬ್ಬರು ಮೊದಲು ವಿವರವಾದ ಬಿಲ್ ಕೇಳುವಂತೆ ಸಲಹೆ ನೀಡಿದರು. ಅದರಂತೆಯೇ ನಾನು ಆಸ್ಪತ್ರೆಯವರ ಬಳಿ ಯಾವುದಕ್ಕೆ ಎಷ್ಟು ಖರ್ಚಾಗಿದೆ ಎಂದು ವಿವರವಾದ ಬಿಲ್ ಕೇಳಿದೆ," ಎಂದು ಆ ವ್ಯಕ್ತಿ ತಮ್ಮ ಹೆಸರು, ಆಸ್ಪತ್ರೆ, ಸ್ಥಳದ ಹಸರು ಉಲ್ಲೇಖಿಸದೆ ರೆಡಿಟ್‌ನಲ್ಲಿ ಬರೆದುಕೊಂಡಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಎರಡು ಬಾರಿ ಬಿಲ್ ಮಾಡಿದ ಆರೋಪ

ಆಸ್ಪತ್ರೆಯ ಆರು ಪುಟಗಳ ವಿವರವಾದ ಬಿಲ್ ಅನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ರೋಗಿಗೆ ಶಾಕ್ ಕಾದಿತ್ತು. ತಮಗೆ ಗೊತ್ತಾಗದಂತೆ ಬರೋಬ್ಬರಿ 31,430 ರೂಪಾಯಿ ಚಾರ್ಜ್ ಮಾಡಿರುವುದು ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೆ, ಚಿಕಿತ್ಸೆಗೆ ಬಳಸುವ ಸಪ್ಲೈ ಕಿಟ್ ಒಂದೇ ವಸ್ತುವಿಗೆ ಎರಡು ಬಾರಿ ಬಿಲ್ ಹಾಕುವ ಮೂಲಕ ಡ್ಯೂಪ್ಲಿಕೇಟ್ ಚಾರ್ಜ್ ಮಾಡಿರುವುದು ಪತ್ತೆಯಾಗಿದೆ.

ಸಮಸ್ಯೆ ಬರೆಹರಿದಿದ್ದು ಹೇಗೆ?

"ನಾನು ಬಿಲ್ಲಿಂಗ್ ವಿಭಾಗಕ್ಕೆ ಕರೆ ಮಾಡಿದಾಗ ದೊಡ್ಡ ಜಗಳವೇ ಆಗಬಹುದು ಎಂದು ನಿರೀಕ್ಷಿಸಿದ್ದೆ. ಆದರೆ, ಅಲ್ಲಿನ ಮಹಿಳಾ ಸಿಬ್ಬಂದಿ ಬಹಳ ಶಾಂತವಾಗಿ ಪ್ರತಿಕ್ರಿಯಿಸಿದರು. ಈ ವಿಷಯವನ್ನು ಮರುಪರಿಶೀಲನೆಗೆ ಕಳುಹಿಸುವುದಾಗಿ ತಿಳಿಸಿದರು. ಸುಮಾರು ಎರಡು ವಾರಗಳ ನಂತರ, ಆ ಎರಡೂ ಹೆಚ್ಚಿನ ಚಾರ್ಜ್‌ಗಳನ್ನು ಬಿಲ್‌ನಿಂದ ತೆಗೆದುಹಾಕಿದರು. ಇದರಿಂದಾಗಿ ನನ್ನ ಬಿಲ್ 1,100 ಡಾಲರ್‌ನಿಂದ (ಸುಮಾರು 1 ಲಕ್ಷ ರೂ.) 618 ಡಾಲರ್‌ (ಸುಮಾರು 57,000 ರೂ.)ಗೆ ಇಳಿಕೆಯಾಯಿತು," ಎಂದು ಅವರು ರೆಡಿಟ್‌ನಲ್ಲಿ ಬರೆದುಕೊಂಡಿದ್ದಾರೆ.

ಬಿಲ್ ಪಾವತಿಗೂ ಮುನ್ನ ಮಾಡಬೇಕಾದ ಕೆಲಸಗಳು

ಆ ರೋಗಿಯು ತಾವು ಅನುಭವಿಸಿದ ಈ ಘಟನೆಯಿಂದ ಇತರರಿಗೂ ಒಂದು ಮಹತ್ವದ ಸಲಹೆ ನೀಡಿದ್ದಾರೆ. "ಯಾವಾಗಲೂ ಆಸ್ಪತ್ರೆಯ ಬಿಲ್ ಪಾವತಿಸುವ ಮುನ್ನ 'ಐಟಮೈಸ್ಡ್ ಬಿಲ್' ಕೇಳುವುದನ್ನು ಮರೆಯಬೇಡಿ. ಒಂದು ವೇಳೆ ನಾನು ವಿವರವಾದ ಪಟ್ಟಿಯನ್ನು ಕೇಳದಿದ್ದರೆ, ಈ ದೊಡ್ಡ ಮಟ್ಟದ ತಪ್ಪು ನನ್ನ ಗಮನಕ್ಕೆ ಬರುತ್ತಿರಲಿಲ್ಲ ಮತ್ತು ನಾನು ಸುಮ್ಮನೆ ಇಲ್ಲದ ಚಿಕಿತ್ಸೆಗೆ ಸಾಲ ಮಾಡಿ ಹಣ ಸುರಿಯಬೇಕಿತ್ತು," ಎಂದು ಅವರು ಎಚ್ಚರಿಕೆ ಸೂಚನೆ ನೀಡಿದ್ದಾರೆ.

ಮೋಸದ ಬಿಲ್‌ ವಿರುದ್ಧ ನೆಟ್ಟಿಗರ ಆಕ್ರೋಶ

"ಇದನ್ನು ನೋಡುತ್ತಿದ್ದರೆ ಆಸ್ಪತ್ರೆಯ ಬಿಲ್ಲಿಂಗ್‌ನಲ್ಲಿ ತಪ್ಪುಗಳು ನಡೆಯುವುದು ಬಹಳ ಸಾಮಾನ್ಯವಾದ ವಿಷಯದಂತಿದೆ. ಜನರು ಬಿಲ್ ಅನ್ನು ಸರಿಯಾಗಿ ಗಮನಿಸುವುದಿಲ್ಲ ಎಂಬ ಭರವಸೆಯ ಮೇಲೆಯೇ ಆಸ್ಪತ್ರೆಗಳು ಇಂತಹ ಲೆಕ್ಕಾಚಾರ ಹಾಕುತ್ತವೆ. ಆದ್ದರಿಂದ, ಕೇವಲ ಒಟ್ಟು ಮೊತ್ತದ ಬಿಲ್ ಬದಲಿಗೆ ಪ್ರತಿಯೊಂದು ವಸ್ತುವಿನ ವಿವರವಿರುವ 'ಐಟಮೈಸ್ಡ್ ಬಿಲ್' ಕೇಳಿ. ಇದಕ್ಕೆ ಕೇವಲ 5 ನಿಮಿಷ ಬೇಕಾಗಬಹುದು, ಆದರೆ ಅಲ್ಲಿ ನಿಮಗೆ ಯಾವುದಾದರೂ ತಪ್ಪುಗಳು ಕಂಡುಬರುವ ಸಾಧ್ಯತೆ ಇರುತ್ತದೆ," ಎಂದು ಅವರು ತಿಳಿಸಿದ್ದಾರೆ.

ಈ ರೋಗಿ ಬರೆದುಕೊಂಡಿರುವ ಈ ಬರಹ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಗಳು ವ್ಯಕ್ತವಾಗಿವೆ. ಅನೇಕ ಬಳಕೆದಾರರು, "ಆಸ್ಪತ್ರೆಗಳು ವ್ಯವಸ್ಥಿತವಾಗಿ ಇಂತಹ ಮೋಸದ ತಂತ್ರಗಳನ್ನು ಅನುಸರಿಸುತ್ತಿವೆ ಮತ್ತು ಸರ್ಕಾರದ ಕಠಿಣ ಮೇಲ್ವಿಚಾರಣೆ ಇಲ್ಲದ ಕಾರಣ ಇವುಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಿವೆ," ಎಂದು ಕಿಡಿಕಾರಿದ್ದಾರೆ.

ಮತ್ತೊಬ್ಬರು "ನೀವು ಯಾವಾಗಲೂ ವಿವರವಾದ ಬಿಲ್ ಕೇಳಿ, ಆಗ ಬಿಲ್ ಮೊತ್ತ ಶೇಕಡ 20 ರಷ್ಟು ಇಳಿಕೆಯಾಗುವುದನ್ನು ನೀವೇ ಗಮನಿಸುತ್ತೀರಿ," ಎಂದು ಸಲಹೆ ನೀಡಿದ್ದಾರೆ. ಮತ್ತೊಬ್ಬರು, ಆಸ್ಪತ್ರೆಗಳ ಉದ್ದೇಶವನ್ನು ಪ್ರಶ್ನಿಸುತ್ತಾ, "ತಪ್ಪುಗಳು ಯಾವಾಗಲೂ ಆಸ್ಪತ್ರೆಯ ಪರವಾಗಿಯೇ ಇರುತ್ತಿದ್ದರೆ, ಅದನ್ನು ತಪ್ಪು ಎಂದು ಕರೆಯಲಾಗದು. ಅದು ಜಾಣತನದ ಸಂಚು ಅಥವಾ ಉದ್ದೇಶಪೂರ್ವಕವಾಗಿ ಮಾಡಿದ್ದು," ಎಂದು ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದಾರೆ. ಹೀಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶಗಳು ಭುಗಿಲೆದ್ದಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+