ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎನ್ ಡಿಟಿವಿ ಪ್ರಳಯ ವಿಡಿಯೋ ಅಚಾತುರ್ಯ ಟ್ವೀಟ್

By Mahesh
|
Google Oneindia Kannada News

ನವದೆಹಲಿ, ಜೂ.20: ಉತ್ತರಾಖಂಡ್ ರಾಜ್ಯದಲ್ಲಿನ ಜಲ ಪ್ರಳಯದ ಬಗ್ಗೆ ಎಲ್ಲರೂ ಮರುಕಪಡುತ್ತಿರುವ ವೇಳೆಯಲ್ಲೇ ಜನಪ್ರಿಯ ಟಿವಿ ಮಾಧ್ಯಮ ಎನ್ ಡಿಟಿವಿಯಿಂದ ಆಚಾತುರ್ಯ ವರದಿ ಜಗತ್ತಿನ ಗಮನ ಸೆಳೆದಿದೆ.

ಸ್ಪೈಡರ್ ಮ್ಯಾನ್ 3 ಚಿತ್ರದಲ್ಲಿ ಎದುರಾಳಿ ಛಾಯಾಗ್ರಾಹಕ ಎಡ್ಡಿ ಬ್ರೋಕ್ ಎಂಬುವನು ಡೈಲಿ ಬ್ಯೂಗಲ್ ನಲ್ಲಿ ನಕಲಿ ಚಿತ್ರಗಳನ್ನು ಬಳಸಿ ಕೆಲವು ಚಿತ್ರಗಳನ್ನು ಮಾರ್ಫ್ ಮಾಡಿ ಸ್ಸ್ಪೈಡರ್ ಮ್ಯಾನ್ ಮಾನ ಕಳೆಯಲು ಯತ್ನಿಸುತ್ತಾನೆ.

ಆದರೆ, ಇದೇ ರೀತಿ ಎನ್ ಡಿಟಿವಿ ಕಡೆಯಿಂದ ಬಂದ ಟ್ವೀಟ್ ವೊಂದರಲ್ಲಿ ಹಳೆಯ ಅಥವಾ ಮಾರ್ಫ್ ಆಗಿರುವ ವಿಡಿಯೋವೊಂದು ಇತ್ತೀಚಿನ ಜಲ ಪ್ರಳಯದ ವಿಡಿಯೋ ಎಂದು ತೋರಿಸಲಾಗುತ್ತಿದೆ. ಇದೇ ವಿಡಿಯೋ ಕ್ಲಿಪ್ಪಿಂಗ್ ಹಲವು ಪ್ರಾದೇಶಿಕ ಟಿವಿ ವಾಹಿನಿಗಳಲ್ಲೂ ಗೊತ್ತಿಲ್ಲದ್ದಂತೆ ಪ್ರಸಾರವಾಗಿದೆ.

ಸುಮಾರು ಎರಡು ವರ್ಷ ಹಳೆಯದಾದ ವಿಡಿಯೋ ತುಣುಕಿನಲ್ಲಿ ಟ್ರಕ್ ವೊಂದು ಪ್ರಪಾತಕ್ಕೆ ಕುಸಿಯುವ ದೃಶ್ಯವಿದೆ. ಅದೇ ದೃಶ್ಯವನ್ನು ಈಗಿನ ಜಲಪ್ರಳಯದ ಪರಿಣಾಮ ಎಂದು ತೋರಿಸಲಾಗುತ್ತಿದೆ. [ಉತ್ತರಾಖಂಡ್ ಜಲ ಪ್ರಳಯ ಚಿತ್ರಗಳನ್ನು ನೋಡಿ]

Tweet goes Viral of NDTV Faking Videos Using YouTube

ಅನುರಾಗ್ ಪರಾಂಜಪೆ ಕಡೆಯಿಂದ ಬಂದ ಟ್ವೀಟ್ ಅಲ್ಲದೇ ಎನ್ ಡಿಟಿವಿಯ ಜನಪ್ರಿಯ ಪತ್ರಕರ್ತೆ ಬರ್ಖಾ ದತ್ ಅವರು ಇತ್ತೀಚೆಗೆ ಮನ್ನಾಡೇ ಅವರ ನಿಧನ ವಾರ್ತೆ ಬಗ್ಗೆ ಮಾಡಿದ್ದ ಟ್ವೀಟ್ ಭಾರಿ ಸದ್ದು ಮಾಡಿತ್ತು.

ದಿನ ಕಳೆದಂತೆ ಆತಂಕ ಕೂಡ ಹೆಚ್ಚಾಗುತ್ತಿದೆ. ನೆರವಿನ ಹಸ್ತ ಯಾವಾಗ ಸಿಗಲಿದೆ ಎಂದು ಎದುರು ನೋಡುತ್ತಿದ್ದೇವೆ. ತಮ್ಮವರನ್ನು ನೆನೆಸಿಕೊಂಡು ದೇಶದ ವಿವಿಧೆಡೆಗಳಿಂದ ಬಂದಿರುವವರು ಅಳುತ್ತಿದ್ದರೆ, ನೂರಾರು ಮಂದಿ ಕಣ್ಮರೆಯಾಗಿದ್ದಾರೆ. ಹುಡುಕಾಟದ ದಾರಿ ಕಾಣದೆ ಕಂಗಾಲಾಗಿದ್ದಾರೆ. ಅದರೆ, ಯೋಧರು ಆಶಾಕಿರಣವಾಗಿ ಕಾಣಿಸಿಕೊಂಡಿದ್ದಾರೆ.

ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಉತ್ತರಾಖಂಡ್, ಉತ್ತರಪ್ರದೇಶ ಸೇರಿದಂತೆ ಜಲಪ್ರಳಯದಲ್ಲಿ ಸಿಲುಕಿರುವ ರಾಜ್ಯಗಳಿಗೆ ನೆರವಿನ ಮಹಾಪೂರ ಹರಿದು ಬಂದಿದೆ. ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿ ಸೇರಿದಂತೆ ಹಲವಾರು ನಾಯಕರು ಸಹಾಯ ಹಸ್ತ ಚಾಚಿರುವ ಬಗ್ಗೆ ಹೇಳಿಕೊಂಡಿದ್ದಾರೆ.

ತಮ್ಮ ಕುಟುಂಬ ಸದಸ್ಯರು, ಸ್ನೇಹಿತರ ಹುಡುಕಾಟದಲ್ಲಿರುವವರು ಫೋಟೋ ಇನ್ನಿತರ ವಿವರಗಳನ್ನು ಹಾಕಿದ್ದಾರೆ. ಹೆಲ್ಪ್ ಲೈನ್ ನಂಬರ್ ಗಳು ಹರಿದಾಡಿವೆ. ಈ ಮಧ್ಯೆ ಮಾಧ್ಯಮಗಳ ಪಾತ್ರ ಸುದ್ದಿ ರೋಚಕವಾಗಿ ಬಿತ್ತರಿಸುವುದು ಮಾತ್ರವೇ ಎಂಬ ಪ್ರಶ್ನೆ ಹಾಗೇ ಉಳಿದು ಬಿಟ್ಟಿದೆ.

English summary
A recent tweet made over a popular news channel NDTV become a news itself over social media channel –Twitter, the tweet says that NDTV is using forged/ doctored videos and used a Youtube video posted 2 years back to use in recent coverage of flood aftermath in north India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X