ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುವತಿಯ ಅತ್ಯಾಚಾರ ಮಾಡಿ, ಶೂಟೌಟ್

By Srinath
|
Google Oneindia Kannada News

20 year old woman molested gunned down in Muzaffarnagar
ಮುಜಫರನಗರ (ಯುಪಿ), ಫೆ.4: ಮತ್ತೊಂದು ಘೋರ ಅತ್ಯಾಚಾರ. ಶಾಮ್ಲಿ ಜಿಲ್ಲೆಯ ಮುಜಫರನಗರದಲ್ಲಿ 20 ವರ್ಷದ ಯುವತಿಯ ಮೇಲೆ ಅತ್ಯಾಚಾರವೆಸಗಿ, ಆಕೆಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ಮೃತ ಯುವತಿಯ ಗುರುತು ಇನ್ನೂ ಪತ್ತೆಯಾಗಿಲ್ಲ. ಭಾನುವಾರ ಈ ಘಟನೆ ನಡೆದಿದೆ. ಯುವತಿಯನ್ನು ಗುಂಡಿಟ್ಟು ಸಾಯಿಸುವ ಮುನ್ನ ಆಕೆಯ ಮೇಲೆ ಅತ್ಯಾಚಾರ ನಡೆದಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಮತ್ತೊಂದು ಘಟನೆಯಲ್ಲಿ ವಿವಾಹಿತ ಮಹಿಳೆ ಪಿಂಕಿ ಎಂಬುವವರನ್ನು ಆಕೆಯ ಪತಿ ಮತ್ತು ಆತನ ಮನೆಯರವರು ಉಸುರುಗಟ್ಟಿಸಿ ಸಾಯಿಸಿದ್ದಾರೆ. ಕನ್ಹೇರಿ ಗ್ರಾಮದಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದೆ.

ವರದಕ್ಷಿಣೆಗಾಗಿ ಪೀಡಿಸುತ್ತಿದ್ದ ಅಳಿಯನ ಮನೆಯವರು ತಮ್ಮ ಮಗಳು ಪಿಂಕಿಯನ್ನು ಸಾಯಿಸಿದ್ದಾರೆ ಎಂದು ಮೃತ ಮಹಿಳೆಯ ತಂದೆ ಕರಣ್ ಸಿಂಗ್ ಆರೋಪಿಸಿದ್ದಾರೆ. ಪಿಂಕಿ ಪತಿ ಯೋಗೇಶ್ ಕುಮಾರನನ್ನು ಬಂಧಿಸಲಾಗಿದ್ದು, ಆತನ ಮನೆಯರವರು ಪರಾರಿಯಾಗಿದ್ದಾರೆ.

English summary
20 year old woman molested gunned down in Muzaffarnagar. The woman was shot dead in Shamli district yesterday (Feb 3). The body has not yet been identified. Police suspect that the woman was first raped and then murdered.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X