ಮಲ ಮಗಳ ಮೇಲೆ ಅತ್ಯಾಚಾರ; ತಂದೆಗೆ 10 ವರ್ಷದ ಜೈಲು

ಬೆಂಗಳೂರು, ಆಗಸ್ಟ್‌ 24: ಬೆಂಗಳೂರು ನಗರದ ಬ್ಯಾಟರಾಯನಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 8 ವರ್ಷದ ಹಿಂದೆ ತನ್ನ ಮಲ ಮಗಳ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿ ತಂದೆಗೆ ಅಧೀನ ನ್ಯಾಯಾಲಯ ನೀಡಿದ್ದ 20 ವರ್ಷಗಳ ಶಿಕ್ಷೆಯನ್ನು ಕರ್ನಾಟಕ ಹೈಕೋರ್ಟ್ 10 ವರ್ಷಕ್ಕೆ ಇಳಿಕೆ ಮಾಡಿದೆ.

ಬೆಂಗಳೂರಿನ ವ್ಯಕ್ತಿ ಅಬ್ದುಲ್‌ ಖಾದರ್ ಅಲಿಯಾಸ್ ರಫೀಕ್‌ ಸಲ್ಲಿಸಿದ್ದ ಮೇಲ್ಮನವಿ ಮಾನ್ಯ ಮಾಡಿರುವ ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ಏಕಸದಸ್ಯಪೀಠ ಈ ಆದೇಶ ಮಾಡಿದೆ. ಆರೋಪಿ 2015ರ ಅಕ್ಟೋಬರ್ 13ರಿಂದ ಜೈಲಿನಲ್ಲಿರುವ ಕಾರಣ ಅಪರಾಧ ದಂಡ ಸಂಹಿತೆ ಸೆಕ್ಷನ್ 428 ರಡಿ ಶಿಕ್ಷೆ ಮುಕ್ತಾಯಕ್ಕೆ ಮನವಿ ಮಾಡಬಹುದು ಎಂದೂ ಸಹ ನ್ಯಾಯಾಲಯ ಹೇಳಿದೆ.

Rape On Own Step Daughter HC Cut Down Sentence From 20 To 10 Years For A Person

ಶಿಕ್ಷೆ ಕಡಿತವೇಕೆ?; ದಾಖಲೆಗಳನ್ನು ಪರಿಶೀಲಿಸಿದರೆ ದೂರು ನೀಡಿದ್ದ ಮಹಿಳೆ ತನ್ನ ಮೊದಲನೇ ಪತಿ ನಿಧನದ ನಂತರ ಆರೋಪಿಯನ್ನು ಎರಡನೇ ಮದುವೆಯಾಗಿದ್ದಾರೆ. ಅವರಿಗೆ 4 ಮಕ್ಕಳು ಇದ್ದಾರೆ. ಆದರೆ ಆರೋಪಿ ಪತ್ನಿ ಇಲ್ಲದ ಸಮಯ ನೋಡಿಕೊಂಡು ಓರ್ವ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿರುವುದು ದೃಢಪಟ್ಟಿದೆ ಎಂದು ನ್ಯಾಯಾಲಯ ಹೇಳಿದೆ.

ಸಂವಿಧಾನದ 20ನೇ ಕಲಂ ಪ್ರಕಾರ, ಘಟನೆ ನಡೆದಾಗ ಯಾವ ಕಾನೂನು ಜಾರಿಯಲ್ಲಿರುತ್ತದೋ ಅದರಲ್ಲಿ ಎಷ್ಟು ಪ್ರಮಾಣದ ಶಿಕ್ಷೆಗೆ ಅವಕಾಶವಿರುತ್ತದೋ ಅಷ್ಟೇ ಪ್ರಮಾಣದ ಶಿಕ್ಷೆ ನೀಡಬೇಕೇ ವಿನಃ ಹೆಚ್ಚಿನ ಶಿಕ್ಷೆಗೆ ಅವಕಾಶವಿಲ್ಲ. ಘಟನೆ ನಡೆದಿರುವುದು 2015ರಲ್ಲಿ, ಅಗ ಚಾಲ್ತಿಯಲ್ಲಿದ್ದ ಕಾನೂನು ಪ್ರಕಾರ ಅಂದರೆ ಐಪಿಸಿ ಸೆಕ್ಷನ್‌ 376(2) ಪ್ರಕಾರ ಶಿಕ್ಷೆ ವಿಧಿಸಬೇಕು, ಆದರೆ ವಿಚಾರಣಾ ನ್ಯಾಯಾಲಯ 2018ರ ಏಪ್ರಿಲ್‌ನಿಂದ ಜಾರಿಗೆ ಬಂದಿರುವ ಐಪಿಸಿ ಸೆಕ್ಷನ್‌ 376(3) ಪ್ರಕಾರ 20 ವರ್ಷ ಶಿಕ್ಷೆ ನೀಡಿರುವುದು ಸರಿಯಲ್ಲ ಎಂದು ನ್ಯಾಯಾಲಯ ಹೇಳಿದೆ.

ಅಲ್ಲದೆ, ಐಪಿಸಿ ಸೆಕ್ಷನ್‌ 376(2) ನಲ್ಲಿ ಸಂಬಂಧಿ, ಪೋಷಕರು, ಅಥವಾ ಶಿಕ್ಷಕರು ಮಹಿಳೆಯರ ವಿರುದ್ಧ ಅತ್ಯಾಚಾರವೆಸಗಿದರೆ ಗರಿಷ್ಠ 10 ವರ್ಷ ಜೈಲು ಶಿಕ್ಷೆಗೆ ಅವಕಾಶವಿದೆ. 376(3)ರಲ್ಲಿ 20 ವರ್ಷ ಜೈಲು ಶಿಕ್ಷೆಗೆ ಅವಕಾಶವಿದೆ ಎಂದು ನ್ಯಾಯಾಲಯ ತಿಳಿಸಿದೆ. ಪ್ರಕರಣದ ವಾಸ್ತವಾಂಶಗಳು ಮತ್ತು ಸ್ಥಿತಿಗತಿಯನ್ನು ಗಮನಿಸಿದರೆ, ವಿಚಾರಣಾ ನ್ಯಾಯಾಲಯ ಆರೋಪಿಗೆ ವಿಧಿಸಿರುವ 20 ವರ್ಷಗಳ ಜೈಲು ಶಿಕ್ಷೆಯನ್ನು ನಿಯಮದಂತೆ 10 ವರ್ಷಕ್ಕೆ ಇಳಿಕೆ ಮಾಡಬೇಕಾಗುತ್ತದೆ ಎಂದು ಅದೇಶ ನೀಡಿರುವ ನ್ಯಾಯಾಲಯ ಆರೋಪಿಗೆ 5 ಸಾವಿರ ದಂಡ ಪಾವತಿಸಲು ಆದೇಶ ನೀಡಿದೆ.

ಪ್ರಕರಣದ ಹಿನ್ನೆಲೆ: 2015ರ ಅಕ್ಟೋಬರ್ 13ರಂದು ಮಹಿಳೆಯೊಬ್ಬರು ಬ್ಯಾಟರಾಯನಪುರ ಪೊಲೀಸ್ ಠಾಣೆಗೆ ತನ್ನ ಎರಡನೇ ಪತಿ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ದೂರು ನೀಡಿದ್ದರು. ದೂರು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ಸಂಬಂಧಿಸಿದ ನ್ಯಾಯಾಲಯದಲ್ಲಿ ಆರೋಪಪಟ್ಟಿ ದಾಖಲಿಸಿದ್ದರು.

2019ರ ಸೆಪ್ಟೆಂಬರ್ 29ರಂದು ವಿಶೇಷ ನ್ಯಾಯಾಲಯ ಆರೋಪಿ ಅತ್ಯಾಚಾರವೆಸಗಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಪೋಕ್ಸೋ ಕಾಯಿದೆ ಸೆಕ್ಷನ್ 6 ಹಾಗೂ ಐಪಿಸಿ ಕಾಯಿದೆ ಸೆಕ್ಷನ್ 376(3) ಅಡಿಯಲ್ಲಿ 20 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಆರೋಪಿ ಮೇಲ್ಮನವಿ ಸಲ್ಲಿಸಿ, ತಮಗೆ 20 ವರ್ಷ ಶಿಕ್ಷೆ ನೀಡಲಾಗಿದೆ. ಕಾನೂನಿನಲ್ಲಿ ಇರುವುದಕ್ಕಿಂತ ಅಧಿಕ ಶಿಕ್ಷೆ ವಿಧಿಸಲಾಗಿದೆ. ದೂರು ದಾಖಲಿಸುವಲ್ಲಿ ವಿಳಂಬವಾಗಿದೆ, ಅದನ್ನೂ ವಿಚಾರಣಾ ನ್ಯಾಯಾಲಯ ಪರಿಗಣಿಸಿಲ್ಲ ಎಂದು ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+