Get Updates
Get notified of breaking news, exclusive insights, and must-see stories!

Ujjain Rape Case: ಅರೆಬೆತ್ತಲೆಯಾಗಿ ಸಹಾಯ ಬೇಡಿ ಓಡಾಡಿದ್ದ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ ಕಥೆ ಏನಾಯಿತು?

ಭೋಪಾಲ್ ಅಕ್ಟೋಬರ್ 25: ಒಂದು ತಿಂಗಳ ಹಿಂದೆ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಹೃದಯವಿದ್ರಾವಕ ದೃಶ್ಯಗಳು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಸೆಪ್ಟಂಬರ್ 25 ರಂದು ಅರೆಬೆತ್ತಲೆಯಾಗಿ ಮತ್ತು ರಕ್ತಸ್ರಾವವಾಗಿ ಬೀದಿಗಳಲ್ಲಿ ಅಲೆದಾಡುತ್ತಾ ಹುಡುಗಿಯೊಬ್ಬಳು ಸಹಾಯಕ್ಕಾಗಿ ಮನವಿ ಮಾಡುತ್ತಿರುವ ದೃಶ್ಯ ವೈರಲ್ ಆಗಿದ್ದವು. ಆರಂಭದಲ್ಲಿ ಕೊಂಚ ಬಿಸಿಯಾಗಿದ್ದ್ ಈ ಸುದ್ದಿ ಸದ್ಯ ಯಾವ ಹಂತಕ್ಕೆ ತಲುಪಿದೆ ಎನ್ನುವ ಬಗ್ಗೆ ಎನ್‌ಡಿಟಿವಿ ಗ್ರೌಂಡ್ ರಿಪೋರ್ಟ್ ಬಹಿರಂಗ ಪಡಿಸಿದೆ.

ನಮ್ಮ ಸಮಾಜದಲ್ಲಿ ಅತ್ಯಾಚಾರ, ದೌರ್ಜನ್ಯ, ಕಿರುಕುಳ ಇಂತೆಲ್ಲಾ ವಿಷಯಗಳು ಸರ್ವೇಸಾಮಾನ್ಯ ಎನ್ನುವಂತೆ ನಡೆಯುತ್ತಲೇ ಇವೆ. ಮಾಧ್ಯಮದಲ್ಲಿ ಸುದ್ದಿ ಬಂದಾಗ ಮಾತ್ರ ಇದರ ಬಗ್ಗೆ ತನಿಖೆ ಚುರುಕುಗೊಳ್ಳುತ್ತದೆ. ಅಧಿಕಾರಿಗಳು ಕಣ್ಣು ತೆರೆದುಕೊಳ್ಳುತ್ತಾರೆ. ರಾಜಕಾರಣಿಗಳು, ಪೊಲೀಸರು ಹಾಗೂ ಮಹಿಳಾ ಆಯೋಗ ಕೂಡ ಬಿರುಸಿನ ಕೆಲಸಗಳು ಮಾಡುತ್ತಿವೆಂತೆ ತೋರಿಸಿಕೊಳ್ಳುತ್ತವೆ. ಆದರೆ ಆ ಸುದ್ದಿ ಮಾಧ್ಯಮದಿಂದ ಮರೆಯಾಗುತ್ತಿದ್ದಂತೆ ಇವೆರೆಲ್ಲ ಮೌನವಾಗಿಬಿಡುತ್ತಾರೆ. ಇದಕ್ಕೆ ಸಾಕ್ಷಿ ಉಜ್ಜಯಿನಿಯಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಆಸ್ಪತ್ರೆಯಿಂದ ಮನೆ ಸೇರಿದ ಬಾಲಕಿ.

ujjain

ಒಂದು ತಿಂಗಳ ಹಿಂದೆ ಎರಡು ಗಂಟೆಗಳ ಕಾಲ ಬಾಲಕಿ ಸುಮಾರು 500 ಮನೆಗಳನ್ನು ಸುತ್ತಿ ಅನ್ನಕ್ಕಾಗಿ, ಬಟ್ಟೆಗಾಗಿ, ಸಹಾಯಕ್ಕಾಗಿ ಬೇಡಿಕೆ ಇಟ್ಟಿದ್ದಳು. ಆದರೆ ದೇವಸ್ಥಾನದವರೆಗೆ ಯಾರೂ ಅವಳಿಗೆ ಸಹಾಯ ಮಾಡಲಿಲ್ಲ. ಅರ್ಚಕರು ಅವಳನ್ನು ನೋಡಿ ಆಸ್ಪತ್ರೆಗೆ ಕರೆದೊಯ್ದು ಪೊಲೀಸರಿಗೆ ಕರೆ ಮಾಡಿದರು.

ಈ ಹುಡುಗಿ ಆಸ್ಪತ್ರೆಯಲ್ಲಿ ಹಲವಾರು ದಿನಗಳ ಕಾಲ ಜೀವನ್ಮರಣದಿಂದ ಹೋರಾಡಿದಳು. ಆಕೆಯ ಕಥೆಯು ಕೆಲ ವಾರಗಳವರೆಗೆ (ಮಾಧ್ಯಮದಲ್ಲಿ ಪ್ರಸಾರ ಆಗುವವರೆಗೆ) ಮುಖ್ಯಾಂಶದಲ್ಲಿತ್ತು. ರಾಜ್ಯ ಸರ್ಕಾರ ಕೂಡ ದೊಡ್ಡ ಭರವಸೆಗಳನ್ನು ನೀಡಿತು. ಆದರೆ ಆ ಭರವಸೆಗಳು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಆಕೆಗೆ ಯಾವ ನ್ಯಾಯ ಕೂಡ ಸಿಕ್ಕಿಲ್ಲ. ಚಿಕಿತ್ಸೆ ಪಡೆದು ಮನೆಗೆ ವಾಪಾಸ್ಸಾದ ಬಾಲಕಿ ಸ್ಥಿತಿ ಹಿಂದೆ ಇದ್ದ ಜೀವನಕ್ಕಿಂತ ಕಹಿಯಾಗಿದೆ. ಈಗ ಅವರು ಮನೆಯಲ್ಲಿದ್ದಾರೆ ಮತ್ತು ಅವರ ಆರೋಗ್ಯ ಸುಧಾರಿಸಿದೆ. ಆದರೆ ಪೊಳ್ಳು ಭರವಸೆಯ ಗಾಯಗಳು ಆಕೆಯಲ್ಲಿ ಇನ್ನೂ ಮಾಸಿಲ್ಲ.

ಎನ್‌ಡಿಟಿವಿ ತಂಡವು ಬಾಲಕಿಯ ಸ್ಥಿತಿಯನ್ನು ನೋಡಲು ಸತ್ನಾ ಬಳಿಯ ಗ್ರಾಮವನ್ನು ತಲುಪಿದೆ. ಈ ಸಂದರ್ಭದಲ್ಲಿ ಹುಡುಗಿ ಭಯಭೀತಳಾಗಿದ್ದಳು. ಆಕೆ ತನ್ನ ಹುಲ್ಲಿನ ಗುಡಿಸಲು ಮನೆಯೊಳಗೆ ಕುಳಿತಿದ್ದಳು. ಆಕೆಯ ಮನೆಯಲ್ಲಿರುವ ಅಜ್ಜನನ್ನು ಮಾತನಾಡಿಸಿದಾಗ ಹುಡುಗಿಯ ಸ್ಥಿತಿ ಬಗ್ಗೆ ತಿಳಿದು ಬಂದಿದೆ.

ಜಿಲ್ಲೆಯಿಂದ ಇಲ್ಲಿಗೆ ಯಾರೂ ಸಹಾಯಕ್ಕೆ ಬಂದಿಲ್ಲ. ಸರಪಂಚರಿಂದ ಸಹಾಯ ಸಿಕ್ಕಿಲ್ಲ. ಯಾರೂ ಕೂಡ ನಮ್ಮ ಬಗ್ಗೆ ವಿಚಾರಿಸಲು ಕೂಡ ಬಂದಿಲ್ಲ. ನಾವು ಮೇಕೆ ಮೇಯಿಸುತ್ತೇವೆ, ಹೇಗೋ ಜೀವನ ಮಾಡುತ್ತೇವೆ ಎಂದು ಬೇಸರಿದಿಂದ ಅಜ್ಜ ಹೇಳಿಕೊಂಡಿದ್ದಾರೆ.

ಕೇವಲ 12 ದಿನಗಳ ಹಿಂದೆ (ಅಕ್ಟೋಬರ್ 12) ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ ಬಾಲಕಿ ಇದೀಗ ತನ್ನ ಚಿಕ್ಕಮ್ಮನೊಂದಿಗೆ ಹ್ಯಾಂಡ್ ಪಂಪ್‌ನಿಂದ ನೀರು ತರಲು ಈಗಲೂ ಪ್ರತಿದಿನ 300 ಮೀಟರ್ ದೂರ ಹೋಗುತ್ತಾಳೆ. ಗ್ರಾಮವು ಎರಡು ಕೈಪಂಪ್‌ಗಳನ್ನು ಹೊಂದಿದೆ ಎಂದು ಕುಟುಂಬದವರು ಹೇಳಿಕೊಳ್ಳುತ್ತಾರೆ. ಅದರಲ್ಲಿ ಒಂದು ಮೇಲ್ಜಾತಿಯವರಿಗೆ ಮತ್ತು ಒಂದು ಕೆಳ ಜಾತಿಯ ಸಮುದಾಯಕ್ಕೆ.

'ನಾವು ಕೆಳ ಜಾತಿಯಿಂದ ಬಂದವರು. ಆದ್ದರಿಂದ ನಮಗೆ ಸಹಾಯ ಮಾಡಲು ಯಾರೂ ಬರಲಿಲ್ಲ' ಎಂದು ಕುಟುಂಬ ನೋವಿನಿಂದ ಹೇಳಿಕೊಳ್ಳುತ್ತದೆ.

ಸಂತ್ರಸ್ತೆ ಪರಿಶಿಷ್ಟ ಜಾತಿ ದೋಹಾರ್ ಸಮುದಾಯಕ್ಕೆ ಸೇರಿದವಳು. ಗ್ರಾಮದಲ್ಲಿ ಸುಮಾರು 700 ಮತದಾರರಿದ್ದು, ಅವರಲ್ಲಿ ಅರ್ಧದಷ್ಟು ಮೇಲ್ವರ್ಗದವರು, ಅರ್ಧದಷ್ಟು ದಲಿತರು ಇದ್ದಾರೆ. ಕೆಳ ಜಾತಿಯಾದ ನಮಗೆ ಯಾವುದೇ ಸಹಾಯ ಸಿಕ್ಕಿಲ್ಲ ಎನ್ನುತ್ತಾರೆ ಆಕೆಯ ಕುಟುಂಬಸ್ಥರು.

ಆರಂಭದಲ್ಲಿ ಪ್ರಕರಣ ಬಿಸಿ ಹೇಗಿತ್ತು?

ಹುಡುಗಿ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿ 15 ವರ್ಷದ ಆರೋಪಿ ಆಟೋ ಚಾಲಕ ರೈಲ್ವೇ ನಿಲ್ದಾಣದಿಂದ ಆಕೆಯನ್ನು ಕರೆದೊಯ್ದ ಭಯಾನಕ ವಿಡಿಯೋ ವೈರಲ್ ಆದ ಕೂಡಲೇ ಸಿಕ್ಕಿಬಿದ್ದಿದ್ದಾನೆ. ಸಿಸಿಟಿವಿ ಫೂಟೇಜ್‌ನಲ್ಲಿ ಬಾಲಕಿ ಚಿಂದಿ ಬಟ್ಟೆಯನ್ನು ಹಾಕಿಕೊಂಡು ಮನೆ-ಮನೆಗೆ ಹೋಗಿ ನೆರವು ಕೋರುತ್ತಿರುವುದು ಕಂಡುಬಂದಿದೆ.

ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, "ಆರೋಪಿಯು ಮಧ್ಯಪ್ರದೇಶದ ಆತ್ಮವನ್ನು ಘಾಸಿಗೊಳಿಸಿದ್ದಾನೆ. ಅವಳು ರಾಜ್ಯದ ಮಗಳು ಮತ್ತು ನಾವು ಅವಳನ್ನು ಎಲ್ಲಾ ರೀತಿಯಲ್ಲಿ ನೋಡಿಕೊಳ್ಳುತ್ತೇವೆ" ಎಂದು ಹೇಳಿದ್ದರು. ಹೀಗೆ ಆರೋಪಿ ತಮ್ಮೆದುರು ಸಿಕ್ಕರೆ ಕೂಡಲೆ ಕ್ರಮ ಕೈಗೊಂಡು ಬಿಡುವಂತೆ ಸಿಎಂ ಮಾತನಾಡಿದ್ದರು.

ಅಂದು, ಇಂದು ರಾಜಕಾರಣಿಗಳ ಪ್ರತಿಕ್ರಿಯೆ ಹೇಗಿತ್ತು...?

ಆದರೀಗ ಎನ್‌ಡಿಟಿವಿ ಚೌಹಾನ್‌ರನ್ನು ಹುಡುಗಿ ಪಡೆಯಬೇಕಾದ ಪ್ರಯೋಜನಗಳ ಬಗ್ಗೆ ಕೇಳಲು ಪ್ರಯತ್ನಿಸಿದಾಗ, ಅವರ ಉತ್ತರ 'ನಮಸ್ಕಾರ' ಆಗಿತ್ತು. ಸಂತ್ರಸ್ತೆ ಮನೆಗೆ ಹಿಂದಿರುಗಿದ ನಂತರ ಆಕೆ ಪಡೆದ ದೊಡ್ಡ ಸಹಾಯವೆಂದರೆ ಬಿಜೆಪಿ ಅಭ್ಯರ್ಥಿ ಸುರೇಂದ್ರ ಸಿಂಗ್ ಗರೆವಾರ್ ಅವರಿಂದ 1,500 ರೂಪಾಯಿ ಮಾತ್ರ.

"ಇದುವರೆಗೂ ಯಾರೂ ಕೂಡ ಆಕೆಗೆ ಸಹಾಯ ಮಾಡಿಲ್ಲ, ಅವರೇ ಆಸ್ಪತ್ರೆಯಲ್ಲಿ ಔಷಧಿಗಳನ್ನು ಖರೀದಿಸಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಅವರು ಸರ್ಕಾರದಿಂದ ಅಥವಾ ಆಡಳಿತದಿಂದ ಯಾವುದೇ ಪ್ರಯೋಜನವನ್ನು ಪಡೆದಿಲ್ಲ. ಈ ಹಿಂದೆಯಂತೆ ತಿಂಗಳಿಗೆ 600 ಸಾಮಾಜಿಕ ನ್ಯಾಯ ಪಿಂಚಣಿ ಮಾತ್ರ ಸರ್ಕಾರದಿಂದ ಸಿಗುತ್ತಿದೆ" ಎಂದು ಕುಟುಂಬ ಹೇಳಿಕೊಂಡಿದೆ.

ಮಧ್ಯಪ್ರದೇಶದಲ್ಲಿ ದಲಿತರ ಮೇಲಿನ ಅಪರಾಧಗಳು

ಮಧ್ಯಪ್ರದೇಶದಲ್ಲಿ ದಲಿತರ ಮೇಲಿನ ಅಪರಾಧಗಳು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿವೆ ಎಂದು ಅಂಕಿಅಂಶಗಳು ತೋರಿಸುತ್ತವೆ. 2021ರಲ್ಲಿ ದೇಶದಲ್ಲಿ ಪರಿಶಿಷ್ಟ ಜಾತಿಗಳ ವಿರುದ್ಧ 50,900 ಅಪರಾಧ ಪ್ರಕರಣಗಳು ವರದಿಯಾಗಿವೆ. ಮಧ್ಯಪ್ರದೇಶದಲ್ಲಿ ಈ ಸಂಖ್ಯೆ 7,211 ಆಗಿತ್ತು. 2021 ರಲ್ಲಿ ದೇಶದಲ್ಲಿ ಪರಿಶಿಷ್ಟ ಜಾತಿಗಳ ವಿರುದ್ಧದ ಅಪರಾಧದ ಪ್ರಮಾಣವು 25.3% ರಷ್ಟಿದ್ದರೆ, ಮಧ್ಯಪ್ರದೇಶದಲ್ಲಿ ಅದು 63.6% ರಷ್ಟಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+