ಐಐಟಿ ಸಾಧನೆಯ ಹಿಂದಿನ ಅಸಲಿ ರಹಸ್ಯ ಬಯಲು : ವೈರಲ್ ಆಗುತ್ತಿದೆ 19 ವರ್ಷದ ಯುವಕನ ಪೋಸ್ಟ್
ಭಾರತೀಯ ತಂತ್ರಜ್ಞಾನ ಸಂಸ್ಥೆಗಳು (IIT) ದೇಶದಲ್ಲೇ ಅತ್ಯುನ್ನತ ಶಿಕ್ಷಣ ಸಂಸ್ಥೆಗಳಾಗಿ ಗುರುತಿಸಿಕೊಂಡಿವೆ. ಇಲ್ಲಿ ಪ್ರವೇಶ ಪಡೆಯುವ ಸಲುವಾಗಿ ವಿದ್ಯಾರ್ಥಿಗಳು ರಾತ್ರಿ ಹಗಲು ಓದುವುದರಲ್ಲಿ ಕಳೆಯುತ್ತಾರೆ. ಈ ಶಿಕ್ಷಣ ಸಂಸ್ಥೆಯಲ್ಲಿ ಸೀಟ್ ಸಿಕ್ಕರೆ ಮುಂದಿನ ಹಾದಿ ಸುಲಭ ಎನ್ನುವ ಕಲ್ಪನೆ ಮಕ್ಕಳು ಮತ್ತು ಹೆತ್ತವರ ಮನಸ್ಸಿನಲ್ಲಿದೆ. ಹಾಗಾಗಿ ಹೇಗಾದರೂ ಮಾಡಿ ಈ ಸಂಸ್ಥೆಗಳ ಒಳ ಹೊಕ್ಕರೆ ಸಾಕು ಎನ್ನುವ ಅಭಿಪ್ರಾಯವೇ ಬಹಳಷ್ಟು ಹೆತ್ತವರದ್ದು. ಇದೀಗ ಐಐಟಿ ಯಶಸ್ಸಿನ ಹಿಂದಿನ ಕುತೂಹಲಕಾರಿ ಸಂಗತಿಯೊಂದು ಬೆಳಕಿಗೆ ಬಂದಿದೆ. 19 ವರ್ಷದ ಯುವಕನೊಬ್ಬ ಸಾಮಾಜಿಕ ಜಾಲತಾಣದಲ್ಲಿ ಈ ಸತ್ಯವನ್ನು ಹರಿಬಿಟ್ಟಿದ್ದಾನೆ.
ಚರ್ಚೆಗೆ ದಾರಿ ಮಾಡಿಕೊಟ್ಟಿದೆ ಯುವಕನ ಪೋಸ್ಟ್:
ಐಐಟಿಯ ಯಶಸ್ಸಿನ ಹಿಂದಿರುವುದು ಕೇವಲ ಪಠ್ಯಪುಸ್ತಕಗಳು ಅಥವಾ ಪ್ರಾಧ್ಯಾಪಕರಲ್ಲ ಬದಲಿಗೆ ಅಲ್ಲಿನ ಬಲಿಷ್ಠ ಹಳೆಯ ವಿದ್ಯಾರ್ಥಿಗಳ ನೆಟ್‌ವರ್ಕ್ ಮತ್ತು ಸಮುದಾಯ ಎಂಬ ಸತ್ಯವನ್ನು ಆ ಯುವಕ ಹೇಳಿದ್ದಾನೆ. ಐಐಟಿ ಬಗ್ಗೆ ಯುವಕನು ಮಾಡಿರುವ ಪೋಸ್ಟ್ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಅನುರಾಗ್ ಝಾ ಹೆಸರಿನ 19 ವರ್ಷದ ಯುವಕ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಪೋಸ್ಟ್ ನೆಟ್ಟಿಗರ ಗಮನ ಸೆಳೆದಿದೆ. ಐಐಟಿ ಗುವಾಹಟಿಯಲ್ಲಿ ಓದುತ್ತಿರುವ ಸ್ನೇಹಿತನೊಂದಿಗಿನ ಸಂಭಾಷಣೆಯನ್ನು ಆತ ಈ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾನೆ.

ಕ್ಲಾಸ್‌ರೂಮ್ ಮೀರಿದ ಐಐಟಿ ಕಲ್ಚರ್:
"ಐಐಟಿ ಗುವಾಹಟಿಯಲ್ಲಿರುವ ನನ್ನ ಸ್ನೇಹಿತನ ಪ್ರಕಾರ, ಐಐಟಿ ಸಂಸ್ಕೃತಿಯಲ್ಲಿ ಸೀನಿಯರ್ಸ್ ಮತ್ತು ಈಗಾಗಲೇ ಜೀವನದಲ್ಲಿ ಯಶಸ್ಸು ಕಂಡಿರುವ ಹಳೆಯ ವಿದ್ಯಾರ್ಥಿಗಳು ಸದಾ ಸಂಪರ್ಕದಲ್ಲಿರುತ್ತಾರೆ. ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ಕಿರಿಯ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಾರೆ. ಅವರು ಯಾವ ರಿಸೋರ್ಸ್‌ಗಳನ್ನು ಓದಬೇಕು, ಕೆರಿಯರ್ ರೋಡ್‌ಮ್ಯಾಪ್ ಹೇಗಿರಬೇಕು ಎಂದು ಹೇಳಿಕೊಡುವುದಲ್ಲದೆ, ಅತ್ಯುತ್ತಮ ಸ್ಟಾರ್ಟ್‌ಅಪ್‌ಗಳಿಗೆ ರೆಫರಲ್ಸ್ ಕೂಡಾ ನೀಡುತ್ತಾರೆ ಎಂದು ಅನುರಾಗ್ ಬರೆದುಕೊಂಡಿದ್ದಾನೆ.
"ಐಐಟಿಯನ್ನು 'ದಿ ಐಐಟಿ' ಎಂದು ಮಾಡುವುದು ಅಲ್ಲಿನ ಕೋರ್ಸ್ ಅಥವಾ ಪ್ರಾಧ್ಯಾಪಕರಲ್ಲ. ಬದಲಿಗೆ ಅಲ್ಲಿ ಸಿಗುವ ಅದ್ಭುತ ನೆಟ್‌ವರ್ಕ್ ಮತ್ತು ಕಮ್ಯುನಿಟಿ ಎನ್ನುವುದು ತನ್ನ ಸ್ನೇಹಿತನಿಂದ ತಿಳಿಯಿತು ಎಂದು ಅನುರಾಗ್ ಝಾ, ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾನೆ.

ಪುಸ್ತಕದ ಹುಳದಂತಿದ್ದವ ಈಗ ಆಲ್‌ರೌಂಡರ್:
ತನ್ನ ಸ್ನೇಹಿತನಲ್ಲಾದ ಬದಲಾವಣೆಯನ್ನು ಕಂಡು ಅನುರಾಗ್ ಆಶ್ಚರ್ಯ ವ್ಯಕ್ತಪಡಿಸಿದ್ದಾನೆ. ಶಾಲೆಯ ದಿನಗಳಲ್ಲಿ ಬರೀ ಪುಸ್ತಕದಲ್ಲಿಯೇ ಮುಳುಗಿ ಹೋಗಿದ್ದ, ಬಿಂಗೊ ಆಟವಾಡುತ್ತಿದ್ದ, ಕೇವಲ ಇಬ್ಬರೇ ಸ್ನೇಹಿತರಿದ್ದ ಗೆಳೆಯಲ್ಲಿನ ಬದಲಾವಣೆ ನೋಡಿ ಬೆರಗಾಗಿದ್ದಾನೆ. ಈಗ ಐಐಟಿಗೆ ಸೇರಿದ ಮೇಲೆ ಕಮ್ಯುನಿಕೇಷನ್, ಪ್ರೋಗ್ರಾಮಿಂಗ್, ಡೆವಲಪ್‌ಮೆಂಟ್ ಮತ್ತು ಕ್ರೀಡೆಯಲ್ಲೂ ಸಖತ್ ಆಕ್ಟಿವ್ ಆಗಿದ್ದಾನೆ. ಈಗ ಗೆಳೆಯನ್ನು ನೋಡಿದಾಗ ಶಾಲಾ ದಿನಗಳಲ್ಲಿ ನಾವು ನೋಡಿದ್ದ ವ್ಯಕ್ತಿ ಇವನೇನಾ ಎನ್ನುವ ಸಂಶಯ ಮೂಡುತ್ತದೆ ಎಂದು ಸ್ನೇಹಿತನ ವ್ಯಕ್ತಿತ್ವದಲ್ಲಾದ ಬದಲಾವಣೆಯನ್ನು ಶ್ಲಾಘಿಸಿದ್ದಾನೆ.
ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಸಹಮತ:
ಅನುರಾಗ್ ಅವರ ಈ ಪೋಸ್ಟ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಹಲವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ:
ಮೊದಲನೆಯವರು: "ದೇಶದ ಪ್ರಮುಖ ಸಂಸ್ಥೆಗಳು ಕೇವಲ ಶಿಕ್ಷಣ ಸಂಸ್ಥೆಗಳಲ್ಲ, ಅವು ನೆಟ್‌ವರ್ಕ್‌ಗಳು. ಆದರೆ ಐಐಟಿಯಲ್ಲೂ ಎಲ್ಲರೂ ಈ ನೆಟ್‌ವರ್ಕ್ ಬಳಸಿಕೊಳ್ಳುವುದಿಲ್ಲ, ಬಳಸಿಕೊಂಡ ಕೆಲವರಷ್ಟೇ ಉನ್ನತ ಮಟ್ಟ ತಲುಪುತ್ತಾರೆ ಎಂದು ಪ್ರತಿಕ್ರಿಯಿಸಿದ್ದಾರೆ.
ಎರಡನೆಯವರು: "ನಿಜ, ಅಲ್ಲಿನ ಕಾಂಪಿಟೇಷನ್ ಮತ್ತು ಪೀರ್ ಪ್ರೆಶರ್ ಸಾಮಾನ್ಯ ವಿದ್ಯಾರ್ಥಿಯನ್ನೂ ಅತ್ಯುತ್ತಮ ಸಾಧಕನನ್ನಾಗಿ ಮಾಡುತ್ತದೆ ಎಂದಿದ್ದಾರೆ.
ಮೂರನೆಯವರು: ಇದು ಜಾಗದ ವಿಷಯವಲ್ಲ, ಅಲ್ಲಿ ಸಿಗುವ ಜನರ ವಿಷಯ ಎಂದು ಕಮೆಂಟ್ ಮಾಡಿದ್ದಾರೆ.
ಒಟ್ಟಿನಲ್ಲಿ, ಐಐಟಿ ಬ್ರ್ಯಾಂಡ್‌ನ ನಿಜವಾದ ಶಕ್ತಿ ಕೇವಲ ಜೆಇಇ ಪರೀಕ್ಷೆಯ ಅಂಕಗಳಲ್ಲ, ಬದಲಿಗೆ ಅಲ್ಲಿ ಸಿಗುವ ಬಲಿಷ್ಠ ಸಂಬಂಧಗಳು ಮತ್ತು ಸಹಪಾಠಿಗಳ ವಾತಾವರಣ ಎಂಬುದನ್ನು ಈ ಪೋಸ್ಟ್ ಮತ್ತೊಮ್ಮೆ ಸಾಬೀತುಪಡಿಸಿದೆ.
My friend who's in IIT Guwahati told that in the IIT culture, the seniors even the alumni who are doing good in life will meet (online /offline) and gives you mentorship and strong recommendations to resources and roadmap. And will even reffer you to good startups.
— Anurag Jha (@anuragdotdev) June 21, 2026
So it made me…
(ಬರಹ: ರಂಜಿತಾ ಆರ್.ಕೆ.)














Click it and Unblock the Notifications